Xiaomi 12 series: ಹೊಸ ವರ್ಷದ ಮೊದಲ ಫೋನ್ ಬಿಡುಗಡೆ: ಶವೋಮಿ 12, ಶವೋಮಿ 12 ಪ್ರೊ ಸ್ಮಾರ್ಟ್​ಫೋನ್ ಅನಾವರಣ

Xiaomi 12, Xiaomi 12 Pro, Xiaomi 12X: ಶವೋಮಿ 12 (Xiaomi 12) ಶವೋಮಿ 12 ಪ್ರೊ (Xiaomi 12 Pro) ಮತ್ತು ಶವೋಮಿ 12ಎಕ್ಸ್ (Xiaomi 12X) ಸ್ಮಾರ್ಟ್​ಫೋನ್ 2022ರ ಮೊದಲ ಎರಡು ಪ್ರಮುಖ ಸ್ಮಾರ್ಟ್‌ಫೋನ್‌ಗಳಾಗಿ ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಮೊದಲೆರಡೂ ಫೋನ್‌ಗಳು ಅತ್ಯಂತ ಬಲಿಷ್ಠವಾದ ಹೊಚ್ಚ ಹೊಸ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಸಾಮರ್ಥ್ಯ ಪಡೆದುಕೊಂಡಿವೆ.

Xiaomi 12 series: ಹೊಸ ವರ್ಷದ ಮೊದಲ ಫೋನ್ ಬಿಡುಗಡೆ: ಶವೋಮಿ 12, ಶವೋಮಿ 12 ಪ್ರೊ ಸ್ಮಾರ್ಟ್​ಫೋನ್ ಅನಾವರಣ
Xiaomi 12 and Xiaomi 12 Pro
Follow us
TV9 Web
| Updated By: Vinay Bhat

Updated on: Dec 30, 2021 | 11:59 AM

ಸ್ಮಾರ್ಟ್​ಫೋನ್ ಮಾರುಕಟ್ಟೆಯನ್ನು ಆಳುತ್ತಿರುವ ನಂಬರ್ ಒನ್ ಮೊಬೈಲ್ ಬ್ರ್ಯಾಂಡ್ ಶವೋಮಿ ಸಂಸ್ಥೆ ಹೊಸ ವರ್ಷಕ್ಕೆ ಹೊಸ ಮೊಬೈಲ್ ಅನ್ನು ಪರಿಯಿಸಿದೆ. ಸ್ಮಾರ್ಟ್​ಫೋನ್ ಪ್ರಪಂಚಕ್ಕೆ ಬಹುನಿರೀಕ್ಷಿತ ಶವೋಮಿ 12 ಸರಣಿ (Xiaomi 12 Series) ಫೋನ್ ಕಾಲಿಟ್ಟಿದೆ. ಶವೋಮಿ 12 (Xiaomi 12) ಶವೋಮಿ 12 ಪ್ರೊ (Xiaomi 12 Pro) ಮತ್ತು ಶವೋಮಿ 12ಎಕ್ಸ್ (Xiaomi 12X) ಸ್ಮಾರ್ಟ್​ಫೋನ್ 2022ರ ಮೊದಲ ಎರಡು ಪ್ರಮುಖ ಸ್ಮಾರ್ಟ್‌ಫೋನ್‌ಗಳಾಗಿ ಮಾರುಕಟ್ಟೆಗೆ ಪ್ರವೇಶ ಪಡೆದಿದೆ. ಮೊದಲೆರಡೂ ಫೋನ್‌ಗಳು ಅತ್ಯಂತ ಬಲಿಷ್ಠವಾದ ಹೊಚ್ಚ ಹೊಸ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಸಾಮರ್ಥ್ಯವನ್ನು ಪಡೆದುಕೊಂಡಿವೆ. ಬಿಡುಗಡೆಗೂ ಮುನ್ನ ಈ ಫೋನ್ ಪ್ರಿ ಆರ್ಡರ್ ಹೋಗುವುದಕ್ಕೂ ಮುನ್ನ ಬರೋಬ್ಬರಿ 2 ಲಕ್ಷಕ್ಕೂ ಅಧಿಕ ಮಂದಿ ಮುಂಗಡ ಬುಕ್ಕಿಂಗ್ ಆಗಿತ್ತು ಎಂಬುದು ಗಮನಾರ್ಹ. ಈ ಎರಡು ಸ್ಮಾರ್ಟ್‌ಫೋನ್‌ಗಳು ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಒಳಗೊಂಡಿವೆ. ಸದ್ಯಕ್ಕೆ ಇದು ಚೀನಾದಲ್ಲಿ ಅನಾವರಣಗೊಂಡಿದ್ದು ಮುಂದಿನ ತಿಂಗಳು ಭಾರತದಲ್ಲಿ ಬಿಡುಗಡೆ ಆಗುವ ಸಾಧ್ಯತೆ ಇದೆಯಂತೆ.

ಶವೋಮಿ 12 ಸ್ಮಾರ್ಟ್‌ಫೋನ್‌ ಕಂಪನಿಯ ಪ್ರಮುಖ ಕಾಂಪ್ಯಾಕ್ಟ್ ಪ್ಲ್ಯಾಗ್‌ಶಿಪ್‌ ಫೋನ್ ಆಗಿದೆ. ಈ ಸ್ಮಾರ್ಟ್‌ಫೋನ್‌ 1,080×2,400 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.28 ಇಂಚಿನ ಫುಲ್‌ HD+ ಅಮೋಲೆಡ್‌ ಡಿಸ್‌ಪ್ಲೇ ಹೊಂದಿದೆ. ಇದು ಸ್ನಾಪ್‌ಡ್ರಾಗನ್ 8 Gen 1 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್ 12 ಆಧಾರಿತ MIUI 13 ನಲ್ಲಿ ಕಾರ್ಯನಿರ್ವಹಿಸಲಿದೆ.

