AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Whatsapp Third Tick: ವಾಟ್ಸ್​ಆ್ಯಪ್​ನಲ್ಲಿ ಬರಲಿದೆ ಮೂರನೇ ಬ್ಲೂ ಟಿಕ್?: ಶಾಕ್ ಆಗುವ ಮುನ್ನ ಈ ಸ್ಟೋರಿ ಓದಿ

Whatsapp Blue Tick: ವಾಟ್ಸ್​ಆ್ಯಪ್ ಕೆಲವೇ ದಿನಗಳಲ್ಲಿ ತನ್ನ ಬಳಕೆದಾರರಿಗೆ ಮೂರನೇ ಬ್ಲೂ ಟಿಕ್ ಕಾಣಿಸುವಂತಹ ಆಯ್ಕೆ ನೀಡಲಿದೆ. ಯಾರಾದರು ನಿಮ್ಮ ಮೆಸೇಜ್ ಅನ್ನು ಸ್ಕ್ರೀನ್ ಶಾಟ್ ತೆಗೆದರೆ ಈ ಮೂರನೇ ಟಿಕ್ ಕಾಣಿಸಲಿದೆ ಎಂದು ವರದಿಯಾಗಿತ್ತು. ಈ ಸುದ್ದಿಯ ಸತ್ಯಾಂಶ ಹೊರಬಿದ್ದಿದೆ.

Whatsapp Third Tick: ವಾಟ್ಸ್​ಆ್ಯಪ್​ನಲ್ಲಿ ಬರಲಿದೆ ಮೂರನೇ ಬ್ಲೂ ಟಿಕ್?: ಶಾಕ್ ಆಗುವ ಮುನ್ನ ಈ ಸ್ಟೋರಿ ಓದಿ
whatsapp third tick
TV9 Web
| Edited By: |

Updated on: Dec 30, 2021 | 12:36 PM

Share

ಮೆಟಾ (Meta) ಒಡೆತನದ ಪ್ರಸಿದ್ಧ ಇನ್‌ಸ್ಟಂಟ್ ಮೆಸೆಜ್ ಆ್ಯಪ್‌ ವಾಟ್ಸ್​ಆ್ಯಪ್​ (WhatsApp) ಹಲವು ಉಪಯುಕ್ತ ಫೀಚರ್​​ಗಳ ಮೂಲಕ ಬಳಕೆದಾರರಿಗೆ ಆಪ್ತವಾಗಿದೆ. ಇದರೊಂದಿಗೆ ಬಳಕೆದಾರರ ಖಾಸಗಿ ಮಾಹಿತಿ ಸುರಕ್ಷತೆಗೂ ಹೆಚ್ಚಿನ ಒತ್ತು ನೀಡುತ್ತಿದೆ. ವಾಟ್ಸ್​ಆ್ಯಪ್​​ 2014 ರಲ್ಲಿ ಬ್ಲೂ ಟಿಕ್ಸ್ (WhatsApp Blue Tick) ಎಂಬ ಫೀಚರ್‌ ಅನ್ನು ಬಳಕೆದಾರರಿಗೆ ಪರಿಚಿಯಿಸಿತ್ತು. ಈ ವೈಶಿಷ್ಟ್ಯ ಸ್ವೀಕರಿಸುವವರು ಸಂದೇಶ ಓದಿದ್ದಾರೋ ಇಲ್ಲವೋ ಎಂಬುದನ್ನು ಕಳುಹಿಸಿದವರೆಗೆ ತಿಳಿಯಲು ಅವಕಾಶ ಮಾಡಿಕೊಟ್ಟಿತು. ಈ ಫೀಚರ್‌ ಪ್ರಾರಂಭವಾದ ನಂತರ, ಸಿಂಗಲ್ ಟಿಕ್ ಎಂದರೆ ಸಂದೇಶ ಕಳುಹಿಸಲಾಗಿದೆ, ಡಬಲ್ ಟಿಕ್ ಎಂದರೆ ಸಂದೇಶ ಸ್ವೀಕರಿಸಲಾಗಿದೆ. ಮತ್ತು ಎರಡು ನೀಲಿ ಟಿಕ್ ಬಂದರೆ ರಿಸೀವರ್ ಸಂದೇಶ ಓದಿದ್ದಾನೆ ಎಂಬುದು ತಿಳಿಸುವುದಾಗಿದೆ. ಈ ಆಯ್ಕೆಯಲ್ಲಿ ಮುಂದುವರೆದ ಭಾಗವಾಗಿ ವಾಟ್ಸ್​ಆ್ಯಪ್​​ ತನ್ನ ಮುಂದಿನ ಅಪ್ಡೇಟ್​ನಲ್ಲಿ ಮೂರನೇ ಬ್ಲೂ ಟಿಕ್ (WhatsApp Third Tick) ಆಯ್ಕೆ ನೀಡಲಿದೆ ಎಂಬ ಸುದ್ದಿ ಎರಡು ದಿನಗಳ ಹಿಂದೆ ಪ್ರಕಟವಾಗಿದೆ.

