ನೀವು ಹೊರಗಡೆ ಹೋಗುವಾಗ ನಿಮ್ಮ ಬ್ಯಾಗ್ ಗಳನ್ನು ಯಾವ ರೀತಿ ಹಿಡಿದುಕೊಳ್ಳುತ್ತೀರಿ ಎಂಬುದು ನಿಮ್ಮ ಸ್ವಭಾವ ಹೇಗೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಿದೆ ಎಂಬುದು ನಿಮಗೆ ತಿಳಿದಿದೆಯೇ? ಮಹಿಳೆ ತನ್ನ ಬ್ಯಾಗ್ ಹೇಗೆ ಹಿಡಿದಿಟ್ಟುಕೊಳ್ಳುತ್ತಾಳೆ ಎಂಬುದು ಅವಳ ನಿಜವಾದ ಸ್ವಭಾವ, ನಡವಳಿಕೆ ಮತ್ತು ಸಾಮರ್ಥ್ಯವನ್ನು ಬಹಿರಂಗಪಡಿಸುತ್ತದೆ.
1 ನಿಮ್ಮ ಮೊಣಕೈ ಮೇಲೆ :
ನೀವು ನಿಮ್ಮ ಬ್ಯಾಗ್ ಮೊಣಕೈಯಲ್ಲಿ ಹಿಡಿದುಕೊಳ್ಳುವ ಅಭ್ಯಾಸ ನಿಮಗಿದ್ದರೆ ನೀವೂ ನಿಮ್ಮನ್ನು ಗಂಭೀರವಾಗಿ ಮತ್ತು ಗೌರವದಿಂದ ತೆಗೆದುಕೊಳ್ಳಬೇಕು ಎಂದು ಜನರಿಗೆ ತಿಳಿಸಲು ನೀವು ಬಯಸಬಹುದು. ವಿಶೇಷವಾಗಿ, ನಿಮ್ಮ ಸ್ವಂತ ದುಡಿಮೆಯ ಹಣದಿಂದ ನೀವು ಬ್ಯಾಗ್ ಖರೀದಿಸಿದ್ದರೆ, ನೀವು ಅದನ್ನು ಸ್ವಾಭಿಮಾನದಿಂದ ಮೊಣಕೈಯಲ್ಲಿ ಹಿಡಿದಿಟ್ಟುಕೊಂಡಿರುತ್ತೀರಿ.
ಸಾಮಾನ್ಯವಾಗಿ, ಹಿಂದಿನ ಕಾಲದಲ್ಲಿ ಮೊಣಕೈಯ ಡೊಂಕುಗಳಲ್ಲಿ ಚೀಲವನ್ನು ಹಿಡಿದಿಟ್ಟುಕೊಳ್ಳುವುದನ್ನು ಮಹಿಳೆಯರು ಸಾಮಾನುಗಳನ್ನು ಒಯ್ಯುವ ಕಾಲದಲ್ಲಿ ಅಭ್ಯಾಸ ಮಾಡುತ್ತಿದ್ದರು. ಆದರೆ ಆಧುನಿಕ ಕಾಲದಲ್ಲಿ, ನೀವು ಸ್ವತಂತ್ರ ಮತ್ತು ಸ್ವಾವಲಂಬಿಯಾಗಿರಬಹುದು ಆದರೆ ನೀವು ಧೈರ್ಯಶಾಲಿ ನಡವಳಿಕೆಯನ್ನು ಇಷ್ಟಪಡಬಹುದು, ವಿಶೇಷವಾಗಿ ಈ ಸಮಾಜದ ಲಿಂಗ ಅಸಮಾನತೆಯಿಂದ ಹೊರಬರಲು. ಹೆಚ್ಚಿನ ಸೆಲೆಬ್ರಿಟಿಗಳು ತಮ್ಮ ಮೊಣಕೈಯ ಡೊಂಕುಗಳಲ್ಲಿ ಬ್ಯಾಗ್ ಇಟ್ಟು ಕೊಂಡಿರುವುದನ್ನು ನೀವು ನೋಡಿರುತ್ತೀರಿ.