ಇನ್ನು ಈ ಸ್ಮಾರ್ಟ್‌ಫೋನ್ ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 13 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್‌ ಮತ್ತು ಟೆಲಿಫೋಟೋ ಸೆನ್ಸಾರ್‌ ಹೊಂದಿದೆ. ಇದಲ್ಲದೆ 20 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಜೊತೆಗೆ 4,500mAh ಸಾಮರ್ಥ್ಯದ ಬ್ಯಾಟರಿಯನ್ನು ಹೊಂದಿದ್ದು, 67W ವೇಗದ ಚಾರ್ಜಿಂಗ್ ಬೆಂಬಲಿಸಲಿದೆ. ಇದು 50W ವೈರ್‌ಲೆಸ್ ಚಾರ್ಜಿಂಗ್ ಅನ್ನು ಸಹ ಬೆಂಬಲಿಸುತ್ತದೆ. ಇನ್ನು ಈ ಫೋನ್ Dolby Atmos ಮತ್ತು Dolby Vision ಎರಡನ್ನೂ ಬೆಂಬಲಿಸುತ್ತದೆ.

ಶವೋಮಿ 12 ಪ್ರೊ ಸ್ಮಾರ್ಟ್‌ಫೋನ್‌ 3,200×1,440 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್ ಸಾಮರ್ಥ್ಯದ 6.73 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿರುತ್ತದೆ. ಇದು ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 8 Gen 1 SoC ಪ್ರೊಸೆಸರ್‌ ಬಲವನ್ನು ಪಡೆದಿದ್ದು, ಆಂಡ್ರಾಯ್ಡ್‌ 12 ಅನ್ನು ಆಧರಿಸಿ MIUI 13 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ.

ಟ್ರಿಪಲ್ ರಿಯರ್‌ ಕ್ಯಾಮೆರಾ ಸೆಟಪ್‌ ಅನ್ನು ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 50 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಟೆಲಿಫೋಟೋ ಸೆನ್ಸಾರ್‌ ಮತ್ತು ಮೂರನೇ ಕ್ಯಾಮೆರಾ 50 ಮೆಗಾಪಿಕ್ಸೆಲ್ ಅಲ್ಟ್ರಾ-ವೈಡ್ ಸೆನ್ಸಾರ್‌ ಅನ್ನು ಒಳಗೊಂಡಿದೆ. ಇದಲ್ಲದೆ 32 ಮೆಗಾಪಿಕ್ಸೆಲ್ ಸೆನ್ಸಾರ್‌ ಸಾಮರ್ಥ್ಯದ ಸೆಲ್ಫಿ ಕ್ಯಾಮೆರಾ ಹೊಂದಿದೆ. ಜೊತೆಗೆ 4600 mAh ಸಾಮರ್ಥ್ಯದ ಬ್ಯಾಟರಿಯನ್ನು ಪಡೆದುಕೊಂಡಿದೆ. ಇದು 120W ವೈರ್ಡ್, 50W ವೈರ್‌ಲೆಸ್ ಚಾರ್ಜಿಂಗ್ ಮತ್ತು 10W ರಿವರ್ಸ್ ವೈರ್‌ಲೆಸ್ ಚಾರ್ಜಿಂಗ್‌ಗೆ ಬೆಂಬಲಿಸಲಿದೆ.

ಬೆಲೆ ಎಷ್ಟು?:

ಶವೋಮಿ 12 ಸ್ಮಾರ್ಟ್‌ಫೋನ್‌ 8GB RAM ಮತ್ತು 128GB ಸ್ಟೋರೇಜ್ ಆಯ್ಕೆಗೆ ಯುವಾನ್ 3699, ಅಂದರೆ ಭಾರತದಲ್ಲಿ ಇದರ ಬೆಲೆ ಅಂದಾಜು 43,362 ರೂ. ಎನ್ನಬಹುದು. ಇದಲ್ಲದೆ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕಾಗಿ ಯುವಾನ್ 3999 (ಅಂದಾಜು 46,879ರೂ.) ಬೆಲೆ ಹೊಂದಿದೆ.

ಇನ್ನು ಶವೋಮಿ 12 ಪ್ರೊ 8GB RAM ಮತ್ತು 128GB ಸ್ಟೋರೇಜ್ ರೂಪಾಂತರಕ್ಕಾಗಿ ಯುವಾನ್ 4699 (ಅಂದಾಜು 55,000ರೂ)ಬೆಲೆ ಹೊಂದಿದೆ. ಇದಲ್ಲದೆ 8GB RAM ಮತ್ತು 256GB ಸ್ಟೋರೇಜ್ ರೂಪಾಂತರಕ್ಕಾಗಿ ಯುವಾನ್ 4999 (ಅಂದಾಜು 58,600ರೂ) ಬೆಲೆ ಪಡೆದುಕೊಂಡಿದೆ.

Reliance Jio: ಶಾಕಿಂಗ್: 426 ಮಿಲಿಯನ್ ಗ್ರಾಹಕರಿಗೆ ನೋಟಿಸ್ ಕಳುಹಿಸಿದ ಜಿಯೋ: ನಿಮ್ಮ ಇನ್​ಬಾಕ್ಸ್ ಚೆಕ್ ಮಾಡಿ

(2022 First Smartphone launched Xiaomi 12 Xiaomi 12 Pro and Xiaomi 12X With 120W fast charging Now Official)