ಹೌದು, ವಾಟ್ಸ್​ಆ್ಯಪ್ ಕೆಲವೇ ದಿನಗಳಲ್ಲಿ ತನ್ನ ಬಳಕೆದಾರರಿಗೆ ಮೂರನೇ ಬ್ಲೂ ಟಿಕ್ ಕಾಣಿಸುವಂತಹ ಆಯ್ಕೆ ನೀಡಲಿದೆ. ಯಾರಾದರು ನಿಮ್ಮ ಮೆಸೇಜ್ ಅನ್ನು ಸ್ಕ್ರೀನ್ ಶಾಟ್ ತೆಗೆದರೆ ಈ ಮೂರನೇ ಟಿಕ್ ಕಾಣಿಸಲಿದೆ. ಸದ್ಯಕ್ಕೆ ಇದು ಪರೀಕ್ಷಾ ಹಂತದಲ್ಲಿದೆ ಎಂದು ವರದಿಯಾಗಿತ್ತು. ಆದರೆ, ಇದು ಸುಳ್ಳು ಸುದ್ದಿಯೆಂದು ತಿಳಿದುಬಂದಿದೆ.

Wabetainfo ತನ್ನ ಟ್ವಿಟ್ಟರ್ ಖಾತೆಯಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, “ಸ್ಕ್ರೀನ್ ಶಾಟ್ ತೆಗೆದರೆ ಅದನ್ನು ಸೂಚಿಸುವ ಮೂರನೇ ಬ್ಲೂ ಟಿಕ್ ಫೀಚರ್ ಅನ್ನು ವಾಟ್ಸ್​ಆ್ಯಪ್​ ಅಭಿವೃದ್ದಿ ಪಡಿಸುತ್ತಿಲ್ಲ. ಇದು ಫೇಕ್ ನ್ಯೂಸ್” ಎಂದು ಹೇಳಿದೆ. ವಾಟ್ಸ್​ಆ್ಯಪ್​ ಯಾವುದೇ ಹೊಸ ಫೀಚರ್ ಪರಿಚಯಿಸಿದರೂ ಅಥವಾ ಅಭಿವೃದ್ದಿ ಪಡಿಸುತ್ತಿದ್ದರೂ ಅದರ ಬಗ್ಗೆ ನಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ತಿಳಿಸುತ್ತೇವೆ. ಸುಳ್ಳು ಸುದ್ದಿಯನ್ನು ನಂಬಬೇಡಿ ಎಂದು ಹೇಳಿದೆ.

ಬೇಕಾದಲ್ಲಿ ವಾಟ್ಸ್​ಆ್ಯಪ್​ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಬಹುದು. ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಸೆಟ್ಟಿಂಗ್‌ ವಿಭಾಗದಲ್ಲಿ ಅವಕಾಶ ಇದೆ. ಆದರೆ, ಅದೇ ಹೆಸರಿನಿಂದ ಆಯ್ಕೆ ಒದಗಿಸಿಲ್ಲ. ಬದಲಾಗಿ Read Receipts option ಆಯ್ಕೆ ಇದೆ. ಈ ಆಯ್ಕೆ ಆಫ್ ಮಾಡುವ ಮೂಲಕ ವಾಟ್ಸ್​ಆ್ಯಪ್‌ನಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಬಹುದಾಗಿದೆ.

  • ಮೊದಲು ವಾಟ್ಸ್​ಆ್ಯಪ್​​ ಅಪ್ಲಿಕೇಶನ್ ಗೆ ಭೇಟಿ ನೀಡಿ ಮತ್ತು ನಂತರ ಸೆಟ್ಟಿಂಗ್ಸ್ ವಿಭಾಗವನ್ನು ತೆರೆಯಿರಿ.
  • ನಂತರ, Account/ಖಾತೆ ಗೆ ಹೋಗಿ ಮತ್ತು Privacy/ಗೌಪ್ಯತೆ ಆಯ್ಕೆಯನ್ನು ಸೆಲೆಕ್ಟ್ ಮಾಡಿ.
  • ತದ ನಂತರ Read Receipts ಆಯ್ಕೆಗೆ ಕೆಳಗೆ ಸ್ಕ್ರಾಲ್ ಮಾಡಿ ಮತ್ತು ಚಾಟ್‌ಗಳಲ್ಲಿ ಬ್ಲೂ ಟಿಕ್ ಕಾಣಿಸದಂತೆ ಸೆಟ್ ಮಾಡಲು ಅದನ್ನು ನಿಷ್ಕ್ರಿಯಗೊಳಿಸಿ.

