
ಆಪ್ಟಿಕಲ್ ಇಲ್ಯೂಷನ್ (Optical Illusion), ಬ್ರೈನ್ ಟೀಸರ್‌ನಂತಹ ಒಗಟಿನ ಆಟಗಳು ಕೇವಲ ಟೈಮ್ ಪಾಸ್ ಆಟ ಮಾತ್ರವಲ್ಲ. ಅವುಗಳು ನಮ್ಮ ಬುದ್ಧಿವಂತಿಕೆ, ವೀಕ್ಷಣಾ ಕೌಶಲ್ಯ ಮತ್ತು ಏಕಾಗ್ರತೆಯನ್ನು ಹೆಚ್ಚಿಸಲಿರುವ ಒಂದೊಳ್ಳೆ ಮಾರ್ಗವಾಗಿದೆ. ನೀವು ಕೂಡ ಇಂತಹ ಕ್ಲಿಷ್ಟಕರ ಸವಾಲಿನ ಆಟಗಳನ್ನು ಆಡಿರುತ್ತೀರಿ ಅಲ್ವಾ. ಇಂತಹದ್ದೇ ಕ್ಲಿಷ್ಟಕರ ಒಗಟಿನ ಆಟವೊಂದು ವೈರಲ್ ಆಗಿದ್ದು, ಅದರಲ್ಲಿ ರಾಶಿ ಉಂಗುರಗಳ ನಡುವೆ ಅಡಗಿರುವ ಎಂಗೇಜ್‌ಮೆಂಟ್ ಉಂಗುರವನ್ನು ಹುಡುಕಲು ನಿಮಗೆ ಸವಾಲನ್ನು ನೀಡಲಾಗಿದೆ. ತೀಕ್ಷ್ಣ ದೃಷ್ಟಿ ಕೌಶಲ್ಯ, ಸಮಸ್ಯೆ ಬಗೆಹರಿಸುವ ಕೌಶಲ್ಯ, ಬುದ್ಧಿವಂತಿಕೆ ಇರುವವರಿಗೆ ಮಾತ್ರ ಈ ಸವಾಲನ್ನು ಕೇವಲ 9 ಸೆಕೆಂಡುಗಳ ಒಳಗಾಗಿ ಪೂರ್ಣಗೊಳಿಸಲು ಸಾಧ್ಯವಂತೆ. ಹಾಗಿದ್ರೆ ಈ ಸವಾಲನ್ನು ಸ್ವೀಕರಿಸಿ ನೀವೆಷ್ಟು ಬುದ್ಧಿವಂತರು ಎಂಬುದನ್ನು ಪರೀಕ್ಷಿಸಲು ನೀವು ಸಿದ್ಧರಿದ್ದೀರಾ?
ಮೇಲಿನ ಚಿತ್ರಲ್ಲಿ ಬೇರೆ ಬೇರೆ ಬಣ್ಣಗಳ ಉಂಗುರಗಳಿವೆ. ಆ ಉಂಗುರದ ಪೈಕಿ ಒಂದು ಎಂಗೇಜ್‌ಮೆಂಟ್ ರಿಂಗ್ ಇದ್ದು, ಅದನ್ನು ನೀವು 9 ಸೆಕೆಂಡುಗಳ ಒಳಗೆ ಹುಡುಕಬೇಕು. ಇದರಲ್ಲಿ ಎಲ್ಲಾ ಉಂಗುರಗಳು ಒಂದೇ ರೀತಿ ಇರುವ ಕಾರಣ ಈ ಸವಾಲನ್ನು ಅಷ್ಟು ಸುಲಭವಾಗಿ ಪೂರ್ಣಗೊಳಿಸಲು ಯಾರಿಂದಲೂ ಸಾಧ್ಯವಿಲ್ಲವಂತೆ. ಕೇವಲ ತೀಕ್ಷ್ಣ ದೃಷ್ಟಿ, ಉತ್ತಮ ಬುದ್ಧಿವಂತಿಕೆ, ಸಮಸ್ಯೆ ಪರಿಹರಿಸುವ ಕೌಶಲ್ಯಗಳನ್ನು ಹೊಂದಿರುವವರಿಗೆ ಮಾತ್ರ ಈ ಸವಾಲನ್ನು ಪೂರ್ಣಗೊಳಿಸಲು ಸಾಧ್ಯವಂತೆ. ಹಾಗಿದ್ರೆ ಈ ಸವಾಲನ್ನು ಪೂರ್ಣ ಗೊಳಿಸುವ ಮೂಲಕ ನೀವೆಷ್ಟು ಬುದ್ಧಿವಂತರು ಎಂಬುದನ್ನು ನೀವು ಪರೀಕ್ಷಿಸಿ.
