ಪ್ಯಾಕೇಜ್ಡ್‌ ಮಾತ್ರವಲ್ಲ ಹೋಮ್‌ಮೇಡ್‌ ಬಿಸ್ಕೆಟ್‌ಗಳನ್ನೂ ಪ್ರತಿನಿತ್ಯ ತಿನ್ನೋದು ಒಳ್ಳೆಯದಲ್ಲ

ಪ್ಯಾಕೇಜ್ಡ್‌ ಫುಡ್‌ ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಕುರುಕಲು ತಿಂಡಿ, ಬಿಸ್ಕೆಟ್‌, ಕುಕೀಗಳನ್ನು ಮನೆಯಲ್ಲೇ ತಯಾರಿಸುತ್ತಾರೆ. ಇವುಗಳಿಂದ ಆರೋಗ್ಯಕ್ಕೆ ಯಾವುದೇ ಅಡ್ಡ ಪರಿಣಾಮವಿಲ್ಲ ಎಂದು ಪ್ರತಿನಿತ್ಯ ಅದನ್ನು ಸೇವನೆ ಮಾಡ್ತಾರೆ. ಆದರೆ ಬಿಸ್ಕೆಟ್‌, ಕುಕೀಗಳು ಹೋಮ್‌ಮೇಡ್‌ ಆಗಿದ್ರು, ಅದನ್ನು ಪ್ರತಿನಿತ್ಯ ಸೇವನೆ ಮಾಡೋದು ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುತ್ತಾರೆ ಪೌಷ್ಟಿಕತಜ್ಞೆ ಅಮಿತಾ ಗದ್ರೆ. ಹಾಗಿದ್ರೆ ನಿತ್ಯ ಇವುಗಳನ್ನು ಸೇವನೆ ಮಾಡಿದ್ರೆ ಆರೋಗ್ಯದ ಮೇಲಾಗುವ ಪರಿಣಾಮಗಳೇನು ಎಂಬುದನ್ನು ನೋಡೋಣ ಬನ್ನಿ.

ಪ್ಯಾಕೇಜ್ಡ್‌ ಮಾತ್ರವಲ್ಲ ಹೋಮ್‌ಮೇಡ್‌ ಬಿಸ್ಕೆಟ್‌ಗಳನ್ನೂ ಪ್ರತಿನಿತ್ಯ ತಿನ್ನೋದು ಒಳ್ಳೆಯದಲ್ಲ
ಸಾಂದರ್ಭಿಕ ಚಿತ್ರ
Image Credit source: Getty Images

Updated on: Oct 16, 2025 | 3:14 PM

ಚಿಕ್ಕಮಕ್ಕಳಿಂದ ಹಿಡಿದು ದೊಡ್ಡವರವರೆಗೂ ಪ್ರತಿಯೊಬ್ಬರೂ ಬಿಸ್ಕೆಟ್‌ (biscuits) ತಿನ್ನಲು ಇಷ್ಟಪಡುತ್ತಾರೆ. ಟೀ, ಕಾಫಿ ಜೊತೆ ಒಳ್ಳೆ ಕಾಂಬಿನೇಷನ್‌ ಅಂತ ಅನೇಕರು ನಿತ್ಯ ಬಿಸ್ಕೆಟ್‌ ತಿನ್ನುತ್ತಾರೆ. ಅದರಲ್ಲೂ ಕೆಲವರು ವಿವಿಧ ಬ್ರ್ಯಾಂಡ್‌ಗಳ ಪ್ಯಾಕೇಜ್ಡ್‌ ಕುಕೀಗಳಲ್ಲಿ ಸಕ್ಕರೆ, ಮೈದಾ ಅತಿಯಾಗಿ ಇರುತ್ತದೆ ಇವು ಆರೋಗ್ಯಕ್ಕೆ ಒಳ್ಳೆಯದಲ್ಲ ಎಂಬ ಕಾರಣಕ್ಕೆ ಮನೆಯಲ್ಲೇ ಆರೋಗ್ಯಕರ ರೀತಿಯಲ್ಲಿ ಹೋಮ್‌ಮೇಡ್‌ ಕುಕೀಗಳನ್ನೇ ಸೇವನೆ ಮಾಡುತ್ತಾರೆ. ಆದರೆ ಹೋಮ್‌ಮೇಡ್‌ ಬಿಸ್ಕೆಟ್‌ಗಳನ್ನು ಸಹ ಪ್ರತಿನಿತ್ಯ ಸೇವನೆ ಮಾಡುವುದು ಒಳ್ಳೆಯದಲ್ಲವಂತೆ. ಇವುಗಳು ಕೃತಕ ಸಿಹಿಕಾರಕ, ಮೈದಾ ಇತ್ಯಾದಿಗಳಿಂದ ಮುಕ್ತವಾಗಿದ್ದರೂ, ಇವುಗಳನ್ನು ಪ್ರತಿನಿತ್ಯ ಸೇವನೆ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ ಎಂಬುದನ್ನು ಪೌಷ್ಟಿಕ ತಜ್ಞೆ ಅಮಿತಾ ಗದ್ರೆ ವಿವರಿಸಿದ್ದಾರೆ. ಹಾಗಿದ್ರೆ ನಿತ್ಯ ಹೋಮ್‌ಮೇಡ್‌ ಕುಕೀ, ಬಿಸ್ಕೆಟ್‌ ತಿಂದ್ರೆ ಏನಾಗುತ್ತದೆ ಎಂಬುದರ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ.

