ಎಷ್ಟೇ ಧೈರ್ಯವಂತನಾಗಿದ್ದರೂ ಒಂದು ಕ್ಷಣ ಹಾವನ್ನು ಕಂಡಾಕ್ಷಣ ಹೆದರಿಕೊಳ್ಳುತ್ತಾನೆ. ಮಳೆಗಾಲದಲ್ಲಿ ಈ ಹಾವುಗಳ ಸಂಚಾರವು ಹೆಚ್ಚಾಗಿರುತ್ತದೆ. ಮನೆಯ ಸುತ್ತ ಮುತ್ತ ವಿಷಕಾರಿ ಅಥವಾ ವಿಷಕಾರಿಯಲ್ಲದ ಹಾವುಗಳು ಕಾಣಸಿಗುತ್ತವೆ. ಕೆಲವೊಮ್ಮೆ ಈ ಹಾವುಗಳು ಮನೆಯೊಳಗೂ ಬರಬಹುದು. ಹೀಗಾಗಿ ಮನೆಯೊಳಗೆ ಹಾವು ಬರದಂತೆ ತಡೆಯಲು ಏನು ಮಾಡಬೇಕು ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
Follow us on
ಮಳೆಗಾಲಬಂತೆಂದರೆ ಸಾಕು ವಿಷಕಾರಿ ಹಾವುಗಳು, ಕ್ರಿಮಿ ಕೀಟಗಳ ಉಪಟವೇ ಹೆಚ್ಚು. ಈ ಸಮಯದಲ್ಲಿ ಹಾವುಗಳು ಮನೆಯೊಳಗೆ, ಅಂಗಳಕ್ಕೆ ಬರಲಾರಂಭಿಸುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಸರ್ಪಗಳು ಕಚ್ಚುವ ಸಾಧ್ಯತೆಯೇ ಹೆಚ್ಚು. ಮನೆಯ ಸುತ್ತಮುತ್ತ, ಮನೆಯೊಳಗೆ ಹಾವುಗಳು ಬಾರದಂತೆ ಮಾಡಲು ಈ ಸರಳ ಸಲಹೆಗಳನ್ನು ಅನುಸರಿಸಬಹುದು.
ಮನೆಯ ಸುತ್ತಮುತ್ತಲೂ ಬೆಳ್ಳುಳ್ಳಿ ಪುಡಿಯನ್ನು ಚೆಲ್ಲುವುದು ಒಳ್ಳೆಯದು.
ಬೆಳ್ಳುಳ್ಳಿಯನ್ನು ಜಜ್ಜಿ ಅದಕ್ಕೆ ಸಾಸಿವೆ ಎಣ್ಣೆಯನ್ನು ಮಿಶ್ರಣ ಮಾಡಿ ಮನೆಯ ಸುತ್ತಮುತ್ತಲಿನ ಪ್ರದೇಶಗಳಿಗೆ ಸ್ಪ್ರೇ ಮಾಡಿದರೆ ಹಾವುಗಳು ಹತ್ತಿರ ಕೂಡ ಸುಳಿಯುವುದಿಲ್ಲ.
ಮನೆಯ ಹಾಸುಪಾಸಿಗೆ ಫಿನೈಲ್ ಸಿಂಪಡಿಸಿದರೆ, ಇದರ ಗಾಢವಾದ ವಾಸನೆಗೆ ಹಾವುಗಳು ಓಡಿ ಹೋಗುತ್ತವೆ.
ಹಾವುಗಳು ಮನೆಯ ಹತ್ತಿರ ಬರದಂತೆ ತಡೆಯಲು ವಿನೆಗರ್ ಮತ್ತು ಸೀಮೆ ಎಣ್ಣೆಯನ್ನು ಬಳಸಬಹುದು. ಇದರ ಗಾಢವಾದ ಪರಿಮಳಕ್ಕೆ ಹಾವುಗಳು ಎಲ್ಲೇ ಅವಿತುಕೊಂಡಿದ್ದರೂ ಕೂಡ ಓಡಿಹೋಗುತ್ತವೆ.
ನಿಂಬೆ ರಸದೊಂದಿಗೆ ಕೆಂಪು ಮೆಣಸು ಅಥವಾ ಸುಣ್ಣದ ಪುಡಿಯನ್ನು ಬೆರೆಸಿ ಮನೆಯ ಸುತ್ತಲೂ ಸಿಂಪಡಿಸಿದರೆ ಹಾವುಗಳು ಬರುವುದಿಲ್ಲ.
ಕೊಳೆತಿರುವ ಈರುಳ್ಳಿಯನ್ನು ಮನೆಯ ಸುತ್ತಲೂ ಚೆಲ್ಲುವುದರಿಂದಲೂ ವಿಷಕಾರಿ ಹಾವುಗಳು ಬರದಂತೆ ತಡೆಯಬಹುದು.
ಹಾವುಗಳು ಬರದಂತೆ ತಡೆಯಲು ಮನೆಯ ಸುತ್ತ ಮುತ್ತಲಿನ ಪ್ರದೇಶಗಳಿಗೆ ಲವಂಗ ಹಾಗೂ ದಾಲ್ಚಿನಿ ಎಣ್ಣೆಯನ್ನು ಸ್ಪ್ರೇ ಮಾಡುವುದು ಪರಿಣಾಮಕಾರಿಯಾಗಿದೆ.