National Hamburger Day 2022: ಬರ್ಗರ್ನ ಇತಿಹಾಸ ನಿಮಗೆ ತಿಳಿದಿದೆಯೇ? ವಿವಿಧ ರೀತಿಯ ಹ್ಯಾಂಬರ್ಗರ್ಗಳು ಇಲ್ಲಿವೆ ನೋಡಿ
ರುಚಿಕರವಾದ ಆಹಾರವನ್ನು ಆಚರಿಸಲು ಯುಎಸ್ನಾದ್ಯಂತ ಮೇ 28ರಂದು ರಾಷ್ಟ್ರೀಯ ಹ್ಯಾಂಬರ್ಗರ್ ದಿನವನ್ನಾಗಿ ಆಚರಿಸಲಾಗುತ್ತದೆ. ಹ್ಯಾಂಬರ್ಗರ್ಗಳು ಅಮೆರಿಕದ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಒಂದಾಗಿದ್ದು, ಪ್ರತಿವರ್ಷ ಮೇ 28ರಂದು ಇದರ ದಿನವನ್ನು ಆಚರಿಸುವಂತೆ ಪ್ರೋತ್ಸಾಹಿಸಲಾಗುತ್ತದೆ.
ಪ್ರವಾಸ, ಗೆಳೆಯರೊಂದಿಗೆ ಹೊಟೇಲ್ಗೆ ಹೋದರೆ ಅಥವಾ ಬರ್ತ್ಡೇ ಸಂದರ್ಭದಲ್ಲಿ ಪಾರ್ಟಿ ಆಯೋಜಿಸಿದರೆ ಒಂದಷ್ಟು ಮಂದಿ ಸ್ಯಾಂಡ್ವಿಚ್ ಆರ್ಡರ್ ಮಾಡುತ್ತಾರೆ. ಇದರಲ್ಲಿ ಬರ್ಗರ್ (Burger) ಕೂಡ ಒಂದು. ಈ ಬರ್ಗರ್ಗೂ ಒಂದು ದಿನ ಇದೆ ಎಂದು ನಿಮಗೆ ತಿಳಿದಿದೆಯಾ? ಮೇ 28 ರಂದು ರಾಷ್ಟ್ರೀಯ ಹ್ಯಾಂಬರ್ಗರ್ ದಿನ (National hamburger Day) ವನ್ನಾಗಿ ಆಚರಿಸಲಾಗುತ್ತದೆ. ರುಚಿಕರವಾದ ಆಹಾರ (Food)ವನ್ನು ಆಚರಿಸಲು ಯುಎಸ್ನಾದ್ಯಂತ ಹ್ಯಾಂಬರ್ಗರ್ ಪ್ರಿಯರನ್ನು ಪ್ರೋತ್ಸಾಹಿಸಲಾಗುತ್ತದೆ. ಅಷ್ಟಕ್ಕೂ ಇದನ್ನು ಯಾವ ಕಾಲದಲ್ಲಿ ತಯಾರಿಸಲು ಪ್ರಾರಂಭಿಸಲಾಯಿತು? ಇದರ ಇತಿಹಾಸ ಹೇಗಿದೆ ಎಂದು ತಿಳಿಯಲು ಈ ಸುದ್ದಿ ಓದಿ.
ಇದನ್ನೂ ಓದಿ: World Menstrual Hygiene Day 2022: ಸ್ತ್ರೀಯರು ಈ ಸಲಹೆಗಳನ್ನು ತಪ್ಪೆದೇ ಅನುಸರಿಸಿ, ಈ ತಪ್ಪು ಮಾಡಲೇ ಬೇಡಿ
ಹೆಚ್ಚಿನವರು ಸಾಂಪ್ರದಾಯಿಕ ಅಮೇರಿಕನ್ ಬರ್ಗರ್‌ಗಳನ್ನು ಇಷ್ಟಪಡುತ್ತಾರೆ. ಇಂಥ ಹ್ಯಾಂಬರ್ಗರ್‌ನ ಇತಿಹಾಸ ಆಸಕ್ತಿದಾಯಕವಾಗಿದೆ. ಇದನ್ನು ಮೊದಲು 1829ರಲ್ಲಿ ಜರ್ಮನಿಯಲ್ಲಿ ಪ್ರಾರಂಭಿಸಲಾಯಿತು ಎಂದು ನಂಬಲಾಗಿದೆ. ಗ್ರಿಲ್ನಲ್ಲಿ ಬೇಯಿಸಿದ ಒಂದು ರೀತಿಯ ಗೋಮಾಂಸ ಪ್ಯಾಟಿಯನ್ನು ತಿನ್ನಲಾಗುತ್ತಿತ್ತು. ಹ್ಯಾಂಬರ್ಗರ್ಗಳು ಅಮೆರಿಕದ ಅತ್ಯಂತ ಜನಪ್ರಿಯ ಆಹಾರಗಳಲ್ಲಿ ಒಂದಾಗಿದೆ. ಅಲ್ಲಿ ಪ್ರತಿವರ್ಷ ಮೇ 28ರಂದು ರಾಷ್ಟ್ರೀಯ ಹ್ಯಾಂಬರ್ಗರ್ ದಿನವನ್ನು ಆಚರಿಸಲಾಗುತ್ತದೆ.
