AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Viral: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯ ಹೊಟ್ಟೆಯಲ್ಲಿತ್ತು  2.5 ಕೆಜಿ ಕೂದಲು;  ಬೆಚ್ಚಿಬಿದ್ದ ವೈದ್ಯರು

ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ತನ್ನದೇ ಕೂದಲನ್ನು ಕಿತ್ತು ತಿನ್ನುವ ಕಾಯಿಲೆಯಿಂದ ಬಳಲುತ್ತಿದ್ದ ಮಹಿಳೆಯೊಬ್ಬರ ಹೊಟ್ಟೆಯಿಂದ ವೈದ್ಯರು ಬರೋಬ್ಬರಿ ಎರಡುವರೆ ಕೆಜಿ ತೂಕದ ಕೂದಲ ಉಂಡೆಯನ್ನು ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಹೊರತೆಗೆದಿದ್ದಾರೆ. ಈ ಕುರಿತ ಸುದ್ದಿಯೊಂದು ಇದೀಗ ವೈರಲ್‌ ಆಗುತ್ತಿದೆ

Viral: ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಮಹಿಳೆಯ ಹೊಟ್ಟೆಯಲ್ಲಿತ್ತು  2.5 ಕೆಜಿ ಕೂದಲು;  ಬೆಚ್ಚಿಬಿದ್ದ ವೈದ್ಯರು
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​|

Updated on: Jun 05, 2024 | 10:10 AM

Share

ಉತ್ತರ ಪ್ರದೇಶದಲ್ಲಿ ವಿಚಿತ್ರ ಪ್ರಕರಣವೊಂದು ಬೆಳಕಿಗೆ ಬಂದಿದ್ದು, ಇಲ್ಲಿನ ಮಹೋಬಾ ಜಿಲ್ಲೆಯಲ್ಲಿನ 25 ವರ್ಷದ ಮಹಿಳೆಯೊಬ್ಬರು ತಾವು ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಕೂದಲು ಕಿತ್ತು ತಿನ್ನುವಂತಹ ವಿಚಿತ್ರ ಚಟವನ್ನು ಬೆಳೆಸಿಕೊಂಡಿದ್ದರು. ತನ್ನ ಕೂದಲು ಮಾತ್ರವಲ್ಲದೆ ಇತರರ ತಲೆ ಕೂದಲನ್ನು ಕೂಡಾ ಈ ಮಹಿಳೆ ತಿನ್ನುತ್ತಿದ್ದರು.  ಹೆರಿಗೆಯ ನಂತರ ಕೂದಲು ತಿನ್ನುವ ಅಭ್ಯಾಸವನ್ನು ನಿಲ್ಲಿಸಿದ್ದರು. ಆದರೆ ಇತ್ತೀಚಿಗೆ ಈ ಮಹಿಳೆಗೆ ತೀರಾ ಹೊಟ್ಟೆ ನೋವು ಮತ್ತು ವಾಂತಿ ಕಾಣಿಸಿಕೊಂಡಿದ್ದು, ಮಹಿಳೆಯ ಮನೆಯವರು ಆಕೆಯನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ ಆರಂಭದಲ್ಲಿ ಆಕೆಗೆ ನೀಡಿದ ಔಷಧಿ ಯಾವುದೇ ಪರಿಹಾರವನ್ನು ನೀಡಲಿಲ್ಲ. ನಂತರ ಆಕೆಯನ್ನು ಚಿತ್ರಕೂಟದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿ ವೈದ್ಯರು ಅಲ್ಟ್ರಾಸೌಂಡ್‌, ಸಿಟಿ ಸ್ಕ್ಯಾನ್‌ ತಪಾಸಣೆ ನಡೆಸಿದಾಗ ಆಕೆಯ ಹೊಟ್ಟೆಯಲ್ಲಿ ಕೂದಲ ಉಂಡೆಯಿರುವುದು ಪತ್ತೆಯಾಗಿದೆ.

ಮಹಿಳೆಯ ಹೊಟ್ಟೆಯಲ್ಲಿದ್ದ ಬರೋಬ್ಬರಿ 2.5 ಕೆಜಿ ಗಾತ್ರದ ಕೂದಲ ಉಂಡೆಯನ್ನು ಕಂಡು ವೈದ್ಯರು ಶಾಕ್‌ ಆಗಿದ್ದಾರೆ. ನಂತರ  ಇದನ್ನು 45 ನಿಮಿಷಗಳ ಯಶಸ್ವಿ ಶಸ್ತ್ರಚಿಕಿತ್ಸೆಯ ಮೂಲಕ ಹೊಟ್ಟೆಯೊಳಗಿನ ಕೂದಲ ಉಂಡೆಯನ್ನು ಹೊರತೆಗೆದಿದ್ದಾರೆ.

ಇದನ್ನೂ ಓದಿ: ರಸ್ತೆಬದಿ ಕುಳಿತಿದ್ದ ವೃದ್ಧೆಯನ್ನು ಕಾಲಲ್ಲಿ ಒದ್ದ ಮಹಿಳಾ ಟ್ರಾಫಿಕ್ ಪೊಲೀಸ್

ಚಿತ್ರಕೂಟದ ಜಾನಕಿ ಕುಂಡ್‌ ಆಸ್ಪತ್ರೆಯ ವೈದ್ಯೆ  ನಿರ್ಮಲಾ ಗೆಹಾನಿ ಪ್ರಕಾರ, “ಇಂತಹ ಸ್ಥಿತಿಯಲ್ಲಿ ರೋಗಿಯು ಸಾವನ್ನಪ್ಪುವ ಸಾಧ್ಯತೆಯೂ ಇರುತ್ತದೆ. ಇದೊಂದು ಟ್ರೈಕೋಫೇಜಿಯಾ ಎಂಬ ಅಪರೂಪದ ವೈದ್ಯಕೀಯ ಸ್ಥಿತಿಯಾಗಿದ್ದು, ಈ ಕಾಯಿಲೆಯಿಂದ ಬಳಲುತ್ತಿರುವವರು ಪದೇ ಪದೇ ತಿನ್ನುವ, ಕುಡಿಯುವ ಹಾಗೂ ಕೂದಲನ್ನು ಕೂಡಾ ತಿನ್ನುವ ಅಭ್ಯಾಸವನ್ನು ಬೆಳೆಸಿಕೊಂಡಿರುತ್ತಾರೆ. ಇದು  ಅಪೌಷ್ಟಿಕತೆ, ಜೀರ್ಣಾಂಗ ವ್ಯವಸ್ಥೆಯಲ್ಲಿ ಅಡಚಣೆಗಳು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳಿಗೆ ಕಾರ್ಣವಾಗುವ ಗಂಭೀರ ಸ್ಥಿತಿಯಾಗಿದೆ.”

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