Reliance Jio: ಶಾಕಿಂಗ್: 426 ಮಿಲಿಯನ್ ಗ್ರಾಹಕರಿಗೆ ನೋಟಿಸ್ ಕಳುಹಿಸಿದ ಜಿಯೋ: ನಿಮ್ಮ ಇನ್​ಬಾಕ್ಸ್ ಚೆಕ್ ಮಾಡಿ

e-KYC Scams: ರಿಲಯನ್ಸ್ ಜಿಯೋ ಕೂಡ ತನ್ನ ಗ್ರಾಹಕರಿಗೆ ಇ-ಕೆವೈಸಿ ಹಗರಣಗಳ ಬಗ್ಗೆ ಎಚ್ಚರಿಕೆ ನೀಡಿದೆ. ತನ್ನ 426 ಮಿಲಿಯನ್ ಗ್ರಾಹಕರಿಗೆ ನೋಟಿಸ್ ನೀಡಿದೆ. ಸೈಬರ್ ವಂಚನೆ ತಪ್ಪಿಸಲು ಏನು ಮಾಡಬಾರದು ಅನ್ನೋದರ ಬಗ್ಗೆ ಜಿಯೋ ಬಳಕೆದಾರರಿಗೆ ಮಾಹಿತಿ ನೀಡಿದೆ.

Reliance Jio: ಶಾಕಿಂಗ್: 426 ಮಿಲಿಯನ್ ಗ್ರಾಹಕರಿಗೆ ನೋಟಿಸ್ ಕಳುಹಿಸಿದ ಜಿಯೋ: ನಿಮ್ಮ ಇನ್​ಬಾಕ್ಸ್ ಚೆಕ್ ಮಾಡಿ
Reliance Jio
Follow us
TV9 Web
| Updated By: Vinay Bhat

Updated on: Dec 30, 2021 | 11:19 AM

ಇಂದಿನ ಡಿಜಿಟಲ್ ಯುಗದಲ್ಲಿ ಎಲ್ಲವೂ ಆನ್ ಲೈನ್​ನಲ್ಲಿ (Online) ನಡೆಯುತ್ತಿರುವುದು ಹ್ಯಾಕ್​ರ್​ ​ಗಳಿಗೆ (Hack) ಅತ್ಯಂತ ಸುಲಭವಾಗಿದೆ. ಒಂದಲ್ಲ ಒಂದು ರೀತಿಯಲ್ಲಿ ಹ್ಯಾಕರ್ ಗಳು ಬ್ಯಾಂಕ್, ಸೋಶಿಯಲ್ ಮೀಡಿಯಾ (Social Media) ಖಾತೆಯನ್ನು ಹ್ಯಾಕ್ ಮಾಡುತ್ತಾರೆ. ಹಾಗಂತ ನಿಮ್ಮ ಒಟಿಪಿ (OTP) ಸೇಫ್ ಎಂದು ಕೊಂಡರೆ ಅದು ತಪ್ಪು. ಈಗ ನಿಮ್ಮ ಎಸ್​ಎಂಎಸ್, ಒಟಿಪಿ ಕೂಡ ಸೇಫ್ ಅಲ್ಲ. ಎಷ್ಟೇ ಎಚ್ಚರಿಕೆ ನೀಡಿದರೂ ಜನರು ಮತ್ತದೆ ತಪ್ಪು ಮಾಡುತ್ತಿದ್ದಾರೆ. ಒಂದು ವರದಿಯ ಪ್ರಕಾರ, ಹ್ಯಾಕರ್​ಗಳು ಈಗ ನಿಮ್ಮ ವೈಯಕ್ತಿಕ ಡೇಟಾವನ್ನು ಕದಿಯಲು ಹೊಸ ಮಾರ್ಗಗಳನ್ನು ಕಂಡುಕೊಂಡಿದ್ದಾರೆ ಮತ್ತು ಅವರು ನಿಮ್ಮ ಸ್ಮಾರ್ಟ್​ಫೋನ್​ಗಳಿಂದ (Smartphone) ಡೇಟಾವನ್ನು ದೋಚಲು ಎಸ್​ಎಂಎಸ್ ಅನ್ನು ಬಳಸುತ್ತಿದ್ದಾರೆ. ಇದೇ ಕಾರಣಕ್ಕೆ ಎಲ್ಲ ಟೆಲಿಕಾಂ ಕಂಪನಿಗಳು, ಬ್ಯಾಂಕ್​ಗಳು ತಮ್ಮ ಗ್ರಾಹಕರಿಗೆ ಎಚ್ಚರಿಕೆ ಸಂದೇಶಗಳನ್ನು ರವಾನಿಸುತ್ತಿದೆ.

ಸದ್ಯ ರಿಲಯನ್ಸ್ ಜಿಯೋ ಕೂಡ ತನ್ನ ಗ್ರಾಹಕರಿಗೆ ಇ-ಕೆವೈಸಿ ಹಗರಣಗಳ ಬಗ್ಗೆ ಎಚ್ಚರಿಕೆ ನೀಡಿದೆ. ಹೆಚ್ಚುತ್ತಿರುವ ಸೈಬರ್ ವಂಚನೆಯ ಘಟನೆಗಳ ವಿರುದ್ಧ ಜಿಯೋ ತನ್ನ ಗ್ರಾಹಕರಿಗೆ ಪ್ರಕಟನೆಯಲ್ಲಿ ಎಚ್ಚರಿಕೆ ನೀಡಿದೆ. ಅಮಾಯಕ ಗ್ರಾಹಕರನ್ನು ವಂಚಿಸಲು ವಂಚಕರ ಜಾಲ ಸಕ್ರಿಯವಾಗಿರುವ ಬಗ್ಗೆ ಕಂಪನಿ ತಿಳಿಸಿದೆ. ಈ ವರ್ಷದ ಆರಂಭದಲ್ಲಿ ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್‌ನ ಸಿಇಒಗಳು ತಮ್ಮ ಗ್ರಾಹಕರಿಗೆ ಇದೇ ರೀತಿಯ ಎಚ್ಚರಿಕೆ ಸೂಚನೆಗಳನ್ನು ನೀಡಿದ್ದರು. ಇದೀಗ ರಿಲಯನ್ಸ್ ಜಿಯೋ ಕೂಡ ತನ್ನ 426 ಮಿಲಿಯನ್ ಗ್ರಾಹಕರಿಗೆ ನೋಟಿಸ್ ನೀಡಿದೆ. ಸೈಬರ್ ವಂಚನೆ ತಪ್ಪಿಸಲು ಏನು ಮಾಡಬಾರದು ಅನ್ನೋದರ ಬಗ್ಗೆ ಜಿಯೋ ಬಳಕೆದಾರರಿಗೆ ಮಾಹಿತಿ ನೀಡಿದೆ.

ಜಿಯೋ ತನ್ನ ಪ್ರಕಟನೆಯಲ್ಲಿ ಗ್ರಾಹಕರು ತಮ್ಮ ಕೆವೈಸಿ ಅಥವಾ ಆಧಾರ್ (KYC/Aadhaar) ವಿವರಗಳನ್ನು ನವೀಕರಿಸಲು ಯಾವುದೇ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡದಂತೆ ಎಚ್ಚರಿಕೆ ನೀಡಿದೆ. ಇಂತಹ ಚಟುವಟಿಕೆಗಳಿಗೆ ಯಾವುದೇ ಥರ್ಡ್ ಪಾರ್ಟಿ ಆ್ಯಪ್ ಅನ್ನು ಡೌನ್‌ಲೋಡ್ ಮಾಡುವಂತೆ ಜಿಯೋ ಎಂದಿಗೂ ನಿಮ್ಮನ್ನು ಕೇಳುವುದಿಲ್ಲವೆಂದು ತಿಳಿಸಿದೆ.

ದಯವಿಟ್ಟು ಇಂತಹ ಎಸ್​ಎಂಎಸ್ ಅಥವಾ ಕರೆಗಳು ಹಣಕಾಸಿನ ನಷ್ಟಕ್ಕೆ ಕಾರಣವಾಗಬಹುದು. ರಿಮೋಟ್ ಆಕ್ಸೆಸ್ ಅಪ್ಲಿಕೇಶನ್ ಅನ್ನು ಡೌನ್‌ಲೋಡ್ ಮಾಡಬೇಡಿ, ಏಕೆಂದರೆ ವಂಚಕರು ನಿಮ್ಮ ಎಲ್ಲಾ ಫೋನ್ ಮಾಹಿತಿಯನ್ನು ಕದ್ದು ವಂಚನೆ ಎಸಗುತ್ತಾರೆ ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚನೆಗಳಿಗೆ ಸಂಬಂಧಿಸಿದ ಕೆಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಇದರಲ್ಲಿ ವಂಚಕರು ಜಿಯೋ ಪ್ರತಿನಿಧಿಗಳಂತೆ ವರ್ತಿಸಿ ಮುಖ್ಯವಾಗಿ ಬಾಕಿ ಉಳಿದಿರುವ ಇ-ಕೆವೈಸಿ (eKYC-Know Yourself) ಗ್ರಾಹಕರ ಆಧಾರ್, ಬ್ಯಾಂಕ್ ಖಾತೆಗಳು ಇತ್ಯಾದಿ ವಿವರಗಳ ನೆಪದಲ್ಲಿ OTP ಇತ್ಯಾದಿಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಪಡೆಯಲು ಒತ್ತಾಯಿಸುತ್ತಾರೆ. ಮಾಹಿತಿ ಪಡೆದ ಬಳಿಕ ಅವರು ನಿಮಗೆ ಗೊತ್ತಾಗದಂತೆ ವಂಚಿಸುತ್ತಾರೆ. ಇದರಿಂದ ಇಂಥಹ ಯಾವುದೇ ಆಮೀಷಕ್ಕೆ ಒಳಗಾಗಬೇಡಿ ಎಂದು ಎಚ್ಚರಿಕೆಯ ಸಂದೇಶ ರವಾನಿಸಿದೆ.

