Tiredness: ನೀವು ಆಯಾಸಗೊಂಡಿರುವಾಗ ಈ ಆಹಾರಗಳಿಂದ ದೂರವಿರಿ
ಆಹಾರವು ನಿಮ್ಮ ದೇಹಕ್ಕೆ ಶಕ್ತಿ ಕೊಟ್ಟು ನೀವು ಸದಾ ಲವಲವಿಕೆಯಿಂದಿರುವಂತೆ ಮಾಡುತ್ತದೆ. ಆದರೆ ನೀವು ಆಯಾಸಗೊಂಡಿರುವಾಗ ಕೆಲವು ಆಹಾರಗಳನ್ನು ಸೇವಿಸಿದರೆ ಅದು ನಿಮಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು.
ಆಹಾರವು ನಿಮ್ಮ ದೇಹಕ್ಕೆ ಶಕ್ತಿ ಕೊಟ್ಟು ನೀವು ಸದಾ ಲವಲವಿಕೆಯಿಂದಿರುವಂತೆ ಮಾಡುತ್ತದೆ. ಆದರೆ ನೀವು ಆಯಾಸಗೊಂಡಿರುವಾಗ ಕೆಲವು ಆಹಾರಗಳನ್ನು ಸೇವಿಸಿದರೆ ಅದು ನಿಮಗೆ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡಬಹುದು.
ನಿಮಗೆ ಆಯಾಸವೆನಿಸಿದಾಗ ಕೆಂಪು ಮಾಂಸ, ಸಹಿ ತಿನಿಸುಗಳು ಸೇರಿದಂತೆ ಹಲವು ಆಹಾರಗಳನ್ನು ತಿನ್ನಬಾರದು, ಹೀಗೆ ಹೆಚ್ಚು ಕ್ಯಾಲರಿ ಇರುವ ಪದಾರ್ಥಗಳನ್ನು ಸೇವಿಸುವುದರಿಂದ ಜೀರ್ಣಕ್ರಿಯೆ ತಡವಾಗಿ ನಿಮಗೆ ಮತ್ತಷ್ಟು ಆಯಾಸ ಉಂಟು ಮಾಡಬಹುದು.
ಹಾಗಾಗಿ ಬಹುಬೇಗನೆ ಜೀರ್ಣವಾಗಿ ನಿಮ್ಮ ಚೈತನ್ಯವನ್ನು ಮರಳಿಸಬಲ್ಲ ಆಹಾರವನ್ನು ಸೇವನೆ ಮಾಡಿ. ಈ ಆಹಾರಗಳ ಸೇವನೆ ಬೇಡ.
ಕಾಫಿ: ಕಾಫಿಯು ಬೆಳಗ್ಗೆ ದೇಹಕ್ಕೆ ಚೈತನ್ಯ ತುಂಬಿ ಇಡೀ ದಿನವೂ ಆರೋಗ್ಯಯುತವಾಗಿರುವಂತೆ ನೋಡಿಕೊಳ್ಳುತ್ತದೆ ಆದರೂ ಕೆಲವೊಮ್ಮೆ ಅದರಿಂದಲೇ ಸಮಸ್ಯೆ ಉಂಟಾಗುತ್ತದೆ. ಒಂದೊಮ್ಮೆ ನಿಮಗೆ ಆಯಾಸವಾಗಿದ್ದರೆ ಸಕ್ಕರೆ ಬೆರೆಸದ ಟೀ, ಫ್ರೆಶ್ ಜ್ಯೂಸ್, ನಿಂಬೆ ಜ್ಯೂಸ್ ಅನ್ನು ಕುಡಿಯಿರಿ.
ಬಿಳಿ ಸಕ್ಕರೆ: ಒಂದೊಮ್ಮೆ ನಿಮಗೆ ಸುಸ್ತು ಅನ್ನಿಸುತ್ತಿದ್ದರೆ, ಐಸ್ಕ್ರೀಂ, ಡೋನಟ್ಸ್ಗಳನ್ನು ತಿನ್ನುವುದನ್ನು ತಪ್ಪಿಸಿ. ಕೆಂಪು ಮಾಂಸ: ಕೆಂಪು ಮಾಂಸವು ದೇಹದಲ್ಲಿ ಜೀರ್ಣವಾಗಲು ತುಂಬಾ ಸಮಯವನ್ನು ತೆಗೆದುಕೊಳ್ಳುತ್ತದೆ. ಇದರಿಂದ ನಿಮಗೆ ನಿದ್ರಾಹೀನತೆ ಸಮಸ್ಯೆಯೂ ಕಾಡಬಹುದು.
ರೆಡಿ ಟು ಈಟ್ ಆಹಾರಗಳ ಸೇವನೆ ಬೇಡ: ರೆಡಿ ಟು ಈಟ್ನಂತಹ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದಲ್ಲ, ಅದರಲ್ಲಿ ಉಪ್ಪಿನ ಪ್ರಮಾಣ ಹೆಚ್ಚಿರುತ್ತದೆ. ಮನೆಯಲ್ಲೇ ತಯಾರಿಸಿದ ಆಹಾರವನ್ನೇ ತಿನ್ನಿ.
