Sign In

By signing in or creating an account, you agree with Associated Broadcasting Company's Terms & Conditions and Privacy Policy.

Android 13: ನಿಮ್ಮ Android ಫೋನ್ ಸಂಪೂರ್ಣವಾಗಿ ಬದಲಾಗಲಿದೆ..!

Android 13 details: ಯಾವುದೇ ನಿರ್ದಿಷ್ಟ ಅಪ್ಲಿಕೇಶನ್‌ಗೆ ಲಭ್ಯವಿರುವ ಭಾಷೆಯನ್ನು ನೀವು ಆಯ್ಕೆ ಮಾಡಬಹುದು. ಅಂದರೆ ನೀವು ಒಂದು ಅಪ್ಲಿಕೇಶನ್ ಅನ್ನು ಇಂಗ್ಲಿಷ್​ನಲ್ಲಿ ಮತ್ತು ಇನ್ನೊಂದನ್ನು ಕನ್ನಡ ಅಥವಾ ಹಿಂದಿಯಲ್ಲಿ ಬಳಸಬಹುದು.

Android 13: ನಿಮ್ಮ Android ಫೋನ್ ಸಂಪೂರ್ಣವಾಗಿ ಬದಲಾಗಲಿದೆ..!
Android 13
Follow us
TV9 Web
| Updated By: ಝಾಹಿರ್ ಯೂಸುಫ್

Updated on: Dec 29, 2021 | 7:11 PM

ಸ್ಮಾರ್ಟ್​ಫೋನ್​ ಜಗತ್ತಿನಲ್ಲಿ ಆಂಡ್ರಾಯ್ಡ್​ 12 (Android 12) ಇತ್ತೀಚಿನ ಆವೃತ್ತಿ. ಇದೇ ಕಾರಣದಿಂದ ಈ ಅಪ್​ಡೇಟ್​ ಹೆಚ್ಚಿನ ಸ್ಮಾರ್ಟ್‌ಫೋನ್‌ಗಳಲ್ಲಿ ಲಭ್ಯವಿಲ್ಲ. ಬಹುತೇಕ ಮೊಬೈಲ್​ಗಳು Android 11 ಅಥವಾ ಹಿಂದಿನ ಆವೃತ್ತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಆದರೆ ಇದೆಲ್ಲದರ ನಡುವೆಯೇ ಗೂಗಲ್ ಮುಂದಿನ ಆಂಡ್ರಾಯ್ಡ್ ಆವೃತ್ತಿಯನ್ನು ಘೋಷಿಸಿದೆ. ಹೊಸ ಆಂಡ್ರಾಯ್ಡ್ 13 (Android 13) ಗೆ ‘ತಿರಾಮಿಸು’ ಎಂದು ಹೆಸರಿಡುವ ನಿರೀಕ್ಷೆಯಿದೆ. ವರದಿಯ ಪ್ರಕಾರ, ಹೊಸ ಆಂಡ್ರಾಯ್ಡ್​ ಆವೃತ್ತಿಯು ಮುಂದಿನ ವರ್ಷದ ಫೆಬ್ರವರಿಯಲ್ಲಿ ಫಸ್ಟ್ ರೌಂಡ್ ಡೆವಲಪರ್ ಟೆಸ್ಟ್​ಗೆ ಲಭ್ಯವಿರಲಿದೆ. ಆದರೆ ಇದಕ್ಕೂ ಮುನ್ನ ಈ ಹೊಸ ಆವೃತ್ತಿಯ ಆಂಡ್ರಾಯ್ಡ್‌ನ ಸಂಭವನೀಯ ವೈಶಿಷ್ಟ್ಯಗಳು ಸೋರಿಕೆಯಾಗಿದೆ.