ಮೇಲಿನ ಚಿತ್ರದಲ್ಲಿ ರಾಶಿ ಉಂಗುರಗಳ ಮಧ್ಯೆ ಒಂದು ಎಂಗೇಜ್‌ಮೆಂಟ್ ಉಂಗುರವನ್ನು ಮರೆ ಮಾಡಲಾಗಿದೆ. ಅದನ್ನು ಜಾಣತನದಿಂದ ಕಂಡು ಹಿಡಿಯಬೇಕು. ಏಕಾಗ್ರತೆ ವಹಿಸಿ ಚಿತ್ರವನ್ನು ಗಮನಿಸಿದಾಗ ಮಾತ್ರ ನಿಮಗೆ ಎಂಗೇಜ್‌ಮೆಂಟ್ ಉಂಗುರವನ್ನು ಪತ್ತೆ ಹಚ್ಚಲು ಸಾಧ್ಯ. ನೀವು ರಿಂಗ್‌ಗಳ ಸ್ಟೋನ್‌ಗಳ ಮೇಲೆ ಗಮನವನ್ನು ಕೇಂದ್ರೀಕರಿಸುವ ಬದಲು ಉಂಗುರದ ಬ್ಯಾಂಡ್ ನೋಡಿ. ಅದರಲ್ಲಿ ಎಂಗೇಂಜ್‌ಮೆಂಟ್ ರಿಂಗ್ ಚಿನ್ನದ ಬ್ಯಾಂಡನ್ನು ಹೊಂದಿದೆ.
ಇದನ್ನೂ ಓದಿ: ಈ ಚಿತ್ರದಲ್ಲಿ ಮರೆಯಾಗಿರುವ ಹುಲಿಯನ್ನು ಹುಡುಕಿ; ನಿಮ್ಮ ಕಣ್ಣು ಎಷ್ಟು ಶಾರ್ಪ್ ಇದೆ ಪರೀಕ್ಷಿಸಿ
9 ಸೆಕೆಂಡುಗಳ ಒಳಗಾಗಿ ಎಂಗೇಜ್‌ಮೆಂಟ್ ರಿಂಗ್ ಕಂಡು ಹಿಡಿದವರಿಗೆ ಅಭಿನಂದನೆಗಳು. ನೀವು ತೀಕ್ಷ್ಣ ದೃಷ್ಟಿ ಕೌಶಲ್ಯ ಮತ್ತು ಬುದ್ಧಿವಂತಿಕೆಯನ್ನು ಹೊಂದಿದ್ದೀರಿ ಎಂದರ್ಥ. ಉತ್ತರ ಕಂಡುಕೊಳ್ಳಲು ಸಾಧ್ಯವಾಗದಿದ್ದರೆ ಚಿಂತೆ ಬೇಡ. ನಿಮಗಾಗಿ ಇಲ್ಲಿದೆ ಉತ್ತರ. ಚಿನ್ನದ ಬ್ಯಾಂಡ್ ಹಾಗೂ ಹೊಳೆಯುವ ವಜ್ರದ ಹರಳನ್ನು ಹೊಂದಿರುವ ಈ ಉಂಗುರವೇ ಎಂಗೇಜ್‌ಮೆಂಟ್ ರಿಂಗ್.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