AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಲಾಕ್​ಡೌನ್​ ಸಮಯದಲ್ಲಿ ಮುಖದ ಬೇಡದ ಕೂದಲು ದೂರವಾಗಿಸಲು ಇಲ್ಲಿದೆ ಸರಳ ವಿಧಾನ

ಸಾಮಾನ್ಯವಾಗಿ ಮುಖದ ಮೇಲಿನ ಬೇಡದ ಕೂದಲು ಸೌಂದರ್ಯವನ್ನು ಹಾಳು ಮಾಡುತ್ತದೆ ಎನ್ನುವುದು ಯುವತಿಯರ ಕೂಗು. ಅದರಲ್ಲೂ ಹುಬ್ಬು ಮತ್ತು ತುಟಿಯ ಮೇಲಿನ ಹೆಚ್ಚಿದ ಕೂದಲು ಯುವತಿಯರಲ್ಲಿ ಬೇಸರ ಉಂಟು ಮಾಡಿಸುತ್ತದೆ. ಹೀಗಾಗಿ ಮುಖದ ಕಾಂತಿ ಹಾಳಾಗದೆ ಇರುವ ಹಾಗೆ ಬೇಡದ ಕೂದಲನ್ನು ಮನೆಯಲ್ಲೇ ದೂರ ಮಾಡುವ ಸರಳ ವಿಧಾನ ಹೀಗಿದೆ.

ಲಾಕ್​ಡೌನ್​ ಸಮಯದಲ್ಲಿ ಮುಖದ ಬೇಡದ ಕೂದಲು ದೂರವಾಗಿಸಲು ಇಲ್ಲಿದೆ ಸರಳ ವಿಧಾನ
ಪ್ರಾತಿನಿಧಿಕ ಚಿತ್ರ
preethi shettigar
| Updated By: ಆಯೇಷಾ ಬಾನು|

Updated on: May 23, 2021 | 8:49 AM

Share

ಸೌಂದರ್ಯವನ್ನು ಹೆಚ್ಚಿಸಿಕೊಳ್ಳಲು ಅಥವಾ ಇರುವ ಅಂದವನ್ನು ಕಾಪಾಡಿಕೊಳ್ಳಲು ಮಹಿಳೆಯರು ಸಾಮಾನ್ಯವಾಗಿ ನಾನಾ ರೀತಿಯ ಪ್ರಯತ್ನಗಳನ್ನು ಮಾಡುತ್ತಾರೆ. ಚೆಂದವಾಗಿ ಕಾಣುವುದು ಯಾರಿಗೆ ತಾನೇ ಬೇಡ ಹೇಳಿ ಹೀಗಾಗಿಯೇ ಹದಿಹರೆಯದ ಯುವತಿಯರು ಮತ್ತು ಮಹಿಳೆಯರು ಮುಖದ ಕಾಂತಿ ಹೆಚ್ಚಿಸಿಕೊಳ್ಳಲು, ತಲೆ ಕೂದಲನ್ನು ನಯವಾಗಿಸಲು, ನೈಸರ್ಗಿಕ ವಸ್ತುಗಳಿಂದ ಹಿಡಿದು ಎಲ್ಲಾ ರೀತಿಯ ಕೆಮಿಕಲ್​ಯುಕ್ತ ವಸ್ತುಗಳನ್ನು ಬಳಸುತ್ತಾರೆ. ಆದರೆ ಕೆಲವೊಮ್ಮೆ ದೇಹದಲ್ಲಿ ಆಗುವ ನೈಸರ್ಗಿಕ ಬದಲಾವಣೆಗಳನ್ನು ಮರೆಮಾಚುವುದು ಕೂಡ ಯುವತಿಯರಿಗೆ ಅನಿವಾರ್ಯವಾಗಿರುತ್ತದೆ. ಇತರ ಸಂದರ್ಭದಲ್ಲಾದರೆ ಪಾರ್ಲರ್​ಗಳಿಗೆ ಹೋಗಿ ಅದನ್ನು ಸರಿದೂಗಿಸಬಹುದು ಆದರೆ ಲಾಕ್​ಡೌನ್​ನ ಈ ಸಂದರ್ಭದಲ್ಲಿ ಅದು ಕಷ್ಟ. ಹೀಗಾಗಿ ಯುವತಿಯರಿಗೆ ಕಾಡುವ ಬೇಡದ ಕೂದಲಿನ ಸಮಸ್ಯೆಯನ್ನು ಮನೆಯಲ್ಲೇ ನಿವಾರಿಸಲು ಇಲ್ಲಿದೆ ಸುಲಭವಾದ ಉಪಾಯ.

