ದತ್ತಾತ್ರೇಯ, ದತ್ತ ಭಾಯ್‌ ಆಗಿದ್ದು ಹೇಗೆ? ಸೋಮವಾರದಿಂದ ಅನಾವರಣ ಆಗಲಿದೆ ಕತೆ

Drishti Bottu Kannada Serial: ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ಕಥಾನಾಯಕ ದತ್ತನ ಕುರಿತು ಹಲವು ಹಳೆಯ ವಿಷಯಗಳು ಬಹಿರಂಗ ಆಗಲಿದೆ. ದತ್ತಾತ್ರೇಯ ಪಾಟೀಲ್‌ ಎಂಬ ಶಾಂತ ಸ್ವಭಾವದ ವ್ಯಕ್ತಿ ದತ್ತ ಭಾಯ್ ಆಗಿದ್ದು ಹೇಗೆ?

ದತ್ತಾತ್ರೇಯ, ದತ್ತ ಭಾಯ್‌ ಆಗಿದ್ದು ಹೇಗೆ? ಸೋಮವಾರದಿಂದ ಅನಾವರಣ ಆಗಲಿದೆ ಕತೆ
Follow us
ಮಂಜುನಾಥ ಸಿ.
|

Updated on: Nov 26, 2024 | 6:53 PM

ಕಲರ್ಸ್‌ ಕನ್ನಡ ವಾಹಿನಿಯಲ್ಲಿ ಸಂಜೆ 06:30 ಕ್ಕೆ ಪ್ರಸಾರವಾಗುತ್ತಿರುವ ದೃಷ್ಟಿ ಬೊಟ್ಟು ಧಾರಾವಾಹಿಯಲ್ಲಿ ಕಥಾನಾಯಕ ದತ್ತನ ಕುರಿತು ಹಲವು ಹಳೆಯ ವಿಷಯಗಳು ಬಹಿರಂಗ ಆಗಲಿದೆ. ದತ್ತಾತ್ರೇಯ ಪಾಟೀಲ್‌ ಎಂಬ ಶಾಂತ ಸ್ವಭಾವದ ವ್ಯಕ್ತಿ ದತ್ತ ಭಾಯ್ ಆಗಿದ್ದು ಹೇಗೆ? ಆತನ ಹಳೆಯ ಪ್ರೇಮಕತೆ, ಆತನ ಪ್ರೇಮಕತೆಗೆ ಕೊಳ್ಳಿ ಇಟ್ಟಿದ್ದು ಯಾರು ಮತ್ತು ಏಕೆ? ಆತನ ವ್ಯಕ್ತಿತ್ವ ಏಕೆ ಹೀಗಾಯ್ತು? ಇನ್ನಿತರ ವಿಷಯಗಳು ಪ್ರೇಕ್ಷಕರಿಗೆ ತಿಳಿಯಲಿವೆ. ಸೋಮವಾರದಿಂದ ಪ್ರಸಾರ ಆಗಲಿರುವ ಎಪಿಸೋಡ್​ಗಳಲ್ಲಿ ಈ ಕತೆಗಳು ಅನಾವರಣ ಆಗಲಿವೆ.

ದತ್ತಾತ್ರೇಯ–ದತ್ತ ಭಾಯ್‌ ಆಗಿದ್ದು ಹೇಗೆ?