ಹ್ಯಾಂಬರ್ಗರ್‌ನ ಮೂಲವು ಸ್ವಲ್ಪ ನಿಗೂಢವಾಗಿದ್ದರೂ ಇದನ್ನು ಆರಂಭದಲ್ಲಿ ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ರಚಿಸಲಾಗಿದೆ ಎಂದು ನಂಬಲಾಗಿದೆ. ಆ ಸಮಯದಲ್ಲಿ, ಹ್ಯಾಂಬರ್ಗರ್‌ಗಳನ್ನ ಗೋಮಾಂಸ ಮತ್ತು ಬ್ರೆಡ್‌ನಿಂದ ತಯಾರಿಸಲಾಗುತ್ತಿತ್ತು ಮತ್ತು ರೆಸ್ಟೋರೆಂಟ್‌ಗಳಲ್ಲಿ ಖಾದ್ಯವಾಗಿ ನೀಡಲಾಗುತ್ತಿತ್ತು.
ವಿಶ್ವ ಯುದ್ಧ-IIರ ನಂತರ ಅಮೆರಿಕಾದಲ್ಲಿ ಹ್ಯಾಂಬರ್ಗರ್ ಜನಪ್ರಿಯವಾಯಿತು. ಆ ಸಮಯದಲ್ಲಿ, ಯುರೋಪ್ನಿಂದ ಹಿಂದಿರುಗಿದ ಅನೇಕ ಸೈನಿಕರು ಹಸಿವಿನಿಂದ ಮತ್ತು ಹೊಸದನ್ನು ತಿನ್ನಲು ಹುಡುಕುತ್ತಿದ್ದರು. ಈ ಸಂದರ್ಭದಲ್ಲಿ ಹ್ಯಾಂಬರ್ಗರ್ ಅನ್ನು ಕಂಡುಹಿಡಿಯಲಾಯಿತು ಮತ್ತು ದೇಶಾದ್ಯಂತ ರೆಸ್ಟೋರೆಂಟ್‌ಗಳಲ್ಲಿ ನೀಡಲು ಪ್ರಾರಂಭಿಸಿದರು. ಹೀಗೆ ಆರಂಭವಾದ ಹ್ಯಾಂಬರ್ಗರ್ ಇಂದು ಇಡೀ ವಿಶ್ವಾದ್ಯಂತ ಲಭ್ಯವಾಗುತ್ತಿದೆ.
ಇದನ್ನೂ ಓದಿ: Horoscope Today- ದಿನ ಭವಿಷ್ಯ; ಕಟಕ ರಾಶಿಯವರಿಗೆ ಈ ದಿನ ಆರೋಗ್ಯ ಹದಗೆಡಲಿದೆ
ಹ್ಯಾಂಬರ್ಗರ್‌ನ ವಿಧಗಳು
ಹ್ಯಾಂಬರ್ಗರ್ನಲ್ಲಿ ಹಲವು ವಿಧಗಳಿವೆ. ಈ ಪೈಕಿ ಅತ್ಯಂತ ಜನಪ್ರಿಯವಾದದ್ದು ಚೀಸ್‌ಬರ್ಗರ್. ಚೀಸ್ಬರ್ಗರ್ಗಳಲ್ಲಿ ಹಲವಾರು ವಿಭಿನ್ನ ಮಾರ್ಪಾಡುಗಳಿವೆ, ಇದರಲ್ಲಿ ಗೋಮಾಂಸ, ಚೀಸ್ ಮತ್ತು ಬನ್ ಸಾಮಾನ್ಯವಾದದ್ದು.
ಇನ್ನೊಂದು ಜನಪ್ರೀಯ ಬರ್ಗರ್ ಎಂದರೆ ಟರ್ಕಿ ಬರ್ಗರ್. ಈ ಬರ್ಗರ್ ಅನ್ನು ಗೋಮಾಂಸದ ಬದಲಿಗೆ ಟರ್ಕಿಯ ಮಾಂಸದಿಂದ ತಯಾರಿಸಲಾಗುತ್ತದೆ. ಇದು ಚೀಸ್ ಬರ್ಗರ್‌ಗಿಂತ ವಿಭಿನ್ನ ರೀತಿಯ ಬನ್ ಅನ್ನು ಬಳಕೆ ಮಾಡಲಾಗುತ್ತದೆ. ಟರ್ಕಿ ಬರ್ಗರ್ ಅನ್ನು ಸಾಮಾನ್ಯವಾಗಿ ಸಾಸ್ ಮತ್ತು ಲೆಟಿಸ್‌ನೊಂದಿಗೆ ನೀಡಲಾಗುತ್ತದೆ.
ಬರ್ಗರ್ನಲ್ಲಿ ಸಸ್ಯಾಹಾರಿ ಬರ್ಗರ್‌ಗಳೂ ಲಭ್ಯವಿವೆ. ಈ ಬರ್ಗರ್‌ಗಳನ್ನು ಮಾಂಸದ ಬದಲಿಗೆ ತರಕಾರಿಗಳಿಂದ ತಯಾರಿಸಲಾಗುತ್ತದೆ. ಸಸ್ಯಾಹಾರಿ ಬರ್ಗರ್‌ಗಳಲ್ಲಿ ಫಲಾಫೆಲ್ ಬರ್ಗರ್ ಮತ್ತು ಕಪ್ಪು ಬೀನ್ ಬರ್ಗರ್ ಕೂಡ ಸೇರಿವೆ.
ಇದನ್ನೂ ಓದಿ: ವೈವಿಧ್ಯಗೊಳಿಸಿದ ಆಹಾರ ಕ್ರಮಗಳು ಮಕ್ಕಳ ಪ್ರೋಟೀನ್ ಅವಶ್ಯಕತೆಯ ಸಮರ್ಪಕ ಪೂರೈಕೆಯನ್ನು ಖಚಿತಪಡಿಸಿಸುವ ಪ್ರಮುಖ ಸಾಧನಗಳು
ಹೆಚ್ಚಿನ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ
Published On - 11:13 am, Sat, 28 May 22