ಈಚಿನ ದಿನಗಳಲ್ಲಿ ಟೆಲಿಫೋನ್ಗಳು (Telephone) ಕಾಣಸಿಗುವುದು ಅಪರೂಪವಾಗಿದೆ. ಅದರಲ್ಲೂ 21ನೇ ಶತಮಾನದ ತಲೆಮಾರುಗಳಿಗೆ ಟೆಲಿಫೋನ್ಗಳ ಪರಿಚಯವೇ ಇರುವುದಿಲ್ಲ. ಕನ್ನಡದ ಹಳೇ ಚಿತ್ರಗಳನ್ನು ನೋಡಿದರೇ ಟೆಲಿಫೋನ್ಗಳು ಕಾಣಸಿಗುತ್ತವೆ. ಮೊಬೈಲ್ಗಳು (Mobile) ಬಂದ ಮೇಲೆ ಮನೆ, ಕಚೇರಿಗಳಿಂದ ಟೆಲಿಫೋನ್ಗಳು ಮಾಯವಾಗಿ ಬಿಟ್ಟಿವೆ. ಪ್ರತಿವರ್ಷ ಏಪ್ರಿಲ್ 25ರಂದು ರಾಷ್ಟ್ರೀಯ ಟೆಲಿಫೋನ್ ದಿನವೆಂದು ಆಚರಿಸಲಾಗುತ್ತದೆ. ಟೆಲಿಫೋನ್ ಕಂಡು ಹಿಡಿದ ಅಲೆಕ್ಸಾಂಡರ್ ಗ್ರಹಾಂ ಬೆಲ್ ಅವರ ಗಮನಾರ್ಹ ಆವಿಷ್ಕಾರದ ನೆನಪಿಗಾಗಿ ಪ್ರತಿ ವರ್ಷ ಏಪ್ರಿಲ್ 25 ರಂದು ರಾಷ್ಟ್ರೀಯ ಟೆಲಿಫೋನ್ ದಿನವೆಂದು ಆಚರಿಸಲಾಗುತ್ತದೆ.
ಅಲೆಕ್ಸಾಂಡರ್ ಗ್ರಹಾಂ ಬೆಲ್ ಸ್ಕಾಟಿಷ್ ಮೂಲದ ವಿಜ್ಞಾನಿ ಮತ್ತು ಸಂಶೋಧಕರಾಗಿದ್ದರು. 1876 ಏಪ್ರಿಲ್ 25 ರಂದು ಮೊದಲ ಬಾರಿಗೆ ಬೆಲ್ ದೂರವಾಣಿ ಕಂಡುಹಿಡಿಯುವದರ ಮೂಲಕ ಸಂವಹನ ಮಾಧ್ಯಮಕ್ಕೆ ಹೊಸ ಭಾಷ್ಯ ಬರೆದರು.
ಇದನ್ನೂ ಓದಿ: Phone Booth : ಟೆಲಿಫೋನ್ ಬೂತ್ ಬಗ್ಗೆ ನಿಮಗೆ ಗೊತ್ತಾ..? ಪಕ್ಷಿ ಸಂಕುಲ ನಾಶಕ್ಕೆ ಕಾರಣವಾಗಿದೆ ಆಧುನಿಕ ತಂತ್ರಜ್ಞಾನ
ಅಲೆಕ್ಸಾಂಡರ್ ಗ್ರಹಾಂ ಬೆಲ್ 1876ರ ಮಾರ್ಚ್ 10ರಂದು ಬೆಲ್ ಪಕ್ಕದ ಕೋಣೆಯಲ್ಲಿದ್ದ ತನ್ನ ಸ್ನೇಹಿತ ಥೋಮಸ್ ವಾಟ್ಸನ್ ನೋಡನೆ ಮೊದಲ ಬಾರಿಗೆ ದೂರವಾಣಿ ಮೂಲಕ ಮಾತನಾಡುವ ಮೂಲಕ ಟೆಲಿಫೋನ್ ಆವಿಷ್ಕಾರವಾಯಿತು. ನಂತರದ ದಿನಗಳಲ್ಲಿ ಇವರು ಈ ದೂರವಾಣಿಗಳಲ್ಲಿ ಹೊಸ ಹೊಸ ಆವಿಷ್ಕಾರಗಳನ್ನು ಮಾಡಿದರು 1877ರಲ್ಲಿ ಟಿಲಿಫೋನ್ ಕಂಪನಿಯನ್ನು ಸ್ಥಾಪಿಸಿದರು.
ಟೆಲಿಫೋನ್ಗಳನ್ನು ನೋಡಿದಾಗ ನಮ್ಮ ಬಾಲ್ಯದ ದಿನಗಳು ನೆನಪಾಗುತ್ತವೆ. ಬೆಳೆಯುತ್ತಿರುವ ತಂತ್ರಜ್ಞಾನ ಮತ್ತು ವಿಜ್ಞಾನ ಕ್ಷೇತ್ರದ ಮಧ್ಯೆಯೂ ಆ ದಿನಗಳ ನೆನಪು ಕಾಡುತ್ತಿರುತ್ತವೆ. ಮತ್ತು ನಾವು ಹೊಸ ಹೊಸ ತಂತ್ರಜ್ಞಾನಗಳತ್ತ ಮಾಡುತ್ತ, ಇವುಗಳಿಗೆಲ್ಲ ಬುನಾದಿ ಹಾಕಿದವರನ್ನು ಮರೆಯುತ್ತಿರುವುದು ಖೇದರದ ಸಂಗತಿಯಾಗಿದೆ. ಒಬ್ಬ ವ್ಯಕ್ತಿಯ ಆವಿಷ್ಕಾರವು ಇಂದು ನಾವು ಆನಂದಿಸುವ ಎಲ್ಲದಕ್ಕೂ ಕಾರಣವಾಗಿದೆ ಎಂಬುದು ನಂಬಲಾಗದ ಸಂಗತಿ. ಆಗಿನ ಕಾಲದಲ್ಲಿ ಟೆಲಿಫೋನ್ ಅತಿ ವೇಗದ ಸಂಪರ್ಕ ಸಾಧನವಾಗಿತ್ತು.
ರಾಷ್ಟ್ರೀಯ ಟೆಲಿಫೋನ್ ದಿನದ ದಿನಾಂಕಗಳು | ||
ವರ್ಷ | ದಿನಾಂಕ | ದಿನ |
2023 | ಏಪ್ರಿಲ್ 25 | ಮಂಗಳವಾರ |
2024 | ಏಪ್ರಿಲ್ 25 | ಗುರುವಾರ |
2025 | ಏಪ್ರಿಲ್ 25 | ಶುಕ್ರವಾರ |
2026 | ಏಪ್ರಿಲ್ 25 | ಶನಿವಾರ |
2027 | ಏಪ್ರಿಲ್ 25 | ರವಿವಾರ |
ಮತ್ತಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:35 am, Tue, 25 April 23