ಸಾಮಾನ್ಯವಾಗಿ ಮುಖದ ಮೇಲಿನ ಬೇಡದ ಕೂದಲು ಸೌಂದರ್ಯವನ್ನು ಹಾಳು ಮಾಡುತ್ತದೆ ಎನ್ನುವುದು ಯುವತಿಯರ ಕೂಗು. ಅದರಲ್ಲೂ ಹುಬ್ಬು ಮತ್ತು ತುಟಿಯ ಮೇಲಿನ ಹೆಚ್ಚಿದ ಕೂದಲು ಯುವತಿಯರಲ್ಲಿ ಬೇಸರ ಉಂಟು ಮಾಡಿಸುತ್ತದೆ. ಹೀಗಾಗಿ ಮುಖದ ಕಾಂತಿ ಹಾಳಾಗದೆ ಇರುವ ಹಾಗೆ ಬೇಡದ ಕೂದಲನ್ನು ಮನೆಯಲ್ಲೇ ದೂರ ಮಾಡುವ ಸರಳ ವಿಧಾನ ಹೀಗಿದೆ.

ಹುಬ್ಬುಗಳು ಅಥವಾ ಐಬ್ರೋಸ್ ಮತ್ತು ತುಟಿ ಮೇಲಿನ ಅನಗತ್ಯ ಕೂದಲು ನಿವಾರಣೆ ಮಾರ್ಗಗಳು: 1. ಚಿಮುಟ ಅಥವಾ ಟ್ವೀಜರ್ ಹುಬ್ಬುಗಳ ಮೇಲಿನ ಅನಗತ್ಯ ಕೂದಲನ್ನು ನೀವೇ ತೆಗೆದುಹಾಕಲು ಟ್ವೀಜರ್ ಸುರಕ್ಷಿತ ಮತ್ತು ಸುಲಭವಾದ ಮಾರ್ಗಗಳಲ್ಲಿ ಒಂದಾಗಿದೆ. ಇದನ್ನು ಬಳಸುವ ಸರಳ ಮಾರ್ಗವೆಂದರೆ ಕೆಲ ಸೆಕೆಂಡುಗಳ ಕಾಲ ಕುದಿಯುವ ಬಿಸಿ ನೀರಿನಲ್ಲಿ ಟ್ವೀಜರ್ ಅದ್ದಿ ಸ್ವಚ್ಛಗೊಳಿಸಬೇಕು. ನಂತರ ಹುಬ್ಬಿನ ಪ್ರತಿಯೊಂದು ಕೂದಲನ್ನು ಆಕಾರಕ್ಕೆ ತಕ್ಕಂತೆ ಒಂದೊಂದಾಗಿ ಎಳೆಯಬೇಕು. ಪ್ಲಾಸ್ಟಿಕ್ ಅಥವಾ ಲೋಹದ ಟ್ವೀಜರ್ ಅಥವಾ ಪ್ಲಕ್ಕರ್ ಬಳಕೆಯಿಂದ, ನೀವು ಸುಲಭವಾಗಿ ನಿಮ್ಮ ಹುಬ್ಬುಗಳನ್ನು ಮನೆಯಲ್ಲಿಯೇ ಸರಿಪಡಿಸಿಕೊಳ್ಳಬಹುದು.

2. ವ್ಯಾಕ್ಸ್ ಸ್ಟ್ರಿಪ್ಸ್ ಮುಖದ ಮೇಲೆ ದಪ್ಪವಾದ ಅಥವಾ ಹೆಚ್ಚು ಕೂದಲನ್ನು ಹೊಂದಿದ್ದರೆ ವ್ಯಾಕ್ಸ್ ಸ್ಟ್ರಿಪ್ಸ್ ಅನ್ನು ಬಳಸಬಹುದಾಗಿದೆ. ಇದು ಕೂದಲು ಬೇಗ ಬೆಳವಣಿಗೆಯಾಗುವುದನ್ನು ಆದಷ್ಟು ತಪ್ಪಿಸುತ್ತದೆ. ವ್ಯಾಕ್ಸಿಂಗ್ ಪ್ರಾರಂಭಿಸುವ ಮೊದಲು ನಿಮ್ಮ ಚರ್ಮವನ್ನು ಸ್ವಚ್ಛವಾಗಿಡುವುದು ತುಂಬಾ ಅಗತ್ಯ. ಹೀಗಾಗಿ ಮುಖದ ಮೇಲಿನ ಅಥವಾ ತುಟಿಯ ಮೇಲಿನ ಕೂದಲುತೆಗೆಯುವಾಗ ತೆಳುವಾದ ಮತ್ತು ಆಕಾರಕ್ಕೆ ತಕ್ಕಂತೆ ಸ್ಟ್ರಿಪ್ಸ್​ಗಳನ್ನು ಬಳಸಿ. ವ್ಯಾಕ್ಸ್ ಸ್ಟ್ರಿಪ್ಸ್ ನೋವನ್ನು ಕಡಿಮೆ ಮಾಡುತ್ತದೆ ಮತ್ತು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ.

