AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reliance Jio: ಜಿಯೋದಿಂದ ಬಿಗ್ ಶಾಕ್: ಗ್ರಾಹಕರ ನೆಚ್ಚಿನ ಪ್ಲಾನ್​ನನ್ನೇ ಸ್ಥಗಿತಗೊಳಿಸಿದ ಕಂಪನಿ

Reliance Jio Re 1 plan: ಆರಂಭದಲ್ಲಿ ರಿಲಯನ್ಸ್ ಜಿಯೋ ಟೆಲಿಕಾಂ ಹೊಸದಾಗಿ 1 ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿತು. ಇದೀಗ ಜಿಯೋ 1ರೂ. ಬೆಲೆಯ ಪ್ರಿಪೇಯ್ಡ್‌ ಯೋಜನೆಯನ್ನು ಸ್ಥಗಿತಗೊಳಿಸಿದ್ದು, ಕಂಪನಿಯ ಈ ಪ್ಲಾನ್ ಅನ್ನು ಮೈ ಜಿಯೋ ಆ್ಯಪ್‌ನಿಂದ ತೆಗೆದುಹಾಕಿದೆ.

Reliance Jio: ಜಿಯೋದಿಂದ ಬಿಗ್ ಶಾಕ್: ಗ್ರಾಹಕರ ನೆಚ್ಚಿನ ಪ್ಲಾನ್​ನನ್ನೇ ಸ್ಥಗಿತಗೊಳಿಸಿದ ಕಂಪನಿ
Reliance Jio
TV9 Web
| Updated By: Vinay Bhat|

Updated on: Dec 30, 2021 | 1:48 PM

Share

ಖಾಸಗಿ ಟೆಲಿಕಾಂ ಕಂಪನಿಗಳ ಬೆಲೆ ಏರಿಕೆ ಬಿಸಿಯಿಂದ ಗ್ರಾಹಕರು ಇನ್ನೂ ತಣ್ಣಗಾಗಿಲ್ಲ. ಇದನ್ನ ಮರೆಮಾಚಲು ಜಿಯೋ (JIO), ಏರ್ಟೆಲ್ (Airtel) ಹಾಗೂ ವೊಡಾಫೋನ್ ಐಡಿಯಾ (Vodafon Idea) ಅಧಿಕ ಡೇಟಾ, ಓಟಿಟಿ (OTT) ಆಫರ್​ಗಳನ್ನು ಬಿಡುಗಡೆ ಮಾಡುತ್ತಿದೆ. ಆದರೂ ಬಳಕೆದಾರರು ಅದೇ ಶಾಕ್​ನಲ್ಲಿದ್ದಾರೆ. ಇತ್ತೀಚೆಗಷ್ಟೆ ಜಿಯೋ ಕೇವಲ 1 ರೂಪಾಯಿಗೆ ಪ್ರಿಪೇಯ್ಡ್ ಯೋಜನೆಯೊಂದನ್ನು (Prepaid Plans) ಪರಿಚಯಿಸಿತ್ತು. ಜಿಯೋ ಮೊಬೈಲ್ ಅಪ್ಲಿಕೇಶನ್​ನಲ್ಲಿ ಮಾತ್ರವೇ ಪರಿಚಯಿಸಲಾದ ಈ ಪ್ಲಾನ್​ ಅಗತ್ಯಕ್ಕಿಂತ ಹೆಚ್ಚಿನ ಡೇಟಾವನ್ನು ಖರೀದಿಸಲು ಬಯಸದ ಕಡಿಮೆ-ಆದಾಯದ ವರ್ಗದ ಜನರಿಗೆ ಉಪಕಾರಿ ಆಗುತ್ತಿತ್ತು. ಇದರಿಂದ ಕೊಂಚ ನೆಮ್ಮದಿಯಲ್ಲಿದ್ದ ಜಿಯೋ ಗ್ರಾಹಕರಿಗೆ ಕಂಪನಿ ಈಗ ಮತ್ತೊಂದು ಶಾಕ್ ನೀಡಿದೆ. ಇದೀಗ ಜಿಯೋ 1ರೂ. ಬೆಲೆಯ (Jio Rs 1 Plan) ಪ್ರಿಪೇಯ್ಡ್‌ ಯೋಜನೆಯನ್ನು ಸ್ಥಗಿತಗೊಳಿಸಿದ್ದು, ಕಂಪನಿಯ ಈ ಪ್ಲಾನ್ ಅನ್ನು ಮೈ ಜಿಯೋ ಆ್ಯಪ್‌ನಿಂದ ತೆಗೆದುಹಾಕಿದೆ.

