AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಇದು Examination ಕಥೆ: ಪರೀಕ್ಷೆಯ ಕೊನೆಯ ಕ್ಷಣದವರೆಗೂ ನಿಮ್ಮಲ್ಲೂ ಈ ಸ್ಥಿತಿ ಬಂದಿರಬಹುದು

ಪ್ರತಿನಿತ್ಯ ಖಾಲಿ ಕಾಣುತಿದ್ದ ಕಾರಿಡಾರ್​ಗಳು ಇಂದು ಎಲ್ಲೂ ನೋಡಿದ್ರು ವಿದ್ಯಾರ್ಥಿಗಳಿಂದ ತುಂಬಿದೆ. ಯಾವುದೋ ಕಷ್ಟಕ್ಕೆ ಸಿಲುಕಿದವರಂತೆ  ಕೈಯಲ್ಲಿ ಪುಸ್ತಕ ಹಿಡಿದು, ಅಲ್ಲಿ-ಇಲ್ಲಿ ಓಡಾಡಿಕೊಂಡು  ಮೊಗದಲ್ಲಿ ನಗುವನ್ನು ಮರೆತು ಆಕಾಶವೇ ತಲೆ ಮೇಲೆ ಕಳಚಿದಂತೆ ಓದಿನಲ್ಲಿ ಮಗ್ನರಾಗಿತ್ತಾರೆ.

ಇದು Examination ಕಥೆ:  ಪರೀಕ್ಷೆಯ ಕೊನೆಯ ಕ್ಷಣದವರೆಗೂ ನಿಮ್ಮಲ್ಲೂ ಈ ಸ್ಥಿತಿ ಬಂದಿರಬಹುದು
Examination
TV9 Web
| Updated By: ಅಕ್ಷಯ್​ ಪಲ್ಲಮಜಲು​​|

Updated on: Sep 10, 2022 | 8:10 AM

Share

ಮೆಟ್ಟಿಲ ಮೇಲೆ ಕುಳಿತು ಓದಿನಲ್ಲಿ ಮಗ್ನರಾದವರು ಕೈಯಲ್ಲಿ ಪುಸ್ತಕ ಹಿಡಿದು ಓದಿತ್ತಾ ನಡೆಯುವವರು. ಗುಂಪಾಗಿ ಕುಳಿತು ಒಬ್ಬರು ಮತ್ತೊಬ್ಬರಿಗೆ ಏನನ್ನೋ ಹೇಳುತ್ತಾ ಚರ್ಚಿಸುತ್ತಿರುವವರು. ಅವಸರದಲ್ಲಿ ಪುಟಗಳನ್ನು ತಿರುವಿ ಹಾಕುತ್ತಿರುವವರು. ಇವರು ಬೇರಾರೂ ಅಲ್ಲ ಪರೀಕ್ಷೆಯ  ಕೊನೆ ಕ್ಷಣದಲ್ಲಿ ಓದುವ  ಕೆಲ ವಿದ್ಯಾರ್ಥಿಗಳು. ಪ್ರತಿ ಸೆಮಿಸ್ಟರ್ ಮುಖ್ಯ ಪರೀಕ್ಷೆ ಮತ್ತು ಇಂಟರ್ನಲ್ ಟೆಸ್ಟ್ ವೇಳೆಯಲ್ಲಿ ಇವರು ಕಾಣಸಿಗುತ್ತಾರೆ. ಮೆಟ್ಟಿಲುಗಳ ಮೇಲಂತೂ ಸಾಲು ಸಾಲಾಗಿ ಇರುವೆಗಳಂತೆ ಒಬ್ಬರ ಹಿಂದೆ ಇನ್ನೊಬ್ಬರು ಕೂತು ಕಾಲೇಜಿನಲ್ಲಿ ಓದುವರು ಒಂದು ಕಡೆ ಕಾಣುತ್ತಾರೆ. ಇನ್ನೊಂದು ಕಡೆ ಹಾಸ್ಟೆಲಿನಲ್ಲಿ ಮೆಟ್ಟಿಲುಗಳನ್ನು ಇಷ್ಟ ಬಂದಂತೆ ತುಳಿದು ಗಲಾಟೆ ಮಾಡ್ತಿದ್ದ ವಿದ್ಯಾರ್ಥಿಗಳು, ಈಗ ಮೆಟ್ಟಿಲ ಮೇಲೆ ಕುಳಿತು ಗಲಾಟೆ ಮಾಡಬೇಡಿ ನಿಧಾವಾಗಿ ಓಡಾಡಿ ಎಂದು ಮೆಟ್ಟಿಲ ಮೇಲೂ ಕಾಳಜಿ ತೋರಿಸುತ್ತಾ ಓದುತ್ತಿದ್ದಾರೆ.

