Viral Video: ಚಹಾ ಮಾರಿ ಕೇವಲ ಎರಡೂವರೆ ವರ್ಷದಲ್ಲಿ ತನ್ನ 8 ಲಕ್ಷ ರೂ ಸಾಲ ತೀರಿಸಿದ ಮಂಗಳೂರಿನ ವ್ಯಕ್ತಿ
ಕೋವಿಡ್ ಸಮಯದಲ್ಲಿ ತಾನು ನಡೆಸುತ್ತಿದ್ದಂತ ಜಿಮ್ ಮುಚ್ಚಿ ಹೋದಂತಹ ಸಂದರ್ಭದಲ್ಲಿ ಎದೆಗುಂದದೆ ಒಂದು ಸಣ್ಣ ಅಂಗಡಿ ಹಾಕಿ ಚಹಾ ಮಾರುವಂತಹ ಕೆಲಸವನ್ನು ಆರಂಭಿಸಿದಂತಹ ವ್ಯಕ್ತಿಯೊಬ್ಬರು ಕೇವಲ ಎರಡುವರೆ ವರ್ಷದಲ್ಲಿ ಚಹಾ ಮಾರಿಯೇ ತಮ್ಮ ಜಿಮ್ ಮೇಲಿದ್ದ 8 ಲಕ್ಷ ಸಾಲವನ್ನು ತೀರಿಸಿದ್ದಾರೆ. ಇವರ ಈ ಸ್ಪೂರ್ತಿದಾಯಕ ಕಥೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಆಗದು ಎಂದು ಕೈ ಕಟ್ಟಿ ಕುಳಿತರೆ ಸಾಗದು ಕೆಲಸವು ಮುಂದೆ… ಎಂದು ಅಣ್ಣಾವ್ರು ಹಾಡಿದ ಗೀತೆ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಹಿಡಿದ ಕಾರ್ಯವನ್ನು ಮುಗಿಸುವಂತೆ ಪ್ರೇರೇಪಿಸುತ್ತದೆ. ಅದೇ ರೀತಿ ಇಲ್ಲೊಬ್ಬ ವ್ಯಕ್ತಿ ಇದ್ದ ಕೆಲಸ ಹೋದರೇನಂತೆ ಚಹಾ ಮಾರಿಯಾದರೂ ಜೀವನ ನಡೆಸುತ್ತೇನೆ ಎಂದು ಛಲ ತೊಟ್ಟು ಚಹಾ ಮಾರಿಯೇ ಕೇವಲ ಎರಡುವರೆ ವರ್ಷದಲ್ಲಿ ತನ್ನ 8 ಲಕ್ಷ ಸಾಲವನ್ನು ತೀರಿಸಿದ್ದಾರೆ. ಇವರ ಈ ಸ್ಪೂರ್ತಿದಾಯಕ ಕಥೆಯ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಮಂಗಳೂರಿನ ಸಚಿನ್ ಎಂಬವರು ಬೆಲ್ಲದ ಚಹಾ ಮಾರಿ ಒಂದೊಳ್ಳೆ ಜೀವನವನ್ನು ನಡೆಸುತ್ತಿದ್ದಾರೆ. ಜಿಮ್ ಓನರ್ ಆಗಿದ್ದ ಸಚಿನ್ ಅವರಿಗೆ ಕೋವಿಡ್ ಸಮಯದಲ್ಲಿ ಜಿಮ್ ಅನ್ನು ಮುಚ್ಚಬೇಕಾದಂತಹ ಪರಿಸ್ಥಿತಿ ಬಂದೊದಗುತ್ತದೆ. ಅಂತಹ ಸಂದರ್ಭದಲ್ಲಿ ಎದೆಗುಂದದೆ ಹೇಗಾದರೂ ಜೀವನ ನಡೆಸಲೇಬೇಕೆಂದು ಮಂಗಳೂರಿನ ಬಿಜೈ ಎಂಬಲ್ಲಿ “ಕಾಮಧೇನು ಕೆಫೆ” ಎಂಬ ಸಣ್ಣ ಕೆಫೆ ಒಂದನ್ನು ಪ್ರಾರಂಭಿಸುತ್ತಾರೆ. ಹೀಗೆ ಚಹಾ ಮಾರಿಯೇ ಸಚಿನ್ ಕೇವಲ ಎರಡುವರೆ ವರ್ಷದಲ್ಲಿ ತಮ್ಮ ಜಿಮ್ ವ್ಯವಹಾರದ ಮೇಲಿನ 8 ಲಕ್ಷ ಸಾಲವನ್ನು ತೀರಿಸಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ ನೋಡಿ:
ಈ ಕುರಿತ ವಿಡಿಯೋವನ್ನು Try Thindi ಹೆಸರಿನ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ಚಹಾ ಮಾರಿ ಎರಡುವರೆ ವರ್ಷದಲ್ಲಿ 8 ಲಕ್ಷ ಸಾ ಮರು ಪಾವತಿಸಿದ ಮಂಗಳೂರಿನ ಯುವಕ! ಇವರ ಕಹಾನಿ ನಿಜಕ್ಕೂ ನಮಗೆಲ್ಲರಿಗೂ ಸ್ಪೂರ್ತಿ!!” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.
ಇದನ್ನೂ ಓದಿ: ಕ್ರಿಕೆಟ್ ಆಡುತ್ತಿರುವಾಗಲೇ ಬಂದ ಜವರಾಯ; ಹೃದಯಾಘಾತದಿಂದ ಮೈದಾನದಲ್ಲೇ ಪ್ರಾಣಬಿಟ್ಟ ಯುವಕ
ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 1 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಹಾಗೂ ಹಲವಾರು ಕಾಮೆಂಟ್ಸ್ಗಳನ್ನು ಪಡೆದುಕೊಂಡಿದೆ. ಒಬ್ಬ ಬಳಕೆದಾರರು ಖಂಡಿತವಾಗಿಯೂ ಪ್ರಾಮಾಣಿಕ ವ್ಯಕ್ತಿ ಕಷ್ಟದಲ್ಲಿರುವಾಗ ಪರಮಾತ್ಮ ಕೈಬಿಡಲಾರ ಎಂಬುದಕ್ಕೆ ನಿಮ್ಮ ಜೀವನವೇ ಜ್ವಲಂತ ನಿದರ್ಶನ ಎಂದು ಕಾಮೆಂಟ್ ಮಾಡಿದ್ದಾರೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