ಭಾರತ ದಿನೇ ದಿನೇ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂದುವರೆಯುತ್ತಿದೆ. ಇಂದು ಭಾರತ ಯಾವುದೇ ವಿಚಾರದಲ್ಲೂ ಬೇರೆ ದೇಶಗಳಿಗೆ ಕಡಿಮೆ ಇಲ್ಲ. ತಂತ್ರಜ್ಞಾನದಲ್ಲಿ ಅಂತು ಬೇರೆ ದೇಶಗಳಿಗೆ ಸಹಾಯ ಮಾಡುವಷ್ಟು ಬೆಳೆದು ನಿಂತಿರುವುದು ಹೆಮ್ಮೆಯ ವಿಚಾರ. ಭಾರತವು ಟೆಕ್ನೋಲಜಿ ವಿಷಯದಲ್ಲಿ ಮೊದಲಿಗಿಂತ ಎಷ್ಟೋ ಪಟ್ಟು ಹೆಚ್ಚು ಮುಂದುವರೆದದ್ದನ್ನು ನಾವು ಕಾಣಬಹುದು. ಒಂದು ದೇಶ ಮುಂದುವರೆಯ ಬೇಕಾದರೆ ಟೆಕ್ನೋಲಜಿ ಸಹ ಅಷ್ಟೇ ಮುಖ್ಯವಾದ ಪಾತ್ರವನ್ನು ವಹಿಸುತ್ತದೆ.
ಮೊದಲು 2ಜಿ ನೆಟ್ವರ್ಕ್ ನಿಂದ ಪ್ರಾರಂಭವಾದ ಇಂಟರ್ನೆಟ್ ವ್ಯವಸ್ಥೆ ಇಂದು 4ಜಿಯಲ್ಲಿ ಇರುವುದನ್ನು ನಾವು ಕಾಣಬಹುದಾಗಿದೆ. ಅದು ಮುಂದುವರಿದು ಇಂದು ನಾವು 5ಜಿ ನೆಟ್ವರ್ಕ್ ಅನ್ನು ಬಳಸುವ ಹಂತದಲ್ಲಿರುವುದು ಹೆಮ್ಮೆಯ ವಿಚಾರ. ಕೆಲವು ದಿನಗಳ ಹಿಂದೆ ನಡೆದಂತಹ ಸರ್ವೇ ಪ್ರಕಾರ ಭಾರತದಲ್ಲಿ ಏರ್ಟೆಲ್ ನೆಟ್ವರ್ಕ್ ಸದ್ಯದಲ್ಲೇ 5g ನೆಟ್ವರ್ಕ್ ಅನ್ನು ಪರಿಚಯಿಸಲಿದೆ. ಎಂದು ತಿಳಿದಿದೆ ಮೊನ್ನೆ ನಡೆದ ಹರಾಜು ಪ್ರಕ್ರಿಯೆಯಲ್ಲಿ ಏರ್ಟೆಲ್ ಮುಂದಿನ 20 ವರ್ಷಗಳಿಗೆ 430,83 ಕೋಟಿ ನೀಡಿ ನೆಟ್ವರ್ಕ್ ಅನ್ನು ಖರೀದಿಸಿರುವುದಾಗಿ ತಿಳಿಸಿದೆ.
ಮುಂದಿನ ತಿಂಗಳ ಕೊನೆಯಲ್ಲಿ ನೆಟ್ವರ್ಕ್ ಬಿಡಲು ಎಲ್ಲಾ ರೀತಿಯ ವ್ಯವಸ್ಥೆಯನ್ನು ಮಾಡಿಕೊಂಡಿದ್ದು 5ಜಿ ನೆಟ್ವರ್ಟ್ನ ಪರೀಕ್ಷೆ ಸಹ ಮಾಡಿ ಮುಗಿಸಿದೆ ಮತ್ತು 5g ನೆಟ್ವರ್ಕ್ ಬಂದರೆ ಎಲ್ಲಾ ಕ್ಷೇತ್ರಗಳಿಗೂ ಉಪಯೋಗವಾಗುವುದು ಖಂಡಿತ. ಇಂದು ಇದು ನಿಮಿಷಕ್ಕೆ 236ಎಂಬಿ ಪರ್ ಸೆಕೆಂಡ್ ಸ್ಪೀಡನ್ನು ಹೊಂದಿದ್ದು 4ಜಿಗೆ ಹೋಲಿಸಲು ಸಾಧ್ಯವಿಲ್ಲ ಮತ್ತು 4ಜಿ ಕ್ಕಿಂತ ಹೆಚ್ಚಿನ ಸ್ಪೀಡನ್ನು ಹೊಂದಿದೆ. ಮತ್ತು ಇದು ಅತಿ ಹೆಚ್ಚು ಸ್ಪೀಡ್ ಇರುವ ಕಾರಣ ಉದ್ಯಮ ಬ್ಯಾಂಕ್ ಮತ್ತು ಶಿಕ್ಷಣ ಕ್ಷೇತ್ರಗಳಲ್ಲಿ ಇದನ್ನು ಅಳವಡಿಸಿಕೊಂಡರೆ ತುಂಬಾ ಪ್ರಯೋಜನ ಕಾರಿಯಾಗಲಿದೆ ಮತ್ತು ವ್ಯವಹಾರಗಳು ಅತಿ ವೇಗವಾಗಿ ನಡೆಯುವುದರಲ್ಲಿ ಸಂಶಯವಿಲ್ಲ.
