AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Reverse Walking: ಎಂದಾದರೂ ರಿವರ್ಸ್ ವಾಕಿಂಗ್ ಮಾಡಿದ್ದೀರಾ? ಈ ರೀತಿ ನಡೆಯುವುದರಿಂದ ಸಿಗುತ್ತೆ ಸಖತ್ ಪ್ರಯೋಜನ

ನಡೆಯುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಆದರೆ ಎಂದಾದರೂ ಹಿಮ್ಮುಖವಾಗಿ ಅಥವಾ ರಿವರ್ಸ್ ವಾಕಿಂಗ್ ಮಾಡಲು ಪ್ರಯತ್ನಿಸಿದ್ದೀರಾ? ವೈದ್ಯರು ಹೇಳುವ ಪ್ರಕಾರ, ಹಿಮ್ಮುಖವಾಗಿ ಅಥವಾ ರಿವರ್ಸ್ ವಾಕಿಂಗ್ ಮಾಡುವುದರಿಂದ ಗಂಭೀರ ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತೆ. ಹೃದಯ ಮತ್ತು ಮನಸ್ಸು ಆರೋಗ್ಯವಾಗಿರುತ್ತೆ. ಅಷ್ಟೇ ಅಲ್ಲ... ಈ ರೀತಿ ನಡೆಯುವ ಅಭ್ಯಾಸ ಹಲವಾರು ಆರೋಗ್ಯ ಪ್ರಯೋಜನಗಳನ್ನು ಕೂಡ ನೀಡುತ್ತದೆ. ಹಾಗಾದರೆ ತಡ ಯಾಕೆ ನಾಳೆಯಿಂದ ನೀವು ಕೂಡ ಟ್ರೈ ಮಾಡಿ ನೋಡಿ. ಹಿಮ್ಮುಖ ನಡಿಗೆಯ ಮತ್ತಷ್ಟು ಪ್ರಯೋಜನಗಳನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

Reverse Walking: ಎಂದಾದರೂ ರಿವರ್ಸ್ ವಾಕಿಂಗ್ ಮಾಡಿದ್ದೀರಾ? ಈ ರೀತಿ ನಡೆಯುವುದರಿಂದ ಸಿಗುತ್ತೆ ಸಖತ್ ಪ್ರಯೋಜನ
ಹಿಮ್ಮುಖ ನಡಿಗೆಯಿಂದ ಸಿಗುವ ಪ್ರಯೋಜನ
ಪ್ರೀತಿ ಭಟ್​, ಗುಣವಂತೆ
|

Updated on: Oct 16, 2025 | 9:30 AM

Share

ಪ್ರತಿನಿತ್ಯ ವಾಕಿಂಗ್ (Walking) ಮಾಡುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದು ತಿಳಿದ ವಿಚಾರ. ಆರೋಗ್ಯ ಕಾಪಾಡಿಕೊಳ್ಳಲು ಜನ ಬೆಳಿಗ್ಗೆ ಅಥವಾ ಸಂಜೆ ವಾಕಿಂಗ್ ಮಾಡುತ್ತಾರೆ. ಇದು ದೇಹಕ್ಕೆ ಅನೇಕ ಪ್ರಯೋಜನಗಳನ್ನು ನೀಡುವಂತಹ ಒಂದು ವ್ಯಾಯಾಮವಾಗಿದೆ. ಆದರೆ ಹಿಮ್ಮುಖವಾಗಿ ಅಥವಾ ರಿವರ್ಸ್ ವಾಕಿಂಗ್ ಮಾಡಲು ಎಂದಾದರೂ ಪ್ರಯತ್ನಿಸಿದ್ದೀರಾ? ಕೆಲವರಿಗಂತೂ ಅದೊಂದು ವ್ಯಾಯಾಮ ಹೌದೋ, ಅಲ್ಲವೋ ಎಂಬ ಗೊಂದಲವಿರುತ್ತದೆ. ಇನ್ನು ಕೆಲವರು ಇದೊಂದು ತಮಾಷೆಗಾಗಿ ಮಾಡುವ ವ್ಯಾಯಾಮ ಎಂದುಕೊಂಡಿದ್ದಾರೆ. ಆದರೆ ಇತ್ತೀಚಿನ ದಿನಗಳಲ್ಲಿ, ಹಿಮ್ಮುಖವಾಗಿ ನಡೆಯುವುದು ತುಂಬಾ ಜನಪ್ರಿಯವಾಗುತ್ತಿದ್ದು ಇದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ ಎಂಬುದು ತಿಳಿದು ಬಂದಿದೆ. ಹಾಗಾದರೆ ಹಿಮ್ಮುಖ ನಡಿಗೆ ನಮ್ಮ ಆರೋಗ್ಯಕ್ಕೆ ಯಾವ ರೀತಿಯಲ್ಲಿ ಸಹಕಾರಿ ಎಂಬುದನ್ನು ಈ ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹಿಮ್ಮುಖ ನಡಿಗೆಯಿಂದ ಸಿಗುವ ಪ್ರಯೋಜನಗಳು:

