Financial Changes: 2022ರ ಜನವರಿಯಿಂದ ಆಗಲಿರುವ 6 ಹಣಕಾಸು ವಿಚಾರದ ಬದಲಾವಣೆಗಳಿವು

Financial Changes: 2022ರ ಜನವರಿಯಿಂದ ಆಗಲಿರುವ 6 ಹಣಕಾಸು ವಿಚಾರದ ಬದಲಾವಣೆಗಳಿವು
ಸಾಂದರ್ಭಿಕ ಚಿತ್ರ

2022ರ ಜನವರಿಯಿಂದ ಜಾರಿಗೆ ಬರುವಂತಹ 6 ಹಣಕಾಸು ಬದಲಾವಣೆಗಳ ಬಗ್ಗೆ ಮಾಹಿತಿ ಇಲ್ಲಿದೆ. ಇದರಿಂದ ನಮ್ಮೆಲ್ಲರ ಆರ್ಥಿಕ ವ್ಯವಹಾರದ ಮೇಲೆ ಪರಿಣಾಮ ಆಗಲಿದೆ.

TV9kannada Web Team

| Edited By: Srinivas Mata

Dec 30, 2021 | 2:34 PM

2022ರ ಹೊಸ ವರ್ಷದೊಂದಿಗೆ ಹೊಸ ಬದಲಾವಣೆಗಳು ಆಗಲಿದ್ದು, ಅವು ನಮ್ಮ ಹಣಕಾಸಿನ ಪರಿಸ್ಥಿತಿ ಮೇಲೆ ಪರಿಣಾಮ ಬೀರುತ್ತವೆ. ಜನವರಿ 1, 2022ರಿಂದ ಜಾರಿಗೆ ಬರಲಿರುವ ಆರು ಬದಲಾವಣೆಗಳ ಮಾಹಿತಿ ಇಲ್ಲಿದೆ.

1) ಎಟಿಎಂ ವಹಿವಾಟಿಗೆ ಹೆಚ್ಚು ಪಾವತಿ ಜನವರಿ 1, 2022ರಿಂದ ಎಲ್ಲ ಉಚಿತ ಎಟಿಎಂ ವಹಿವಾಟುಗಳನ್ನು ಬಳಸಿದ ನಂತರದಲ್ಲಿ ಹೆಚ್ಚಿನ ಮೊತ್ತವನ್ನು ಪಾವತಿಸಬೇಕಾಗುತ್ತದೆ. ಉಚಿತ ಮಾಸಿಕ ಸ್ವೀಕಾರಾರ್ಹ ಮಿತಿಗಿಂತ ಹೆಚ್ಚಿನ ನಗದು ಮತ್ತು ನಗದುರಹಿತ ಎಟಿಎಂ ವಹಿವಾಟುಗಳಿಗೆ ಶುಲ್ಕವನ್ನು ಹೆಚ್ಚಿಸಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಜನವರಿ 1, 2022 ರಿಂದ ಪ್ರಾರಂಭವಾಗುವಂತೆ ಬ್ಯಾಂಕ್​ಗಳಿಗೆ ಅನುಮತಿ ನೀಡಿದೆ. ಜೂನ್ 10, 2021ರ ಆರ್​ಬಿಐ ಅಧಿಸೂಚನೆಯ ಪ್ರಕಾರ, ಉಚಿತ ವಹಿವಾಟಿನ ಮಾಸಿಕ ಮಿತಿಯನ್ನು ಮೀರಿದ ಬ್ಯಾಂಕ್ ಗ್ರಾಹಕರು ಜನವರಿ 1, 2022ರಿಂದ ಪ್ರತಿ ವಹಿವಾಟಿಗೆ ರೂ 20ರ ಬದಲಿಗೆ ರೂ. 21 ಪಾವತಿಸಬೇಕಾಗುತ್ತದೆ. ಆದರೂ ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್ ಎಟಿಎಂಗಳಿಂದ ತಿಂಗಳಿಗೆ ಐದಕ್ಕೆ ಉಚಿತ ವಹಿವಾಟುಗಳಿಗೆ (ಹಣಕಾಸು ಮತ್ತು ಹಣಕಾಸೇತರ ವಹಿವಾಟುಗಳನ್ನು ಒಳಗೊಂಡಂತೆ) ಅರ್ಹರಾಗಿರುತ್ತಾರೆ. ಮೆಟ್ರೋ ಪ್ರದೇಶಗಳಲ್ಲಿ ಇತರ ಬ್ಯಾಂಕ್ ಎಟಿಎಂಗಳಿಂದ ಮೂರು ಉಚಿತ ವಹಿವಾಟುಗಳನ್ನು ಮಾಡಲು ಮತ್ತು ಮೆಟ್ರೋ ಅಲ್ಲದ ಪ್ರದೇಶಗಳಲ್ಲಿ ಐದು ಉಚಿತ ವಹಿವಾಟುಗಳನ್ನು ಮಾಡಲು ಸಾಧ್ಯವಾಗುತ್ತದೆ.

