ಹೊಸ ವರ್ಷ ಪ್ರತಿಯೊಬ್ಬರಿಗೂ ಕೆಲಸ ಮಾಡಲು ಸ್ಫೂರ್ತಿ ನೀಡುವ ಸಮಯ. ಆದ್ದರಿಂದಲೇ ಬಹಳಷ್ಟು ಜನರು ಹೊಸ ವರ್ಷದಿಂದ ಹೊಸ ಕೆಲಸಗಳನ್ನು ಮಾಡಬೇಕು ಎಂದು ಯೋಚಿಸುತ್ತಾರೆ ಮತ್ತು ಅದಕ್ಕೆ ಪಟ್ಟಿಗಳನ್ನೂ ತಯಾರಿಸುತ್ತಾರೆ. ಆದರೆ ಬಹಳಷ್ಟು ಬಾರಿ ಆ ಪಟ್ಟಿಗಳಲ್ಲಿ ಇರುವುದನ್ನು ಅನುಷ್ಠಾನಕ್ಕೆ ತರಲು ಸಾಧ್ಯವಾಗುವುದೇ ಇಲ್ಲ. ಅಥವಾ ಕಾಲಾನಂತರ ನಾವು ಅನುಷ್ಠಾನಕ್ಕೆ ತಂದದ್ದನ್ನು ಮುಂದುವರೆಸುವುದಿಲ್ಲ. ಅಲ್ಲದೇ ಬಹಳಷ್ಟು ಜನರು ಹೊಸ ವರ್ಷದಿಂದ ದೈಹಿಕ ಆರೋಗ್ಯದ ಬದಲಾವಣೆಗೆ ಪ್ರಾಮುಖ್ಯತೆ ನೀಡುತ್ತಾರೆ. ಜಿಮ್, ವರ್ಕೌಟ್, ಜಾಗಿಂಗ್ ಹೀಗೆ ಹಲವು ಚಟುವಟಿಕೆಗಳನ್ನು ಹೊಸ ವರ್ಷದಿಂದ ಪ್ರಾರಂಭಿಸಬೇಕು ಎಂದು ಯೋಚಿಸುತ್ತಾರೆ. ಆದರೆ ತಜ್ಞರು ಈ ವರ್ಷ ಬೇರೆಯದೇ ಸಲಹೆ ನೀಡುತ್ತಾರೆ. ಮಾನಸಿಕ ಆರೋಗ್ಯದ ಕುರಿತು ಹೆಚ್ಚಾಗಿ ಗಮನ ಕೊಡಿ. ವರ್ತಮಾನದಲ್ಲಿ ಅದು ಬಹಳ ಪ್ರಮುಖವಾದದ್ದು. ಕೊರೊನಾ ಕಾಲಘಟ್ಟದ ನಂತರ ನಮ್ಮ ಚಿಂತನೆಗಳು, ಯೋಚನೆಗಳ ಬಗ್ಗೆ ನಾವು ಬಹಳ ಗಮನಹರಿಸಬೇಕಾದುದು ಮುಖ್ಯ ಎಂದು ಅವರು ಸಲಹೆ ನೀಡುತ್ತಾರೆ. ಮಾನಸಿಕ ಆರೋಗ್ಯದ ಬಗ್ಗೆ ನೀವು ನಿರ್ಣಯ ಕೈಗೊಳ್ಳಲು ಒಂದಷ್ಟು ಟಿಪ್ಸ್ ಇಲ್ಲಿದೆ.
1. ಅವಾಸ್ತವಿಕ ನಿರ್ಣಯ ಕೈಗೊಳ್ಳಬೇಡಿ: ನೀವು ಹೊಸ ವರ್ಷಕ್ಕೆ ಹೊಸ ನಿರ್ಣಯಗಳನ್ನು ರೂಪಿಸಿಕೊಳ್ಳುವಾಗ ಅವಾಸ್ತವಿಕವಾದ ನಿರ್ಣಯಗಳನ್ನು ಕೈಗೊಳ್ಳಬೇಡಿ. ಕಾರಣ, ಒಂದು ವೇಳೆ ನಿಮ್ಮ ನಿರ್ಣಯಗಳು ಸಫಲವಾಗದಿದ್ದರೆ ಅವು ಹೆಚ್ಚಿನ ಒತ್ತಡವನ್ನು ನಿಮ್ಮ ಮೇಲೆ ಹೇರುತ್ತದೆ. ಆದ್ದರಿಂದ ನಿರ್ಣಯಗಳನ್ನು ತೆಗೆದುಕೊಳ್ಳುವಾಗ ಗಮನ ಹರಿಸಿ.