ಅಲ್ಲದೆ ಡಿಜಿಟಲ್ ಇಂಡಿಯಾ ವಿಚಾರದಲ್ಲಿ ಇದು ತುಂಬಾ ಪ್ರಯೋಜಕಾರಿ ಯಾಗಲಿದ್ದು ಆರ್ಥಿಕ ಕ್ಷೇತ್ರದಲ್ಲಿ ಮಹತ್ತರ ಬದಲಾವಣೆ ತರಲು ತುಂಬಾ ಪ್ರಯೋಜಕಾರಿಯಾಗಿದೆ. ಇದಲ್ಲದೆ ಕ್ಲೌಡ್ ಗೇಮ್ ಆಡುವವರಿಗಂತೂ ಇದು ತುಂಬಾ ಉಪಯುಕ್ತವಾಗಿದೆ. ಗೇಮಿಂಗ್ ಟೆಕ್ನೋಲಜಿ ಸಹ ಸುಧಾರಣೆಯಾಗುತ್ತದೆ. ಅದೇ ರೀತಿ ಒಂದು ಟೆಕ್ನೋಲಜಿ ಇಂದ ಉಪಯೋಗವಿದ್ದ ಹಾಗೆ ಹಾನಿಯೂ ಸಹ ಇರುತ್ತದೆ ಅದೇ ರೀತಿ 5ಜಿ ನೆಟ್ವರ್ಕ್ ನಿಂದ ಇಷ್ಟೆಲ್ಲ ಉಪಯೋಗವಿದ್ದರೂ ಇದು ಪ್ರಾಣಿ ಪಕ್ಷಿಗಳ ಜೀವದ ಮೇಲೆ ವ್ಯೆತಿರಿಕ್ತವಾದ ಪರಿಣಾಮವನ್ನು ಬೀರುವುದನ್ನು ನಾವು ಕಾಣಬಹುದಾಗಿದೆ.
ಮೊದಲಿನ್ನಷ್ಟು ಪಕ್ಷಿಗಳು ಇಂದಿಲ್ಲ ಇದರಿಂದ ಪ್ರಾಣಿ ಪಕ್ಷಿಗಳು ಸಾಯುವ ಸಂಭವನೀಯತೆ ಇದೆ. ಅಲ್ಲದೆ ಅನೇಕ ಬೇಡದ ವಿಷಯಗಳಿಗೆ ಸಹ ಇದು ಸಾಕ್ಷಿಯಾಗಬಹು. ಅದು ಏನೇ ಆದರೂ ಒಂದನ್ನು ಪಡೆದುಕೊಳ್ಳಬೇಕೆಂದರೆ ಇನ್ನೊಂದು ಕಳೆದುಕೊಳ್ಳಲೇಬೇಕು. ಅದೇ ರೀತಿ ಹೊಸ ಹೊಸ ಟೆಕ್ನೋಲಜಿಗಳನ್ನು ಸರಿಯಾದ ರೀತಿಯಲ್ಲಿ ಯಾರಿಗೂ ತೊಂದರೆಯಾದ ರೀತಿಯಲ್ಲಿ ಬಳಸಿಕೊಂಡು ಹೋಗುವುದು ನಮ್ಮ ಕೈಯಲ್ಲೇ ಇದೆ ಮತ್ತು ಅದು ನಮ್ಮ ಹೊಣೆಗಾರಿಕೆ ಆಗಿದೆ. ಈ ರೀತಿಯಲ್ಲಿ ಭಾರತ ಮುಂದುವರೆಯುತ್ತ ಹೋದರೆ ವಿಶ್ವ ಮಟ್ಟದಲ್ಲಿ ಮೊದಲ ಸ್ಥಾನ ಪಡೆದುಕೊಳ್ಳುವುದರಲ್ಲಿ ಸಂಶಯ ವಿಲ್ಲ.
ಕಾರ್ತಿಕ್ ಹೆಗಡೆ