ಶುಭ್ಮನ್ ಗಿಲ್ ಬ್ಯಾಟಿಂಗ್ ಸಾಮರ್ಥ್ಯವನ್ನು ಹೊಗಳಿರುವ ಯುವರಾಜ್ ಸಿಂಗ್, ನಿಜವಾಗಿಯೂ ಆತ ತುಂಬಾ ಶ್ರಮಜೀವಿ. ಮುಂದಿನ 10 ವರ್ಷಗಳಲ್ಲಿ ಅವರು ವಿಶೇಷ ಸಾಧನೆ ಮಾಡುತ್ತಾರೆ ಎಂದು ನಾನು ನಂಬುತ್ತೇನೆ. ಅಲ್ಲದೆ ಇತ್ತೀಚಿನ ದಿನಗಳಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದಾರೆ. ಹೀಗಾಗಿ 2023 ರ ಏಕದಿನ ವಿಶ್ವಕಪ್ನಲ್ಲಿ ಆರಂಭಿಕರಾಗಿ ಶುಭ್ಮನ್ ಪ್ರಬಲ ಸ್ಪರ್ಧಿ ಎಂದು ಯುವಿ ಹೇಳಿದ್ದಾರೆ.