ಹೋಮ್‌ಮೇಡ್‌ ಬಿಸ್ಕೆಟ್‌ಗಳನ್ನೂ ಪ್ರತಿನಿತ್ಯ ಸೇವಿಸೋದು ಒಳ್ಳೆಯದಲ್ಲ:

ಮನೆಯಲ್ಲಿ ತಯಾರಿಸಿದ ಬಿಸ್ಕತ್ತುಗಳು ಮತ್ತು ಕುಕೀಗಳು ಕೃತಕ ಸಿಹಿಕಾರಕಗಳಿಂದ ಮುಕ್ತವಾಗಿದ್ದರೂ ಸಹ, ಪ್ರತಿದಿನ ಅವುಗಳನ್ನು ಸೇವಿಸುವ ಬಗ್ಗೆ ಜಾಗರೂಕರಾಗಿರಬೇಕು ಎಂದು ಪೌಷ್ಟಿಕತಜ್ಞೆ ಅಮಿತಾ ಗದ್ರೆ ಹೇಳುತ್ತಾರೆ.

ಕುಕೀಗಳನ್ನು ಮೂರು ಭಾಗ ಹಿಟ್ಟು, ಎರಡು ಭಾಗ ಕೊಬ್ಬು ಮತ್ತು ಒಂದು ಭಾಗ ಸಕ್ಕರೆಯೊಂದಿಗೆ ತಯಾರಿಸಲಾಗುತ್ತದೆ, ಅಂದರೆ ಇದರಲ್ಲಿ ಸರಿಸುಮಾರು 50 ರಿಂದ 70 ಪ್ರತಿಶತ ಹಿಟ್ಟು, 15 ರಿಂದ 35 ಪ್ರತಿಶತ ಕೊಬ್ಬು ಮತ್ತು 10 ರಿಂದ 25 ಪ್ರತಿಶತ ಸಕ್ಕರೆ ಇರುತ್ತದೆ.  ನೀವು ಮನೆಯಲ್ಲಿಯೇ ತಯಾರಿಸಿದರೂ, ಅಥವಾ ತುಪ್ಪು ಬೆಲ್ಲವನ್ನು ಬಳಸಿ ತಯಾರಿಸಿದ ಆರೋಗ್ಯಕರ ಕುಕೀಗಳನ್ನು ಖರೀದಿಸಿದರೂ ಪ್ರತಿನಿತ್ಯ ಇವುಗಳ ಸೇವನೆ ಒಳ್ಳೆಯದಲ್ಲ.  ಏಕೆಂದರೆ ಇದು ಎಮ್ಟಿ ಕ್ಯಾಲೋರಿಗಳು ಅಂದರೆ ಯಾವುದೇ ಪೋಷಕಾಂಶಗಳಿಲ್ಲದ ಮತ್ತು ನಿಮಗೆ ಅಗತ್ಯವಿಲ್ಲದ ಹೆಚ್ಚುವರಿ ಸಕ್ಕರೆ ಮತ್ತು ಕೊಬ್ಬನ್ನು ಹೊಂದಿರುವ ಉತ್ಪನ್ನವಾಗಿದೆ. ಇವುಗಳು ಅಪರೂಪಕ್ಕೆ ಮಕ್ಕಳಿಗೆ ನೀಡಬಹುದು. ಆದ್ರೆ ಪ್ರತಿನಿತ್ಯ ಇದರ ಸೇವನೆ ಒಳ್ಳೆಯದಲ್ಲ ಎಂದು ಅವರು ಹೇಳಿದ್ದಾರೆ.

