Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಾನು, ಸಾನ್ವಿ ಸೂರ್ಯನ ನೋಡಿಯೇ ಮಲಗೋದು’; ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ ಸುದೀಪ್

Bigg Boss Kannada: ಸುದೀಪ್ ಅವರು ತಮ್ಮ ಮಗಳು ಸಾನ್ವಿ ಜೊತೆಗಿನ ಆತ್ಮೀಯ ಬಾಂಧವ್ಯವನ್ನು ಸರಿಗಮಪ ಕಾರ್ಯಕ್ರಮದಲ್ಲಿ ಬಹಿರಂಗಪಡಿಸಿದ್ದಾರೆ. ಸಾನ್ವಿ ಒಂದು ಹಾಡನ್ನು ಹಾಡಿದ್ದು, ಅದಕ್ಕೆ ಸುದೀಪ್ ಮತ್ತು ನ್ಯಾಯಾಧೀಶರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಸುದೀಪ್ ಮತ್ತು ಸಾನ್ವಿ ಇಬ್ಬರೂ ಸೂರ್ಯೋದಯ ನೋಡಿ ಮಲಗುವುದು ಮತ್ತು ರಾತ್ರಿ ಹಾಡುಗಳನ್ನು ಹಾಡುತ್ತಾ ಕಳೆಯುವುದು ಎಂದು ತಿಳಿದುಬಂದಿದೆ. ಸಾನ್ವಿ ಗಾಯನದಲ್ಲಿ ಆಸಕ್ತಿ ಹೊಂದಿದ್ದು, ಭವಿಷ್ಯದಲ್ಲಿ ಗಾಯಕಿಯಾಗುವ ಸಾಧ್ಯತೆಯಿದೆ.

‘ನಾನು, ಸಾನ್ವಿ ಸೂರ್ಯನ ನೋಡಿಯೇ ಮಲಗೋದು’; ಅಚ್ಚರಿಯ ಮಾಹಿತಿ ರಿವೀಲ್ ಮಾಡಿದ ಸುದೀಪ್
Sudeep Nivi
Follow us
 ಶ್ರೀಲಕ್ಷ್ಮೀ ಎಚ್
| Updated By: ಮಂಜುನಾಥ ಸಿ.

Updated on: Jan 04, 2025 | 9:37 PM

ಕಿಚ್ಚ ಸುದೀಪ್ ಅವರು ಮಗಳು ಸಾನ್ವಿ ಜೊತೆ ಒಳ್ಳೆಯ ಬಾಂಧವ್ಯ ಹೊಂದಿದ್ದಾರೆ. ಅವರನ್ನು ಮಗಳು ಎನ್ನುವುದಕ್ಕಿಂತ ಹೆಚ್ಚಾಗಿ ಗೆಳತಿಯ ರೀತಿ ಟ್ರೀಟ್ ಮಾಡುತ್ತಾರೆ. ಇದನ್ನು ಅನೇಕ ಬಾರಿ ಹೇಳಿಕೊಂಡಿದ್ದಾರೆ. ಸಾನ್ವಿ ಏನೇ ಮಾಡಿದರೂ ಅದಕ್ಕೆ ಬೆಂಬಲಿಸೋದಾಗಿ ಸುದೀಪ್ ಅವರು ಹೇಳಿದ್ದರು. ಈಗ ಸುದೀಪ್, ಸಾನ್ವಿ ಹಾಗೂ ಪ್ರಿಯಾ ಜೀ ಕನ್ನಡದ ‘ಸರಿಗಮಪ’ ವೇದಿಕೆ ಏರಿದ್ದಾರೆ. ವೇದಿಕೆ ಮೇಲೆ ಹಲವು ವಿಚಾರಗಳನ್ನು ರಿವೀಲ್ ಮಾಡಿದ್ದಾರೆ. ಅದರಲ್ಲಿ ಮತ್ತೊಂದು ಅಚ್ಚರಿಯ ವಿಚಾರ ರಿವೀಲ್ ಆಗಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

