ಸಲಾಲ್ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಬಿಡುಗಡೆ; ಪಾಕಿಸ್ತಾನಕ್ಕೆ ಪ್ರವಾಹದ ಭೀತಿ
ಸಲಾಲ್ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಬಿಡಲಾಗಿದ್ದು, ತಗ್ಗು ಪ್ರದೇಶದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರ ಮಳೆಯ ನಂತರ ಸಲಾಲ್ ಅಣೆಕಟ್ಟಿನ ಬಾಗಿಲು ತೆರೆಯಲಾಗಿದೆ. ಚೆನಾಬ್ ನದಿಯ ನೀರಿನ ಮಟ್ಟ ಏರುತ್ತಿದ್ದು, ಹೀಗಾಗಿ, ಸಲಾಲ್ ಡ್ಯಾಂ ಓಪನ್ ಮಾಡಲಾಗಿದೆ. ಇದರಿಂದ ಪಾಕಿಸ್ತಾನದಲ್ಲಿ ನೆರೆ ಉಂಟಾಗುವ ಸಾಧ್ಯತೆಯಿದೆ. ಇಷ್ಟು ದಿನ ನೀರಿಗಾಗಿ ಗೋಗರೆಯುತ್ತಿದ್ದ ಪಾಕಿಸ್ತಾನಕ್ಕೆ ಈಗ ಆ ನೀರೇ ಕಂಟಕವಾಗುವ ಸಾಧ್ಯತೆಯಿದೆ.
ಶ್ರೀನಗರ, ಜೂನ್ 26: ಸಿಂಧೂ ಜಲ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಭಾರತ ಪಾಕಿಸ್ತಾನಕ್ಕೆ ಶಾಕ್ ನೀಡಿತ್ತು. ಇದರಿಂದ ಈ ಬಾರಿ ಸಿಂಧೂ ನದಿ ಕಣಿವೆಯ ನದಿಗಳು ಒಣಗಿ, ಪಾಕಿಸ್ತಾನದಲ್ಲಿ ಕೃಷಿ ಕಾರ್ಯಗಳಿಗೆ ತೊಡಕಾಗಿತ್ತು. ಯಾವುದೇ ಕಾರಣಕ್ಕೂ ಈ ಒಪ್ಪಂದದ ರದ್ದತಿಯನ್ನು ಮರುಸ್ಥಾಪಿಸುವುದಿಲ್ಲ ಎಂದು ಭಾರತ ಹೇಳಿದೆ. ಒಂದುವೇಳೆ ಸಿಂಧೂ ಜಲ ಒಪ್ಪಂದ ಮುಂದುವರೆದು, ಪಾಕಿಸ್ತಾನಕ್ಕೆ ನೀರು ಬಿಡದಿದ್ದರೆ ಯುದ್ಧಕ್ಕೆ ಸಿದ್ಧವಿರುವುದಾಗಿಯೂ ಪಾಕಿಸ್ತಾನ ಎಚ್ಚರಿಕೆ ನೀಡಿದೆ.
ಅದರ ಮಧ್ಯೆ ಇದೀಗ ಸಲಾಲ್ ಡ್ಯಾಂನಿಂದ ಭಾರೀ ಪ್ರಮಾಣದ ನೀರು ಬಿಡಲಾಗಿದ್ದು, ತಗ್ಗು ಪ್ರದೇಶದಲ್ಲಿ ಪ್ರವಾಹದ ಸ್ಥಿತಿ ಉಂಟಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ನಿರಂತರ ಮಳೆಯ ನಂತರ ಸಲಾಲ್ ಅಣೆಕಟ್ಟಿನ ಬಾಗಿಲು ತೆರೆಯಲಾಗಿದೆ. ಚೆನಾಬ್ ನದಿಯ ನೀರಿನ ಮಟ್ಟ ಏರುತ್ತಿದ್ದು, ಹೀಗಾಗಿ, ಸಲಾಲ್ ಡ್ಯಾಂ ಓಪನ್ ಮಾಡಲಾಗಿದೆ. ಇದರಿಂದ ಪಾಕಿಸ್ತಾನದಲ್ಲಿ ನೆರೆ ಉಂಟಾಗುವ ಸಾಧ್ಯತೆಯಿದೆ. ಇಷ್ಟು ದಿನ ನೀರಿಗಾಗಿ ಗೋಗರೆಯುತ್ತಿದ್ದ ಪಾಕಿಸ್ತಾನಕ್ಕೆ ಈಗ ಆ ನೀರೇ ಕಂಟಕವಾಗುವ ಸಾಧ್ಯತೆಯಿದೆ.
ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