National Hamburger Day 2022: ಬರ್ಗರ್​ನ ಇತಿಹಾಸ ನಿಮಗೆ ತಿಳಿದಿದೆಯೇ? ವಿವಿಧ ರೀತಿಯ ಹ್ಯಾಂಬರ್ಗರ್​ಗಳು ಇಲ್ಲಿವೆ ನೋಡಿ

| Updated By: Rakesh Nayak Manchi

Updated on: May 28, 2022 | 11:16 AM

ರುಚಿಕರವಾದ ಆಹಾರವನ್ನು ಆಚರಿಸಲು ಯುಎಸ್​ನಾದ್ಯಂತ ಮೇ 28ರಂದು ರಾಷ್ಟ್ರೀಯ ಹ್ಯಾಂಬರ್ಗರ್ ದಿನವನ್ನಾಗಿ ಆಚರಿಸಲಾಗುತ್ತದೆ. ಹ್ಯಾಂಬರ್ಗರ್​ಗಳು ಅಮೆರಿಕದ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಮೇ 28ರಂದು ಇದರ ದಿನವನ್ನು ಆಚರಿಸುವಂತೆ ಪ್ರೋತ್ಸಾಹಿಸಲಾಗುತ್ತದೆ.

National Hamburger Day 2022: ಬರ್ಗರ್​ನ ಇತಿಹಾಸ ನಿಮಗೆ ತಿಳಿದಿದೆಯೇ? ವಿವಿಧ ರೀತಿಯ ಹ್ಯಾಂಬರ್ಗರ್​ಗಳು ಇಲ್ಲಿವೆ ನೋಡಿ
ಬರ್ಗರ್
Follow us on

ಪ್ರವಾಸ, ಗೆಳೆಯರೊಂದಿಗೆ ಹೊಟೇಲ್​ಗೆ ಹೋದರೆ ಅಥವಾ ಬರ್ತ್​ಡೇ ಸಂದರ್ಭದಲ್ಲಿ ಪಾರ್ಟಿ ಆಯೋಜಿಸಿದರೆ ಒಂದಷ್ಟು ಮಂದಿ ಸ್ಯಾಂಡ್​ವಿಚ್ ಆರ್ಡರ್ ಮಾಡುತ್ತಾರೆ. ಇದರಲ್ಲಿ ಬರ್ಗರ್ (Burger)​ ಕೂಡ ಒಂದು. ಈ ಬರ್ಗರ್​ಗೂ ಒಂದು ದಿನ ಇದೆ ಎಂದು ನಿಮಗೆ ತಿಳಿದಿದೆಯಾ? ಮೇ 28 ರಂದು ರಾಷ್ಟ್ರೀಯ ಹ್ಯಾಂಬರ್ಗರ್ ದಿನ (National hamburger Day) ವನ್ನಾಗಿ ಆಚರಿಸಲಾಗುತ್ತದೆ. ರುಚಿಕರವಾದ ಆಹಾರ (Food)ವನ್ನು ಆಚರಿಸಲು ಯುಎಸ್​ನಾದ್ಯಂತ ಹ್ಯಾಂಬರ್ಗರ್ ಪ್ರಿಯರನ್ನು ಪ್ರೋತ್ಸಾಹಿಸಲಾಗುತ್ತದೆ. ಅಷ್ಟಕ್ಕೂ ಇದನ್ನು ಯಾವ ಕಾಲದಲ್ಲಿ ತಯಾರಿಸಲು ಪ್ರಾರಂಭಿಸಲಾಯಿತು? ಇದರ ಇತಿಹಾಸ ಹೇಗಿದೆ ಎಂದು ತಿಳಿಯಲು ಈ ಸುದ್ದಿ ಓದಿ.

ಇದನ್ನೂ ಓದಿ: World Menstrual Hygiene Day 2022: ಸ್ತ್ರೀಯರು ಈ ಸಲಹೆಗಳನ್ನು ತಪ್ಪೆದೇ ಅನುಸರಿಸಿ, ಈ ತಪ್ಪು ಮಾಡಲೇ ಬೇಡಿ

ಹೆಚ್ಚಿನವರು ಸಾಂಪ್ರದಾಯಿಕ ಅಮೇರಿಕನ್ ಬರ್ಗರ್‌ಗಳನ್ನು ಇಷ್ಟಪಡುತ್ತಾರೆ. ಇಂಥ ಹ್ಯಾಂಬರ್ಗರ್​ನ ಇತಿಹಾಸ ಆಸಕ್ತಿದಾಯಕವಾಗಿದೆ. ಇದನ್ನು ಮೊದಲು 1829ರಲ್ಲಿ ಜರ್ಮನಿಯಲ್ಲಿ ಪ್ರಾರಂಭಿಸಲಾಯಿತು ಎಂದು ನಂಬಲಾಗಿದೆ. ಗ್ರಿಲ್​ನಲ್ಲಿ ಬೇಯಿಸಿದ ಒಂದು ರೀತಿಯ ಗೋಮಾಂಸ ಪ್ಯಾಟಿಯನ್ನು ತಿನ್ನಲಾಗುತ್ತಿತ್ತು. ಹ್ಯಾಂಬರ್ಗರ್​ಗಳು ಅಮೆರಿಕದ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಒಂದಾಗಿದೆ. ಅಲ್ಲಿ ಪ್ರತಿವರ್ಷ ಮೇ 28ರಂದು ರಾಷ್ಟ್ರೀಯ ಹ್ಯಾಂಬರ್ಗರ್ ದಿನವನ್ನು ಆಚರಿಸಲಾಗುತ್ತದೆ.

ಹ್ಯಾಂಬರ್ಗರ್‌ನ ಮೂಲವು ಸ್ವಲ್ಪ ನಿಗೂಢವಾಗಿದ್ದರೂ ಇದನ್ನು ಆರಂಭದಲ್ಲಿ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ರಚಿಸಲಾಗಿದೆ ಎಂದು ನಂಬಲಾಗಿದೆ. ಆ ಸಮಯದಲ್ಲಿ, ಹ್ಯಾಂಬರ್ಗರ್‌ಗಳನ್ನ ಗೋಮಾಂಸ ಮತ್ತು ಬ್ರೆಡ್‌ನಿಂದ ತಯಾರಿಸಲಾಗುತ್ತಿತ್ತು ಮತ್ತು ರೆಸ್ಟೋರೆಂಟ್‌ಗಳಲ್ಲಿ ಖಾದ್ಯವಾಗಿ ನೀಡಲಾಗುತ್ತಿತ್ತು.

ವಿಶ್ವ ಯುದ್ಧ-IIರ ನಂತರ ಅಮೆರಿಕಾದಲ್ಲಿ ಹ್ಯಾಂಬರ್ಗರ್ ಜನಪ್ರಿಯವಾಯಿತು. ಆ ಸಮಯದಲ್ಲಿ, ಯುರೋಪ್​ನಿಂದ ಹಿಂದಿರುಗಿದ ಅನೇಕ ಸೈನಿಕರು ಹಸಿವಿನಿಂದ ಮತ್ತು ಹೊಸದನ್ನು ತಿನ್ನಲು ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ ಹ್ಯಾಂಬರ್ಗರ್ ಅನ್ನು ಕಂಡುಹಿಡಿಯಲಾಯಿತು ಮತ್ತು ದೇಶಾದ್ಯಂತ ರೆಸ್ಟೋರೆಂಟ್‌ಗಳಲ್ಲಿ ನೀಡಲು ಪ್ರಾರಂಭಿಸಿದರು. ಹೀಗೆ ಆರಂಭವಾದ ಹ್ಯಾಂಬರ್ಗರ್​ ಇಂದು ಇಡೀ ವಿಶ್ವಾದ್ಯಂತ ಲಭ್ಯವಾಗುತ್ತಿದೆ.

ಇದನ್ನೂ ಓದಿ: Horoscope Today- ದಿನ ಭವಿಷ್ಯ; ಕಟಕ ರಾಶಿಯವರಿಗೆ ಈ ದಿನ ಆರೋಗ್ಯ ಹದಗೆಡಲಿದೆ

ಹ್ಯಾಂಬರ್ಗರ್​ನ ವಿಧಗಳು

ಹ್ಯಾಂಬರ್ಗರ್​ನಲ್ಲಿ ಹಲವು ವಿಧಗಳಿವೆ. ಈ ಪೈಕಿ ಅತ್ಯಂತ ಜನಪ್ರಿಯವಾದದ್ದು ಚೀಸ್​ಬರ್ಗರ್. ಚೀಸ್‌ಬರ್ಗರ್​ಗಳಲ್ಲಿ ಹಲವಾರು ವಿಭಿನ್ನ ಮಾರ್ಪಾಡುಗಳಿವೆ, ಇದರಲ್ಲಿ ಗೋಮಾಂಸ, ಚೀಸ್ ಮತ್ತು ಬನ್ ಸಾಮಾನ್ಯವಾದದ್ದು.

ಇನ್ನೊಂದು ಜನಪ್ರೀಯ ಬರ್ಗರ್ ಎಂದರೆ ಟರ್ಕಿ ಬರ್ಗರ್. ಈ ಬರ್ಗರ್ ಅನ್ನು ಗೋಮಾಂಸದ ಬದಲಿಗೆ ಟರ್ಕಿಯ ಮಾಂಸದಿಂದ ತಯಾರಿಸಲಾಗುತ್ತದೆ. ಇದು ಚೀಸ್ ಬರ್ಗರ್‌ಗಿಂತ ವಿಭಿನ್ನ ರೀತಿಯ ಬನ್ ಅನ್ನು ಬಳಕೆ ಮಾಡಲಾಗುತ್ತದೆ. ಟರ್ಕಿ ಬರ್ಗರ್ ಅನ್ನು ಸಾಮಾನ್ಯವಾಗಿ ಸಾಸ್ ಮತ್ತು ಲೆಟಿಸ್‌ನೊಂದಿಗೆ ನೀಡಲಾಗುತ್ತದೆ.

ಬರ್ಗರ್​ನಲ್ಲಿ ಸಸ್ಯಾಹಾರಿ ಬರ್ಗರ್‌ಗಳೂ ಲಭ್ಯವಿವೆ. ಈ ಬರ್ಗರ್‌ಗಳನ್ನು ಮಾಂಸದ ಬದಲಿಗೆ ತರಕಾರಿಗಳಿಂದ ತಯಾರಿಸಲಾಗುತ್ತದೆ. ಸಸ್ಯಾಹಾರಿ ಬರ್ಗರ್‌ಗಳಲ್ಲಿ ಫಲಾಫೆಲ್ ಬರ್ಗರ್ ಮತ್ತು ಕಪ್ಪು ಬೀನ್ ಬರ್ಗರ್ ಕೂಡ ಸೇರಿವೆ.

ಇದನ್ನೂ ಓದಿ: ವೈವಿಧ್ಯಗೊಳಿಸಿದ ಆಹಾರ ಕ್ರಮಗಳು ಮಕ್ಕಳ ಪ್ರೋಟೀನ್‌ ಅವಶ್ಯಕತೆಯ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಸುವ ಪ್ರಮುಖ ಸಾಧನಗಳು  

ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:13 am, Sat, 28 May 22