- Kannada News Photo gallery Abhishek Ambaressh And Aviva Bidapa Wedding Anniversary Sumalatha ambareesh wished him
ಅಭಿಷೇಕ್-ಅವಿವಾ ದಾಂಪತ್ಯಕ್ಕೆ ಒಂದು ವರ್ಷ; ಪ್ರೀತಿಯಿಂದ ಶುಭಕೋರಿದ ಸುಮಲತಾ
ಮಗ ಹಾಗೂ ಸೊಸೆಗೆ ಅವಿವಾ ಅವರು ಪ್ರೀತಿಯಿಂದ ಶುಭಕೋರಿದ್ದಾರೆ. ಮದುವೆ ಸಂದರ್ಭದ ವಿಡಿಯೋ ಹಂಚಿಕೊಂಡು ಇವರಿಗೆ ಹಾರೈಸಿದ್ದಾರೆ. ಅಭಿಮಾನಿಗಳು ಕೂಡ ಈ ದಂಪತಿಗೆ ವಿವಾಹ ವಾರ್ಷಿಕೋತ್ಸವದ ವಿಶ್ ತಿಳಿಸಿದ್ದಾರೆ.
Updated on: Jun 05, 2024 | 1:04 PM

ಅಭಿಷೇಕ್ ಅಂಬರೀಷ್ ಹಾಗೂ ಅವಿವಾ ಬಿಡಪ ದಾಂಪತ್ಯಕ್ಕೆ ಈಗ ಒಂದು ವರ್ಷ ತುಂಬಿದೆ. 2023ರ ಜೂನ್ 5ರಂದು ಈ ಜೋಡಿ ವಿವಾಹ ಆಯಿತು. ಇವರು ಹಾಯಾಗಿ ಸಂಸಾರ ನಡೆಸುತ್ತಿದ್ದಾರೆ.

ಮಗ ಹಾಗೂ ಸೊಸೆಗೆ ಅವಿವಾ ಅವರು ಪ್ರೀತಿಯಿಂದ ಶುಭಕೋರಿದ್ದಾರೆ. ಮದುವೆ ಸಂದರ್ಭದ ವಿಡಿಯೋ ಹಂಚಿಕೊಂಡು ಇವರಿಗೆ ಹಾರೈಸಿದ್ದಾರೆ. ಅಭಿಮಾನಿಗಳು ಕೂಡ ಈ ದಂಪತಿಗೆ ವಿವಾಹ ವಾರ್ಷಿಕೋತ್ಸವದ ವಿಶ್ ತಿಳಿಸಿದ್ದಾರೆ.

ಅಭಿಷೇಕ್ ಹಾಗೂ ಅವಿವಾ ಅವರ ವಿವಾಹ ಸಖತ್ ಅದ್ದೂರಿಯಾಗಿ ನೆರವೇರಿತ್ತು. ಸಾಕಷ್ಟು ಸೆಲೆಬ್ರಿಟಿಗಳು ಈ ಮದುವೆಯಲ್ಲಿ ಹಾಜರಿ ಹಾಕಿದ್ದರು. ಈಗ ನೋಡ ನೋಡುತ್ತಿದ್ದಂತೆ ವರ್ಷವೇ ಕಳೆದಿದೆ.

ಅಭಿಷೇಕ್ ಅವರು ಚಿತ್ರರಂಗದಲ್ಲಿ ಗುರುತಿಸಿಕೊಂಡಿದ್ದಾರೆ. ಕೆಲವು ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ಅವರಿಗೆ ದೊಡ್ಡ ಮಟ್ಟದ ಯಶಸ್ಸು ಈವರೆಗೆ ಸಿಕ್ಕಿಲ್ಲ.

ಇನ್ನು, ಅವಿವಾ ಅವರು ಫ್ಯಾಷನ್ ಡಿಸೈನರ್ ಆಗಿ ಗುರುತಿಸಿಕೊಂಡಿದ್ದಾರೆ. ಖ್ಯಾತ ಫ್ಯಾಷನ್ ಡಿಸೈನರ್ ಪ್ರಸಾದ್ ಬಿಡಪ ಅವರ ಮಗಳು ಅವಿವಾ.

ಇತ್ತೀಚೆಗೆ ಅಭಿಷೇಕ್ ಹಾಗೂ ಅವಿವಾ ಕಡೆಯಿಂದ ಏನಾದರೂ ಗುಡ್ನ್ಯೂಸ್ ಇದೆಯೇ ಎಂದು ಸುಮಲತಾಗೆ ಕೇಳಲಾಯಿತು. ಆ ರೀತಿ ಯಾವುದೇ ಅಪ್ಡೇಟ್ ಇಲ್ಲ ಎಂದು ಸುಮಲತಾ ಸ್ಪಷ್ಟನೆ ನೀಡಿದ್ದರು.