ಪ್ರತಿನಿತ್ಯ ಖಾಲಿ ಕಾಣುತಿದ್ದ ಕಾರಿಡಾರ್​ಗಳು ಇಂದು ಎಲ್ಲೂ ನೋಡಿದ್ರು ವಿದ್ಯಾರ್ಥಿಗಳಿಂದ ತುಂಬಿದೆ. ಯಾವುದೋ ಕಷ್ಟಕ್ಕೆ ಸಿಲುಕಿದವರಂತೆ  ಕೈಯಲ್ಲಿ ಪುಸ್ತಕ ಹಿಡಿದು, ಅಲ್ಲಿ-ಇಲ್ಲಿ ಓಡಾಡಿಕೊಂಡು  ಮೊಗದಲ್ಲಿ ನಗುವನ್ನು ಮರೆತು ಆಕಾಶವೇ ತಲೆ ಮೇಲೆ ಕಳಚಿದಂತೆ ಓದಿನಲ್ಲಿ ಮಗ್ನರಾಗಿತ್ತಾರೆ. ಕಣ್ಣಿಗೆ ಕಾಣುವ ಪ್ರತಿಯೊಬ್ಬರನ್ನೂ ಎಷ್ಟು ಓದಿ ಆಯಿತು, ಇನ್ನೂ ಇದೀಯಾ, ಎಷ್ಟು ಮುಗೀತು? ಇದೇ ಪ್ರಶ್ನೆಗಳನ್ನು ಕೇಳುತ್ತಾ ಗಾಬರಿಯಲ್ಲಿ ಇರುವವರು.

ಇನ್ನೂ ಕೆಲವು ವಿದ್ಯಾರ್ಥಿಗಳಂತೂ ಪರೀಕ್ಷೆ ಬರೆಯಲು ಸಮಯವಾದರೂ ಇನ್ನೂ ಪುಸ್ತಕವನ್ನು ತಿರುವಿ ಹಾಕುತ್ತಾ ಕಾರಿಡಾರ್​ನಲ್ಲಿ ಕೂತಿರುತ್ತಾರೆ. ಕೊನೆ  ಕ್ಷಣದಲ್ಲಿ ತಯಾರಿ ಮಾಡುವವರು ಅಂತೂ ಯಾವಾಗಲೂ ಗಡಿಬಿಡಿ ಅಲ್ಲೇ ಇರ್ತಾರೆ ಏನಪ್ಪಾ ಓದೋದು ಹೇಗಪ್ಪಾ ಪಾಸ್ ಆಗೋದು ಅಂತೆಲ್ಲ ಚಿಂತೆಯಲ್ಲಿ ಮುಳುಗಿರುತ್ತಾರೆ. ತಾವು ಏನು ಓದಿದ್ದೇವೆ ಎನ್ನುವುದಕ್ಕಿಂತ ಇವರಿಗೆ ಬೇರೆಯವರು ಏನು ಓದಿದರೆ ಅನ್ನೋದೇ ಟೆಂಕ್ಷನ್ ಇರುತ್ತೆ.

ಇವರು  ಪುಸ್ತಕದಲ್ಲಿ ಇರುವುದನ್ನೆಲ್ಲ ಓದುವವರು ಅಲ್ಲ ಪ್ರಮುಖ ವಿಷಯಗಳನ್ನು ಓದುವುದು ಅರ್ಥವಾಗದೆ ಇದ್ದರೆ ಅದರ ಬಗ್ಗೆ ತಲೆಕೆಡಸಿಕೊಳ್ಳದೆ. ಆಯ್ಕೆ ಇದೆ ಎಂದು ಸುಮ್ಮನಾಗುವವರು. ಇಲ್ಲಿ ಇನ್ನೊಂದು ವರ್ಗವಿದೆ ಸ್ನೇಹಿತರಿಗೆ ಫೋನ್ ಮಾಡಿ ಏನು ಓದಬೇಕು ಎಂದು ಕೇಳಿ ಅದನ್ನು ಓದದೇ ಕಾಲೇಜಿಗೆ ಬಂದು ಅಲ್ಲಿ ಮತ್ತೆ ಸ್ನೇಹಿತನ ಬಳಿ ಕೇಳಿ ತಿಳಿದುಕೊಳ್ಳುವವರು. ಅಂತಿಮವಾಗಿ  Hall Ticket ಹಿಡಿದುಕೊಂಡು  Examination roomಗೆ ಇನ್ನೇನು ಹೋಗಬೇಕು ಎನ್ನುವಷ್ಟರಲ್ಲಿ ನಾನು ಅದನ್ನ ಮರೆತು ಎಂದು ಗಾಬರಿ ಇಂದ ಮತ್ತೆ ಪುಸ್ತಕವನ್ನು ತಿರುವಿ ಹಾಕುವವರು ಕೆಲವರು. ಇದು ಕೊನೆ ಗಳಿಗೆಯಲ್ಲಿ ಓದುವ ವಿದ್ಯಾರ್ಥಿಗಳ ಕತೆ.

ಐಶ್ವರ್ಯ ಕೋಣನ