Love Brain Disorder: ಲವ್ ಬ್ರೇನ್ ಡಿಸಾರ್ಡರ್ ಎಂದರೇನು? ಪ್ರೇಮಿಗಳು ಇದರ ಬಗ್ಗೆ ತಿಳಿದುಕೊಳ್ಳುವುದು ಅಗತ್ಯ
US ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಪ್ರಕಾರ, ಲವ್ ಬ್ರೇನ್ ಡಿಸಾರ್ಡರ್ ಒಂದು ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಅನೇಕ ಬಾರಿ, ಈ ಸಮಸ್ಯೆಯನ್ನು ನಿಭಾಯಿಸಲು, ಜನರು ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಅಥವಾ ಡ್ರಗ್ಸ್ ಅನ್ನು ಬಳಸಲು ಪ್ರಾರಂಭಿಸುತ್ತಾರೆ.
ಪ್ರೀತಿಯಲ್ಲಿ ಬಿದ್ದು ಯುವಕ ಯುವತಿಯರು ಹೆಚ್ಚು ಕಾಲ ಜೊತೆಗೆ ಸಮಯ ಕಳೆಯಲು ಬಯಸುತ್ತಾರೆ. ಇದಲ್ಲದೆ ಹಗಲು ರಾತ್ರಿಯೆನ್ನದೇ ಮೊಬೈಲ್ ನಲ್ಲಿ ಮಾತನಾಡುತ್ತಿರುತ್ತಾರೆ. ರಾತ್ರಿಯಿಡೀ ಮೊಬೈಲ್ನಲ್ಲಿ ಮಾತನಾಡಿದ ಬಳಿಕವೂ ಕೂಡ ತಮ್ಮ ಪ್ರೀತಿಯನ್ನು ಸಂದೇಶಗಳ ಮೂಲಕ ವ್ಯಕ್ತಪಡಿಸುತ್ತಾರೆ. ಪ್ರೀತಿಯಲ್ಲಿ ಇದನ್ನು ಸಾಮಾನ್ಯವೆಂದು ಪರಿಗಣಿಸಲಾಗುತ್ತದೆ. ಆದರೆ ಅತಿಯಾದರೆ ಅದನ್ನು ಮಾನಸಿಕ ಕಾಯಿಲೆ ಎಂದು ಕರೆಯುತ್ತಾರೆ ಮನೋವೈದ್ಯೆರು.
ಇದೀಗ ಲವ್ ಬ್ರೇನ್ ಡಿಸಾರ್ಡರ್ ಎಂಬ ಮಾನಸಿಕ ಕಾಯಿಲೆಗೆ ಸಂಬಂಧಪಟ್ಟ ಘಟನೆಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಲ್ಲಿದೆ. ಚೀನಾದ ಜಿಯಾವೋ(18) ಎಂಬ ಯುವತಿಯೊಬ್ಬಳು ತನ್ನ ಗೆಳೆಯನಿಗೆ ದಿನಕ್ಕೆ 100ಕ್ಕೂ ಹೆಚ್ಚು ಬಾರಿ ಕರೆ ಮಾಡುತ್ತಿದ್ದಳು. ಇದಲ್ಲದೇ ಆತ ಯಾವಾಗಲೂ ತನ್ನೊಂದಿಗೆ ಇರಬೇಕೆಂದು ಬಯಸುತ್ತಿದ್ದಳು. ಪ್ರೇಮಿ ಎಲ್ಲಿದ್ದಾನೆ ಅವನು ಏನು ಮಾಡುತ್ತಾನೆ ಅವನು ಯಾರ ಜೊತೆ ಇದ್ದಾನೆ? ಎಂದು ಪ್ರತೀ ಕ್ಷಣ ವಿಚಾರಿಸುತ್ತಿದ್ದಳು. ಇದರಿಂದಾಗಿ ಸಾಕಷ್ಟು ತೊಂದರೆಗೊಳಗಾದ ಪ್ರಿಯಕರ ಆಕೆಯನ್ನು ಮನೋವೈದ್ಯರ ಬಳಿ ಕರೆದುಕೊಂಡು ಹೋಗಿದ್ದಾನೆ. ವೈದ್ಯರ ಚಿಕಿತ್ಸೆಯಲ್ಲಿ ಯುವತಿ ಲವ್ ಬ್ರೈನ್ ಡಿಸಾರ್ಡರ್(ಒಂದು ರೀತಿಯ ಮಾನಸಿಕ ಅಸ್ವಸ್ಥತೆ) ಬಳಲುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ: ಡಿಎನ್‌ಎ ಪರೀಕ್ಷೆಯಿಂದ ಮುರಿದುಬಿತ್ತು 18 ವರ್ಷದ ದಾಂಪತ್ಯ ಜೀವನ
US ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಮೆಂಟಲ್ ಹೆಲ್ತ್ ಪ್ರಕಾರ, ಇದು ಒಂದು ರೀತಿಯ ಮಾನಸಿಕ ಆರೋಗ್ಯ ಸಮಸ್ಯೆಯಾಗಿದೆ. ಅನೇಕ ಬಾರಿ, ಈ ಸಮಸ್ಯೆಯನ್ನು ನಿಭಾಯಿಸಲು, ಜನರು ಹೆಚ್ಚಿನ ಪ್ರಮಾಣದಲ್ಲಿ ಆಲ್ಕೋಹಾಲ್ ಅಥವಾ ಡ್ರಗ್ಸ್ ಅನ್ನು ಬಳಸಲು ಪ್ರಾರಂಭಿಸುತ್ತಾರೆ. ಅಂತಹ ಜನರ ಮನಸ್ಥಿತಿ ಅಸ್ಥಿರವಾಗಿರುತ್ತದೆ. ಒಂದು ರೀತಿಯಲ್ಲಿ ಅವರು ತಮ್ಮ ಬಗ್ಗೆ ಅಸಡ್ಡೆ ಹೊಂದುತ್ತಾರೆ. ಅತಿಯಾದ ಕೋಪ ಅಥವಾ ಅತಿಯಾದ ಪ್ರೀತಿ, ಭಯ, ಖಾಲಿ ಅನಿಸುತ್ತಿದೆ. ಮನೋವೈದ್ಯರು ಅಥವಾ ಮನಶ್ಶಾಸ್ತ್ರಜ್ಞರನ್ನು ಸಂಪರ್ಕಿಸುವ ಮೂಲಕ ಈ ಕಾಯಿಲೆಗೆ ಚಿಕಿತ್ಸೆ ನೀಡಬಹುದು.
ಮನೋವೈದ್ಯರು ಅಥವಾ ಮನಶ್ಶಾಸ್ತ್ರಜ್ಞರನ್ನು ಸಂಪರ್ಕಿಸುವ ಮೂಲಕ ಈ ಅಸ್ವಸ್ಥತೆಗೆ ಚಿಕಿತ್ಸೆ ಪಡೆಯಬಹುದು. ಈ ಚಿಕಿತ್ಸೆಯನ್ನು ಪ್ರಾರಂಭಿಸಿದ ನಂತರ ರೋಗಲಕ್ಷಣಗಳು ಸುಧಾರಿಸಲು ಸಮಯ ತೆಗೆದುಕೊಳ್ಳಬಹುದು. ನ್ಯೂರೋಲೆಪ್ಟಿಕ್ ಮತ್ತು ವಿಲಕ್ಷಣವಾದ ಆಂಟಿ ಸೈಕೋಟಿಕ್ ಔಷಧಿಗಳು ಕೆಲವು ರೋಗಲಕ್ಷಣಗಳಿಗೆ ಸಹಾಯ ಮಾಡಬಹುದು.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