ಸುದೀಪ್ ಹಾಗೂ ಸಾನ್ವಿ ಒಂದೇ ರೀತಿ ಮನಸ್ಥಿತಿ ಹೊಂದಿದ್ದಾರೆ. ಇದನ್ನು ಸುದೀಪ್ ಸರಿಗಮಪ ವೇದಿಕೆ ಮೇಲೆ ರಿವೀಲ್ ಮಾಡಿದ್ದಾರೆ. ‘ನಮ್ಮ ಮನೆಯಲ್ಲಿ ನಾನು ಹಾಗೂ ಸಾನ್ವಿ ಸೂರ್ಯೋದಯ ನೋಡಿ ಮಲಗೋದು. ಪ್ರಿಯಾ ಸೋರ್ಯೋದಯ ಆಗುವಾಗ ಎದ್ದುಕೊಳ್ಳುತ್ತಾರೆ. ರಾತ್ರಿಯಿಡೀ ನಾನು ಹಾಗೂ ಸಾನ್ವಿ ಹಾಡು ಹೇಳುತ್ತಾ ಕುಳಿತಿರುತ್ತೇವೆ’ ಎಂದು ಅಚ್ಚರಿಯ ವಿಚಾರ ರಿವೀಲ್ ಮಾಡಿದರು ಸುದೀಪ್.

View this post on Instagram

A post shared by Zee Kannada (@zeekannada)

‘ಸರಿಗಮಪ’ ವೇದಿಕೆ ಮೇಲೆ ಸಾನ್ವಿ ಅವರು, ‘ಜಸ್ಟ್ ಮಾತ್ ಮಾತಲ್ಲಿ..’ ಹಾಡನ್ನು ಹಾಡಿದ್ದಾರೆ. ಸುದೀಪ್ ಅವರ ಇಷ್ಟದ ಹಾಡುಗಳಲ್ಲಿ ಇದು ಕೂಡ ಒಂದು. ವಿಶೇಷ ಎಂದರೆ ಸಾನ್ವಿ ಅವರು ಒಂದು ದಿನ ಮೊದಲೇ ಬಂದು ಈ ಹಾಡಿನ ಪ್ರ್ಯಾಕ್ಟಿಸ್ ಕೂಡ ಮಾಡಿದ್ದರು. ಈ ವಿಚಾರ ಸುದೀಪ್ ಅವರಿಗೂ ಗೊತ್ತಿರಲಿಲ್ಲ. ಅವರು ಬಂದು ಪ್ರ್ಯಾಕ್ಟಿಸ್ ಮಾಡಿದ್ದರು ಎಂದಾಗ ಸುದೀಪ್ ಅವರು ಅಚ್ಚರಿಯ ವಿಚಾರ ಹೊರಹಾಕಿದ್ದರು.

ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ವೆಕೇಶನ್ ಮುಗಿಸಿದವರಿಗೆ ಸುದೀಪ್ ಕ್ಲಾಸ್; ಈ ವಾರವೂ ಕಿಚ್ಚನ ಪಾಠ

