Viral Video: ಕ್ರಿಕೆಟ್ ಆಡುತ್ತಿರುವಾಗಲೇ ಬಂದ ಜವರಾಯ; ಹೃದಯಾಘಾತದಿಂದ ಮೈದಾನದಲ್ಲೇ ಪ್ರಾಣಬಿಟ್ಟ ಯುವಕ
ಸಾವು ಯಾವಾಗ ಬಂದಪ್ಪಳಿಸುತ್ತೆ ಅಂತಾ ಹೇಳೋಕೆ ಸಾಧ್ಯವಿಲ್ಲ. ಅದರಲ್ಲೂ ಕೋವಿಡ್ ಬಳಿಕ ಯುವಕರು ಹೆಚ್ಚಾಗಿ ಹೃದಯಾಘಾಯಕ್ಕೆ ತುತ್ತಾಗುತ್ತಿದ್ದಾರೆ. ಇದೀಗ ಅಂತಹದೇ ಘಟನೆಯೊಂದು ನಡೆದಿದ್ದು, ಮೈದಾನದಲ್ಲಿ ಖುಷಿ ಖುಷಿಯಾಗಿ ಕ್ರಿಕೆಟ್ ಆಡುತ್ತಲೇ ಯುವಕನೊಬ್ಬ ಹೃದಯಾಘಾತಕ್ಕೆ ತುತ್ತಾಗಿ ಪ್ರಾಣ ಬಿಟ್ಟಿದ್ದಾನೆ. ಈ ಕುರಿತ ಆಘಾತಕಾರಿ ವಿಡಿಯೋ ಇದೀಗ ವೈರಲ್ ಆಗುತ್ತಿದೆ.
ನಮ್ಮ ಭಾರತದಲ್ಲಿ ಕ್ರಿಕೆಟ್ ಆಟಕ್ಕೆ ಇರುವಷ್ಟು ಕ್ರೇಜ್ ಬಹುಶಃ ಬೇರೆ ಯಾವ ಆಟಕ್ಕೂ ಇಲ್ಲ ಅಂತಾನೇ ಹೇಳಬಹುದು. ಸಣ್ಣ ಮಕ್ಕಳಿಂದ ಹಿಡಿದು ವಯಸ್ಕರರವರೆಗೂ ಹೆಚ್ಚಿನ ಭಾರತೀಯರು ಕ್ರಿಕೆಟ್ ಅಭಿಮಾನಿಗಳು. ರಜಾ ದಿನಗಳಲ್ಲಂತೂ ಸ್ನೇಹಿತರನ್ನು ಜೊತೆಗೂಡಿ ಕ್ರಿಕೆಟ್ ಆಡುವ ಮಜಾನೇ ಬೇರೆ. ಇದೇ ರೀತಿ ಸ್ನೇಹಿತರೊಂದಿಗೆ ಖುಷಿ ಖುಷಿಯಾಗಿ ಕ್ರಿಕೆಟ್ ಆಡುತ್ತಿರುವಾಗಲೇ ಯುವಕನೊಬ್ಬ ಹೃದಯಾಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದಾನೆ. ಈ ಆಘಾತಕಾರಿ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದ ಪ್ರಕರಣಗಳು ತೀರಾ ಹೆಚ್ಚಾಗುತ್ತಿದೆ. ಅದರಲ್ಲೂ ಕೋವಿಡ್ ಬಳಿಕ ಹಾರ್ಟ್ ಅಟ್ಯಾಕ್ ಪ್ರಕರಣಗಳು ತೀರಾ ಹೆಚ್ಚಿದ್ದು, ಮಕ್ಕಳು, ಯುವಕರು, ವೃದ್ಧರು ಅನ್ನೋ ವ್ಯತ್ಯಾಸವಿಲ್ಲದೆ ಎಲ್ಲಾ ವಯೋಮಾನದವರು ಹೃದಯಾಘಾತಕ್ಕೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಇದೀಗ ಅಂತಹದೇ ಆಘಾತಕಾರಿ ಘಟನೆಯೊಂದು ಮುಂಬೈ ನಗರದ ಮೀರಾ ರಸ್ತೆಯ ಬಳಿ ನಡೆದಿದ್ದು, ಕ್ರಿಕೆಟ್ ಆಡುತ್ತಿದ್ದ ಸಂದರ್ಭದಲ್ಲಿ ಉತ್ತಮ ಬ್ಯಾಟಿಂಗ್ ಮಾಡುತ್ತಾ ಸಿಕ್ಸರ್ ಬಾರಿಸಿ, ಆ ಖುಷಿಯನ್ನು ಸಂಭ್ರಮಿಸುತ್ತಿರುವಾಗಲೇ ಯುವಕನೊಬ್ಬ ಹೃದಯಾಘಾತಕ್ಕೆ ತುತ್ತಾಗಿ ಕೊನೆಯುಸಿರೆಳೆದಿದ್ದಾನೆ.
ಇದನ್ನೂ ಓದಿ: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯ ಹೊಟ್ಟೆಯಲ್ಲಿತ್ತು 2.5 ಕೆಜಿ ಕೂದಲು; ಬೆಚ್ಚಿಬಿದ್ದ ವೈದ್ಯರು
ವೈರಲ್ ವಿಡಿಯೋ ಇಲ್ಲಿದೆ ನೋಡಿ:
मुंबई के मीरा रोड इलाले में क्रिकेट खेलते समय एक युवक की मौत हो गई
एक टर्फ में बॉक्स क्रिकेट खेलते समय बैटिंग कर रहे युवक को अचानक ही दिल का दौरा पड़ा और वह गिर गया, जिसके बाद उसे अस्पताल ले जाया गया जहा डॉक्टरों ने उसे मृत घोषितकर दिया . pic.twitter.com/dPEY7Qx1YW
— Harish Tiwari (@harishtiwari6) June 3, 2024
ಹರೀಶ್ ತಿವಾರಿ ಎಂಬವರು ಈ ವಿಡಿಯೋವನ್ನು ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಬ್ಯಾಟಿಂಗ್ ಮಾಡುತ್ತಿದ್ದಂತಹ ಯುವಕ ಸಿಕ್ಸರ್ ಬಾರಿಸಿ ಸುಸ್ತಾಗಿ ನಿಂತಿದ್ದ ವೇಳೆ ಇದ್ದಕ್ಕಿದ್ದಂತೆ ಕುಸಿದು ಬೀಳುವ ದೃಶ್ಯವನ್ನು ಕಾಣಬಹುದು. ಆದರೆ ದುರಾದೃಷ್ಟವಶಾತ್ ಆಸ್ಪತ್ರೆಗೆ ಸಾಗಿಸುವ ಮೊದಲೇ ಆ ಯುವಕನ ಪ್ರಾಣ ಪಕ್ಷಿ ಹಾರಿಹೋಗಿದೆ.
ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