ಇ-ಕೆವೈಸಿ ಪೂರ್ಣಗೊಳಿಸಲು ಕೇಳುವ ಯಾವುದೇ ಎಸ್‌ಎಂಎಸ್/ಕರೆಯನ್ನು ನಂಬಬೇಡಿ ಅಥವಾ ಇ-ಕೆವೈಸಿ ಪೂರ್ಣಗೊಳಿಸದಿದ್ದರೆ ನಿಮ್ಮ ಮೊಬೈಲ್ ಸೇವೆಗಳನ್ನು ಅಮಾನತುಗೊಳಿಸಲಾಗುವುದು ಎನ್ನುವ ಮೋಸದ ಕರೆಗಳಿಗೆ ಬಲಿಯಾಗಬೇಡಿ ಎಂದು ಜಿಯೋ ಹೇಳಿದೆ. ಗ್ರಾಹಕರು ಜಿಯೋ ಪ್ರತಿನಿಧಿ ಎಂದು ಹೇಳಿಕೊಂಡು ಕರೆ ಮಾಡುವವರು ಕಳುಹಿಸುವ ಸಂದೇಶಗಳಲ್ಲಿ ಸ್ವೀಕರಿಸಿದ ಯಾವುದೇ ಲಿಂಕ್‌ಗಳನ್ನು ಕ್ಲಿಕ್ ಮಾಡಬೇಡಿ. ಇದು ಕೂಡ ಒಂದು ರೀತಿಯ ಸೈಬರ್ ಕ್ರೈಮ್. ಹೀಗಾಗಿ ಗ್ರಾಹಕರು ಯಾವುದೇ ಮೋಸದ ಕರೆಗಳಿಗೆ ಬಲಿಯಾಗಬಾರದು. ಯಾವುದೇ ಕಾರಣಕ್ಕೂ ಮುಖ್ಯವಾಗಿರುವ ಮಾಹಿತಿಯನ್ನು ನೀಡಬಾರದು ಎಂದು ಜಿಯೋ ತನ್ನ ಗ್ರಾಹಕರಿಗೆ ತಿಳಿಸಿದೆ.

Android 13: ನಿಮ್ಮ Android ಫೋನ್ ಸಂಪೂರ್ಣವಾಗಿ ಬದಲಾಗಲಿದೆ..!

(Reliance Jio has warned its customers about e-KYC scams sends notice to 426 million customers)

ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಹಾರ್ದಿಕ್ ಪಾಂಡ್ಯ ತೂಫಾನ್​ಗೆ ಎದುರಾಳಿ ತಂಡ ತತ್ತರ
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಇನ್ನು ಮುಂದೆ ಸುಮ್ಮನಿರಲ್ಲ: ಚೈತ್ರಾ-ಮೋಕ್ಷಿತಾಗೆ ತ್ರಿವಿಕ್ರಮ್ ಸವಾಲು
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಯಾವ ದೋಷಕ್ಕೆ ನವಗ್ರಹವನ್ನು ಹೇಗೆ ಪ್ರದಕ್ಷಿಣೆ ಹಾಕಬೇಕು? ಇಲ್ಲಿದೆ ನೋಡಿ
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ಈ ರಾಶಿಯವರಿಗಿಂದು 6 ಗ್ರಹಗಳ ಶುಭ ಫಲ! ಉಳಿದ ರಾಶಿಗಳ ಫಲಾಫಲವೇನು?
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ನವೆಂಬರ್ ಕೊನೆಯ ವಾರ ಹೇಗಿರಲಿದೆ ನಿಮ್ಮ ರಾಶಿ ಭವಿಷ್ಯ? ಇಲ್ಲಿದೆ ನೋಡಿ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