ಹೊಸ ಆಂಡ್ರಾಯ್ಡ್‌ನ ಒಟ್ಟು ಮೂರು ಫೀಚರ್​ಗಳ ಬಗ್ಗೆ ಮಾಹಿತಿ ಸೋರಿಕೆಯಾಗಿದ್ದು, ಅದರಂತೆ ಈ ಫೀಚರ್​ಗಳು ಸ್ಮಾರ್ಟ್‌ಫೋನ್‌ನ ಒಟ್ಟಾರೆ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲಿದೆ. ಈ ಹೊಸ ಫೀಚರ್​ಗಳಾವುವು ನೋಡೋಣ…

ನೋಟಿಫಿಕೇಷನ್ ಸಮಸ್ಯೆಗೆ ಪರಿಹಾರ: Android 13 ಕಿರಿ ಕಿರಿ ಎನಿಸುವ ನೋಟಿಫಿಕೇಶನ್​ಗಳಿಂದ ಪರಿಹಾರ ನೀಡಲಿದೆ. ಇದಕ್ಕಾಗಿ ಸೆಟ್ಟಿಂಗ್​ನಲ್ಲಿ ಕೆಲ ಆಯ್ಕೆಗಳನ್ನು ನೀಡಲಾಗುತ್ತಿದ್ದು, ಅದನ್ನು ಬ್ಲಾಕ್ ಮಾಡುವ ಮೂಲಕ ಮೊಬೈಲ್​ಗೆ ಬರುವ ಆ್ಯಪ್​ ನೋಟಿಫಿಕೇಶನ್ ಹಾಗೂ ಮೊಬೈಲ್​ ಕಂಪೆನಿಯ ನೋಟಿಫಿಕೇಶನ್​ಗಳನ್ನು ನಿಯಂತ್ರಿಸಬಹುದು.

ಭಾಷೆಯ ಆಯ್ಕೆ: ಹೊಸ ಆಂಡ್ರಾಯ್ಡ್ ಆವೃತ್ತಿಯಲ್ಲಿ, ನಿಮ್ಮ ಆಯ್ಕೆಯ ಭಾಷೆಯಲ್ಲಿ ಯಾವುದೇ ಅಪ್ಲಿಕೇಶನ್ ಅನ್ನು ಬಳಬಹುದು. ಅಂದರೆ ಬಹುಭಾಷಾ ಬಳಕೆದಾರರು ಈಗ ಆಂಡ್ರಾಯ್ಡ್​ ಅನ್ನು ಬಳಸುವ ಅಗತ್ಯವನ್ನು ಗೂಗಲ್ ಮನಗಂಡಿದೆ. ಅದರಂತೆ ಹೊಸ ಆಂಡ್ರಾಯ್ಡ್‌ನ ಸಿಸ್ಟಮ್ ಸೆಟ್ಟಿಂಗ್‌ನಲ್ಲಿ ‘ಆ್ಯಪ್ ಲಾಂಗ್ವೇಜ್’ ಆಯ್ಕೆಯನ್ನು ನೀಡಿದೆ. ಯಾವುದೇ ನಿರ್ದಿಷ್ಟ ಅಪ್ಲಿಕೇಶನ್‌ಗೆ ಲಭ್ಯವಿರುವ ಭಾಷೆಯನ್ನು ನೀವು ಆಯ್ಕೆ ಮಾಡಬಹುದು. ಅಂದರೆ ನೀವು ಒಂದು ಅಪ್ಲಿಕೇಶನ್ ಅನ್ನು ಇಂಗ್ಲಿಷ್​ನಲ್ಲಿ ಮತ್ತು ಇನ್ನೊಂದನ್ನು ಕನ್ನಡ ಅಥವಾ ಹಿಂದಿಯಲ್ಲಿ ಬಳಸಬಹುದು.

ಲಾಕ್​​ ಸ್ಕ್ರೀನ್ ಆಯ್ಕೆ: ಹೊಸ ಆಂಡ್ರಾಯ್ಡ್ ಬಳಕೆದಾರರು ಈಗ ತಮ್ಮ ಲಾಕ್ ಸ್ಕ್ರೀನ್‌ನ ಗಡಿಯಾರದ ವಿನ್ಯಾಸವನ್ನು ಟಾಗಲ್ ಮಾಡಬಹುದು. ಅಂದರೆ ಲಾಕ್​ ಸ್ಕ್ರೀನ್​ನಲ್ಲಿ ಕಾಣಿಸುವ ಗಡಿಯಾರವನ್ನು ಸಣ್ಣದಾಗಿ ಅಥವಾ ದೊಡ್ಡದಾಗಿ ಸೆಟ್ ಮಾಡಬಹುದು. ಹಾಗೆಯೇ ಸ್ಕ್ರೀನ್​ನ ಸೆಂಟರ್​ನಲ್ಲಿ ಅಥವಾ ಇತರೆ ಮೂಲೆಗಳ ಸ್ಥಳದಲ್ಲಿ ಗಡಿಯಾರನ್ನು ಸೆಟ್ ಮಾಡಿಕೊಳ್ಳಬಹುದು.

