Phone Booth : ಟೆಲಿಫೋನ್‌ ಬೂತ್‌ ಬಗ್ಗೆ ನಿಮಗೆ ಗೊತ್ತಾ..? ಪಕ್ಷಿ ಸಂಕುಲ ನಾಶಕ್ಕೆ ಕಾರಣವಾಗಿದೆ ಆಧುನಿಕ ತಂತ್ರಜ್ಞಾನ

ಊರಿಗೆ ಒಂದೊ ಎರಡೊ ಫೋನ್ ಭೂತ್ ಇರುತ್ತಿತ್ತು. ಅದ್ರಲ್ಲಿ ಒಂದು ರೂಪಾಯಿ ನಾಣ್ಯವನ್ನ ಹಾಕಿದ್ರೆ ಒಂದು ನಿಮಿಷ ಮಾತನಾಡಬಹುದಿತ್ತು‌. ಇಂದಿನ‌ ದಿನದಲ್ಲಿ ಅಂತಹ ಭೂತ್ ಗಳನ್ನು ನಾವು ಕಾಣ‌ಸಿಗುವುದು ಭಾರಿ ಅಪರೂಪ.

Phone Booth : ಟೆಲಿಫೋನ್‌ ಬೂತ್‌ ಬಗ್ಗೆ ನಿಮಗೆ ಗೊತ್ತಾ..? ಪಕ್ಷಿ ಸಂಕುಲ ನಾಶಕ್ಕೆ ಕಾರಣವಾಗಿದೆ ಆಧುನಿಕ ತಂತ್ರಜ್ಞಾನ
ಸಾಂದರ್ಭಿಕ ಚಿತ್ರ
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on:Sep 10, 2022 | 1:49 PM

ಅಯ್ಯೋ… ! ಇದೆಂತಾ ಭೂತ ಎಂದು ಕೇಳಬೇಡಿ ಇದು ಅಜ್ಜಿ ಕಥೆಗಳಲ್ಲಿ ಬರುವ ಭೂತವಲ್ಲ. ಇದು ಅಜ್ಜನ ಕಾಲದಲ್ಲಿ ಬಳಸುತ್ತಿದ್ದ ಸಾರ್ವಜನಿಕ ಫೋನ್ . ಅಂದು ಇವತ್ತಿನ ಕಾಲದ ಹಾಗೆ ಎಲ್ಲರಬಳಿ ಬಿಡಿ, ಎಲ್ಲರ ಮನೆಯಲ್ಲಿ ಸಹ ಒಂದು ಪೋನ್ ಇರುತ್ತಿರಲಿಲ್ಲ. ಊರಿಗೆ ಒಂದೊ ಎರಡೊ ಟೆಲಿಫೋನ್‌ ಬೂತ್‌ ಇರುತ್ತಿತ್ತು. ಅದ್ರಲ್ಲಿ ಒಂದು ರೂಪಾಯಿ ನಾಣ್ಯವನ್ನ ಹಾಕಿದ್ರೆ ಒಂದು ನಿಮಿಷ ಮಾತನಾಡಬಹುದಿತ್ತು‌. ಇಂದಿನ‌ ದಿನದಲ್ಲಿ ಅಂತಹ ಟೆಲಿಫೋನ್‌ ಬೂತ್‌ ಗಳನ್ನು ನಾವು ಕಾಣ‌ಸಿಗುವುದು ಭಾರಿ ಅಪರೂಪ. ಈಗ ಸ್ಮಾರ್ಟ್ ಫೋನ್ ಜಗತ್ತು ಚಿಕ್ಕ ಮಕ್ಕಳಿಂದ ಮುದುಕರ ವರೆಗೂ ಮೊಬೈಲ್ ಫೋನ್ ಇರುತ್ತದೆ. ಆದರೆ ಇದು ಬೆಳೆದು ಬಂದ ಹಾದಿ ಬಹಳ ದೊಡ್ಡದಿದೆ.

ಅಲೆಕ್ಸಾಂಡರ್ ಗ್ರಹಾಂಬೆಲ್ ಕಂಡುಹಿಡಿದ ಫೋನ್​ನಂತೆ ಇಂದಿನ ಫೋನ್​​ಗಳು ಇಲ್ಲ. ಅದು ಸಾಕಷ್ಟು ಬದಲಾಗಿದೆ. ಇಂದು ಜಗತ್ತನ್ನೆ ನಿಯಂತ್ರಣ ಮಾಡಲು ಕೇವಲ‌ ಒಂದು ಮೊಬೈಲ್ ಸಾಕು. ಮೊದಲು ಕೇಬಲ್​ಗಳ ಮೂಲಕ ಮನೆ ಮನೆಯನ್ನು ತಲುಪಿ ಸಂಪರ್ಕ ಸಾಧಿಸಲು ವ್ಯವಸ್ಥೆ ಮಾಡಲಾಗುತ್ತಿತ್ತು. ನಂತರ ಊರಿನಲ್ಲಿ ಒಂದು ಟವರ್ ಇಟ್ಟು ಅದರ ಮೂಲಕ ಸಿಗ್ನಲ್ ಬಿಡುಗಡೆ ಮಾಡಿ ಕೇವಲ ಟವರ್ ಗಳಿಗೆ ಮಾತ್ರ ಕೇಬಲನ್ನು ಎಳೆಯುವ ಹಾಗೆ ಮಾಡಿಕೊಳ್ಳಲಾಯಿತು .

