Surbhi Bharadwaj: ಹಾಡಿನಿಂದಲೇ ಕನ್ನಡಿಗರನ್ನು ಮೆಚ್ಚಿಸಿದ ಸುರಭಿ ಭಾರದ್ವಾಜ್

ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ ,ನಾವೇ ಅವಕಾಶಗಳನ್ನು ಹುಡುಕಿಕೊಂಡು ಹೋಗಬೇಕು ಅಥವಾ ಅವಕಾಶವನ್ನು ಸೃಷ್ಟಿಸಬೇಕು ನಾವೇನಾದರೂ ನಿರಂತರವಾಗಿ ಮಾಡುತ್ತಲೇ ಇರಬೇಕು. ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು.

Surbhi Bharadwaj: ಹಾಡಿನಿಂದಲೇ ಕನ್ನಡಿಗರನ್ನು ಮೆಚ್ಚಿಸಿದ ಸುರಭಿ ಭಾರದ್ವಾಜ್
Surbhi Bharadwaj
Follow us
TV9 Web
| Updated By: ಅಕ್ಷಯ್​ ಪಲ್ಲಮಜಲು​​

Updated on: Sep 08, 2022 | 7:09 AM

ಮನಸ್ಸು ಅದೆಷ್ಟೇ ವಿಚಲಿತವಾಗಿರಲಿ, ಎಷ್ಟೇ ಗೊಂದಲಗಳಿರಲಿ, ನೋವಿರಲಿ, ಇದಕ್ಕೆಲ್ಲ ಪರಿಹಾರ ಸಂಗೀತ. ಸಂಗೀತದಿಂದ ಎಂಥವರ ಮನಸ್ಸನ್ನು ಕರಗಿಸಬಹುದು .ಮನವನ್ನು ಮುದಗೊಳಿಸಲೂಬಹುದು. ಸಂಗೀತಕ್ಕೆ ಇರುವ ಶಕ್ತಿಯೇ ಅಂತದ್ದು. ಎಂತದ್ದೇ ಕಠಿಣ ಹೃದಯಗಳಾಗಲಿ ಹಾಡಿಗೆ ತಲೆದೂಗದೆ ಇರಲಾರರು. ಸಂಗೀತಕ್ಕೆ ಮರುಳಾಗದೆ ಇರಲಾರರು. ಅರವತ್ತನಾಲ್ಕು ಕಲೆಗಳನ್ನು ಭಾರತೀಯ ಗ್ರಂಥಗಳು ತಿಳಿಸುತ್ತವೆ. ಅದರಲ್ಲಿ ಲಲಿತ ಕಲೆ, ಸಂಸ್ಕಾರ ಹಾಗೂ ಪ್ರತಿಭೆಯ ಮೂಲಕ ತೆರೆದುಕೊಳ್ಳುತ್ತವೆ. ಈ ಲಲಿತ ಕಲೆಗಳಲ್ಲಿ ಸಂಗೀತಕ್ಕೆ ಪ್ರಮುಖ ಸ್ಥಾನವಿದೆ. ಲೌಕಿಕ ಸಮಾಜದ ಆಗುಹೋಗುಗಳನ್ನು, ದುಃಖ ದುಮ್ಮಾನಗಳನ್ನು ಮರೆಸಿ ಶೋತೃವಿನ ಮನವ ತಣಿಸುವುದು ಸಂಗೀತ. ಇಂತಹ ಸಂಗೀತ ಹಾದಿಯಲ್ಲಿ ನಡೆಯುತ್ತಿರುವ ಪ್ರತಿಭೆ ಸುರಭಿ ಭಾರದ್ವಾಜ್

ಮೂಲತಃ ಬೆಂಗಳೂರಿನವರಾದ ಸುರಭಿ ಭಾರದ್ವಾಜ್ ಮಂಜುನಾಥ್ ಹಾಗೂ ಜೋತ್ಸ್ನಾ ಇವರ ಸುಪುತ್ರಿ. ಪ್ರಾಥಮಿಕ ಹಾಗೂ ಹೈಸ್ಕೂಲ್ ವಿದ್ಯಾಭ್ಯಾಸವನ್ನು ಸುದರ್ಶನ್ ವಿದ್ಯಾ ಮಂದಿರ್ ಬೆಂಗಳೂರಿನಲ್ಲಿ ಮುಗಿಸಿದ ಇವರು ಕ್ರೈಸ್ಟ್ ಪಿಯು ಕಾಲೇಜಿನಲ್ಲಿ ಪದವಿಪೂರ್ವ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಿದರು. ಜೊತೆಗೆ ಪದವಿ ಶಿಕ್ಷಣವನ್ನು ಜೈನ್ ವಿಶ್ವವಿದ್ಯಾಲಯದಲ್ಲಿ ಪಡೆದುಕೊಂಡರು. ಹಿನ್ನೆಲೆ ಗಾಯಕಿಯಾಗಿ ಮಿಂಚುತ್ತಿರುವುದಲ್ಲದೆ, ಕಂಠದಾನಕ್ಕೂ ಸೈ ಎಂದೆನಿಸಿಕೊಂಡಿರುವ ಸುರಭಿ ಕೊಳಲು ನುಡಿಸುವುದರಲ್ಲೂ ಪ್ರವೀಣೆ. ಚಲನಚಿತ್ರ, ಧಾರವಾಹಿ ಹಾಗೂ ವೆಬ್ ಸೀರೀಸ್​ಗಳಿಗೆ ಕಂಠದಾನ ಮಾಡುವ ಮೂಲಕ ಇಂದು ಮನೆಮಾತಾಗಿದ್ದಾರೆ.

ಯುಗಳ ಗೀತೆ ಎಂಬ ಪ್ರಸಿದ್ಧ ಕನ್ನಡ ಕಾದಂಬರಿಯೂ ಇವರ ದನಿಯಲ್ಲಿ ಮೂಡಿ ಬರುತ್ತಿದ್ದು, ಇದು ಪಾಕೆಟ್ ಎಫ್ ಎಂ ನಲ್ಲಿ ಪ್ರಸಾರವಾಗುತ್ತಿದೆ. ಸರಿಸುಮಾರು ನಾಲ್ಕು ಮಿಲಿಯನ್ ನಷ್ಟು ವೀಕ್ಷಣೆ ಪಡೆದಿರುವ ಈ ಕಾದಂಬರಿಯು ಅತ್ಯಂತ ಜನಪ್ರಿಯವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿರುವ ಇವರ ಹಾಡುಗಳು ಕೇಳುಗರಿಗೆ ಬಹಳ ಅಚ್ಚುಮೆಚ್ಚು. ಇವರ ಹಾಡಿಗೆ ,ಸುಮಧುರ ಕಂಠಕ್ಕೆ ಮೋಹಕ ತಾರೆ ರಮ್ಯಾ ಕೂಡ ಮರುಳಾಗಿ ಪ್ರೋತ್ಸಾಹಕ ಮಾತುಗಳನ್ನಾಡಿ ಅಭಿನಂದಿಸಿದ್ದಾರೆ, ಹುರಿದುಂಬಿಸಿದ್ದಾರೆ. ಇದಲ್ಲದೆ ರಘು ದೀಕ್ಷಿತ್ ಇವರ ಜೊತೆಗೂ ಬೆಂಗಳೂರು ಗಣೇಶೋತ್ಸವದಲ್ಲಿ ವೇದಿಕೆಯನ್ನು ಹಂಚಿಕೊಂಡ ಹಿರಿಮೆ ಇವರದು. ಮಾತ್ಯೂಸ್ ಮನು , ಅರ್ಜುನ್ ಜನ್ಯ ಅವರ ಜೊತೆಗೂ ಕೆಲಸ ಹಂಚಿಕೊಳ್ಳುವ ಸುವರ್ಣ ಅವಕಾಶ ಇವರಿಗೊಲಿದು ಬಂದಿದೆ.

ಕಲರ್ಸ್ ಕನ್ನಡದಲ್ಲಿ ಬರುತ್ತಿದ್ದ ಕನ್ನಡ ಸಿಂಗಿಂಗ್ ರಿಯಾಲಿಟಿ ಶೋ ಹಾಡು ಕರ್ನಾಟಕದಲ್ಲಿ ಕೂಡ ಭಾಗವಹಿಸಿದ್ದಾರೆ. ಹರಿಕೃಷ್ಣ ರಘು ದೀಕ್ಷಿತ್ ಸಾಧುಕೋಕಿಲ ಇಂಬಿತ ದಿಗ್ಗಜರಿಂದ ಶಭಾಸ್ ಗಿರಿಯನ್ನು ಗಿಟ್ಟಿಸಿಕೊಂಡಿದ್ದಾರೆ. ವೇದಿಕೆಯನ್ನು ನಿಭಾಯಿಸುವುದು ಹೇಗೆ, ಮೈಕ್ ಹಿಡಿದು ಹಾಡುವುದಾದರೂ ಹೇಗೆ ಎಂಬುದನ್ನು ಹೇಳಿಕೊಟ್ಟದ್ದು ಇದೇ ವೇದಿಕೆ, ತಮ್ಮಲ್ಲಿದ್ದ ಸಭಾ ಕಂಪನವನ್ನು ಇಲ್ಲವಾಗಿಸಲು ಕೂಡ ಸಹಕಾರಿಯದು ಇದೆ ವೇದಿಕೆ ಎಂದು ಸಂತೋಷದಿಂದ ಹೇಳಿಕೊಳ್ಳುತ್ತಾರೆ ಸುರಭಿ.

ಒಂದು ಹಾಡನ್ನು ರೆಕಾರ್ಡ್ ಮಾಡುವುದು ,ಅಥವಾ ಅದರ ಹಿಂದಿನ ಕೆಲಸ -ಶ್ರಮದ ಬಗ್ಗೆ ತಿಳಿದುಕೊಂಡು, ಯಾವ ರೀತಿಯ ಸಾಫ್ಟ್ವೇರ್ ಬಳಸಿದರೆ ಉತ್ತಮ ಯಾವ ರೀತಿ ಅದನ್ನು ಬಳಸಬೇಕು ಎಂದು ಕಲಿತು. ಇಂದು ತಮ್ಮದೇ ಆದ ಸ್ವಂತ ಸ್ಟುಡಿಯೋವನ್ನು ಆರಂಭಿಸಿ ಅಲ್ಲೂ ಕೂಡ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಇನ್ನಷ್ಟು ಮತ್ತಷ್ಟು ಕಲಿಯಬೇಕು ಎನ್ನುವಂತ ಸುರಭಿ ಅವರ ಆಸೆ ,ಕನಸು ಪ್ರಸಂಶನೀಯವೇ ಸರಿ. ತಂದೆ, ತಾಯಿ, ಅಣ್ಣ , ಸದಾ ಪ್ರೋತ್ಸಾಹ ನೀಡುತ್ತಾರೆ. ಬೆಂಬಲವಾಗಿ ನಿಲ್ಲುತ್ತಾರೆ , ನಿನ್ನಿಂದ ಸಾಧ್ಯ ಎನ್ನುವಂತ ಧೈರ್ಯವನ್ನ ತುಂಬುತ್ತಾರೆ. ಜೊತೆಗೆ ಚಿಕ್ಕಮ್ಮ ಕೂಡ ಬಹಳ ಪ್ರೋತ್ಸಾಹ ನೀಡುತ್ತಾರೆ. ಅವರು ಕೂಡ ಸಂಗೀತ ಕಲಿತುದರಿಂದ ಹೊಸತನದೆಡೆಗೆ ಗಮನಹರಿಸುವಂತೆ ಹೇಳಿಕೊಡುತ್ತಾರೆ. ಅವರ ಈ ಪ್ರೋತ್ಸಾಹಕ್ಕೆ ನಾನು ಸದಾ ಚಿರಋಣಿ. ಇನ್ನಷ್ಟು ಮತ್ತಷ್ಟು ಸಾಧನೆ ಮಾಡುವ ಧೈರ್ಯ ವಿಶ್ವಾಸ ಇದರಿಂದ ಸಿಗುತ್ತದೆ.

ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ ,ನಾವೇ ಅವಕಾಶಗಳನ್ನು ಹುಡುಕಿಕೊಂಡು ಹೋಗಬೇಕು ಅಥವಾ ಅವಕಾಶವನ್ನು ಸೃಷ್ಟಿಸಬೇಕು ನಾವೇನಾದರೂ ನಿರಂತರವಾಗಿ ಮಾಡುತ್ತಲೇ ಇರಬೇಕು. ಹೊಸ ಹೊಸ ಅವಕಾಶಗಳನ್ನು ಸೃಷ್ಟಿಸಿಕೊಳ್ಳಬೇಕು. ಕಲೆ, ಪರಿಶ್ರಮ ಇದೆ ಎಂದಾಗ ಜನರೇ ಕೈಹಿಡಿದು ನಡೆಸುತ್ತಾರೆ, ಬೆನ್ನು ತಟ್ಟಿ ಪ್ರೋತ್ಸಾಹಿಸುತ್ತಾರೆ, ಬೆಳೆಸುತ್ತಾರೆ. ಯಾವುದೇ ಕಠಿಣ ಸಂದರ್ಭದಲ್ಲಿ ಕೂಡ ಕುಗ್ಗದೆ ಮುನ್ನುಗ್ಗಬೇಕು. ದಾರಿ ಬಹಳಷ್ಟಿದೆ ಮುಂದೆ ಸಾಗಬೇಕು ಎಂದು ಹಸನ್ಮುಖಿಯಾಗಿ ಉತ್ತರಿಸುವ ಸುರಭಿ ಭಾರದ್ವಾಜ್ ಅವರ ವ್ಯಕ್ತಿತ್ವ ಎಲ್ಲರಿಗೂ ಮಾದರಿ. ನೀವು ಸಾಗುವ ದಾರಿ ಹೂವಿನ ಹಾಸಿಗೆಯಾಗಲಿ, ಎದುರಾಗುವ ಎಡರು ತೊಡರುಗಳನ್ನು ಮೆಟ್ಟಿ ಮುಂದೆ ಸಾಗುವ ಧೈರ್ಯಸ್ಥೈರ್ಯ ಆ ದೇವರು ನಿಮಗೆ ನೀಡಲಿ, ಇನ್ನಷ್ಟು ಮತ್ತಷ್ಟು ಅವಕಾಶಗಳು ನಿಮ್ಮನರಸಿಕೊಂಡು ಬರಲಿ, ನಿಮ್ಮ ಎಲ್ಲಾ ಕನಸುಗಳು ನನಸಾಗಲಿ, ಎಂದು ಆಶಿಸುತ್ತೇನೆ.

ಶುಭ್ರ.ಪುತ್ರಕಳ

ದ್ವಿತೀಯ ಪತ್ರಿಕೋದ್ಯಮ ವಿಭಾಗ,  ವಿವೇಕಾನಂದ ಕಾಲೇಜು ಪುತ್ತೂರು

ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಚಿತ್ರದುರ್ಗದಲ್ಲಿ ಮ್ಯಾಕ್ಸ್ ಟ್ರೇಲರ್ ರಿಲೀಸ್​ ಕಾರ್ಯಕ್ರಮ; ಇಲ್ಲಿದೆ ಲೈವ್
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಬಾಡೇ ನಮ್ಮ ಮನೆ ಗಾಡು:ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಭಾನುವಾರದ ಬಾಡೂಟ ಜೋರು
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಚೈತ್ರಾ ಡವ್ ಮಾಡೋದು ಕಣ್ಣಿಗೆ ಕಾಣುತ್ತಿದೆ: ಕಿಚ್ಚನ ಎದುರಲ್ಲೇ ಹೇಳಿದ ರಜತ್
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಕಾರಿನಡಿ ಸಿಲುಕಿದ ಕರುವನ್ನು ಕಾಪಾಡಲು ರಸ್ತೆಯಲ್ಲಿ ಅಡ್ಡ ನಿಂತ ಹಸುಗಳು
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಪ್ರಿಯಕರನ ಜೊತೆ ಇದ್ದಾಗ ದಿಢೀರನೇ ಮನೆಗೆ ಎಂಟ್ರಿ ಕೊಟ್ಟ ಗಂಡ; ಮುಂದೆನಾಯಿತು?
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಕುವೈತ್‌ನ ಬಯಾನ್ ಅರಮನೆಯಲ್ಲಿ ಪ್ರಧಾನಿ ಮೋದಿಗೆ ಗಾರ್ಡ್ ಆಫ್ ಆನರ್ ಪ್ರದಾನ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
ಪ್ರತ್ಯೇಕ ಸಚಿವಾಲಯ: ಕಲ್ಯಾಣ ಕರ್ನಾಟಕಕ್ಕೆ ಸಿಹಿ ಸುದ್ದಿ ನೀಡಿದ ಸಿಎಂ
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
‘ಯುಐ’ ನೋಡಿ ಉಪೇಂದ್ರ ಆಧುನಿಕ ಬುದ್ಧ ಎಂದ ಆರ್ ಚಂದ್ರು
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಬಿಗ್​ಬಾಸ್ ಮನೆಯಲ್ಲಿ ಕಸದ ಬುಟ್ಟಿ: ಚೈತ್ರಾ ಕಸಕ್ಕೆ ಸಮಾನವೆ?
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​
ಮಂಡ್ಯ: ಸಾಹಿತ್ಯ ಸಮ್ಮೇಳನದಲ್ಲಿ ಚಲುವರಾಯಸ್ವಾಮಿ ಭರ್ಜರಿ ಡ್ಯಾನ್ಸ್​