ಮುತ್ತು ಕೊಡೋ ಸ್ಪರ್ಧೆಯಲ್ಲಿ ಮದುವೆ ಆದ ಧನರಾಜ್ನೇ ಸೋಲಿಸಿದ ಬ್ಯಾಚುಲರ್ಸ್; ಪೋಲಿ ಮಾತು
ಬಿಗ್ ಬಾಸ್ ಕನ್ನಡದಲ್ಲಿ ನಡೆದ ಮುತ್ತು ಕೊಡುವ ಟಾಸ್ಕ್ನಲ್ಲಿ ಚೈತ್ರಾ ಮತ್ತು ಹನುಮಂತ (ಬ್ಯಾಚುಲರ್ಗಳು) ಧನರಾಜ್ನ (ವಿವಾಹಿತ) ಸೋಲಿಸಿದ್ದಾರೆ. ಈ ಗೆಲುವು ಕ್ಯಾಪ್ಟನ್ಸಿ ಟಾಸ್ಕ್ನಲ್ಲಿ ಅವರಿಗೆ ಸ್ಥಾನ ಒದಗಿಸಿದೆ. ಧನರಾಜ್ ಅವರ ಸೋಲು ಮತ್ತು ಇಬ್ಬರು ಬ್ಯಾಚುಲರ್ಗಳ ಗೆಲುವು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ನಿತ್ಯ ಹೊಸ ಹೊಸ ಟಾಸ್ಕ್ಗಳನ್ನು ನೀಡಲಾಗುತ್ತದೆ. ಇದನ್ನು ಸ್ಪರ್ಧಿಗಳು ಯಾವ ರೀತಿಯಲ್ಲಿ ಆಡುತ್ತಾರೆ ಅನ್ನೋದು ಮುಖ್ಯವಾಗುತ್ತದೆ. ಇದು ಅವರ ಭವಿಷ್ಯವನ್ನು ಕೂಡ ನಿರ್ಧರಿಸುತ್ತದೆ. ನೋಡೋಕೆ ಆಟ ಸಿಂಪಲ್ ಆಗಿ ಕಂಡ ಹೊರತಾಗಿಯೂ ಸ್ಪರ್ಧಿಗಳು ಸಾಕಷ್ಟು ಸಮಯ ತೆಗೆದುಕೊಂಡ ಉದಾಹರಣೆ ಇದೆ. ಈಗ ದೊಡ್ಮನೆಯಲ್ಲಿ ಹಾಗೆಯೇ ಆಗಿದೆ. ಮುತ್ತು ಕೊಡೋ ಸ್ಪರ್ಧೆಯಲ್ಲಿ ಧನರಾಜ್ನ ಇಬ್ಬರು ಬ್ಯಾಚುಲರ್ಸ್ ಸೋಲಿಸಿದ್ದಾರೆ.
ಈ ವಾರದ ಕ್ಯಾಪ್ಟನ್ಸಿ ಓಟಕ್ಕೆ ಆಯ್ಕೆ ಆಗಲು ಟಾಸ್ಕ್ ಒಂದನ್ನು ನೀಡಲಾಗಿತ್ತು. ಈ ಟಾಸ್ಕ್ನ ಚೈತ್ರಾ, ಹನುಮಂತ ಹಾಗೂ ಧನರಾಜ್ ಆಡಬೇಕಿತ್ತು. ಧನರಾಜ್ ಅವರು ವಿವಾಹ ಆದವರು. ಚೈತ್ರಾ ಹಾಗೂ ಹನುಮಂತ ಮದುವೆ ಫಿಕ್ಸ್ ಆಗಿದ್ದು, ದೊಡ್ಮನೆಯಿಂದ ಹೊರ ಹೋದ ಬಳಿಕ ಅವರು ವಿವಾಹ ಆಗಲಿದ್ದಾರೆ. ಇವರಿಬ್ಬರು ಗೆದ್ದು ಧನರಾಜ್ನ ಸೋಲಿಸಿರೋದು ಸಾಕಷ್ಟು ಚರ್ಚೆಗೆ ಕಾರಣ ಆಗಿದೆ.
ತುಟಿಗೆ ಲಿಪ್ಸ್ಟಿಕ್ ಹಚ್ಚಿಕೊಂಡು ಖಾಲಿ ಹಾಳೆಯ ಮೇಲೆ ಮುತ್ತು ಕೊಡಬೇಕಿತ್ತು. ಈ ಸ್ಪರ್ಧೆಯಲ್ಲಿ ಹನುಮಂತ 70 ಮುತ್ತುಗಳು, ಚೈತ್ರಾ 77 ಮುತ್ತನ್ನು ಕೊಟ್ಟು ಟಾಸ್ಕ್ ವಿನ್ ಆಗಿದ್ದಾರೆ. ಧನರಾಜ್ ಅವರು ಮುತ್ತಿನ ಸಂಖ್ಯೆ 51 ಮಾತ್ರ. ಈ ಮೂಲಕ ಅವರು ಟಾಸ್ಕ್ನಲ್ಲಿ ಸೋತರು. ಈ ಬಗ್ಗೆ ಕೆಲವರು ಟೀಕೆ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿದ ತ್ರಿವಿಕ್ರಂ, ‘ಇಬ್ಬರು ಬ್ಯಾಚುಲರ್ಸ್ ಸೇರಿ ಒಬ್ಬ ವಿವಾಹಿತನನ್ನು ಸೋಲಿಸಿದರಲ್ಲ. ಇವರಿಗೆ ಬೇಕು ಬೇಕು ಎನ್ನುವ ಹಂಬಲ ಇದೆ. ಧನರಾಜ್ಗೆ ಸಾಕು ಸಾಕೆನಿಸಿದೆ’ ಎಂದು ಪೋಲಿ ಮಾತುಗಳನ್ನು ಆಡಿದರು. ‘ನನ್ನ ಪತ್ನಿ ರೊಮ್ಯಾಂಟಿಕ್ ಆಗಿ ಇರು ಎಂದು ಯಾಕೆ ಹೇಳುತ್ತಿದ್ದರು ಈಗ ಗೊತ್ತಾಗಿದೆ’ ಎಂದರು ಧನರಾಜ್.
ಇದನ್ನೂ ಓದಿ: ಬಿಗ್ ಬಾಸ್ ಮನೆಯಲ್ಲಿ ಮುತ್ತಿನ ಸುರಿಮಳೆ; ಫ್ರಸ್ಟ್ರೇಟ್ ಆದ ಧನರಾಜ್
ಕೊನೆಯ ವಾರಗಳಲ್ಲಿ ಕ್ಯಾಪ್ಟನ್ ಆಗೋದು ತುಂಬಾನೇ ಮುಖ್ಯವಾಗುತ್ತದೆ. ಈ ಬಾರಿ ರಜತ್ ಅವರು ಕ್ಯಾಪ್ಟನ್ ಆಗಿದ್ದಾರೆ. ಅವರ ಆಡಳಿತದಲ್ಲಿ ಮನೆ ಸಾಗಲಿದೆ. ಈಗ ಅವರು ಕ್ಯಾಪ್ಟನ್ ಆಗಿರುವುದರಿಂದ ಮುಂದಿನ ವಾರದ ಎಲಿಮಿನೇಷನ್ನಿಂದ ಅವರು ಬಚಾವ್ ಆಗಿದ್ದಾರೆ. ಕ್ಯಾಪ್ಟನ್ ಆಗುವ ಕನಸು ಕೂಡ ಈಡೇರಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.