ಈಗ ತಂತ್ರಜ್ಞಾನದ ಅಭಿವೃದ್ಧಿಯ ಪರಿಣಾಮ ಸಂಪೂರ್ಣ ವಾಯರ್ ಲೆಸ್ ಫೋನ್ ಪಡೆದುಕೊಳ್ಳಲು ಸಜ್ಜಾಗಿದೆ. ಕೆಲವು ದೇಶಗಳಲ್ಲಿ ಸೆಟ್ ಲೈಟ್​ಗಳ ಮೂಲಕ ಸಿಗ್ನಲ್ ಅನ್ನು ಬಿಡುಗಡೆ ಮಾಡುವ ಮೂಲಕ ಸಂಪರ್ಕ ಸಾಧಿಸುವಲ್ಲಿ ಅಲ್ಲಿನ ವಿಜ್ಞಾನಿಗಳು ಯಶಸ್ವಿಯಾಗಿದ್ದಾರೆ. ಇದೀಗ ಪ್ರಸ್ತುತ ದಿನದಲ್ಲಿ ಎಲ್ಲೆಡೆ ಈ ಫೋನ್ ಸದ್ದು ಮಾಡಲು ಸಜ್ಜಾಗಿ ನಿಂತಿರುವ ವ್ಯವಸ್ಥೆ . ಮನೆಯಲ್ಲಿ ನಾಲ್ಕು ಜನರಿದ್ದರೆ ಎಂಟು ಮೊಬೈಲ್ ಮತ್ತು ಹದಿನಾರು ನಂಬರ್​ಗಳು ಇರುತ್ತದೆ. ಇದರ ಪರಿಣಾಮ ಕೇಬಲ್​ಗಳ ಮೂಲಕ ಸಂಪರ್ಕ ಸೇವೆ ಒದಗಿಸುವುದು ಅಸಾಧ್ಯ. ಅದ್ದರಿಂದಲೆ ವಾಯರ್ ಲೆಸ್ ಎಲ್ಲಾ ಕ್ಷೇತ್ರದಲ್ಲಿ ಹೆಚ್ಚು ಕಾಣಸಿಗುತ್ತಿರುವುದು. ಮೊಬೈಲ್ ಅಲ್ಲದೇ ವಾಚ್​ಗಳಲ್ಲಿ ಸಹ ಕಾಲ್ ಮಾಡಲು ಇಂದು ಸಾಧ್ಯ. ಬಹುಶಃ ಈ ಕಾರಣದಿಂದಾಗಿ ಸಾರ್ವಜನಿಕ ಸಂಪರ್ಕ ಕೇಂದ್ರಗಳನ್ನು ಅಂದರೆ ಫೊನ್ ಭೂತ್ ಗಳನ್ನು ನಾವು ನೋಡಲು ಸಾಧ್ಯವಾಗುತ್ತಿಲ್ಲ. ಒಂದು ಕಡೆ ಮನುಷ್ಯನ ಈ ಅಭಿವೃದ್ಧಿ ಹೆಮ್ಮೆಯನ್ನು ತಂದರೆ, ಇದೆ ತಂತ್ರಜ್ಞಾನದ ಪರಿಣಾಮ ಪರಿಸರಕ್ಕೆ, ಪ್ರಾಣಿ ಸಂಕುಲಕ್ಕೆ ಆಗುತ್ತಿರುವ ಸಮಸ್ಯೆಯನ್ನು ನೋಡಿ ತಲೆ ತಗ್ಗಿಸುವಂತಾಗುತ್ತದೆ.

ಸಾಕಷ್ಟು ಪಕ್ಷಿ ಸಂಕುಲ ಇದರಿಂದ ನಾಶವಾಗಿದೆ ಇನ್ನೊಬ್ಬನಿಗೆ ಸಮಸ್ಯೆ ನೀಡಿ ತನ್ನ ದಾರಿ ಸುಲಭವಾಗಿಸಿಕೊಂಡರೆ ಅಭಿವೃದ್ಧಿ ಎನ್ನುವ ಶಬ್ದಕ್ಕೆ ಅರ್ಥ ಎಲ್ಲಿಂದ ಬಂದೀತು..? ಆದ್ದರಿಂದ ನಮ್ಮ ಈ ವಾಯರ್ ಲೆಸ್ ಎನ್ನುವ ಅಭಿವೃದ್ಧಿ ವ್ಯವಸ್ಥೆ ಇನ್ನೊಬ್ಬನಿಗೆ ಸಮಸ್ಯೆಯಾಗದೆ ಹೊಸತನದ ರೂಪವನ್ನ ಪಡೆದುಕೊಳ್ಳಲಿ. ನಾವು ಅಭಿವೃದ್ಧಿ ಹೊಂದುವ ಭರದಲ್ಲಿ ಇನ್ನೊಂದು ಸೃಷ್ಟಿಯನ್ನು ನಾಶ ಮಾಡುವುದು ಮನುಕುಲದ ಭವಿಷ್ಯಕ್ಕೆ ಒಳ್ಳೆಯದಲ್ಲ.

ಪ್ರಸೀದ್ ಭಟ್

Published On - 1:44 pm, Sat, 10 September 22