ಈ ಹಂತಗಳನ್ನು ಅನುಸರಿಸುವ ಮೂಲಕ ಬಳಕೆದಾರರು ತಮಗೆ ಯಾವಾಗ ಬೇಕಾದರೂ ಈ ಆಯ್ಕೆಯನ್ನು ಮತ್ತೆ ಸಕ್ರಿಯಗೊಳಿಸಲು ಅವಕಾಶ ಇದೆ. ಈ ಆಯ್ಕೆಯನ್ನು ಸಕ್ರಿಯ ಮಾಡಿದರೇ ನೀವು ಕಳುಹಿಸಿದ ಮೆಸೆಜ್‌ಗಳು ಇತರರು ಓದಿದಾಗ ಬ್ಲೂ ಟಿಕ್ ನೋಡಲು ನಿಮಗೆ ಸಾಧ್ಯವಾಗುವುದಿಲ್ಲ.

Xiaomi 12 series: ಹೊಸ ವರ್ಷದ ಮೊದಲ ಫೋನ್ ಬಿಡುಗಡೆ: ಶವೋಮಿ 12, ಶವೋಮಿ 12 ಪ್ರೊ ಸ್ಮಾರ್ಟ್​ಫೋನ್ ಅನಾವರಣ

Reliance Jio: ಶಾಕಿಂಗ್: 426 ಮಿಲಿಯನ್ ಗ್ರಾಹಕರಿಗೆ ನೋಟಿಸ್ ಕಳುಹಿಸಿದ ಜಿಯೋ: ನಿಮ್ಮ ಇನ್​ಬಾಕ್ಸ್ ಚೆಕ್ ಮಾಡಿ

(WhatsApp will soon introduce a third tick this news is completely false whatsapp fake news)

Follow Us
TV9 Web
TV9 Web

TV9 Kannada

Read More
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ಮಂಗಳೂರಿನ ಎಂಆರ್‌ಪಿಎಲ್‌ನಲ್ಲಿ ಸ್ಫೋಟ: ಮುಗಿಲೆತ್ತರಕ್ಕೆ ಆವರಿಸಿದ ಹೊಗೆ
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ತುಮಕೂರಿನಲ್ಲಿ ಮಳೆಯ ಅಬ್ಬರ; ಬಸ್​ ನಿಲ್ದಾಣ, ಶಾಲಾ ಆವರಣ ಜಲಾವೃತ!
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಒಗ್ಗಟ್ಟು ಒಡೆಯುವ ಆಟಗಾರರೇ ಸೌಂದರ್ಯಾ ಮತ್ತು ಕಾವ್ಯಾ? ವಿಡಿಯೋ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಸೌಜನ್ಯ ಪ್ರಕರಣ ಮರು ತನಿಖೆ: SITಯಿಂದ ಕೈಬಿಡುವಂತೆ ಸರ್ಕಾರಕ್ಕೆ AASP ಪತ್ರ
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಚಾಮರಾಜನಗರದಲ್ಲಿ ತಡರಾತ್ರಿ ಸುರಿದ ಭಾರಿ ಮಳೆಗೆ ಭಾಗಶಃ ಕೊಚ್ಚಿ ಹೋದ ಸೇತುವೆ!
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಭೂಸುಧಾರಣಾ ಕಾಯ್ದೆ ತಿದ್ದುಪಡಿ ವಾಪಸ್​ಗೆ ಆಗ್ರಹಿಸಿ ರಾಹುಲ್​ಗೆ ಪತ್ರ
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಆಟೋದಲ್ಲಿ ಸೋಮನಾಥಪುರ ದೇವಾಲಯಕ್ಕೆ ಬಂದ ರಜನಿಕಾಂತ್
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ಪೆಟ್ರೋಲ್ ಬಂಕ್‌ನಲ್ಲಿ ನಿಲ್ಲಿಸಿದ್ದ ಖಾಸಗಿ ಬಸ್ ಕಳವು
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ನಕಲಿ ಔಷಧ ದಂಧೆಯ ಮತ್ತೊಬ್ಬ ಆರೋಪಿ ಬಾಲಸುಬ್ರಮಣಿಯನ್ ಚೆನ್ನೈನಲ್ಲಿ ಬಂಧನ
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?
ಟಾಸ್ಕ್​ ವಿಷಯಕ್ಕೆ ತಮ್ಮ ತಂಡದ ವೈರತ್ವ ಕಟ್ಟಿಕೊಂಡ ಗಾನವಿ; ಸುಸ್ತು?