ದತ್ತನಿಗೆ ಅವನ ತಾಯಿ ಅಬ್ಬಕ್ಕ – ಇಂಪನಾ ಎಂಬ ಹುಡುಗಿಯೊಂದಿಗೆ ಮದುವೆ ಮಾಡಿಸುವ ಯೋಚನೆಯಲ್ಲಿದ್ದು, ಇದೇ ಸಮಯದಲ್ಲಿ ಮನೆ ಕೆಲಸದ ಹುಡುಗಿಯಾಗಿರುವ ಕಥಾನಾಯಕಿ ದೃಷ್ಟಿಯ ಬಳಿ ದತ್ತ – ತನ್ನ ಹಳೆಯ ಪ್ರೀತಿಯ ಬಗ್ಗೆ, ಅದರ ಸಂಕಟಗಳ ಬಗ್ಗೆ, ಪ್ರೇಮ ವೈಫಲ್ಯ ತನ್ನ ಬದುಕಿನ ದಿಕ್ಕು ಬದಲಾಯಿಸಿದ ಬಗ್ಗೆ, ತಾನು ಯಾಕೆ ಸುಂದರವಾಗಿರುವ ಹುಡುಗಿಯರ ಬಗ್ಗೆ ತಿರಸ್ಕಾರ ಬೆಳೆಸಿಕೊಂಡೆ ಎಂಬುದರ ಬಗ್ಗೆ, ಎಲ್ಲಕ್ಕಿಂತ ಹೆಚ್ಚಾಗಿ ದತ್ತಾತ್ರೇಯ ಪಾಟೀಲ್‌ ಎಂಬ ಶಾಂತ ಸ್ವಭಾವದ ತಾನು ದತ್ತ ಭಾಯ್‌ ಆಗಿ ಬದಲಾಗಿ – ರೌಡಿ ಬದುಕನ್ನು ತನ್ನದಾಗಿಸಿಕೊಂಡೆ ಎಂಬ ಕುರಿತು ಹೇಳಿಕೊಳ್ಳುತ್ತಾನೆ – ದತ್ತನ ಬದುಕಿನ ಹಳೆಯ ದಿನಗಳು ಇದೇ ಸೋಮವಾರದಿಂದ 25-11-2024 ರಿಂದ ಸಂಜೆ 06:30 ಕ್ಕೆ ವೀಕ್ಷಕರ ಮುಂದೆ ತೆರೆದುಕೊಳ್ಳಲಿದೆ. ಈ ಸಂಚಿಕೆಗಳಲ್ಲಿ ದತ್ತ ಹಾಗೂ ಆತನ ಕುಟುಂಬದವರು ಬಡತನದ ದಿನಗಳಲ್ಲಿ ಹೇಗಿದ್ದರು ಎಂಬುದನ್ನು ನೋಡುಗರು ತಿಳಿಯಬಹುದಾಗಿದೆ.

ದತ್ತ-ದೃಷ್ಟಿ ನಡುವೆ ಸ್ನೇಹ

ದತ್ತನ ತಾಯಿ ಅಬ್ಬಕ್ಕ, ಇಂಪನಾ ಎಂಬ ಹುಡುಗಿಯೊಂದಿಗೆ ದತ್ತನ ಮದುವೆ ಮಾಡಿಸುವ ನಿರ್ಧಾರ ಮಾಡಿರುತ್ತಾರೆ. ಆದರೆ ಇಂಪನಾ – ತಿಲಕ್‌ ಎಂಬ ಹುಡುಗನನ್ನು ಪ್ರೀತಿಸುತ್ತಿದ್ದು ಆಕೆ ಅವನೊಂದಿಗೆ ಮದುವೆ ಆಗುವ ಯೋಜನೆ ಹಾಕಿರುತ್ತಾಳೆ. ಈ ನಡುವೆ ದತ್ತ ಮತ್ತು ದೃಷ್ಟಿ ನಡುವೆ ಯಜಮಾನ ಮತ್ತು ಮನೆ ಕೆಲಸದವಳು ಎಂಬ ರೇಖೆಯನ್ನು ಮೀರಿದ ಭಾಂದವ್ಯ ಮೂಡಿದ್ದು, ಅವರಿಬ್ಬರೂ ಹೆಚ್ಚು ಹತ್ತಿರವಾಗುತ್ತಿದ್ದಾರೆ. ದತ್ತ ತನ್ನ ಬದುಕಿನ ಸೂಕ್ಷ್ಮ ವಿಚಾರಗಳನ್ನು ದೃಷ್ಟಿಯ ಬಳಿ ಹೇಳಿಕೊಳ್ಳುತ್ತಿದ್ದಾನೆ.

ಕುತೂಹಲಕಾರಿ ತಿರುವು?

