ಬದಲಾದ ಜೀವನಶೈಲಿಯಲ್ಲಿ ಕುಳಿತಲ್ಲೇ ಕುಳಿತು ಕೆಲಸ ಮಾಡಿ ದೇಹದಲ್ಲಿ ಬೊಜ್ಜು ತುಂಬಿರುತ್ತದೆ. ದೇಹಕ್ಕೆ ಜಡ ಹಿಡಿದು ಆಲಸ್ಯ ತುಂಬಿಕೊಂಡಿರುತ್ತದೆ. ಹೀಗಾಗಿ ನಿಮಗೆ ನಡಿಗೆ ಈ ರೀತಿಯ ಸಮಸ್ಯೆಗೆ ಪರಿಹಾರವಾಗಿದೆ. ದೇಹದ ತೂಕ ಇಳಿಸಿಕೊಳ್ಳಲು, ಗ್ಯಾಸ್ಟ್ರಿಕ್ ಅಥವಾ ಆಸಿಡಿಟಿ ಸಮಸ್ಯೆಗಳಿಗೂ ನಡಿಗೆ ಪರಿಹಾರವಾಗಿದೆ. ಚಳಿಗಾಲದಲ್ಲಿ ನೀವು ನಡೆಯುವುದರಿಂದ ನಿಮ್ಮ ದೇಹ ಬಿಸಿಯಾಗಿ ಚಳಿಯಿಂದ ನಡುಗುವುದೂ ಕಡಿಮೆಯಾಗುತ್ತದೆ. ಅದರಲ್ಲೂ ಬೆಳಗ್ಗಿನ ನಡಿಗೆಗಿಂತ ರಾತ್ರಿಯ ನಡಿಗೆ ದೇಹದ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಮಾರ್ಗ ಎನ್ನುತ್ತಾರೆ ವೈದ್ಯರು. ಹೌದು, ರಾತ್ರಿ ಊಟದ ನಂತರ 15 ನಿಮಿಷಗಳ ಕಾಲವಾದರೂ ಅರಾಮದಾಯಕ ನಡಿಗೆಯನ್ನು ಮಾಡಬೇಕು. ಇದರಿಂದ ದೇಹದಲ್ಲಿರುವ ಅಧಿಕ ಕೊಲೆಸ್ಟ್ರಾಲ್ ಕರಗುತ್ತದೆ. ಸಾಮಾನ್ಯಾವಾಗಿ ನಾವೆಲ್ಲರೂ ಸೇವಿಸುವ ಅನ್ನ, ಚಪಾತಿಯಂತಹ ಆಹಾರಗಳು ಕಾರ್ಬೋಹೈಡ್ರೇಟ್ ಮತ್ತು ಕೊಬ್ಬಿನಿಂದ ಸಮೃದ್ಧವಾಗಿವೆ, ಅಲ್ಲದೆ ರುಚಿಗಾಗಿ ಸೇರಿಸುವ ಮಸಾಲೆಗಳು ಹೊಟ್ಟೆಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವೆಂದರೆ ಪ್ರತಿದಿನ 15 ನಿಮಿಷವಾದರೂ ವಾಕ್ಗೆ ಹೋಗುವುದು. ರಾತ್ರಿಯ ನಡಿಗೆಯಿಂದ ದೇಹದಲ್ಲಿ ಶೇಖರಣೆಯಾದ ಕೊಲೆಸ್ಟ್ರಾಲ್, ಕೊಬ್ಬು ಕರಗುತ್ತದೆ. ದೇಹದಲ್ಲಿ ಉಳಿದ ಕೊಲೆಸ್ಟ್ರಾಲ್ ನಿಮ್ಮ ಹೃದಯಕ್ಕೂ ಅಪಾಯ ತಂದೊಡ್ಡಬಹುದು. ಆದರೆ ನೆನಪಿಡಿ ಊಟವಾದ ತಕ್ಷಣ ನಡೆಯಬೇಡಿ ಇದು ನಿಮಗೆ ವಾಂತಿ ಅಥವಾ ತಲೆ ಸುತ್ತು ತರಿಸಬಹುದು. ಊಟದ ಬಳಿಕ ಒಂದೈದು ನಿಮಿಷ ಕುಳಿತುಕೊಂಡು ನಂತರ ನಡೆಯಿರಿ. ರಾತ್ರಿ ನಡಿಗೆ ನಿಮ್ಮ ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಹಾಗೂ ಅಧಿಕ ಕ್ಯಾಲೋರಿಗಳನ್ನು ಬರ್ನ್ ಮಾಡುತ್ತದೆ. ಹೀಗಾಗಿ ಪ್ರತಿದಿನ ರಾತ್ರಿ ನಡೆಯುವ ಅಭ್ಯಾಸ ಮಾಡಿಕೊಳ್ಳಿ.
