Viral Post: ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ ಎಂದ ಜೊಮ್ಯಾಟೊ

ಜೊಮ್ಯಾಟೊ ತನ್ನ ಟ್ವಿಟರ್​​​​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ "ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ" ಎಂದಿದ್ದು, "ಅಗತ್ಯವಿದ್ದರೆ ಮಾತ್ರ ಮಧ್ಯಾಹ್ನದ ಸಮಯದಲ್ಲಿ ಆಹಾರವನ್ನು ಆರ್ಡರ್ ಮಾಡಿ, ಇಲ್ಲದಿದ್ದರೆ ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ" ಎಂದು ಬರೆದುಕೊಂಡಿದೆ.

Viral Post: ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ ಎಂದ ಜೊಮ್ಯಾಟೊ
Follow us
ಅಕ್ಷತಾ ವರ್ಕಾಡಿ
|

Updated on: Jun 05, 2024 | 4:20 PM

ಈಗೆಲ್ಲಾ ಕೂತಲ್ಲೇ ಫುಡ್​ ಆರ್ಡರ್ ಮಾಡಿ ತಿನ್ನುವ ಕಾಲ. ತಿನ್ನುವ ಆಹಾರದಿಂದ ಹಿಡಿದು ಮನೆಯ ದಿನಸಿ ಸಾಮಾನು, ತರಕಾರಿ ಎಲ್ಲವನ್ನು ಆನ್​ಲೈನ್​​ನಲ್ಲೇ ಆರ್ಡರ್​ ಮಾಡುವುದು ಸಾಮಾನ್ಯವಾಗಿ ಬಿಟ್ಟಿದೆ. ಇದಕ್ಕಾಗಿ ಸಾಕಷ್ಟು ಆ್ಯಪ್​​ಗಳು ಕೂಡ ಇದೆ. ಸ್ವಿಗ್ಗಿ (Swiggy) , ಜೊಮ್ಯಾಟೊ (Zomato) ಸೇರಿದಂತೆ ಅನೇಕ ಮೊಬೈಲ್​ ಫುಡ್ ಆ್ಯಪ್​​ಗಳನ್ನು ಕಾಣಬಹುದು. ಆದರೆ ಇದೀಗ ಜೊಮ್ಯಾಟೊ ಸೋಶಿಯಲ್​​ ಮೀಡಿಯಾಗಳಲ್ಲಿ ಹೊಸ ಪೋಸ್ಟ್​​ ಒಂದನ್ನು ಹಂಚಿಕೊಂಡಿದ್ದು, ಸದ್ಯ ಸಾಕಷ್ಟು ಚರ್ಚೆಗೆ ಕಾರಣವಾಗಿದೆ.

ಫುಡ್ ಆ್ಯಪ್​​ ಜೊಮ್ಯಾಟೊ ತನ್ನ ಅಧಿಕೃತ ಟ್ವಿಟರ್​​​​​​ ಖಾತೆಯಲ್ಲಿ ಪೋಸ್ಟ್​ ಒಂದನ್ನು ಹಂಚಿಕೊಂಡಿದೆ. ಇದರಲ್ಲಿ “ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ” ಎಂದು ಬರೆದುಕೊಂಡಿದೆ. ” ಅಗತ್ಯವಿದ್ದರೆ ಮಾತ್ರ ಮಧ್ಯಾಹ್ನದ ಸಮಯದಲ್ಲಿ ಆಹಾರವನ್ನು ಆರ್ಡರ್ ಮಾಡಿ, ಇಲ್ಲದಿದ್ದರೆ ಮಧ್ಯಾಹ್ನ ಫುಡ್ ಆರ್ಡರ್ ಮಾಡುವುದನ್ನು ಆದಷ್ಟು ತಪ್ಪಿಸಿ” ಎಂದು ಬರೆದುಕೊಂಡಿದೆ.