ಸಾಮಾನ್ಯವಾಗಿ ಹಿಮ್ಮುಖವಾಗಿ ಅಥವಾ ರಿವರ್ಸ್ ವಾಕಿಂಗ್ ಮಾಡುವುದರಿಂದ ಹಲವಾರು ರೀತಿಯ ಆರೋಗ್ಯ ಪ್ರಯೋಜನಗಳಿವೆ. ಈ ವ್ಯಾಯಾಮವು ನಿಮ್ಮ ದೈಹಿಕ ಮತ್ತು ಮಾನಸಿಕ ಆರೋಗ್ಯದ ಮೇಲೆ ಸಕಾರಾತ್ಮಕ ಪರಿಣಾಮ ಬೀರುತ್ತದೆ ಎಂದು ತಜ್ಞರು ಸಹ ಒಪ್ಪಿಕೊಂಡಿದ್ದಾರೆ. ಹೇಗೆ ಗೊತ್ತಾ? ಇಲ್ಲಿದೆ ನೋಡಿ ಮಾಹಿತಿ.

ರಿವರ್ಸ್ ವಾಕಿಂಗ್ ಸ್ನಾಯುಗಳನ್ನು ಬಲಪಡಿಸುತ್ತದೆ:

ಸಾಮಾನ್ಯ ನಡಿಗೆಗೆ ಹೋಲಿಸಿದರೆ ಹಿಮ್ಮುಖ ನಡಿಗೆ ಅಥವಾ ರಿವರ್ಸ್ ವಾಕಿಂಗ್ ಸ್ನಾಯುಗಳು ಸಕ್ರಿಯವಾಗಿರಲು ಸಹಾಯ ಮಾಡುತ್ತದೆ. ಮಾತ್ರವಲ್ಲ ಈ ವ್ಯಾಯಾಮ ಕ್ರೀಡಾಪಟುಗಳು ಮತ್ತು ಫಿಟ್‌ನೆಸ್ ಉತ್ಸಾಹಿಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.

ಇದನ್ನೂ ಓದಿ:  Morning Walk: ಬೆಳಗ್ಗಿನ ಹೊತ್ತು 30 ನಿಮಿಷಗಳ ಕಾಲ ವಾಕಿಂಗ್‌ ಮಾಡಿದರೆ ಏನಾಗುತ್ತದೆ ಗೊತ್ತಾ?

ಏಕಾಗ್ರತೆಯನ್ನು ಹೆಚ್ಚಿಸುತ್ತದೆ:

ಈ ರಿವರ್ಸ್ ವಾಕಿಂಗ್ ವಿದ್ಯಾಭ್ಯಾಸ ಮಾಡುವವರಿಗೆ ಬಹಳ ಪ್ರಯೋಜನಕಾರಿಯಾಗಿದೆ. ಏಕೆಂದರೆ ಈ ವ್ಯಾಯಾಮ ಏಕಾಗ್ರತೆಯನ್ನು ಹೆಚ್ಚಿಸುತ್ತದೆ. ಹಿಂದಕ್ಕೆ ನಡೆಯುವಾಗ ಹೆಚ್ಚಿನ ಗಮನ ಹರಿಸಬೇಕಾಗುತ್ತದೆ. ಹಾಗಾಗಿ ಅದಕ್ಕೆ ನೀಡುವ ಏಕಾಗ್ರತೆಯು ಬೀಳುವ ಭಯವನ್ನು ಕಡಿಮೆ ಮಾಡುತ್ತದೆ. ಮಾತ್ರವಲ್ಲ ಇದು ಜನರನ್ನು ಮಾನಸಿಕವಾಗಿ ಬಲಶಾಲಿಗಳನ್ನಾಗಿ ಮಾಡುತ್ತದೆ.

ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ:

ಮುಂದೆ ನಡೆಯುವುದಕ್ಕಿಂತ ಹಿಂದಕ್ಕೆ ನಡೆಯುವುದರಿಂದ ನಿಮ್ಮ ಹೃದಯ ಬಡಿತ ಹೆಚ್ಚಾಗುತ್ತದೆ ಎಂದು ಅಧ್ಯಯನಗಳಿಂದ ತಿಳಿದು ಬಂದಿದೆ. ಈ ವ್ಯಾಯಾಮ ಹೃದಯದ ಆರೋಗ್ಯವನ್ನು ಸುಧಾರಿಸುತ್ತದೆ. ಮಾತ್ರವಲ್ಲ ಕ್ಯಾಲೊರಿ ವೇಗವಾಗಿ ಕಡಿಮೆ ಆಗುವುದರಿಂದ ತೂಕವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
Preethi Bhat Gunavante
Preethi Bhat Gunavante