ಇದನ್ನೂ ಓದಿ:  ಭಾರತವನ್ನು ಗೇಲಿ ಮಾಡಿದ ಇಂಗ್ಲೆಂಡ್ ಕ್ರಿಕೆಟಿಗನ ಕಾಲೆಳೆದ ಆಸ್ಟ್ರೇಲಿಯಾ ಪತ್ರಕರ್ತೆ..!

ಇದನ್ನೂ ಓದಿ: IPL 2022: RCB ಮನೀಷ್ ಪಾಂಡೆಯನ್ನು ಯಾಕೆ ಖರೀದಿಸಬೇಕು ಅಂದರೆ…

ಇದನ್ನೂ ಓದಿ: IPL 2022: ಇವರೇ RCB ತಂಡದ ಮುಂದಿನ ಕ್ಯಾಪ್ಟನ್ ಎಂದ ಮಾಜಿ ಆರ್​ಸಿಬಿ ನಾಯಕ

(Android 13 details leaked)

ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಯತ್ನಾಳ್ ಉಚ್ಚಾಟನೆಯಿಂದ ಉತ್ತರ ಕರ್ನಾಟಕದಲ್ಲಿ ಕಾಂಗ್ರೆಸ್​ಗೆ ಲಾಭ: ತಂಗಡಿಗಿ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಪಾಕಿಸ್ತಾನದಲ್ಲಿ ಉಗ್ರ ಹಫೀಜ್ ಸಯೀದ್ ಆಪ್ತ ಅಬ್ದುಲ್ ರೆಹಮಾನ್ ಹತ್ಯೆ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ಯತ್ನಾಳ್​ ವಾಪಸ್ಸು ಸೇರಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡಲಾಗಲ್ಲ: ರಾಜುಗೌಡ
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ನನ್ನ ಕೈಲಾಗಿದ್ದು ಮಾಡಿದ್ದೇನೆ, ನೀವೂ ಸಹಾಯ ಮಾಡಿ; ಕಿಚ್ಚ ಸುದೀಪ್
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬಿಜೆಪಿ ನಾಯಕರ ವಿರುದ್ಧ ಯತ್ನಾಳ್ ನಾಲಗೆ ಹರಿಬಿಟ್ಟರೆ ಸರಿಯಿರಲ್ಲ: ನಡಹಳ್ಳಿ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಬೇಸಿಗೆಯಲ್ಲೂ ಧುಮ್ಮಿಕ್ಕಿ ಹರಿಯುತ್ತಿದೆ ಗೋಕಾಕ್ ಜಲಪಾತ: ವಿಡಿಯೋ ಇಲ್ಲಿದೆ
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ಯತ್ನಾಳ್ ಒಂದು ಸಮುದಾಯದ ಬಗ್ಗೆ ಕೆಟ್ಟದಾಗಿ ಮಾತಾಡಿದ್ದಾರೆ: ಎಂಬಿ ಪಾಟೀಲ್
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ರಾಜಣ್ಣ ಪುತ್ರನ ಹತ್ಯೆ ಸಂಚಿನ ಬಗ್ಗೆ ಮಹಿಳೆ ವಿವರಣೆಯ ಸ್ಫೋಟಕ ಆಡಿಯೋ ಬಹಿರಂಗ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಹೊಸ ಪಕ್ಷ ಕಟ್ಟಲ್ಲ ಎಂದಿದ್ದ ಬಸನಗೌಡ ಯತ್ನಾಳ್ ಗೊಂದಲದಲ್ಲಿರೋದು ಸ್ಪಷ್ಟ
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?
ಕಚ್ಚಲೆಂದು ಬಂದ ಹಾವು, ಅದೇ ವೇಗದಲ್ಲಿ ವಾಪಸ್ ಹೋಗಿದ್ದೇಕೆ?