ಸಾನ್ವಿ ಹಾಡನ್ನು ಕೇಳಿ ಜಡ್ಜ್ಗಳು ಕೂಡ ಖುಷಿಪಟ್ಟರು. ‘ವೇದಿಕೆ ಮೇಲೆ ನಿಮ್ಮ ನೋಡಿ ಖುಷಿ ಆಯಿತು. ಸಾನ್ವಿ ಕೇವಲ ಸುದೀಪ್ ಮಗಳಲ್ಲ. ಸಾನ್ವಿಗೆ ಪ್ರತ್ಯೇಕ ಐಡೆಂಟಿಟಿ ಇದೆ ಎಂದು ಅವರು ಸಾಬೀತು ಮಾಡಿದ್ದಾರೆ. ನಿಮ್ಮ ಬಗ್ಗೆ ನನಗೆ ಗೊತ್ತು. ಪ್ಯಾಷನೇಟ್ ಆಗಿದ್ದೀರೆ’ ಎಂದು ವಿಜಯ್ ಪ್ರಕಾಶ್ ಹೇಳಿದರು. ಸುದೀಪ್ ಅವರು ಕೂಡ ಸಾನ್ವಿ ಹಾಡನ್ನು ಕೇಳಿ ಖುಷಿಪಟ್ಟರು. ಮಗಳ ಬಗ್ಗೆ ಹೆಮ್ಮೆ ಹೊರಹಾಕಿದರು. ಸಾನ್ವಿ ಅವರು ಈಗಾಗಲೇ ಶಿಕ್ಷಣ ಪೂರ್ಣಗೊಳಿಸಿದ್ದಾರೆ. ಗಾಯನದ ಬಗ್ಗೆ ಅವರಿಗೆ ವಿಶೇಷ ಪ್ರೀತಿ ಇದೆ. ಅದನ್ನೇ ಅವರು ವೃತ್ತಿಯಾಗಿ ತೆಗೆದುಕೊಳ್ಳುವ ಸಾಧ್ಯತೆ ಇದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
ನಂಜನಗೂಡು ನಂಜುಂಡೇಶ್ವರ ದೇವಾಲಯದಲ್ಲಿ ಓಕುಳಿ ಉತ್ಸವ ಸಂಭ್ರಮ
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Devotional: ಮಹಿಳೆಯರಿಗೆ ಕೈ ಕೆರೆತವಾದ್ರೆ ಏನೆಲ್ಲಾ ಆಗುತ್ತೆ ಗೊತ್ತಾ?
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
Daily Horoscope: ಹಣಕಾಸಿನ ವಿಷಯದಲ್ಲಿ ತಾಳ್ಮೆವಹಿಸುವುದು ಒಳ್ಳೆಯದು
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಉಪೇಂದ್ರ ಊಟ ಮಾಡೋದು ಬಹಳ ವಿಚಿತ್ರ; ಅಚ್ಚರಿಯ ವಿಷಯ ಹೇಳಿದ ಶಿವಣ್ಣ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಕ್ಯಾಪ್ಟನ್ ಕೂಲ್ ಧೋನಿಗೆ ಬಿಸಿಸಿಐನಿಂದ ವಿಶೇಷ ಗೌರವ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಸಿಎಸ್​​ಕೆ ಬೌಲರ್​ಗಳ ಎದುರು ಅಬ್ಬರಿಸಿ ಬೊಬ್ಬಿರಿದ ನಿತೀಶ್ ರಾಣಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಲಾಲು ಯಾದವ್ ಸರ್ಕಾರ ಜಂಗಲ್ ರಾಜ್ ಎಂದೇ ನೆನಪುಳಿಯುತ್ತದೆ; ಅಮಿತ್ ಶಾ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಉಪ್ಪಿ, ಶಿವಣ್ಣ, ರಾಜ್ ಶೆಟ್ಟಿ ನಟನೆ ‘45’ ಸಿನಿಮಾ ಟೀಸರ್ ಲಾಂಚ್ ಲೈವ್ ನೋಡಿ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಯುಗಾದಿ ಹಬ್ಬದಂದು ಗೃಹ ಲಕ್ಷ್ಮೀಯರಿಗೆ ಸಿಹಿ ಸುದ್ದಿ ನೀಡಿದ ಸಚಿವೆ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ
ಬುಡಕಟ್ಟು ನೃತ್ಯದ ಮೂಲಕ ಛತ್ತೀಸ್​ಗಢದಲ್ಲಿ ಮೋದಿಗೆ ಸಾಂಪ್ರದಾಯಿಕ ಸ್ವಾಗತ