ನಿಮ್ಮ ಹಣೆಯಿಂದ ನಿಮ್ಮ ನಿಜವಾದ ಸ್ವಭಾವ ಮತ್ತು ನಡವಳಿಕೆಯನ್ನು ತಿಳಿದುಕೊಳ್ಳಬಹುದು ಹೇಗೆ ಗೊತ್ತೇ?
ನಿಮಗೆ ದೊಡ್ಡ ಹಣೆ ಇದೆಯೇ? ಚಿಕ್ಕದಾದ ಹಣೆಯ? ಬಾಗಿದ ಹಣೆ? ನಿಮ್ಮ ಹಣೆಯ ಆಧಾರದ ಮೇಲೆ ನಿಮ್ಮನ್ನು ತಿಳಿದುಕೊಳ್ಳಲು ಈ ಸ್ಟೋರಿಯನ್ನು ಪೂರ್ತಿಯಾಗಿ ಓದಿ.
ಪ್ರತಿಯೊಬ್ಬ ವ್ಯಕ್ತಿಯ ಗುಣ ಹಾಗೂ ನಡತೆಗಳು ವಿಭಿನ್ನವಾಗಿರುತ್ತದೆ. ಹಾಗೆಯೇ ಕೆಲವೊಮ್ಮೆ ನಿಮ್ಮ ಕಣ್ಣುಗಳ ಮೂಲಕ ನೀವು ಯಾವ ರೀತಿಯ ವ್ಯಕ್ತಿ ಎಂದು ತಿಳಿದುಕೊಳ್ಳಬಹುದು. ಇದರೊಂದಿಗೆ ಮೂಗು, ಬಾಯಿ, ಮುಖದ ಆಕಾರ, ಬೆರಳಿನ ಉದ್ದ, ತುಟಿಯ ಆಕಾರ, ಇತ್ಯಾದಿಗಳಿಂದ ನೀವು ಏನು ಎಂದು ಹೇಳುವ ಸಾಕಷ್ಟು ಟ್ರಿಕ್ಸ್ ಗಳನ್ನು ಕೇಳಿರುತ್ತೀರಿ. ಹಾಗೆಯೇ ನಿಮ್ಮ ಹಣೆಯು ನಿಮ್ಮ ನಿಜವಾದ ಸ್ವಭಾವ ಮತ್ತು ನಡವಳಿಕೆಯ ಲಕ್ಷಣಗಳನ್ನು ಬಹಿರಂಗಪಡಿಸುತ್ತದೆ. ನಿಮಗೆ ದೊಡ್ಡ ಹಣೆ ಇದೆಯೇ? ಕಿರಿದಾದ ಹಣೆಯ? ಬಾಗಿದ ಹಣೆ? ನಿಮ್ಮ ಹಣೆಯ ಆಧಾರದ ಮೇಲೆ ನಿಮ್ಮನ್ನು ತಿಳಿದುಕೊಳ್ಳಲು ಈ ಸ್ಟೋರಿಯನ್ನು ಪೂರ್ತಿಯಾಗಿ ಓದಿ.
ದೊಡ್ಡ ಹಣೆ(Big Forehead):
ನಿಮ್ಮ ಹಣೆ ದೊಡ್ಡದಾಗಿದೆಯೇ? ಹಾಗಿದ್ದರೆ ಇದನ್ನು ಓದಿ. ಸಾಮಾನ್ಯವಾಗಿ ಶ್ರೀಮಂತರು, ಪ್ರಸಿದ್ಧ ವ್ಯಕ್ತಿಗಳು, ಉದ್ಯಮಿಗಳು ದೊಡ್ಡ ಹಣೆಯನ್ನು ಹೊಂದಿರುತ್ತಾರೆ ಹಾಗೂ ದೊಡ್ಡ ಹಣೆ ಇರುವವರು ಶ್ರೀಮಂತರಾಗುತ್ತಾರೆ. ನೀವು ಬಹು-ಪ್ರತಿಭಾವಂತರಾಗಿರುವುದರಿಂದ ಬಹು ಕಾರ್ಯದಲ್ಲಿ ನಿಮ್ಮನ್ನು ನೀವು ತೊಡಗಿಸಿಕೊಂಡಿರುತ್ತೀರಿ. ನೀವು ವಿಶ್ಲೇಷಣಾತ್ಮಕ, ಬುದ್ಧಿವಂತ, ಅರ್ಥಗರ್ಭಿತ ಮತ್ತು ನೀವು ತೆಗೆದುಕೊಳ್ಳುವ ಯಾವುದೇ ಪ್ರಯತ್ನದಲ್ಲಿ ಯಶಸ್ವಿ ಸಿಗುವುದು ಖಚಿತ. ನಿಮ್ಮ ಸ್ವಂತ ಜೀವನದ ಉಸ್ತುವಾರಿಯನ್ನು ತೆಗೆದುಕೊಳ್ಳಲು ಇಷ್ಟಪಡುತ್ತೀರಿ. ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳುತ್ತೀರಿ ಜೊತೆಗೆ ನೀವು ಮುಕ್ತ ಮನಸ್ಸಿನವರಾಗಿರಬಹುದು.