ಹೌದು, ಆರಂಭದಲ್ಲಿ ರಿಲಯನ್ಸ್ ಜಿಯೋ ಟೆಲಿಕಾಂ ಹೊಸದಾಗಿ 1 ರೂ. ಬೆಲೆಯ ಪ್ರಿಪೇಯ್ಡ್ ಯೋಜನೆಯನ್ನು ಪರಿಚಯಿಸಿತು. ಇದರಲ್ಲಿ 30 ದಿನಗಳವರೆಗೆ 100MB ಡೇಟಾ ಪ್ರಯೋಜನ ಪಡೆಯಬಹುದಿತ್ತು. ಮುಂದಿನ ದಿನವೇ ಈ ಪ್ಲಾನ್​ನಲ್ಲಿ ಬದಲಾವಣೆ ಮಾಡಿ 100MB ಡೇಟಾವನ್ನು 10MB ಗೆ ಇಳಿಸಿತು, ಹಾಗೆಯೇ 30 ದಿನಗಳ ವ್ಯಾಲಿಡಿಟಿಯನ್ನು (1) ಒಂದು ದಿನಕ್ಕೆ ಬದಲಾಯಿಸಿತು. ಇದೀಗಈ  1 ರೂ. ಬೆಲೆಯ ಪ್ರಿಪೇಯ್ಡ್‌ ಯೋಜನೆಯನ್ನೇ ನಿಲ್ಲಿಸಿದೆ. ಈ ರೀಚಾರ್ಜ್ ಯಾವುದೇ ಹೆಚ್ಚುವರಿ ಪ್ರಯೋಜನ ಹೊಂದಿಲ್ಲ. ಮೈ ಜಿಯೋ ಮೊಬೈಲ್ ಅಪ್ಲಿಕೇಶನ್​ನಲ್ಲಿ ಈ ರೀಚಾರ್ಜ್ ಬಗ್ಗೆ ಗ್ರಾಹಕರು ನೋಡಬಹುದಾಗಿದೆ. ಅಂದರೆ ಈ ಯೋಜನೆಯಲ್ಲಿ ಯಾವುದೇ ವಾಯಿಸ್ ಕರೆ, ಎಸ್ಎಮ್ಎಸ್ ಪ್ರಯೋಜನ ಲಭ್ಯ ಇರುವುದಿಲ್ಲ.

ಇನ್ನು ಜಿಯೋದ ಇತರೆ ಯೋಜನೆ ಬಗ್ಗೆ ನೋಡುವುದಾದರೆ 119 ರೂ. ಪ್ರಿಪೇಯ್ಡ್ ರೀಚಾರ್ಜ್ ಪ್ಲಾನ್ ಲಾಭಗಳನ್ನು ಪರಿಷ್ಕರಿಸಿದೆ. ಅನಿಯಮಿತ ಯೋಜನೆಗಳ ರೀಚಾರ್ಜ್ ಪಟ್ಟಿಯಲ್ಲಿ ಅತ್ಯಂತ ಕೈಗೆಟುಕುವ ಕೊಡುಗೆಯಾಗಿರುವ ಜಿಯೋವಿನ ಹೊಸ ಪ್ರಿಪೇಯ್ಡ್ ರೀಚಾರ್ಜ್ ಯೋಜನೆಯು ಈಗ ಕಡಿಮೆ ಬೆಲೆಯಲ್ಲಿ ಉತ್ತಮ ಸೇವೆಗಳನ್ನು ಪಡೆಯಲು ಸಹಾಯಕವಾಗಿದೆ. ಈ ಪ್ರಿಪೇಯ್ಡ್ ಪ್ಲಾನ್ 14 ದಿನಗಳ ವ್ಯಾಲಿಡಿಟಿ ಪಡೆದಿದೆ. ಈ ಯೋಜನೆಯಲ್ಲಿ ಪ್ರತಿದಿನ 1.5 GB ಡೇಟಾ ಪ್ರಯೋಜನ ಲಭ್ಯವಾಗಲಿದೆ. ಇದರೊಂದಿಗೆ ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 300 SMSಗಳು ದೊರೆಯುತ್ತವೆ. ಹಾಗೆಯೇ ಅನಿಯಮಿತ ವಾಯಿಸ್ ಕರೆಗಳ ಸೌಲಭ್ಯ ಸಹ ಸಿಗಲಿದೆ. ಪೂರ್ಣ ವ್ಯಾಲಿಡಿಟಿ ಅವಧಿಗೆ ಒಟ್ಟು 21GB ಡೇಟಾ ಪ್ರಯೋಜನ ಸಿಗಲಿದೆ.