ವಾತಾವರಣದಲ್ಲಿ ಆಗುವ ಏರುಪೇರಿನಿಂದಾಗಿ ಆರೋಗ್ಯದಲ್ಲಿ ಏರುಪೇರಾಗುತ್ತದೆ, ಆದರೆ ಇದರಿಂದಾಗಿ ಒಮ್ಮೆ ಹುಷಾರು ತಪ್ಪಿದರೆ, ಮತ್ತೆ ಮೊದಲಿನ ಹಾಗೆ ಚಟುವಟಿಕೆಯಿಂದ ಇರಲು, ಸ್ವಲ್ಪ ದಿನಗಳು ಬೇಕಾಗುತ್ತದೆ. ಅಲ್ಲದೇ ಈ ಸಮಯದಲ್ಲಿ ನಮ್ಮ ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕೂಡ ಕುಗ್ಗುವುದರಿಂದ, ಆರೋಗ್ಯಕ್ಕೆ ಮತ್ತಷ್ಟು ಸಮಸ್ಯೆಗಳು ಕಂಡು ಬರುತ್ತದೆ.
ಇನ್ನು ಆರೋಗ್ಯಕ್ಕೆ ಹುಷಾರು ಇಲ್ಲದ ಸಂದರ್ಭದಲ್ಲಿ, ದೈಹಿಕವಾಗಿ ಆಯಾಸ, ಸುಸ್ತು, ನಿತ್ರಾಣ ವಾಗುವುದು ಸಾಮಾನ್ಯ. ಇಂತಹ ಸಂದರ್ಭದಲ್ಲಿ ದೇಹಕ್ಕೆ ತಕ್ಷಣವೇ ಶಕ್ತಿ ಸಿಗಲು ಪೌಷ್ಟಿಕಾಂಶ ಯುಕ್ತ ಆಹಾರಗಳು ಹಾಗೂ ಪಾನೀಯಗಳನ್ನು ಸೇವಿಸಿಬೇಕು. ಇಲ್ಲಾಂದರೆ ಎಲೆಕ್ಟ್ರೋಲೈಟ್ ಪಾನೀಯಗಳನ್ನು ಸೇವನೆ ಮಾಡಬೇಕು. ವೈದ್ಯರು ಕೂಡ ಇದನ್ನೇ ಹೇಳುತ್ತಾರೆ.
ಹುಷಾರು ತಪ್ಪಿದ ಸಂದರ್ಭದಲ್ಲಿ ಎದುರಾಗುವ ವಿಪರೀತ ದೈಹಿಕ ಆಯಾಸ, ವಾಂತಿ, ಭೇದಿ, ತಲೆ ಸುತ್ತು ಇತ್ಯಾದಿ ಸಮಸ್ಯೆಗಳು ಕಾಡಲು ಶುರುವಾಗುತ್ತದೆ. ಈ ಸಂದರ್ಭದಲ್ಲಿ ವೈದ್ಯರು ನಮಗೆ ಎಲೆಕ್ಟ್ರೋಲೈಟ್ ಡ್ರಿಂಕ್ ಅಥವಾ ಓ ಆರ್ ಎಸ್ ಅಥವಾ ಎಳೆನೀರು ಕುಡಿಯುವಂತೆ ಸೂಚಿಸುತ್ತಾರೆ.
ಇದಕ್ಕೆ ಮುಖ್ಯ ಕಾರಣಗಳು ಏನೆಂದರೆ ಇದರಲ್ಲಿರುವ , ಕ್ಯಾಲ್ಸಿಯಂ, ಮೆಗ್ನೀಷಿಯಂ, ಸೋಡಿಯಂ, ಸಲ್ಪೇಟ್, ಪಾಸ್ಪೆಟ್, ಬೈಕಾರ್ಬೋನೇಟ್, ಕ್ಲೋರೈಡ್ ಅಂಶಗಳು ನಮ್ಮ ದೇಹಕ್ಕೆ ತಕ್ಷಣವೇ ಶಕ್ತಿಯನ್ನು ನೀಡುತ್ತದೆ ಹಾಗೂ ಆಯಾಸವನ್ನು ದೂರ ಮಾಡುತ್ತದೆ.
ಎಲೆಕ್ಟ್ರೋಲೈಟ್ ಪಾನೀಯವನ್ನು ಮೆಡಿಕಲ್ ಶಾಪ್‌ಗಳಿಂದ ಅಥವಾ ಅಂಗಡಿಗಳಿಂದ ಕೊಂಡು ಕುಡಿಯುವ ಬದಲು ಸ್ವತಃ ಮನೆಯಲ್ಲಿ ನಾವೇ ತಯಾರು ಮಾಡಿಕೊಂಡು ಕುಡಿಯಬಹುದು. ಇದನ್ನು ತಯಾರು ಮಾಡಲು ಕೆಲವೊಂದು ನೈಸರ್ಗಿಕ ಆಹಾರ ಪದಾರ್ಥಗಳು ಬೇಕಾಗಿ ರುವುದರಿಂದ, ಇದರಿಂದ ಯಾವುದೇ ಅಡ್ಡಪರಿಣಾಮಗಳು ಇರುವುದಿಲ್ಲ.
ಜೀವನಶೈಲಿಗೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