2) ಬ್ಯಾಂಕ್ ಲಾಕರ್‌ಗಳ ಹೊಸ ನಿಯಮಗಳು ಬ್ಯಾಂಕ್ ಲಾಕರ್‌ಗಳಿಗೆ ಸಂಬಂಧಿಸಿದಂತೆ ಆರ್‌ಬಿಐ ಹೊಸ ನಿಯಮಗಳನ್ನು ಹೊರಡಿಸಿದ್ದು, ಇದು ಜನವರಿ 1ರಿಂದ ಜಾರಿಗೆ ಬರಲಿದೆ. ಕಳ್ಳತನದಿಂದ ಅಥವಾ ತನ್ನ ಉದ್ಯೋಗಿಗಳಿಂದ ವಂಚನೆಯಿಂದಾಗಿ ಲಾಕರ್​ಗಳ ನಷ್ಟಕ್ಕೆ ಬ್ಯಾಂಕ್‌ಗಳು ಹೊಣೆಗಾರಿಕೆಯನ್ನು ನಿರಾಕರಿಸುವಂತಿಲ್ಲ ಎಂದು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (RBI) ಆಗಸ್ಟ್ 18, 2021ರಂದು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದೆ. ಆದರೂ ಅಂತಹ ನಷ್ಟಕ್ಕೆ ಬ್ಯಾಂಕ್‌ನ ಲಾಕರ್‌ಗೆ ಚಾಲ್ತಿಯಲ್ಲಿರುವ ವಾರ್ಷಿಕ ಬಾಡಿಗೆಯ 100 ಪಟ್ಟು ಹೊಣೆಗಾರಿಕೆಯನ್ನು ಹಾಕಲಾಗಿದೆ.

ಅಲ್ಲದೆ, ಕೇಂದ್ರೀಯ ಬ್ಯಾಂಕ್ ಪ್ರಕಾರ, ಲಾಕರ್‌ನ ವಸ್ತುಗಳನ್ನು ವಿಮೆ ಮಾಡಲು ಬ್ಯಾಂಕ್ ಜವಾಬ್ದಾರ ಆಗಿರುವುದಿಲ್ಲ ಎಂದು ಲಾಕರ್ ಗ್ರಾಹಕರಿಗೆ ಬ್ಯಾಂಕ್ ಸರಿಯಾಗಿ ಎಚ್ಚರಿಸಬೇಕು. ಬಲವಂತದ ವಿಮಾ ಮಾರಾಟವನ್ನು ತಡೆಗಟ್ಟಲು ಬ್ಯಾಂಕ್‌ಗಳು ಲಾಕರ್ ವಸ್ತುಗಳ ವಿಮೆಯನ್ನು ತನ್ನ ಲಾಕರ್ ಗ್ರಾಹಕರಿಗೆ ಮಾರಾಟ ಮಾಡುವಂತಿಲ್ಲ ಎಂದು ಆರ್‌ಬಿಐ ಹೇಳಿದೆ.

3) ವಿವಿಧ ಜಿಎಸ್​ಟಿ ಸಂಬಂಧಿತ ಬದಲಾವಣೆ 2022 ರಿಂದ ವಿವಿಧ ಉತ್ಪನ್ನಗಳು ಮತ್ತು ಸೇವೆಗಳ ಮೇಲೆ ಜಿಎಸ್​ಟಿ ರೂಪದಲ್ಲಿ ಹೆಚ್ಚಿನ ಹಣವನ್ನು ಪಾವತಿಸಬೇಕಾಗುತ್ತದೆ. ಪರೋಕ್ಷ ತೆರಿಗೆಗಳು ಮತ್ತು ಕಸ್ಟಮ್ಸ್ ಕೇಂದ್ರೀಯ ಮಂಡಳಿ (CBIC) ಜಿಎಸ್​ಟಿ ಸಮಿತಿ ಶಿಫಾರಸುಗಳ ಆಧಾರದ ಮೇಲೆ ಜನವರಿ 1, 2022ರಿಂದ ಜಾರಿಗೆ ಬರುವಂತೆ ಬಟ್ಟೆ, ಜವಳಿ ಮತ್ತು ಪಾದರಕ್ಷೆಗಳ ಮೇಲಿನ ಜಿಎಸ್​ಟಿ ದರವನ್ನು ಶೇ 5ರಿಂದ ಶೇ 12ಕ್ಕೆ ಹೆಚ್ಚಿಸಲಾಗುವುದು ಎಂದು ಘೋಷಿಸಿದೆ. ಆಟೋ ರಿಕ್ಷಾ ಚಾಲಕರು ಆಫ್‌ಲೈನ್/ಮ್ಯಾನ್ಯುವಲ್ ವಿಧಾನದ ಮೂಲಕ ಒದಗಿಸುವ ಪ್ರಯಾಣಿಕ ಸಾರಿಗೆ ಸೇವೆಗಳಿಗೆ ವಿನಾಯಿತಿ ಮುಂದುವರಿಯುತ್ತದೆ. ಯಾವುದೇ ಇ-ಕಾಮರ್ಸ್ ಪ್ಲಾಟ್‌ಫಾರ್ಮ್ ಮೂಲಕ ಒದಗಿಸಿದಾಗ ಅಂತಹ ಸೇವೆಗಳು ಜನವರಿ 1, 2022ರಿಂದ ಶೇಕಡಾ 5ರ ದರದಲ್ಲಿ ತೆರಿಗೆಗೆ ಒಳಪಡುತ್ತವೆ.

