Viral Video: ರಾಜೀನಾಮೆಗೆ ಒತ್ತಾಯ ಹೆಚ್ಚಾಗುತ್ತಿದ್ದಂತೆ, ಮೊಬೈಲ್‌ ಸ್ವಿಚ್‌-ಆಫ್‌ ಮಾಡಿದ್ರಾ ಶಾಸಕ ಪ್ರದೀಪ್‌ ಈಶ್ವರ್? 

ಲೋಕಸಭಾ ಚುನಾವಣೆಯಲ್ಲಿ ಡಾ. ಕೆ. ಸುಧಾಕರ್‌  ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ  ಒಂದೇ ಒಂದು ಮತದ ಅಂತರದಲ್ಲಿ ಗೆದ್ದರೂ ಕೂಡಾ ನಾನು ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡ್ತೀನಿ ಎಂದು ಪ್ರದೀಪ್‌ ಈಶ್ವರ್‌ ಚಾಲೆಂಜ್‌ ಮಾಡಿದ್ರು. ಆದರೆ ಇದೀಗ ಶಾಸಕ ಸವಾಲಿನಲ್ಲಿ ಸೋತಿದ್ದು, ಒಂದೆಡೆ ಶಾಸಕ ಟ್ರೋಲ್‌ ಆಗುತ್ತಿರುವ ಜೊತೆಜೊತೆಗೆ ರಾಜೀನಾಮೆಗೂ ಒತ್ತಾಯ  ಹೆಚ್ಚಾಗುತ್ತಿದ್ದೆ. ಇನ್ನೊಂದೆಡೆ ಪ್ರದೀಪ್‌ ಈಶ್ವರ್‌ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಕುಳಿತಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ವೈರಲ್‌ ಆಗುತ್ತಿದೆ.

Viral Video: ರಾಜೀನಾಮೆಗೆ ಒತ್ತಾಯ ಹೆಚ್ಚಾಗುತ್ತಿದ್ದಂತೆ, ಮೊಬೈಲ್‌ ಸ್ವಿಚ್‌-ಆಫ್‌ ಮಾಡಿದ್ರಾ ಶಾಸಕ ಪ್ರದೀಪ್‌ ಈಶ್ವರ್? 
Follow us
ಮಾಲಾಶ್ರೀ ಅಂಚನ್​
| Updated By: ಅಕ್ಷಯ್​ ಪಲ್ಲಮಜಲು​​

Updated on: Jun 06, 2024 | 10:38 AM

ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದಲ್ಲಿ ಡಾ. ಕೆ ಸುಧಾಕರ್‌ ಅವರಿಗೆ ಒಂದೇ ಒಂದು ಮತದ ಲೀಡ್‌ ಸಿಕ್ಕರೂ ನಾನು  ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎಂದು ಪ್ರದೀಪ್‌ ಈಶ್ವರ್‌ ಸವಾಲು ಹಾಕಿದ್ದರು. ಸದ್ಯ    ಇದೀಗ ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಬಿಜೆಪಿ-ಜೆಡಿಎಸ್‌ ಮೈತ್ರಿ ಅಭ್ಯರ್ಥಿ  ಡಾ. ಕೆ. ಸುಧಾಕರ್‌ ಅವರು ಕಾಂಗ್ರೆಸ್ ಅಭ್ಯರ್ಥಿ ರಕ್ಷಾ ರಾಮಯ್ಯ ವಿರುದ್ಧ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಸುಧಾಕರ್‌ ಗೆಲವಿನ ಬೆನ್ನಲ್ಲೇ ಒಂದೆಡೆ ಶಾಸಕ ಟ್ರೋಲ್‌ ಆಗುತ್ತಿರುವ ಜೊತೆಜೊತೆಗೆ ರಾಜೀನಾಮೆಗೂ ಒತ್ತಾಯ  ಹೆಚ್ಚಾಗುತ್ತಿದ್ದೆ. ಇನ್ನೊಂದೆಡೆ ಪ್ರದೀಪ್‌ ಈಶ್ವರ್‌ ಮೊಬೈಲ್‌ ಸ್ವಿಚ್‌ ಆಫ್‌ ಮಾಡಿ ಕುಳಿತಿದ್ದಾರೆ. ಈ ಕುರಿತ ವಿಡಿಯೋವೊಂದು ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಕೆಲ ದಿನಗಳ ಹಿಂದೆ ಶಾಸಕ ಪ್ರದೀಪ್‌ ಈಶ್ವರ್‌ ಸುದ್ದಿಗೋಷ್ಠಿಯಲ್ಲಿ ಡಾ. ಕೆ. ಸುಧಾಕರ್‌ ಅವರು ಚಿಕ್ಕಬಳ್ಳಾಪುರ ಕ್ಷೇತ್ರದಲ್ಲಿ ಒಂದೇ ಒಂದು ವೋಟ್‌ ಹೆಚ್ಚು ತೆಗೆದುಕೊಂಡರೂ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನಿಡ್ತೀನಿ ಅಂದಿದ್ರು. ಆದರೆ ಈ ಸವಾಲಿನಲ್ಲಿ ಶಾಸಕ ಸೋತಿದ್ದು, ರಾಜೀನಾಮೆ ಯಾವಾಗ ಕೊಡ್ತೀರಿ ಸ್ವಾಮಿ ಎಂದು ನೆಟ್ಟಿಗರು ಪ್ರಶ್ನೆ ಕೇಳ್ತಿದ್ದಾರೆ. ಫಲಿತಾಂಶದ ಬಳಿಕ ಎಲ್ಲೂ ಕಾಣಿಸಿಕೊಳ್ಳದ  ಪ್ರದೀಪ್‌ ಈಶ್ವರ್‌ ಮೊಬೈಲ್‌ ಅನ್ನು ಕೂಡಾ ಸ್ವಿಚ್‌ ಆಫ್‌ ಮಾಡಿ ಕುಳಿತಿದ್ದಾರೆ.

ಇದನ್ನೂ ಓದಿ:  ಶಾಸಕ ಸ್ಥಾನಕ್ಕೆ ಪ್ರದೀಪ್ ಈಶ್ವರ್ ರಾಜೀನಾಮೆ ನೀಡಿದ್ರಾ? ರಾಜೀನಾಮೆ ಪತ್ರ ವೈರಲ್!

ವೈರಲ್​​ ವಿಡಿಯೋ ಇಲ್ಲಿದೆ ನೋಡಿ:

ಈ ಕುರಿತ ವಿಡಿಯೋವೊಂದನ್ನು __sanathan_dharm_ ಎಂಬ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, “ರಾಜೀನಾಮೆ ಕೊಡ್ತೀನಿ ಅಂತ ಹೇಳಿ ಫೋನ್‌ ಸ್ವಿಚ್‌ ಆಫ್‌ ಮಾಡಿ ಕುಳಿತಿದ್ದೀರಾ” ಎಂಬ ಶೀರ್ಷಿಕೆಯನ್ನು ಬರೆಯಲಾಗಿದೆ.  ಒಂದು ದಿನದ ಹಿಂದೆ ಹಂಚಿಕೊಳ್ಳಲಾದ ಈ ವಿಡಿಯೋ 2 ಲಕ್ಷಕ್ಕೂ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಶಾಸಕ ರಾಜೀನಾಮೆ ಕೊಡೋವರೆಗೂ ಬಿಡ್ಬೇಡಿ ಅಂತ ತರಹೇವಾರಿ ಕಾಮೆಂಟ್ಸ್‌ಗಳು ಹರಿದುಬಂದಿವೆ.

ಮತ್ತಷ್ಟು ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