- Kannada News Photo gallery Actress Rashmika Mandanna said that I need sweets in my daily diet Kannada news
Rashmika Health Secret: ನಟಿ ರಶ್ಮಿಕಾಗೆ ನಿತ್ಯ ಊಟದಲ್ಲಿ ಸಿಹಿ ಬೇಕೇ ಬೇಕಂತೆ: ಸಿಹಿ ತಿನ್ನುವುದರ ಹಿಂದಿರುವ ಇಂಟರೆಸ್ಟಿಂಗ್ ವಿಚಾರಗಳು ಇಲ್ಲಿವೆ
ನಟಿ ರಶ್ಮಿಕಾ ಮಂದಣ್ಣರವರು ಪ್ರತಿ ದಿನ ಸೇವಿಸುವ ಆಹಾರದಲ್ಲಿ ನನಗೆ ಸಿಹಿ ಬೇಕೇ ಬೇಕು ಎಂದು ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.
Updated on:Dec 06, 2022 | 3:04 PM

ಸಾಕಷ್ಟು ಜನರು ತಮ್ಮ ಆರೋಗ್ಯ ಹಾಗೂ ತ್ವಚೆಯ ಕಾಂತಿಯನ್ನು ಕಾಪಾಡುವ ದೃಷ್ಟಿಯಿಂದ ಸಕ್ಕರೆಯಿಂದ ದೂರವಿರುವುದನ್ನು ನೋಡಿದ್ದೀರಿ. ಆದರೆ ನಟಿ ರಶ್ಮಿಕಾ ಮಂದಣ್ಣ ಪ್ರತಿ ದಿನ ಸೇವಿಸುವ ಆಹಾರದಲ್ಲಿ ನನಗೆ ಸಿಹಿ ಬೇಕೇ ಬೇಕು ಎಂದು ಇತ್ತೀಚೆಗಷ್ಟೇ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಹೌದು ಸಾಕಷ್ಟು ಬೇಡಿಕೆಯನ್ನು ಪಡೆದಿರುವ ನಟಿ ರಶ್ಮಿಕಾ ಮಂದಣ್ಣ ಆಹಾರ ಪ್ರೇಮಿ. ತಮ್ಮ ಬಿಡುವಿನ ಸಮಯದಲ್ಲಿ ಸ್ವತಃ ಅವರೇ ಆಹಾರ ತಯಾರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚುಕೊಳ್ಳುತ್ತಿರುತ್ತಾರೆ.

ಅವರು ಇತ್ತೀಚಿಗಷ್ಟೇ ತಮ್ಮ ಸಾಮಾಜಿಕ ಜಾಲತಾಣದಲ್ಲಿ ನಾನು ಸೇವಿಸುವ ಆಹಾರದಲ್ಲಿ ಮೂರು ಹೊತ್ತು ಕೂಡ ಸಿಹಿ ಬೇಕೇ ಬೇಕು. ಇದನ್ನು ಯಾವತ್ತೂ ಬದಲಾಯಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ.

ನಾನು ಪ್ರತಿ ದಿನ ಸಿಹಿ ಆಹಾರಗಳನ್ನು ಸೇವಿಸುವುದರಿಂದ ನನಗೆ ನನ್ನ ಕೆಲಸದ ಒತ್ತಡದ ಜೀವನದ ನಡುವೆ ಸಿಹಿ ತಿಂಡಿ ಒತ್ತಡದಿಂದ ಮುಕ್ತಿ ನೀಡುತ್ತದೆ ಎಂದು ಹೇಳಿಕೊಂಡಿದ್ದಾರೆ.

ಸ್ಟ್ರಾಬೆರಿ ಮೂಸ್ ನನ್ನ ಇಷ್ಟದ ಸಿಹಿ ತಿಂಡಿ. ವೈಟ್ ಚಾಕೋಲೇಟ್ ಹಾಗೂ ಸ್ಟ್ರಾಬೆರಿಯೊಂದಿನ ರುಚಿಯನ್ನು ನಾನು ಆನಂದದಿಂದ ತಿನ್ನುತ್ತೇನೆ. ಇದು ನನಗೆ ಶೂಟಿಂಗ್ ಮಧ್ಯದಲ್ಲಿ ಒತ್ತಡದಿಂದ ಸಾಕಷ್ಟು ಮುಕ್ತಿಯನ್ನು ನೀಡುತ್ತದೆ ಎಂದು ಇತ್ತೀಚೆಗಷ್ಟೇ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ಚಾಕೋಲೇಟ್ ಪುಡಿಂಗ್ ಕೂಡ ನನಗೆ ಅತೀ ಇಷ್ಟವಾದುದು ಎಂದು ತಮ್ಮ ಶೂಟಿಂಗ್ ವೇಳೆಯಲ್ಲಿ ಒಂದು ಪುಲ್ ಜಾರ್ ಚಾಕೋಲೇಟ್ ಪುಡಿಂಗ್ ತಿನ್ನುತ್ತೇನೆ. ಸಿಹಿ ತಿಂಡಿಯು ನಿಮ್ಮನ್ನು ಪ್ರತಿ ದಿನ ಒತ್ತಡದಿಂದ ಮುಕ್ತಿ ನೀಡಲು ಸಹಕಾರಿಯಾಗಿದೆ ಎಂದು ಹೇಳಿಕೊಂಡಿದ್ದಾರೆ.

ಜೊತೆಗೆ ಚಾಕೋಲೇಟ್ ಹಾಗೂ ತುಪ್ಪದಿಂದ ತುಂಬಿಕೊಂಡಿರುವ ಬನಾನ ಪ್ಯಾನ್ ಕೇಕ್ , ಒಟ್ಸ್ ಪ್ಯಾನ್ ಕೇಕ್, ಬ್ಲೂ ಬೆರಿ ಚೀಸ್ ಕೇಕ್ ರಶ್ಮಿಕಾ ಅವರ ನೆಚ್ಚಿನ ಸಿಹಿ ತಿಂಡಿಯಾಗಿದೆ.
Published On - 2:57 pm, Tue, 6 December 22



