ಅಂತೆಯೆ ಜಿಯೋದ 299 ರೂ. ಪ್ರಿಪೇಯ್ಡ್ ಪ್ಲಾನ್​ನಲ್ಲಿ ಪ್ರತಿದಿನ 2GB ಇಂಟರ್ನೆಟ್ ಪ್ರಯೋಜನ ಸಿಗುತ್ತದೆ. ಹಾಗೆಯೇ ಜಿಯೋದಿಂದ ಜಿಯೋ ಕರೆಗಳು ಸೇರಿದಂತೆ ಜಿಯೋದಿಂದ ಇತರೆ ನೆಟವರ್ಕ ಕರೆಗಳು ಸಹ ಸಂಪೂರ್ಣ ಅನಿಯಮಿತ ಉಚಿತ. ಇದರೊಂದಿಗೆ ಪ್ರತಿದಿನ 100 ಎಸ್ಎಮ್ಎಸ್ ಸೌಲಭ್ಯ ಲಭ್ಯ. 28 ದಿನಗಳ ವ್ಯಾಲಿಡಿಟಿಗೆ ಒಟ್ಟು 56GB ಡೇಟಾ ಸಿಗಲಿದೆ.

Whatsapp Third Tick: ವಾಟ್ಸ್​ಆ್ಯಪ್​ನಲ್ಲಿ ಬರಲಿದೆ ಮೂರನೇ ಬ್ಲೂ ಟಿಕ್?: ಶಾಕ್ ಆಗುವ ಮುನ್ನ ಈ ಸ್ಟೋರಿ ಓದಿ

Xiaomi 12 series: ಹೊಸ ವರ್ಷದ ಮೊದಲ ಫೋನ್ ಬಿಡುಗಡೆ: ಶವೋಮಿ 12, ಶವೋಮಿ 12 ಪ್ರೊ ಸ್ಮಾರ್ಟ್​ಫೋನ್ ಅನಾವರಣ

(Reliance Jio discontinued recently launched its cheapest Re 1 prepaid plan)

ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
ಪ್ರಧಾನಿಯಾಗಿ ಇಂದಿರಾ ಗಾಂಧಿಯ ದಾಖಲೆ ಮುರಿದ ಮೋದಿಗೆ ಮುಯಿಝು ಅಭಿನಂದನೆ
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
‘ಕೊತ್ತಲವಾಡಿ’ ಸಿನಿಮಾದಲ್ಲಿದೆ ಯಶ್ ಬಳಸಿದ ವಿಶೇಷ ಬೈಕ್
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕೃಷ್ಣರಾಜ ಒಡೆಯರ್-ಸಿದ್ದರಾಮಯ್ಯ ಇಬ್ಬರೂ ಸಾಮಾಜಿಕ ಹರಿಕಾರರು: ಸಚಿವ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಕರ್ನಾಟಕವೇ ದೇಶದಲ್ಲಿ ಪ್ರಥಮ ಬಾರಿಗೆ ಜಾತಿಗಣತಿ ಮಾಡಿಸಿದ್ದು: ಸಿದ್ದರಾಮಯ್ಯ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಜಪಾನಿಗೆ ಬನ್ನೇರುಘಟ್ಟ ಸಾಕಾನೆಗಳ ಏರ್​ ಲಿಫ್ಟ್​ ಯಶಸ್ವಿ
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಸುರ್ಜೇವಾಲಾ ಮಾಡಿದ್ದು ಸರಿಯಲ್ಲ ಅಂತ ರಾಜಣ್ಣನೇ ಹೇಳಿದ್ದಾರೆ: ರವಿಕುಮಾರ್
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಾಲ್ಡೀವ್ಸ್‌ನಲ್ಲಿ ಪ್ರಧಾನಿ ಮೋದಿಗೆ ಗೌರವದ ಸ್ವಾಗತ, ಭಾರತೀಯರಿಂದ ನೃತ್ಯ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
ಮಂತ್ರಿ ಮತ್ತು ಶಾಸಕರ ಜೊತೆ ಮಾತ್ರ ಸುರ್ಜೇವಾಲಾ ಮಾತುಕತೆ ನಡೆಸಿದರು: ಸಚಿವ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
2023ರ ಕರ್ನಾಟಕ ಚುನಾವಣೆಯಲ್ಲಿ ಎಲ್ಲ ಸರಿಯಾಗಿತ್ತಾ? ಪ್ರಲ್ಹಾದ್ ಜೋಶಿ ಲೇವಡಿ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ
ಮಲ್ಲೇಶ್ವರಂ 11ನೇ ಮುಖ್ಯರಸ್ತೆಗೆ ಸರೋಜಾ ದೇವಿ ಹೆಸರು: ಶಾಸಕ ಅಶ್ವತ್ಥನಾರಾಯಣ