4) ಇದನ್ನು ಮಾಡದಿದ್ದಲ್ಲಿ ಇಪಿಎಫ್​ ಕೊಡುಗೆಗಳು ನಿಲ್ಲಬಹುದು “ನಿಮ್ಮ UAN ಅನ್ನು ಆಧಾರ್ ಸಂಖ್ಯೆಯೊಂದಿಗೆ ಜೋಡಣೆ ಮಾಡದಿದ್ದರೆ ನಿಮ್ಮ ಉದ್ಯೋಗದಾತರು/ಸಂಸ್ಥೆಯು 01.01.2022 ರಿಂದ ನಿಮ್ಮ ಮಾಸಿಕ ಕೊಡುಗೆಯನ್ನು ಠೇವಣಿ ಮಾಡಲು ಸಾಧ್ಯ ಆಗುವುದಿಲ್ಲ. ಆದ್ದರಿಂದ ನಿಮ್ಮ ಆಧಾರ್ ಅನ್ನು ಈಗಾಗಲೇ ಜೋಡಣೆ ಮಾಡದಿದ್ದರೆ 31.12.2021ರಂದು ಅಥವಾ ಮೊದಲು UANನೊಂದಿಗೆ ಜೋಡಣೆ ಮಾಡಲು ನಿಮ್ಮನ್ನು ವಿನಂತಿಸಲಾಗಿದೆ, ” ಎಂದು ಕಾರ್ಮಿಕರ ಭವಿಷ್ಯ ನಿಧಿ ಸಂಸ್ಥೆ (EPFO) ಸದಸ್ಯರ ಸೇವಾ ಪೋರ್ಟಲ್‌ನಲ್ಲಿ ತಿಳಿಸಿದೆ.

5) ತಡವಾದ ಐಟಿಆರ್ ಸಲ್ಲಿಕೆ ಮೇಲೆ ದಂಡ ಕೊರೊನಾ ಬಿಕ್ಕಟ್ಟಿನ ಕಾರಣಕ್ಕೆ 2020-21ರ ಆರ್ಥಿಕ ವರ್ಷಕ್ಕೆ ಆದಾಯ ತೆರಿಗೆ ರಿಟರ್ನ್ (ITR) ಸಲ್ಲಿಸುವ ಗಡುವನ್ನು ಎರಡು ಬಾರಿ ವಿಸ್ತರಿಸಲಾಗಿದೆ: ಮೊದಲು ಜುಲೈ 31, 2021ರ ದಿನಾಂಕದಿಂದ ಸೆಪ್ಟೆಂಬರ್ 30, 2021ರವರೆಗೆ ಮತ್ತು ನಂತರ ಡಿಸೆಂಬರ್ 31, 2021 ರವರೆಗೆ. ಕಳೆದ ವರ್ಷದವರೆಗೆ ಐಟಿಆರ್ ಫೈಲಿಂಗ್ ದಿನಾಂಕದೊಳಗೆ ಆಗದಿದ್ದಲ್ಲಿ ತೆರಿಗೆದಾರರಿಗೆ ಇದ್ದ ಗರಿಷ್ಠ ದಂಡ 10,000 ರೂಪಾಯಿ. ಈ ವರ್ಷದಿಂದ, ನೀವು ತಡವಾಗಿ ITR ಅನ್ನು ಸಲ್ಲಿಸಿದರೆ ಅಂದರೆ, ಜನವರಿ 1, 2022ರಂದು ಅಥವಾ ನಂತರ, ನೀವು ಪಾವತಿಸಬೇಕಾದ ದಂಡವು ರೂ.5000.