ಚಿಕ್ಕದಾದ ಹಣೆ(Narrow Forehead):
ನೀವು ಕಿರಿದಾದ ಹಣೆಯನ್ನು ಹೊಂದಿದ್ದೀರಾ? ಹಾಗಿದ್ದರೇ ಇದನ್ನು ಪೂರ್ತಿಯಾಗಿ ಓದಿ. ನೀವು ಅನನ್ಯ ಮತ್ತು ಅಪರೂಪದ ವ್ಯಕ್ತಿತ್ವವನ್ನು ಹೊಂದಿದ್ದೀರಿ ಎಂದು ತಿಳಿಸುತ್ತದೆ. ನಿಮಗೆ ಯಾವುದು ಸರಿ ಅನ್ನಿಸುತ್ತದೆಯೋ ಅದರೊಂದಿಗೆ ನಿಮ್ಮ ಜೀವನವನ್ನು ಹೊಂದಿಕೊಂಡು ಬದುಕಲು ನೀವು ಬಯಸಬಹುದು. ಸಂಬಂಧಗಳಲ್ಲಿ, ನೀವು ಬದ್ಧರಾಗಿ, ಪ್ರಾಮಾಣಿಕರಾಗಿ ಮತ್ತು ದೀರ್ಘಕಾಲ ಉಳಿಯಲು ನೀವು ಬಯಸುತ್ತೀರಿ. ನೀವು ಎಂದಾದರೂ ತುಂಬಾ ದುಃಖಿತರಾಗಿದ್ದರೆ, ಬೇರೆ ಯೋಜನೆಯನ್ನು ಕೈಗೆತ್ತಿಕೊಳ್ಳುವ ಮೂಲಕ ನಿಮ್ಮ ಮನಸ್ಸನ್ನು ತಕ್ಷಣವೇ ಬೇರೆಡೆಗೆ ತಿರುಗಿಸಬಹುದು.
ಇದನ್ನು ಓದಿ: ನೀವು ಥಂಬ್ಸ್ ಅಪ್ ಮಾಡುವಾಗ ನಿಮ್ಮ ಹೆಬ್ಬೆರಳು ಯಾವ ರೀತಿಯಾಗಿದೆ ಎಂದು ತಿಳಿದುಕೊಳ್ಳಿ
ಬಾಗಿದ ಹಣೆ(Curved Forehead):
ನೀವು ಬಾಗಿದ ಹಣೆಯನ್ನು ಹೊಂದಿದ್ದೀರಾ? ಹಾಗಿದ್ದರೇ ಇದನ್ನು ಓದಿ. ನೀವು ಸ್ನೇಹಪರ, ಸುಲಭವಾದ ಮತ್ತು ಹರ್ಷಚಿತ್ತದಿಂದ ಇರುವ ವ್ಯಕ್ತಿ ಎಂದು ತಿಳಿಸುತ್ತದೆ. ನೀವೂ ಬೇರೆಯವರೊಂದಿಗೆ ಅತ್ಯಂತ ವೇಗವಾಗಿ ಸ್ನೇಹ ಬೆಳೆಸುತ್ತೀರಿ. ನೀವು ಜನರನ್ನು ಪ್ರೇರೇಪಿಸುವಲ್ಲಿ ಮತ್ತು ಅವರ ಗುರಿಗಳನ್ನು ಅಥವಾ ಕನಸುಗಳನ್ನು ಸಾಧಿಸವಲ್ಲಿ ತುಂಬಾ ಪ್ರೋತ್ಸಾಹ ನೀಡುವ ವ್ಯಕ್ತಿತ್ವ ನಿಮ್ಮದು.
ಜೀವನಶೈಲಿಗೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ: