ಕರಡಿ ರನ್ ರನ್.. ಅಯ್ಯೋ..ಏನೋ ತಪ್ಪಾಗಿ ಬಂದ್ಬಿಟ್ಟೆ ಯಾಕ್ರೋ ಓಡಿಸ್ಕೊಂಡು ಬರ್ತೀರಾ, ಹೋಗ್ತೀನಿ ಬಿಡ್ರೋ
ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್ನಲ್ಲಿರುವ ಪ್ರವಾಸಿ ರೆಸಾರ್ಟ್ ಬಳಿ ಕರಡಿ ಪ್ರತ್ಯಕ್ಷವಾಗಿತ್ತು, ಆತಂಕ ಸೃಷ್ಟಿಯಾಗಿತ್ತು. ಆದರೆ ಸ್ಥಳೀಯರು ಅದನ್ನು ಓಡಿಸಿಕೊಂಡು ಹೋಗಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕರಡಿಯನ್ನು ಸೆರೆಹಿಡಿಯಲು ಅಥವಾ ಸುರಕ್ಷಿತವಾಗ ಬೇರೆ ಸ್ಥಳಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತಿದ್ದಾರೆ. ಮೊದಲು ಕರಡಿ ವಾಸವಿದ್ದ ಸ್ಥಳಗಳಲ್ಲಿ ಈಗ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ಗಳು, ಮಾರ್ಕೆಟ್ಗಳು, ರಸ್ತೆ, ಸುರಂಗ ಮಾರ್ಗಗಳು ತಲೆ ಎತ್ತಿದ್ದು, ಅವುಗಳಿಗೆ ನೆಲೆ ಇಲ್ಲದಂತಾಗಿದೆ ಎಂದು ಎನ್ಜಿಟಿಗೆ ಸಲ್ಲಿಸಲಾದ ಜಮ್ಮು ಮತ್ತು ಕಾಶ್ಮೀರ ಮಾಲಿನ್ಯ ನಿಯಂತ್ರಣ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಜಮ್ಮು ಮತ್ತು ಕಾಶ್ಮೀರ, ಜೂನ್ 27: ಜಮ್ಮು ಮತ್ತು ಕಾಶ್ಮೀರದ ಸೋನಾಮಾರ್ಗ್ನಲ್ಲಿರುವ ಪ್ರವಾಸಿ ರೆಸಾರ್ಟ್ ಬಳಿ ಕರಡಿ ಪ್ರತ್ಯಕ್ಷವಾಗಿ, ಆತಂಕ ಸೃಷ್ಟಿಯಾಗಿತ್ತು. ಸ್ಥಳೀಯರು ಅದನ್ನು ಓಡಿಸಿಕೊಂಡು ಹೋಗುತ್ತಿರುವ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಅರಣ್ಯ ಇಲಾಖೆ ಅಧಿಕಾರಿಗಳಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಕರಡಿಯನ್ನು ಸೆರೆಹಿಡಿಯಲು ಅಥವಾ ಸುರಕ್ಷಿತವಾಗಿ ಬೇರೆ ಸ್ಥಳಕ್ಕೆ ಕರೆದೊಯ್ಯುವ ವ್ಯವಸ್ಥೆ ಮಾಡುತ್ತಿದ್ದಾರೆ. ಮೊದಲು ಕರಡಿ ವಾಸವಿದ್ದ ಸ್ಥಳಗಳಲ್ಲಿ ಈಗ ಹೋಟೆಲ್, ರೆಸಾರ್ಟ್, ರೆಸ್ಟೋರೆಂಟ್ಗಳು, ಮಾರ್ಕೆಟ್ಗಳು, ರಸ್ತೆ, ಸುರಂಗ ಮಾರ್ಗಗಳು ತಲೆ ಎತ್ತಿದ್ದು, ಅವುಗಳಿಗೆ ನೆಲೆ ಇಲ್ಲದಂತಾಗಿದೆ ಎಂದು ಎನ್ಜಿಟಿಗೆ ಸಲ್ಲಿಸಲಾದ ಜಮ್ಮು ಮತ್ತು ಕಾಶ್ಮೀರ ಮಾಲಿನ್ಯ ನಿಯಂತ್ರಣ ಸಮಿತಿಯ ವರದಿಯಲ್ಲಿ ಉಲ್ಲೇಖಿಸಲಾಗಿದೆ.
ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