2. ಸಣ್ಣ ಸಣ್ಣ ಪ್ಲಾನ್ ರೂಪಿಸಿ: ನೀವು ಹೊಸ ಪ್ಲಾನ್ ರೂಪಿಸುವಾಗ ಅದು ಬಹಳ ಮಹತ್ವದ್ದು, ಅದೊಂದೇ ನಿಮ್ಮ ಜೀವನ ಬದಲಾಯಿಸಬೇಕು ಎಂದೆಲ್ಲಾ ಅತಿಯಾದ ನಿರೀಕ್ಷೆ ಇಟ್ಟುಕೊಳ್ಳಬೇಡಿ. ನೀವು ಈಗಾಗಲೇ ಮಾಡುತ್ತಿರುವ ಕೆಲಸಗಳಲ್ಲೇ ಸಣ್ಣ ಬದಲಾವಣೆ ತರುವ ನಿರ್ಧಾರಗಳನ್ನು ಜಾರಿಗೆ ತರಲು ಯೋಚಿಸಿ. ಅವುಗಳು ಯಶಸ್ವಿಯಾದಾಗ ನಿಮ್ಮ ಆತ್ಮವಿಶ್ವಾಸವೂ ಹೆಚ್ಚಾಗುತ್ತದೆ.
3. ಆದಷ್ಟು ಎಲ್ಲವನ್ನೂ ಒಪ್ಪಿಕೊಳ್ಳುವುದನ್ನು ರೂಡಿಸಿಕೊಳ್ಳಿ: ಕೊರೊನಾ ಕಾಲದಲ್ಲಿ ಬಹಳಷ್ಟು ನಿರ್ಣಯಗಳು ನಮ್ಮ ಕೈಯಲ್ಲಿರುವುದಿಲ್ಲ. ನಾವು ಜವಾಬ್ದಾರರೇ ಅಲ್ಲದ ಕಾರಣಗಳಿಗೆ ನಾವು ತೊಂದರೆ ಅನುಭವಿಸಬೇಕಾಗುತ್ತದೆ. ಇದರಿಂದ ಕುಗ್ಗಬೇಡಿ. ಮತ್ತು ಇದನ್ನು ಎದುರಿಸಬಲ್ಲೆ ಎಂಬ ವಿಶ್ವಾಸ ಬೆಳೆಸಿಕೊಳ್ಳಿ. ಒಂದು ವೇಳೆ ನೀವು ಅಂದುಕೊಂಡಿದ್ದ ಆಗಿಲ್ಲವೆಂದಾದರೆ ಕೋಪ ಬೇಡ. ಎಲ್ಲವನ್ನೂ ಸಮ ಚಿತ್ತದಿಂದ ಸ್ವೀಕರಿಸಿ ಮುಂದಿನದರ ಬಗ್ಗೆ ಯೋಚಿಸಿ.
4. ಮನೆಯಲ್ಲೇ ಮತ್ತಷ್ಟು ಚಟುವಟಿಕೆಯಿಂದರಲು ಯೋಜನೆ ರೂಪಿಸಿ: ಮಾನಸಿಕ ಆರೋಗ್ಯಕ್ಕೆ ನೀವು ದೈನಂದಿನ ಜೀವನ ಹೇಗೆ ಕಳೆಯುತ್ತೀರಿ ಎನ್ನುವುದೂ ಮುಖ್ಯವಾಗುತ್ತದೆ. ಅನಿವಾರ್ಯವಾಗಿ ಮನೆಯಲ್ಲಿ ಇರಬೇಕಾಗಿ ಬಂದಾಗಲೂ ಆದಷ್ಟು ಚಟುವಟಿಕೆಯಿಂದಿರಿ.
ಇದನ್ನೂ ಓದಿ:
Financial Changes: 2022ರ ಜನವರಿಯಿಂದ ಆಗಲಿರುವ 6 ಹಣಕಾಸು ವಿಚಾರದ ಬದಲಾವಣೆಗಳಿವು
Reliance Jio: ಜಿಯೋದಿಂದ ಬಿಗ್ ಶಾಕ್: ಗ್ರಾಹಕರ ನೆಚ್ಚಿನ ಪ್ಲಾನ್ನನ್ನೇ ಸ್ಥಗಿತಗೊಳಿಸಿದ ಕಂಪನಿ