5 ಹುಲಿಗಳ ಸಾವಿನ ಸುತ್ತ ಹಸು…ಸ್ಫೋಟಕ ಅಂಶ ಬಿಚ್ಚಿಟ್ಟ ಡಿಸಿಎಫ್
ದೇಶದಲ್ಲಿ ಅತಿಹೆಚ್ಚು ಹುಲಿಗಳಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 2022ರ ಹುಲಿ ಗಣತಿ ಪ್ರಕಾರ ರಾಜ್ಯದಲ್ಲಿ 563 ಹುಲಿಗಳಿವೆ. ಅದರಲ್ಲೂ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ಅರಣ್ಯದಲ್ಲೇ 150 ಹುಲಿಗಳಿವೆ. ಇದೀಗ ಹುಲಿಗಳ ಜಿಲ್ಲೆ ಆಗಿರುವ ಚಾಮರಾಜನಗರದಲ್ಲಿ ಐದು ಹುಲಿಗಳ ಸಂಶಯಾಸ್ಪದವಾಗಿ ಸಾವನ್ನಪ್ಪಿವೆ. ಮೀಣ್ಯಂ ಅರಣ್ಯದಲ್ಲಿ ತಾಯಿ ಹುಲಿ ಮತ್ತು 4 ಮರಿಗಳ ಅಸಹಜ ಸಾವನ್ನಪ್ಪಿವೆ.
ಚಾಮರಾಜನಗರ, (ಜೂನ್ 26): ದೇಶದಲ್ಲಿ ಅತಿಹೆಚ್ಚು ಹುಲಿಗಳಿರುವ ರಾಜ್ಯಗಳ ಪೈಕಿ ಕರ್ನಾಟಕ ಎರಡನೇ ಸ್ಥಾನದಲ್ಲಿದೆ. 2022ರ ಹುಲಿ ಗಣತಿ ಪ್ರಕಾರ ರಾಜ್ಯದಲ್ಲಿ 563 ಹುಲಿಗಳಿವೆ. ಅದರಲ್ಲೂ ಕರ್ನಾಟಕದ ಚಾಮರಾಜನಗರ ಜಿಲ್ಲೆಯಲ್ಲಿರುವ ಬಂಡೀಪುರ ಅರಣ್ಯದಲ್ಲೇ 150 ಹುಲಿಗಳಿವೆ. ಇದೀಗ ಹುಲಿಗಳ ಜಿಲ್ಲೆ ಆಗಿರುವ ಚಾಮರಾಜನಗರದಲ್ಲಿ ಐದು ಹುಲಿಗಳ ಸಂಶಯಾಸ್ಪದವಾಗಿ ಸಾವನ್ನಪ್ಪಿವೆ. ಮೀಣ್ಯಂ ಅರಣ್ಯದಲ್ಲಿ ತಾಯಿ ಹುಲಿ ಮತ್ತು 4 ಮರಿಗಳ ಅಸಹಜ ಸಾವನ್ನಪ್ಪಿವೆ. ಈ ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಅರಣ್ಯಾಧಿಕಾರಿಗಳು ದೌಡಾಯಿಸಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ಹುಲಿಗಳ ಮರಣೋತ್ತರ ಪರೀಕ್ಷೆ ನಡೆಸಲಾಗುತ್ತಿದ್ದು, ವರದಿ ಬಂದ ಬಳಿಕ ಸಾವಿಗೆ ಕಾರಣ ಏನು ಎನ್ನುವುದು ಗೊತ್ತಾಗಲಿದೆ. ಇನ್ನು ಈ ಸಂಬಂಧ ಮಲೆ ಮಹದೇಶ್ವರ ವನ್ಯಧಾಮದ ಡಿಸಿಎಫ್ ಚಕ್ರಪಾಣಿ ಪ್ರತಿಕ್ರಿಯಿಸಿದ್ದು, ಅರಣ್ಯ ಸಿಬ್ಬಂದಿ ಬೆಳಗ್ಗೆ 10 ಗಂಟೆಗೆ ಬೀಟ್‌ಗೆ ಬಂದಾಗ ಘಟನೆ ಬೆಳಕಿಗೆ ಬಂದಿದೆ. ಹುಲಿಗಳು ಮೃತಪಟ್ಟ ಪಕ್ಕದಲ್ಲೇ ಒಂದು ಹಸು ಸಹ ಮೃತಪಟ್ಟಿದೆ. ಸತ್ತ ಹಸು ಹಾಗೂ ಹುಲಿಯ ಮೃತದೇಹಗಳು ಅಕ್ಕ ಪಕ್ಕದಲ್ಲೇ ಇದೆ. ಹಾಗಾಗಿ ಅನುಮಾನ ಮೂಡಿದೆ. ಒಂದು ತಾಯಿ ಹುಲಿ 3 ಹೆಣ್ಣು ಮರಿ ಹುಲಿ 1 ಗಂಡು ಮರಿ ಹುಲಿ ಸಾವನ್ನಪ್ಫಿದೆ. ಈಗ ಪೋಸ್ಟ್ ಮಾರ್ಟ್ಂ ನಡೆದಿದೆ ಮೃತ ಹುಲಿಗಳ ಸ್ಯಾಂಪಲ್ ನ ಲ್ಯಾಬ್ ಗೆ ಕಳಿಸಲಾಗುತ್ತೆ ಅದಾದ ಬಳಿಕ ನಿಖರ ಕಾರಣ ತಿಳಿಯಲಿದೆ ಎಂದರು.