3. ಕೂದಲು ತೆಗೆಯುವ ಯಂತ್ರಗಳು ಇತ್ತಿಚೇಗೆ ಮುಖದ ಮೇಲಿನ ಬೇಡದ ಕೂದಲನ್ನು ತೆಗೆಯಲು ಸಾಕಷ್ಟು ಯಂತ್ರಗಳು ಮಾರುಕಟ್ಟೆಗೆ ಬಂದಿವೆ. ಇವುಗಳಲ್ಲಿ ಬಹುತೇಕ ಎಲ್ಲವೂ ಚಾರ್ಜ್​ ವ್ಯವಸ್ಥೆಗೆ ಅನುಗುಣವಾಗಿದೆ. ಕೇವಲ ತುಟಿ ಮತ್ತು ಮುಖದ ಮೇಲಿನ ಕೂದಲು ಮಾತ್ರವಲ್ಲ. ದೇಹದ ಇತರ ಪ್ರದೇಶಗಳಿಂದ ಕೂದಲನ್ನು ತೆಗೆಯಲು ಸಹಕಾರಿಯಾಗಿದೆ. ಇದು ಸ್ವಚ್ಛವಾದ ಚರ್ಮಕ್ಕೆ ದಾರಿ ಮಾಡಿಕೊಡುತ್ತದೆ. ನಯವಾದ ಟ್ರಿಮ್ಮರ್‌ಗಳು ಹುಬ್ಬುಗಳು ಮತ್ತು ತುಟಿ ಮೇಲಿನ ಕೂದಲನ್ನು ತೆಗೆಯಲು ಸಹಕಾರಿಯಾಗಿದೆ. ಆದರೆ ಇದು ನಿಮ್ಮ ಚರ್ಮಕ್ಕೆ ಹಾನಿ ಮಾಡದ ಹಾಗೇ ಮುತುವರ್ಜಿ ವಹಿಸಬೇಕಾಗುತ್ತದೆ.

4. ರೇಜರ್ ಬೇಡದ ಕೂದಲನ್ನು ತೆಗೆಯಲು ಇತ್ತೀಚೆಗೆ ಯುವತಿಯರು ರೇಜರ್‌ಗಳನ್ನು ಬಳಸುತ್ತಾರೆ. ಇದು ಸುಲಭ ಮತ್ತು ನೋವುರಹಿತ ವಿಧಾನವೆಂದು ಪರಿಗಣಿಸಲಾಗುತ್ತದೆ. ಇದು ಅನುಕೂಲಕರವಾಗಿದ್ದು, ಸಮಯ ಉಳಿತಾಯ ಮಾಡುತ್ತದೆ. ಹುಬ್ಬುಗಳು ಮತ್ತು ತುಟಿ ಮೇಲಿನ ಕೂದಲನ್ನು ತೆಗೆದುಹಾಕಲು ದೊಡ್ಡದಕ್ಕಿಂತ ಚಿಕ್ಕದಾದ ರೇಜರ್ ಅನ್ನು ಆಯ್ಕೆ ಮಾಡುವುದು ಸೂಕ್ತ. ಅಲ್ಲದೇ ರೇಜರ್ ಬಳಸಿ ಕೂದಲು ತೆಗೆದ ಮೇಲೆ ಆ ಭಾಗಕ್ಕೆ ಹಾಲೀನ ಕೆನೆ ಅಥವಾ ಅಲೋವೆರಾದ ಜೆಲ್ಲನ್ನು ಹಚ್ಚುವುದು ಒಳ್ಳೆಯ ಅಭ್ಯಾಸ.

5. ಥ್ರೇಡಿಂಗ್: ಇದು ಕೂಡ ಒಂದು ಸರಳ ವಿಧಾನವಾಗಿದ್ದು, ನೂಲಿನ ಸಹಾಯದಿಂದ ಬೇಡದ ಕೂದಲನ್ನು ತೆಗೆಯಿರಿ. ನೀವು ಬಳಸುವ ಪೌಡರ್​ ಅನ್ನು ಬೇಡದ ಕೂದಲು ತೆಗೆಯುವ ಭಾಗಕ್ಕೆ ಲೇಪಿಸಿ. ನಂತರ ನೂಲಿನ ಸಹಾಯದಿಂದ ಕೂದಲನ್ನು ತೆಗೆಯುತ್ತಾ ಬನ್ನಿ. ನೂಲು ತುಂಡಾಗದಂತೆ ಮತ್ತು ಚರ್ಮಕ್ಕೆ ಹೆಚ್ಚು ಹಾನಿಯಾಗದಂತೆ ಇದನ್ನು ಬಳಸುವುದು ಸೂಕ್ತ.

ಇದನ್ನೂ ಓದಿ:

ಒಂದೇ ತೆರನಾದ ಅಭ್ಯಾಸ ಬಿಡಿ; ರೋಗನಿರೋಧಕ ಶಕ್ತಿ ಹೆಚ್ಚಿಸಲು ಆಹಾರ ಪದ್ಧತಿಯಲ್ಲಿ ವೈವಿಧ್ಯತೆ ಇರಲಿ