ಈ ಎಲ್ಲ ಗೊಂದಲಗಳ ನಡುವೆ ದತ್ತ ಯಾರನ್ನು ಮದುವೆಯಾಗುತ್ತಾನೆ? ಮನೆ ಕೆಲಸದ ಹುಡುಗಿ ದೃಷ್ಟಿಗೆ – ದತ್ತನ ಮೇಲೆ ಹುಟ್ಟಿರುವ ಪ್ರೀತಿ ಮದುವೆ ಮಂಟಪದವರೆಗೂ ಹೋಗುತ್ತಾ ? ದತ್ತನ ಬದುಕನ್ನು ನರಳಿಸಬೇಕು ಎಂದು ಹಠಕ್ಕೆ ಬಿದ್ದಿರುವ ದತ್ತನ ಅಕ್ಕ ಶರಾವಾತಿ ಈ ಪರಿಸ್ಥಿಗಳಲ್ಲಿ ಎಷ್ಟು ಅಪಾಯಕಾರಿಯಾಗುತ್ತಾಳೆ ? ದತ್ತ ಹಿಂದೆ ಪ್ರೀತಿಸಿದ್ದ ಹುಡುಗಿ ಯಾರು ? ಆಕೆ ಈಗ ಎಲ್ಲಿದ್ದಾಳೆ ? ಈ ಎಲ್ಲ ಪ್ರಶ್ನೆಗಳಿಗೂ ಉತ್ತರ ಇದೇ ಗುರುವಾರದ ನಂತರ ಪ್ರಸಾರವಾಗುವ ಸಂಚಿಕೆಗಳಲ್ಲಿಅನಾವರಣಗೊಳ್ಳಲಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಸಿಂಗಾಪುರ್ ವಿಮಾನ ನಿಲ್ದಾಣಕ್ಕೆ ನುಗ್ಗಿದ ಕೋತಿ; ಸಿಬ್ಬಂದಿ ಮಾಡಿದ್ದೇನು?
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕ್ಲಿಯೋಪಾತ್ರ ಸ್ನಾನ ಮಾಡುತ್ತಿದ್ದ ಕತ್ತೆ ಹಾಲು ಕುಡಿದ ಬಾಬಾ ರಾಮದೇವ್
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಕಾರ್ಯಕರ್ತರಿಗೆ ಖುಷಿಯಾಗುವ ನಿರ್ಧಾರ: ನಡ್ಡಾ ಭೇಟಿ ಬಳಿಕ ಅಶೋಕ್ ಸಂತಸದ ಮಾತು
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಹಿಂದಿ ಹಾಡಿಗೆ ಸಖತ್ತಾಗಿ ಅಭಿನಯ ಮಾಡಿದ 5 ವರ್ಷದ ಪುಟ್ಟ ಬಾಲಕಿ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ಸುಳ್ಳು ಕೇಸಲ್ಲಿ ರೇವಣ್ಣನನ್ನು ಸಿಕ್ಕಿಸುವ ಪ್ರಯತ್ನ ಮಾಡಲಾಗಿತ್ತು:ಹೆಚ್ಡಿಕೆ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲು ನಾವು ನೀಡಿದ ವರದಿ ನೆರವಾಗಲಿದೆ:ಬಂಗಾರಪ್ಪ
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಪುಷ್ಪ 2’ ಸಿನಿಮಾ ಮೊದಲ ದಿನ ಎಷ್ಟು ಗಳಿಸಲಿದೆ: ವಿತರಕರ ನಿರೀಕ್ಷೆ ಏನು?
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
‘ಹೆಣ್ಮಕ್ಕಳ ಹಿಂದೆ ತಿರುಗುವ ಜೊಲ್ಲ’: ಶಿಶಿರ್ ಬಗ್ಗೆ ಚೈತ್ರಾ ಗಂಭೀರ ಆರೋಪ
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಆಂತರಿಕ ವಿಷಯಗಳ ಬಗ್ಗೆ ಮಾತಾಡಬಾರದೆಂದು ಸಮಿತಿ ಹೇಳಿದೆ: ಬಸನಗೌಡ ಯತ್ನಾಳ್
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!
ಶಿವಕುಮಾರ್ ಧೋರಣೆ ಬೇರೆ ಪಕ್ಷಗಳ ನಾಯಕರಿಗೆ ಮಾದರಿಯಾಗಬಹುದು!