2. ನಿಮ್ಮ ಭುಜದ ಮೇಲೆ:
ನಿಮ್ಮ ಬ್ಯಾಗನ್ನು ಭುಜದ ಮೇಲೆ ಹಿಡಿದಿಟ್ಟುಕೊಂಡರೆ, ನಿಮ್ಮ ಗುಣಲಕ್ಷಣಗಳು ನೀವು ನಿರಾತಂಕ, ಆತ್ಮವಿಶ್ವಾಸವುಳ್ಳ ವ್ಯಕ್ತಿ ಎಂದು ತಿಳಿಸುತ್ತದೆ. ವಿಶೇಷವಾಗಿ, ನಿಮ್ಮ ಬ್ಯಾಗನ್ನು ಒಂದು ಭುಜದ ಮೇಲೆ ಹಿಡಿದಿಟ್ಟುಕೊಂಡು ಅದು ಮುಕ್ತವಾಗಿ ನೇತಾಡುತ್ತಿದ್ದರೆ, ನೀವು ಸ್ವಾಭಾವಿಕ ಮತ್ತು ಸಂತೋಷವಾಗಿ ಇದ್ದೀರಿ ಎಂದು ತೋರಿಸುತ್ತದೆ. ಅಂದರೆ ನಿಮ್ಮ ಬಗ್ಗೆ ವಿಶ್ವಾಸ ಹೊಂದಿರಬಹುದು. ಈಗ, ನೀವು ನಿಮ್ಮ ಚೀಲವನ್ನು ಒಂದು ಭುಜದ ಮೇಲೆ ಮತ್ತು ನಿಮ್ಮ ದೇಹಕ್ಕೆ ಬಿಗಿಯಾಗಿ ಹಿಡಿದಿದ್ದರೆ, ನೀವು ಹೆಚ್ಚು ಪ್ರಾಯೋಗಿಕವಾಗಿ ಮತ್ತು ಕೆಲಸಗಳ ಬಗ್ಗೆ ನಿಮ್ಮ ಗಮನ ಕೇಂದ್ರೀಕರಿಸಿದ್ದೀರಿ ಎಂದರ್ಥ.
ಇದನ್ನು ಓದಿ: ನಿಮ್ಮ ಹಣೆಯಿಂದ ನಿಮ್ಮ ನಿಜವಾದ ಸ್ವಭಾವ ಮತ್ತು ನಡವಳಿಕೆಯನ್ನು ತಿಳಿದುಕೊಳ್ಳಬಹುದು ಹೇಗೆ ಗೊತ್ತೇ?
3. ನಿಮ್ಮ ಕೈಯಲ್ಲಿ:
ನಿಮ್ಮ ಕೈಯಲ್ಲಿ ನಿಮ್ಮ ಚೀಲವನ್ನು ನೀವು ಹಿಡಿದಿಟ್ಟುಕೊಂಡರೆ, ಜನರು ನನ್ನ ಬಗ್ಗೆ ಎನು ತಿಳಿದುಕೊಳ್ಳುತ್ತಾರೆ, ಅವರ ಮನಸಲ್ಲಿ ಇವಾಗ ನನ್ನ ಬಗ್ಗೆ ಏನು ಓಡುತ್ತಿರಬಹುದು ಎಂಬುದರ ಬಗ್ಗೆ ನೀವೂ ಅತಿಯಾಗಿ ಯೋಚಿಸುತ್ತೀದ್ದೀರಿ ಎಂದರ್ಥ. ನೀವು ಯಾವುದೇ ವಿಷಯದಲ್ಲೂ ಕಲಿಯುವ ಹಂಬಲ ನಿಮಗಿದೆ. ಸಾಧ್ಯವಾದಷ್ಟು ಹೆಚ್ಚಿನ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿಯನ್ನು ಹೊಂದಿರುತ್ತೀರಿ. ನಿಮ್ಮ ವೃತ್ತಿಪರ ಜೀವನದ ಬಗ್ಗೆ ನೀವು ಸಾಕಷ್ಟು ಮಹತ್ವಾಕಾಂಕ್ಷೆಯನ್ನು ಹೊಂದಿರಬಹುದು. ನೀವು ಕಾಳಜಿವಹಿಸುವ ಜನರಿಗಾಗಿ ಹೆಚ್ಚಿನ ಪ್ರೀತಿಯನ್ನು ನೀಡಲು ಸದಾ ಬಯಸುತ್ತೀರಿ.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: