Love Story: ಬಿರುಸಿನ ಮಳೆಯಲ್ಲಿ ಹೃದಯಕ್ಕೆ ಪ್ರೇಮದ ಛಾವಣಿ ಹೊದೆಸಿ ಹೋದಳು ಚೆಲುವೆ
ನನ್ನ ಕಣ್ಣಿಗೆ ಕಂಡಳು ಚೆಲುವೆ. ಆ ಕಾಲೇಜಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳಲ್ಲಿ, ಅವಳ ಕಪ್ಪು ಬಣ್ಣದ ಉಡುಪು ಮತ್ತು ಮುತ್ತಿನಂತ ನಗು ನೋಡುತ್ತಾ ಮೌನಿಯಾದೆ ನಾ. ಊಟದ ನಂತರ ಅವಳ ಜೊತೆ ಮಾತಾಡೋಣ ಅನ್ಕೊಂಡೆ. ಆದರೆ ಅದೇ ಸಮಯಕ್ಕೆ ಮಧ್ಯಾಹ್ನದ ಉಪನ್ಯಾಸ ಕಾರ್ಯಕ್ರಮ ಶುರುವಾಯಿತು. ಕೊಠಡಿಯಲ್ಲಿ ಕುಳಿತಾಗ ನನಗೆ ಚಳಿಯ ಮಧ್ಯೆ ಚೆಲುವೆಯ ಆಗಮನ ಬೆಚ್ಚಗಿನ ಸ್ಪರ್ಶಾನುಭವಾಯಿತು.
ಮಳೆಗಾಲದಲ್ಲಿ ವರುಣನ ಆರ್ಭಟ ಜೋರಾಗಿತ್ತು. ಬಸ್ನಲ್ಲಿ ಪ್ರಯಾಣಿಸುತ್ತಿದ್ದಾಗ “ಮಳೆಯಲಿ ಜೊತೆಯಲಿ” ಹಾಡು ಕೇಳುತ್ತಿದ್ದೆ. ಆ ದಿನ ಕಾಲೇಜಿನಲ್ಲಿ ನಡೆಯುತ್ತಿದ್ದ ವಿಶೇಷ ಉಪನ್ಯಾಸದ ಕಾರ್ಯಕ್ರಮದಲ್ಲಿ ನಾನು ಮತ್ತು ನನ್ನ ಸ್ನೇಹಿತರು ಭಾಗವಹಿಸಿದೆವು. ಈ ಕಾರ್ಯಕ್ರಮಕ್ಕೆ ಅನೇಕರು ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ ತಿಂಡಿ ವ್ಯವಸ್ಥೆ ಮಾಡಿದ್ದರು ಬೆಳಿಗ್ಗಿನ ಉಪಹಾರಕ್ಕೆ ದೋಸೆ ಕೊಟ್ಟಿರು. ನಂತರ ಉಪನ್ಯಾಸ ಕಾರ್ಯಕ್ರಮ ಪ್ರಾರಂಭವಾಯಿತು, ಮೋಡ ಕವಿದ ವಾತಾವರಣದಿಂದ ನನಗೂ ಸ್ವಲ್ಪ ನಿದ್ದೆ ಬರುತ್ತಿತ್ತು. ನಮ್ಮ ಅದೃಷ್ಟಕ್ಕೆ ಬೆಳಗ್ಗೆಯ ಉಪನ್ಯಾಸ ಬೇಗ ಮುಗಿಯಿತು. ನಂತರ ಮಧ್ಯಾಹ್ನ ಬಿಸಿಬಿಸಿಯಾದ ವೆಜ್ ಮತ್ತು ನಾನ್ ವೆಜ್ ಊಟದ ವ್ಯವಸ್ಥೆ ಇತ್ತು.
ಊಟ ಮಾಡುವಾಗ, ನನ್ನ ಕಣ್ಣಿಗೆ ಕಂಡಳು ಚೆಲುವೆ. ಆ ಕಾಲೇಜಿನಲ್ಲಿ ಬಹಳಷ್ಟು ವಿದ್ಯಾರ್ಥಿಗಳಲ್ಲಿ, ಅವಳ ಕಪ್ಪು ಬಣ್ಣದ ಉಡುಪು ಮತ್ತು ಮುತ್ತಿನಂತ ನಗು ನೋಡುತ್ತಾ ಮೌನಿಯಾದೆ ನಾ. ಊಟದ ನಂತರ ಅವಳ ಜೊತೆ ಮಾತಾಡೋಣ ಅನ್ಕೊಂಡೆ. ಆದರೆ ಅದೇ ಸಮಯಕ್ಕೆ ಮಧ್ಯಾಹ್ನದ ಉಪನ್ಯಾಸ ಕಾರ್ಯಕ್ರಮ ಶುರುವಾಯಿತು. ಕೊಠಡಿಯಲ್ಲಿ ಕುಳಿತಾಗ ನನಗೆ ಚಳಿಯ ಮಧ್ಯೆ ಚೆಲುವೆಯ ಆಗಮನ ಬೆಚ್ಚಗಿನ ಸ್ಪರ್ಶಾನುಭವಾಯಿತು. ನನ್ನ ಮನಸ್ಸಿನಲ್ಲಿ ಅವಳನ್ನು ಮಾತನಾಡಿಸುವ ತವಕ, ಎದೆ ಬಡಿತ ಹೆಚ್ಚಾಗುತ್ತಿತ್ತು. ಆದರೂ ಬುದ್ಧನಂತೆ ಮೌನಿಯಾಗಿ ತಪಸ್ಸಿನಿಂದ ಉಪನ್ಯಾಸ ಕೇಳುತ್ತಿದ್ದೆ.
ಉಪನ್ಯಾಸ ಮುಗಿಯೋ ಮುಂಚೆಯೇ ಚೆಲುವೆ ಅವಳ ಗೆಳತಿಯೊಂದಿಗೆ ಕೊಠಡಿಯಿಂದ ಹೊರಗೆ ಹೋದಳು. ನಾನು ಇನ್ನೇನು ಹೋಗೋಣ ಅನ್ನುವಷ್ಟರಲ್ಲಿ ನಮ್ಮ ಶಿಕ್ಷಕರೂ ಅಲ್ಲಿ ಉಪಸ್ಥಿತರಿದ್ದ ಕಾರಣ ಸುಮ್ಮನೆ ಕುಳಿತುಕೊಳ್ಳಬೇಕಾಯಿತು. ಸಂಜೆ ವೇಳೆ ಕಾಲೇಜಿನಲ್ಲಿ ಹುಡುಕಿದೆ ಚೆಲುವೆ ಸಿಗಲಿಲ್ಲ. ಜೋರಾದ ಮಳೆಯಂತೆ ಬಂದು ಪ್ರೇಮದ ನೀರನ್ನು ಹರಿಸಿ ಹೋದಳು ಚೆಲುವೆ.
ಆನಂದ ಜೇವೂರ್, ಕಲಬುರಗಿ