ಬೆಳಗ್ಗಿನ ನಡಿಗೆಯಿಂದ ಕೂಡ ಆರೋಗ್ಯಕ್ಕೆ ಹೆಚ್ಚಿನ ಲಾಭವೇ ಇದೆ. ಬೆಳಗ್ಗಿನ ತಂಪು ವಾತಾವರಣ, ಸೂರ್ಯನ ಕಿರಣಗಳಿಂದ ಸಿಗುವ ವಿಟಮಿನ್ ಡಿ, ತಾಜಾ ಗಾಳಿ ಎಲ್ಲವೂ ದಿನದ ಆರಂಭಕ್ಕೆ ಹೊಸ ಹುರುಪು ನೀಡುತ್ತದೆ. ಹೀಗಾಗಿ ನಿಮ್ಮ ನಡಿಗೆಯ ಅಭ್ಯಾಸ ಯಾವ ಸಮಯದಲ್ಲಿ ಇಟ್ಟುಕೊಳ್ಳುತ್ತೀರಿ ಎನ್ನುವುದನ್ನು ನಿರ್ದರಿಸಿಕೊಳ್ಳಿ. ಆದರೆ ತಜ್ಞರ ಪ್ರಕಾರ ರಾತ್ರಿ ನಡಿಗೆ ಆರೋಗ್ಯಕ್ಕೆ, ದೇಹದ ತೂಕ ಇಳಿಕೆ ಹಾಗೂ ಅತಿಯಾದ ಕೊಲೆಸ್ಟ್ರಾಲ್ ನಿವಾರಣೆಗೆ ಉತ್ತಮವಾಗಿದೆ. ಅಲ್ಲದೆ ನೀವು ರಾತ್ರಿ ನಡಿಗೆಯನ್ನು ಮಾಡುವುದರಿಂದ ಬೆಳಗ್ಗಿನ ಹಾಗೆ ದಿನದ ಆರಂಭದಲ್ಲಿ ಇರುವ ರೀತಿ ಜಂಜಾಟಗಳಿರುವುದಿಲ್ಲ. ದಿನದ ಎಲ್ಲಾ ಕೆಲಸವನ್ನು ಮುಗಿಸಿ ನೆಮ್ಮದಿಯಾಗಿ ವಾಕ್ ಮಾಡಬಹುದು.
ವಾಕಿಂಗ್ ಮಾಡುವುದರಿಂದ ನಿಮ್ಮ ಮಾನಸಿಕ ಆರೋಗ್ಯಕ್ಕೂ ಒಳ್ಳೆಯದು
ಹೌದು ವಾಕಿಂಗ್ ನಿಮ್ಮ ಮನಸ್ಥಿಯ ಮೇಲೂ ಪರಿಣಾಮ ಬೀರುತ್ತದೆ. ಪ್ರತಿದಿನ ನೀವು ವಾಕಿಂಗ್ ಅಭ್ಯಾಸ ಮಾಡಿಕೊಂಡರೆ ನಿಮ್ಮ ಮನಸ್ಸಿನ ಒತ್ತಡವನ್ನು ಕಡಿಮೆ ಮಾಡಿಕೊಳ್ಳಬಹುದು. ಎಷ್ಟೇ ಚಿಂತಿತರಾಗಿದ್ದರೂ ದಿನದ ಅಂತ್ಯದಲ್ಲಿ ತಂಪನೆಯ, ನಿಶ್ಯಬ್ದ ವಾತಾವರಣದಲ್ಲಿ ನಡೆದಾಡಿದರೆ ನೆಮ್ಎಮದಿಯ ಭಾವ ಮೂಡುವುದು ಸುಳ್ಳಲ್ಲ.
ಇದನ್ನೂ ಓದಿ: