Optical Illusion: ದ್ರಾಕ್ಷಿ ರಾಶಿಗಳ ಮಧ್ಯೆ ಮರೆಯಾಗಿರುವ ಬೆಕ್ಕನ್ನು ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೆ?

ಈಗಂತೂ ಸೋಷಿಯಲ್‌ ಮೀಡಿಯಾಗಳಲ್ಲಿ ಆಪ್ಟಿಕಲ್‌ ಇಲ್ಯೂಷನ್‌, ಬ್ರೈನ್‌ ಟೀಸರ್‌ನಂತಹ ಒಗಟಿನ ಆಟಗಳು ಸಿಕ್ಕಾಪಟ್ಟೆ ಜನಪ್ರಿಯತೆಯನ್ನು ಪಡೆದುಕೊಂಡಿವೆ. ಕಣ್ಣಿಗೆ ಭ್ರಮೆಯನ್ನು ಉಂಟು ಮಾಡುವ ಈ ಚಿತ್ರಗಳು ಮೆದುಳಿಗೆ ವ್ಯಾಯಾಮವನ್ನು ನೀಡುವ ಒಂದೊಳ್ಳೆ ಮಾರ್ಗವೂ ಆಗಿದೆ. ಇಲ್ಲೊಂದು ಅದೇ ರೀತಿಯ ಚಿತ್ರ ವೈರಲ್‌ ಆಗಿದ್ದು, ಆ ಚಿತ್ರದಲ್ಲಿ ದ್ರಾಕ್ಷಿ ರಾಶಿಗಳ ಮಧ್ಯೆ ಮರೆಯಾಗಿರುವ ಬೆಕ್ಕನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ನೀವು ಕೇವಲ 10 ಸೆಕೆಂಡುಗಳ ಒಳಗಾಗಿ ಈ ಸವಾಲನ್ನು ಪೂರ್ಣಗೊಳಿಸಬೇಕು.

Optical Illusion: ದ್ರಾಕ್ಷಿ ರಾಶಿಗಳ ಮಧ್ಯೆ ಮರೆಯಾಗಿರುವ ಬೆಕ್ಕನ್ನು ಕಂಡುಹಿಡಿಯಲು ನಿಮ್ಮಿಂದ ಸಾಧ್ಯವೆ?
ಆಪ್ಟಿಕಲ್‌ ಇಲ್ಯೂಷನ್‌
Image Credit source: Social Media

Updated on: Oct 02, 2025 | 5:34 PM

ಕಣ್ಣುಗಳು ಹಾಗೂ ಬುದ್ಧಿವಂತಿಕೆಗೆ ಸವಾಲು ಎಸೆಯುವಂತಹ ಆಪ್ಟಿಕಲ್‌ ಇಲ್ಯೂಷನ್‌ (Optical Illusion), ಬ್ರೈನ್‌ ಟೀಸರ್‌ನಂತಹ ಒಗಟಿನ ಆಟಗಳನ್ನು ಆಡುವುದೇ ಒಂದು ರೀತಿಯ ಮಜಾ. ಇಂತಹ ಮೋಜಿನ  ಕ್ಲಿಷ್ಟಕರ ಆಟಗಳು ತಲೆಗೆ ಹುಳ ಬಿಡುವುದು ಮಾತ್ರವಲ್ಲದೆ, ನಮ್ಮ ಬುದ್ಧಿವಂತಿಕೆ, ಏಕಾಗ್ರತೆ, ದೃಷ್ಟಿ ತೀಕ್ಷ್ಣತೆಯನ್ನು ಹೆಚ್ಚಿಸಲು ಕೂಡ ಸಹಕಾರಿಯಾಗಿದೆ. ಆಪ್ಟಿಕಲ್‌ ಇಲ್ಯೂಷನ್‌ನಂತಹ ಒಗಟಿನ ಆಟಗಳು ಸೋಷಿಯಲ್‌ ಮೀಡಿಯಾದಲ್ಲಿ ಪ್ರತಿನಿತ್ಯ ಹರಿದಾಡುತ್ತಿರುತ್ತವೆ. ಈ ಆಟಗಳನ್ನು ಆಡುವ ಮೂಲಕ ನೀವು ಸಹ ನಿಮ್ಮ ಬುದ್ಧಿವಂತಿಕೆಯನ್ನು ಪರೀಕ್ಷಿಸಿರುತ್ತೀರಿ ಅಲ್ವಾ. ಇಲ್ಲೊಂದು ಅಂತಹದ್ದೇ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವೊಂದು ಹರಿದಾಡುತ್ತಿದ್ದು, ಆ ಚಿತ್ರದಲ್ಲಿ ದ್ರಾಕ್ಷಿಗಳ ರಾಶಿಯ ನಡುವೆ ಮರೆಯಾಗಿರುವ ಬೆಕ್ಕನ್ನು ಹುಡುಕಲು ಸವಾಲನ್ನು ನೀಡಲಾಗಿದೆ. ನೀವು ಬರೀ 10 ಸೆಕೆಂಡುಗಳ ಒಳಗೆ ಆ ಬೆಕ್ಕನ್ನು ಹುಡುಕಬೇಕು.

ದ್ರಾಕ್ಷಿ ರಾಶಿಗಳ ನಡುವೆ ಅಡಗಿರುವ ಬೆಕ್ಕನ್ನು ಹುಡುಕಲು ನಿಮ್ಮಿಂದ ಸಾಧ್ಯವೆ?

ಈ ಮೇಲಿನ ನಿರ್ದಿಷ್ಟ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರದಲ್ಲಿ ರಾಶಿ ರಾಶಿ ದ್ರಾಕ್ಷಿಗಳಿರುವುದನ್ನು ನೀವು ಗಮನಿಸಿರುತ್ತೀರಿ ಅಲ್ವಾ. ಈ ರಾಶಿ ದ್ರಾಕ್ಷಿಗಳ ನಡುವೆ ಬೆಕ್ಕೊಂದು ಮರೆಯಾಗಿದೆ. ಆ ಮರೆಯಾದ ಬೆಕ್ಕನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ನೀವು ಬರೀ 10 ಸೆಕೆಂಡುಗಳ ಒಳಗಾಗಿ ಅದನ್ನು ಹುಡುಕಬೇಕು. ಈ ಆಪ್ಟಿಕಲ್‌ ಇಲ್ಯೂಷನ್‌ ಚಿತ್ರವನ್ನು DramatizeMe Deutsch ಹೆಸರಿನ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ.

ಇದನ್ನೂ ಓದಿ
ನೀವು ಸಕಾರಾತ್ಮಕ ವ್ಯಕ್ತಿಯೇ ಎಂಬುದನ್ನು ಈ ಚಿತ್ರ ತಿಳಿಸುತ್ತದೆ
ಈ ಚಿತ್ರದಲ್ಲಿ ಮರೆಯಾಗಿರುವ ಹುಲಿಯನ್ನು ಹುಡುಕಿ ನೋಡೋಣ
ಕಾರು ಎತ್ತ ಕಡೆ ಸಾಗುತ್ತಿದೆ ಎಂಬ ಅಂಶ ನಿಮ್ಮ ವ್ಯಕ್ತಿತ್ವದ ಬಗ್ಗೆ ಹೇಳುತ್ತೆ
ನಿಮ್ಮ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಈ ಚಿತ್ರದ ಮೂಲಕ ಪರೀಕ್ಷಿಸಿ

ಸವಾಲನ್ನು ಸ್ವೀಕರಿಸಲು ಸಿದ್ಧರಿದ್ದೀರಾ?

ಈ ಚಿತ್ರದಲ್ಲಿ ರಾಶಿ ರಾಶಿ ದ್ರಾಕ್ಷಿ ಗೊಂಚಲುಗಳು ಇರುವಂತಹದ್ದು ನಿಮಗೆ ಗೋಚರಿಸಬಹುದಲ್ವಾ. ಆದ್ರೆ ದ್ರಾಕ್ಷಿ ರಾಶಿಗಳ ಮಧ್ಯೆ ಬೆಕ್ಕೊಂದು ಮರೆಯಾಗಿದೆ. ತೀಕ್ಷ್ಣ ದೃಷ್ಟಿ, ಸಮಸ್ಯೆ ಬಗೆಹರಿಸುವ ಕೌಶಲ್ಯ ಇರುವ ಜಾಣರಿಗೆ ಮಾತ್ರ ಆ ಬೆಕ್ಕನ್ನು ಕಂಡುಹಿಡಿಯಲು ಸಾಧ್ಯವಂತೆ. ನೀವು ಕೂಡಾ ಏಕಾಗ್ರತೆ ವಹಿಸಿ ಚಿತ್ರವನ್ನು ನೋಡಿದರೆ ನಿಮಗೆ ಬೆಕ್ಕನ್ನು ಕಂಡು ಹಿಡಿಯಲು ಸಾಧ್ಯವಾಗುತ್ತದೆ.

ಪೋಸ್ಟ್ ಇಲ್ಲಿದೆ ನೋಡಿ:

ಇದನ್ನೂ ಓದಿ: ಚಿತ್ರದಲ್ಲಿ ಮರೆಯಾಗಿರುವ ಹುಲಿಯನ್ನು ಹುಡುಕಿ; ನಿಮ್ಮ ಕಣ್ಣು ಎಷ್ಟು ಶಾರ್ಪ್‌ ಇದೆ ಪರೀಕ್ಷಿಸಿ

ಇಲ್ಲಿದೆ ಉತ್ತರ:

ಹತ್ತು ಸೆಕೆಂಡುಗಳ ಒಳಗಾಗಿ ದ್ರಾಕ್ಷಿ ರಾಶಿಗಳ ಮಧ್ಯೆ ಮರೆಯಾಗಿರುವ ಬೆಕ್ಕನ್ನು ಕಂಡು ಹಿಡಿದವರಿಗೆ ಅಭಿನಂದನೆಗಳು. ನೀವು ಉತ್ತಮ ದೃಷ್ಟಿ ಕೌಶಲ್ಯ, ಏಕಾಗ್ರತೆಯನ್ನು ಹೊಂದಿದ್ದೀರಿ ಎಂದರ್ಥ. ಬೆಕ್ಕನ್ನು ಕಂಡುಹಿಡಿಯಲು ಸಾಧ್ಯವಾಗದಿದ್ದರೆ ಚಿಂತೆ ಬೇಡ, ಇಲ್ಲಿದೆ ನೋಡಿ ಉತ್ತರ. ನೀವು ಈ ಚಿತ್ರದಲ್ಲಿರು ಹಸಿರು ಎಲೆಯತ್ತ ನೋಡಿದರೆ, ಅಲ್ಲೇ ಪಕ್ಕದಲ್ಲಿ ದ್ರಾಕ್ಷಿಯಂತೆ ಕಾಣುವ ಪುಟಾಣಿ ಬೆಕ್ಕೊಂದು ಅಡಕವಾಗಿರುವುದನ್ನು ಗಮನಿಸಬಹುದು. ಇಂತಹ ಒಗಟಿನ ಆಟಗಳು ನಮ್ಮ ಬುದ್ದಿವಂತಿಕೆ, ದೃಷ್ಟಿ ಕೌಶಲ್ಯವನ್ನು ಹೆಚ್ಚಿಸಲು ಇರುವಂತಹ ಉತ್ತಮ ಮಾರ್ಗವಾಗಿದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:06 pm, Thu, 2 October 25