ಭಾರತ ಕ್ರಿಕೆಟ್ ತಂಡ ಬಾಂಗ್ಲಾದೇಶದಲ್ಲಿ ಬೀಡುಬಿಟ್ಟಿದ್ದು ಏಕದಿನ ಸರಣಿ ಆಡುತ್ತಿದೆ. ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ಸೋಲುಂಡ ಪರಿಣಾಮ ಟೀಮ್ ಇಂಡಿಯಾಕ್ಕೆ ಮುಂದಿನ ಪಂದ್ಯ ಮುಖ್ಯವಾಗಿದೆ. ಇದೀಗ ದ್ವಿತೀಯ ಕದನಕ್ಕೆ ಭಾರತೀಯ ಆಟಗಾರರು ಭರ್ಜರಿ ಅಭ್ಯಾಸದಲ್ಲಿ ನಿರತರಾಗಿದ್ದಾರೆ.
ಇದರ ನಡುವೆ ಇಂದು ಸಂಜೆ 4:30ಕ್ಕೆ ಢಾಕಾದಲ್ಲಿ ನಾಯಕ ರೋಹಿತ್ ಶರ್ಮಾ ಸುದ್ದಿ ಗೋಷ್ಠಿಯಲ್ಲಿ ಭಾಗಿಯಾಗಲಿದ್ದಾರೆ. ಡಿಸೆಂಬರ್ 7 ಬುಧವಾರದಂದು ನಡೆಯಲಿರುವ ದ್ವಿತೀಯ ಏಕದಿನದ ಬಗ್ಗೆ ಹಿಟ್ಮ್ಯಾನ್ ಕೆಲ ಮಹತ್ವದ ಹೇಳಿಕೆ ನೀಡುವ ಸಾಧ್ಯತೆ ಇದೆ.
ಭಾರತ ಹಾಗೂ ಬಾಂಗ್ಲಾದೇಶ ನಡುವಣ ದ್ವಿತೀಯ ಏಕದಿನ ಪಂದ್ಯ ಡಿಸೆಂಬರ್ 7 ಬುಧವಾರದಂದು ಢಾಕಾದ ಶೇರೆ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ನಡೆಯಲಿದೆ. ಮೊದಲ ಏಕದಿನ ಕೂಡ ಇಲ್ಲೇ ನಡೆದಿತ್ತು. ಈ ಪಂದ್ಯ ಬೆಳಗ್ಗೆ 11:30ಕ್ಕೆ ಆರಂಭವಾಗಲಿದ್ದು, ಟಾಸ್ 11 ಗಂಟೆಗೆ ನಡೆಯಲಿದೆ.
ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ನೇರ ಪ್ರಸಾರವಾಗಲಿದೆ. ಪಂದ್ಯದ ಲೈವ್ ಸ್ಟ್ರೀಮಿಂಗ್ ಅನ್ನು ಸೋನಿ ಲೈವ್ ಅಪ್ಲಿಕೇಶನ್‌ನಲ್ಲಿ ನೋಡಬಹುದು. ಜಿಯೋ ಟಿವಿ ಆ್ಯಪ್ ಇದ್ದವೂ ಇದರ ಮೂಲಕ ಕೂಡ ಸೋನಿ ಸ್ಪೋರ್ಟ್ಸ್ ಚಾನೆಲ್ನಲ್ಲಿ ವೀಕ್ಷಿಸಬಹುದು.
ಅಭ್ಯಾಸದಲ್ಲಿ ನಿರತರಾಗಿರುವ ವಿರಾಟ್ ಕೊಹ್ಲಿ.
ಮೊದಲ ಏಕದಿನದಲ್ಲಿ ಬ್ಯಾಟರ್ಗಳ ಸಂಪೂರ್ಣ ವೈಫಲ್ಯದಿಂದ ಭಾರತ ಸೋಲು ಕಂಡಿತು. ಬಲಿಷ್ಠ ಬ್ಯಾಟಿಂಗ್ ಪಡೆ ಎಂದು ಹೇಳಿಕೊಳ್ಳುವ ರೋಹಿತ್ ಪಡೆ ಏಕದಿನ ಪಂದ್ಯದಲ್ಲಿ 200+ ರನ್ ಹೊಡೆಯಲು ಸಾಧ್ಯವಾಗಲಿಲ್ಲ. ಈ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ಟೀಮ್ ಇಂಡಿಯಾ 0-1 ಹಿನ್ನಡೆ ಪಡೆದುಕೊಂಡಿದೆ. ಉಳಿದ ಎರಡೂ ಪಂದ್ಯ ಗೆಲ್ಲಬೇಕಾದ ಒತ್ತಡದಲ್ಲಿದೆ.
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶಿಖರ್ ಧವನ್, ವಿರಾಟ್ ಕೊಹ್ಲಿ, ರಜತ್ ಪಾಟೀದಾರ್, ಶ್ರೇಯಸ್ ಅಯ್ಯರ್, ರಾಹುಲ್ ತ್ರಿಪಾಠಿ, ಇಶಾನ್ ಕಿಶನ್, ಕೆ.ಎಲ್. ರಾಹುಲ್ (ಉಪ ನಾಯಕ, ವಿಕೆಟ್ ಕೀಪರ್), ಶಹ್ಬಾಜ್ ಅಹಮದ್, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ದೀಪಕ್ ಚಾಹರ್, ಕುಲದೀಪ್ ಸೇನ್, ಉಮ್ರಾನ್ ಮಲಿಕ್.
Published On - 9:47 am, Tue, 6 December 22