ಪ್ರೀತಿ ಭಟ್ ಗುಣವಂತೆ – ಮೂಲತಃ ಹೊನ್ನಾವರದ ಗುಣವಂತೆಯವಳು. ಪತ್ರಿಕೋದ್ಯಮ ಮತ್ತು ಸಮೂಹ ಸಂವಹನದಲ್ಲಿ (M.C.J) ಎಂ.ಎ ಮಾಡಿದ್ದು ಪತ್ರಿಕಾ ರಂಗದಲ್ಲಿ 6 ವರ್ಷಗಳ ಅನುಭವವಿದೆ. ಸುದ್ದಿ ಬಿಡುಗಡೆ ವಾರ ಪತ್ರಿಕೆಯಲ್ಲಿ, ಉದಯವಾಣಿ ದಿನ ಪತ್ರಿಕೆಯಲ್ಲಿ ಕೆಲಸ ಮಾಡಿದ್ದೇನೆ. ಅದಾದ ಬಳಿಕ 2023ರಿಂದ ಟಿವಿ9 ಕನ್ನಡದಲ್ಲಿ ಕೆಲಸ ಮಾಡುತ್ತಿದ್ದೇನೆ. ಅಧ್ಯಾತ್ಮ, ಆರೋಗ್ಯ, ಜೀವನಶೈಲಿಗೆ ಸಂಬಂಧಿಸಿದ ಲೇಖನಗಳನ್ನು ಬರೆಯುವುದರಲ್ಲಿ ಆಸಕ್ತಿ ಹೊಂದಿದ್ದು, ಓದುಗರಿಗೆ ಉತ್ತಮ ಲೇಖನಗಳನ್ನು ಒದಗಿಸುವಲ್ಲಿ ಪ್ರೀತಿಯಿಂದ, ಪ್ರಾಮಾಣಿಕವಾಗಿ ಪ್ರಯತ್ನಿಸುತ್ತಿದ್ದೇನೆ. ಬರವಣಿಗೆ ಹೊರತು ಪಡಿಸಿದರೆ ನನ್ನ ಆಸಕ್ತಿಕರ ಕ್ಷೇತ್ರ ಪ್ರವಾಸ.

Read More
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಹಾವೇರಿ: ಸಿನಿಮೀಯ ಶೈಲಿಯಲ್ಲಿ ಕಳ್ಳತನ; ಲಕ್ಷಾಂತರ ಮೌಲ್ಯದ ಚಿನ್ನಾಭರಣ ಲೂಟಿ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಪ್ರಧಾನಿ ಮೋದಿಗೆ ಹೇಗ್‌ನಲ್ಲಿ ಯುವ ಕಲಾವಿದರಿಂದ ಸಂಗೀತ, ನೃತ್ಯದ ಸ್ವಾಗತ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಭೀಕರ ಅಪಘಾತ; ಫುಟ್‌ಪಾತ್‌ಗೆ ನುಗ್ಗಿದ ಕಾರು, ಮಗು ಸೇರಿ ಮೂವರಿಗೆ ಗಂಭೀರ ಗಾಯ
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಜೆ.ಪಿ. ಪಾರ್ಕ್ ಫ್ಲೈಓವರ್ ಕೆಳಗೆ ಕಸದ ರಾಶಿ! GBA ನಿದ್ದೆ ಜಾರಿದೆಯೇ?
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಸಿದ್ದರಾಮಯ್ಯ ಬಿಟ್ರೆ CM ಆಗುವ ಅರ್ಹತೆ ಖರ್ಗೆಗೆ ಮಾತ್ರ: ರಾಯರೆಡ್ಡಿ
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಕ್ಷಮೆ ಕೇಳಿದ ಮೇಲೂ ಕೆನ್ನೆಗೆ ಬಾರಿಸಿದ ಯುವತಿಗೆ ಮನಬಂದಂತೆ ಥಳಿಸಿದ ಯುವಕ!
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಹೈಕೋರ್ಟ್ ತೀರ್ಪಿನ ಬೆನ್ನಲ್ಲೇ ಭೋಜಶಾಲೆಯಲ್ಲಿ ಹಿಂದೂ ಭಕ್ತರಿಂದ ಭಜನೆ
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಸ್ಲೀಪರ್ ಬಸ್ ಭಸ್ಮವಾದ್ರೂ 36 ಪ್ರಯಾಣಿಕರು ಪಾರಾಗಿದ್ಹೇಗೆ?
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ಭೂಪಟದಿಂದಲೇ ಮರೆಯಾಗಬೇಕಾದೀತು: ಪಾಕ್​ಗೆ ಸೇನಾ ಮುಖ್ಯಸ್ಥರ ಖಡಕ್ ಎಚ್ಚರಿಕೆ!
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ
ನೆದರ್‌ಲ್ಯಾಂಡ್ಸ್‌ ತಲುಪಿದ ಮೋದಿ; ವಿಮಾನ ನಿಲ್ದಾಣದಲ್ಲಿ ಆತ್ಮೀಯ ಸ್ವಾಗತ