ವೈರಲ್​ ಪೋಸ್ಟ್​​ ಇಲ್ಲಿದೆ ನೋಡಿ:

ಇದನ್ನೂ ಓದಿ: ಡಿಎನ್‌ಎ ಪರೀಕ್ಷೆಯಿಂದ ಮುರಿದುಬಿತ್ತು 18 ವರ್ಷದ ದಾಂಪತ್ಯ ಜೀವನ

ದೇಶದ ಹೆಚ್ಚಿನ ಭಾಗಗಳಲ್ಲಿ ತೀವ್ರವಾದ ಶಾಖದ ಅಲೆ, ಕೆಲವೊಮ್ಮೆ ಗಾಳಿ ಮಳೆಗೆ ಆರ್ಡರ್ ಹೆಚ್ಚಾದಂತೆ ಡೆಲಿವರಿ ಬಾಯ್ಸ್​​ಗಳ ಕಾಳಜಿಯ ಮೇರೆಗೆ ಜೊಮ್ಯಾಟೊ ಭಾನುವಾರ ತನ್ನ ಗ್ರಾಹಕರನ್ನು ಈ ರೀತಿ ಒತ್ತಾಯಿಸಿದೆ. ಸದ್ಯ ಪೋಸ್ಟ್​ ಎಲ್ಲೆಡೆ ವೈರಲ್​​ ಆಗಿದ್ದು, ಭಾರೀ ಚರ್ಚೆಗೆ ಕಾರಣವಾಗಿದೆ. ” ನಾನು ನಿಮ್ಮ ಕಾಳಜಿಯನ್ನು ಶ್ಲಾಘಿಸುತ್ತೇನೆ, ಆದರೆ ಊಟದ ಸಮಯವನ್ನು ಹಸಿದುಕೊಂಡು ಮುಂದೂಡಲು ಸಾಧ್ಯವೇ?” ಎಂದು ಸಾಕಷ್ಟು ನೆಟ್ಟಿಗರು ಪೋಸ್ಟ್​​ಗೆ ಕಾಮೆಂಟ್​ ಮೂಲಕ ಪ್ರತಿಕ್ರಿಯಿಸಿದ್ದಾರೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಮ್ಯಾಕ್ಸ್ 25 ದಿನ ಪೂರೈಸಿದ್ದಕ್ಕೆ ಅಭಿಮಾನಿಗಳಿಗೆ ಸುದೀಪ್ ಸ್ಪೆಷಲ್ ವಿಡಿಯೋ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಖೋ- ಖೋ ವಿಶ್ವಕಪ್ ಗೆದ್ದು ಬೀಗಿದ ಭಾರತ ಮಹಿಳಾ ಪಡೆ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ಪ್ರಯಾಗ್​ರಾಜ್ ಕುಂಭಮೇಳದ ಹಲವು ಟೆಂಟ್​ಗಳಲ್ಲಿ ಅಗ್ನಿ ಜ್ವಾಲೆ ನರ್ತನ
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ನಂಜನಗೂಡು ನಂಜುಂಡೇಶ್ವರನ ಆಶೀರ್ವಾದ ಪಡೆದ ಡಾಲಿ ಧನಂಜಯ್
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಹನುಮಂತ ಕೊಟ್ಟ ತಿರುಗೇಟಿಗೆ ರಜತ್ ಕಂಗಾಲು; ಸುದೀಪ್ ಪ್ರತಿಕ್ರಿಯೆ ನೋಡಿ..
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಮಹಾಕುಂಭದಲ್ಲಿ ಸ್ನೇಹಿತರೊಂದಿಗೆ ಭಜನೆ ಹಾಡಿದ ಪ್ರಧಾನಿ ಸಹೋದರನ ಮಗ ಸಚಿನ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಭವ್ಯಾ-ತ್ರಿವಿಕ್ರಮ್ ಪ್ರೇಮಕತೆ, ಬಹಿರಂಗ ಮಾಡಿದ ಸುದೀಪ್
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ಶಿವಲಿಂಗಕ್ಕೆ ಪೂಜೆ ಸಲ್ಲಿಸಿದ ಡಿಕೆಶಿ, ರುದ್ರಾಕ್ಷಿಮಾಲೆ ಹಿಡ್ದು ಜಪ
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