ಹಣಕಾಸು ವರ್ಷ 2020-21 (ಅಸೆಸ್​ಮೆಂಟ್ ವರ್ಷ 2021-22) ರಿಂದ ಜಾರಿಗೆ ಬರುವಂತೆ ಪೆನಾಲ್ಟಿ ಮೊತ್ತವನ್ನು ಅರ್ಧದಷ್ಟು ಕಡಿಮೆ ಮಾಡಲಾಗಿದೆ. ಅಂದರೆ, ತಡವಾಗಿ ITR ಅನ್ನು ಸಲ್ಲಿಸುವ ವ್ಯಕ್ತಿಯು 5,000 ರೂಪಾಯಿವರೆಗೆ ದಂಡವನ್ನು ಪಾವತಿಸಬೇಕಾಗುತ್ತದೆ. ಅಲ್ಲದೆ, ಆದಾಯವು ತೆರಿಗೆಯ ಮಿತಿಗಿಂತ ಕಡಿಮೆಯಿದ್ದರೆ ಕೆಲವು ವಿನಾಯಿತಿಗಳಿಗೆ ಒಳಪಟ್ಟು, ಗಡುವಿನ ನಂತರ ನಿಮ್ಮ ITR ಅನ್ನು ನೀವು ಸಲ್ಲಿಸಿದರೆ ದಂಡದ ಮೊತ್ತವನ್ನು ಸಹ ಪಾವತಿಸಬೇಕಾಗಿಲ್ಲ.

6) IPPB ನಗದು ಠೇವಣಿ ಶುಲ್ಕಗಳು ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ (IPBB) ಜನವರಿ 1, 2022ರಿಂದ ಜಾರಿಗೆ ಬರುವಂತೆ ಶಾಖೆಗಳಲ್ಲಿ ನಗದು ಹಿಂಪಡೆಯುವಿಕೆ ಮತ್ತು ಠೇವಣಿಗಳ ಮೇಲಿನ ಶುಲ್ಕಗಳನ್ನು ಪರಿಷ್ಕರಿಸಿದೆ ಎಂದು ಪ್ರಕಟಿಸಿದೆ. ಇಂಡಿಯಾ ಪೋಸ್ಟ್ ಪೇಮೆಂಟ್ಸ್ ಬ್ಯಾಂಕ್ ಅಂಚೆ ಇಲಾಖೆಯಿಂದ ನಿಯಂತ್ರಿಸುವ ಭಾರತೀಯ ಅಂಚೆಯ ಅಂಗಸಂಸ್ಥೆಯಾಗಿದೆ. ನವೆಂಬರ್ 3, 2021ರಂದು ನೀಡಲಾದ IPBB ಸೂಚನೆಯ ಪ್ರಕಾರ, ಮೂಲ ಉಳಿತಾಯ ಖಾತೆಗೆ ತಿಂಗಳಿಗೆ 4 ವಹಿವಾಟುಗಳವರೆಗೆ ಉಚಿತವಾಗಿದೆ. ಆ ನಂತರ ನಗದು ಹಿಂಪಡೆಯುವುದಕ್ಕೆ ಪ್ರತಿ ವಹಿವಾಟಿಗೆ ಕನಿಷ್ಠ 25 ರೂಪಾಯಿ ಅಥವಾ ಒಪಟ್ಟು ಮೌಲ್ಯದ ಶೇ 0.50ರಷ್ಟು ಶುಲ್ಕ ವಿಧಿಸಲಾಗುತ್ತದೆ. ಅದು ಕೂಡ ಉಚಿತ ಮಿತಿಯನ್ನು ದಾಟಿದ ನಂತರ. (ಶುಲ್ಕಗಳು ಜಿಎಸ್‌ಟಿ/ಸೆಸ್‌ಗೆ ಹೊರತುಪಡಿಸಿದಂತೆ, ಇವುಗಳನ್ನು ಅನ್ವಯಿಸುವ ದರಗಳಲ್ಲಿ ವಿಧಿಸಲಾಗುತ್ತದೆ.) ಆದರೆ ನಗದು ಠೇವಣಿಗಳು ಉಚಿತವಾಗಿವೆ.

ಇದನ್ನೂ ಓದಿ: FY21ರ ಜಿಎಸ್​ಟಿ ವಾರ್ಷಿಕ ರಿಟರ್ನ್ ಫೈಲಿಂಗ್ ಗಡುವು ಫೆಬ್ರವರಿ 28ರ ವರೆಗೆ ವಿಸ್ತರಿಸಿದ ಸರ್ಕಾರ

Follow us on

Related Stories

Most Read Stories

Click on your DTH Provider to Add TV9 Kannada