ವಿಡಿಯೋ ಇಲ್ಲಿದೆ ನೋಡಿ:‌

ಮನೆಯಲ್ಲಿಯೇ ತಯಾರಿಸಿದಂತಹ ಪ್ರತಿಯೊಂದು ಆಹಾರ ಪದಾರ್ಥಗಳು ಸಹ ಆರೋಗ್ಯಕರವಾಗಿರುತ್ತದೆ. ಆದರೆ ಬಿಸ್ಕೆಟ್‌, ಕುಕೀಗಳ ವಿಷಯಕ್ಕೆ ಬಂದಾಗ, ಇವುಗಳು ಹೋಮ್‌ಮೇಡ್‌ ಆಗಿದ್ರೂ ಸಹ ಪ್ರತಿನಿತ್ಯ ಇವುಗಳ ಸೇವನೆ ಒಳ್ಳೆಯದಲ್ಲ. ಏಕೆಂದರೆ ಅವುಗಳು ಸಾಮಾನ್ಯವಾಗಿ ಸಂಸ್ಕರಿಸಿದ ಹಿಟ್ಟು, ಸಕ್ಕರೆ ಮತ್ತು ಕೊಬ್ಬಿನಿಂದ ಸಮೃದ್ಧವಾಗಿರುತ್ತವೆ, ಇವು ಹೆಚ್ಚಿನ ಅಗತ್ಯ ಪೋಷಕಾಂಶಗಳನ್ನು ಹೊಂದಿರುವುದಿಲ್ಲ. ದಿನಾ ಕುಕೀ, ಬಿಸ್ಕೆಟ್‌ ಸೇವನೆ ಮಾಡುವುದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟದಲ್ಲಿ ಏರಿಳಿತ ಉಂಟಾಗಬಹುದು. ಇದರಿಂದಾಗಿ ತಿನ್ನುವ ಹಂಬಲ ಹೆಚ್ಚಾಗಬಹುದು. ಕಾಲಾನಂತರದಲ್ಲಿ ಇದು ತೂಕ ಹೆಚ್ಚಳ, ಇನ್ಸುಲಿಲ್‌ ಪ್ರತಿರೋಧಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಸ್ಲಿಮ್‌ ಆಗಿ ಕಾಣ್ಬೇಕಾ…? ಹಾಗಿದ್ರೆ ಪ್ರತಿನಿತ್ಯ ಬೆಳಗ್ಗೆ ಒಂದು ಪಾನೀಯ ಕುಡಿದ್ರೆ ಸಾಕು

ಇದಲ್ಲದೆ ಹೆಚ್ಚು ಬಿಸ್ಕೆಟ್‌  ಮತ್ತು ಕುಕೀಗಳನ್ನು ಸೇವಿಸುವುದರಿಂದ ಬಾಯಿಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ವಿಶೇಷವಾಗಿ ಇದು ಹಲ್ಲು ಕೊಳೆಯುವಿಕೆಗೆ ಕಾರಣವಾಗಬಹುದು. ಹಾಗಾಗಿ ಬಿಸ್ಕೆಟ್‌ ಬದಲು ಜೀವಸತ್ವಗಳು, ಫೈಬರ್ ಮತ್ತು ಪ್ರೋಟೀನ್‌ಗಳಿಂದ ಸಮೃದ್ಧವಾಗಿರುವ ಒದಗಿಸುವ ಹಣ್ಣು, ನಟ್ಸ್‌ಗಳನ್ನು ಸೇವಿಸುವುದು ಒಳ್ಳೆಯದು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