
ಭಾರತವು ಬ್ರಿಟಿಷರ ದಾಸ್ಯದಿಂದ ಮುಕ್ತರಾಗುವಲ್ಲಿ ಬಂಗಾಳದ ಶೌರ್ಯದ ಮಗ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಕೊಡುಗೆ ಅಪಾರವಾಗಿದೆ. ಜನವರಿ 23 ಸುಭಾಷ್ ಚಂದ್ರ ಬೋಸ್ ಅವರ ಜನ್ಮ ದಿನ (Netaji Subhash Chandra Bose Jayanti). ಅವರ ಹೋರಾಟದ ಹಾದಿಯನ್ನು ನೆನಪಿಸಿಕೊಳ್ಳುತ್ತಾ ಈ ಬಾರಿ ಅವರ 129 ನೇ ಜನ್ಮದಿನವನ್ನು ಆಚರಿಸಲಾಗುತ್ತಿದೆ. ಅದಲ್ಲದೇ ಈ ದಿನದಂದೇ ಪರಾಕ್ರಮ ದಿನವನ್ನು(Parakram Diwas) ಆಚರಿಸಲಾಗುತ್ತದೆ. ಈ ದಿನವನ್ನು ಯಾಕಾಗಿ ಆಚರಿಸಲಾಗುತ್ತದೆ ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.
‘ನನಗೆ ನಿಮ್ಮ ರಕ್ತವನ್ನು ನೀಡಿ, ನಾನು ನಿಮಗೆ ಸ್ವಾತಂತ್ರ್ಯವನ್ನು ನೀಡುತ್ತೇನೆ’ ಎನ್ನುವ ಘೋಷವಾಕ್ಯದಿಂದಲೇ ಯುವಕರಲ್ಲಿ ಹೋರಾಟದ ಕಿಚ್ಚನ್ನು ಹಚ್ಚಿದವರು ನೇತಾಜಿ ಸುಭಾಷ್ ಚಂದ್ರ ಬೋಸ್. ಭಾರತೀಯರ ಮೇಲೆ ದಬ್ಬಾಳಿಕೆ ಮಾಡುವ ಬ್ರಿಟಿಷರನ್ನು ಓಡಿಸಲು ಮಿಲಿಟರಿ ಕಾರ್ಯಾಚರಣೆಯೇ ಪರಿಣಾಮಕಾರಿ ಅಸ್ತ್ರ ಎಂದು ನಂಬಿದ್ದರು. ಹೀಗಾಗಿ ಈ ಅಸ್ತ್ರದಿಂದ ಮಾತ್ರ ಎಲ್ಲವೂ ಸಾಧ್ಯ ಎಂದುಕೊಂಡಿದ್ದರು. ಈ ಕಾರಣಕ್ಕಾಗಿ ತಮ್ಮ ಹೋರಾಟದ ಹಾದಿಯಲ್ಲಿ ಬದಲಾವಣೆ ತಂದುಕೊಂಡು ಬ್ರಿಟಿಷರ ವಿರುದ್ಧ ಹೋರಾಡಿದರು. ಸುಭಾಸ್ ಚಂದ್ರ ಬೋಸ್ ಹೋರಾಟ ಹಾದಿಯ ಕಡೆಗೆ ಕಣ್ಣಾಯಿಸಿದಾಗೆಲೆಲ್ಲಾ ಮೈಯೆಲ್ಲಾ ರೋಮಾಂಚನವಾಗುತ್ತದೆ.
ಇದನ್ನೂ ಓದಿ:Penguin Awareness Day 2026: ಬದಲಾಗುತ್ತಿರುವ ಹವಾಮಾನದಿಂದಾಗಿ ಪೆಂಗ್ವಿನ್‌ಗಳ ಅಸ್ತಿತ್ವಕ್ಕೆ ಎದುರಾಗಿದೆ ಅಪಾಯ
ಭಾರತದ ಸ್ವಾತಂತ್ರ್ಯ ಹೋರಾಟಕ್ಕೆ ಬೋಸ್ ನೀಡಿದ ಕೊಡುಗೆಗಳನ್ನು ಗೌರವಿಸಲು 2021 ರಲ್ಲಿ ಅವರ ಹುಟ್ಟುಹಬ್ಬದ ದಿನವೇ ಪರಾಕ್ರಮ ದಿನ ಆಚರಿಸಲು ನಿರ್ಧರಿಸಲಾಯಿತು. ಈ ದಿನದ ಆಚರಣೆಯ ಮೂಲ ಉದ್ದೇಶವು ಸ್ವಾತಂತ್ರ ಹೋರಾಟಕ್ಕಾಗಿ ಮಾಡಿದ ತ್ಯಾಗವನ್ನು ಮುಂದಿನ ಪೀಳಿಗೆಯವರಿಗೆ ರವಾನಿಸುವುದಾಗಿದೆ. ಹೀಗಾಗಿ ಸುಭಾಸ್ ಚಂದ್ರ ಬೋಸ್ ಅವರ ಜನ್ಮ ದಿನದಂದೇ ಪರಾಕ್ರಮ ದಿನವನ್ನು ಆಚರಿಸುತ್ತಾ ಬರಲಾಗುತ್ತಿದೆ.
ಇನ್ನಷ್ಟು ಜೀವನ ಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 9:48 am, Fri, 23 January 26