Personality Test: ಕಾಫಿ-ಗೂಬೆ, ನಿಮಗೆ ಕಾಣಿಸಿದ್ದೇನು? ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವದ ರಹಸ್ಯ ತಿಳಿಯಿರಿ
ಇತ್ತೀಚಿನ ದಿನಗಳಲ್ಲಿ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಟೆಸ್ಟ್‌ಗಳು ಸಾಕಷ್ಟು ಜನಪ್ರಿಯವಾಗಿವೆ. ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುವ ಈ ಒಗಟಿನ ಆಟಗಳ ಮೂಲಕ ಜನರು ತಮ್ಮ ನಿಗೂಢ ವ್ಯಕ್ತಿತ್ವವನ್ನು ಪರೀಕ್ಷಿಸಿಕೊಳ್ಳುತ್ತಿರುತ್ತಾರೆ. ಇದೀಗ ಅಂತಹದ್ದೇ ವ್ಯಕ್ತಿತ್ವ ಪರೀಕ್ಷೆಯ ಫೋಟೋವೊಂದು ಹರಿದಾಡುತ್ತಿದ್ದು, ಆ ಚಿತ್ರದಲ್ಲಿ ಗೂಬೆ ಅಥವಾ ಕಾಫಿ ಇವೆರಡರಲ್ಲಿ ನಿಮಗೆ ಮೊದಲು ಕಂಡಿದ್ದೇನು ಎಂಬುದರ ಮೇಲೆ ನೀವು ತಾರ್ಕಿಕ ಚಿಂತನೆಯುಳ್ಳ ವ್ಯಕ್ತಿಯೇ ಎಂಬುದನ್ನು ಪರೀಕ್ಷಿಸಿಕೊಳ್ಳಿ.

ಆಪ್ಟಿಕಲ್ ಇಲ್ಯೂಷನ್‌ನಂತಹ (optical illusion) ಒಗಟಿನ ಆಟಗಳು ಜನರಲ್ಲಿ ಭ್ರಮೆಯನ್ನು ಹುಟ್ಟಿಸುವುದು ಮಾತ್ರವಲ್ಲದೆ ಬುದ್ಧಿವಂತಿಕೆಗೂ ಸವಾಲೊಡ್ಡುತ್ತವೆ. ಇನ್ನೂ ಮೂಗಿನ ಆಕಾರ, ಕಣ್ಣಿನ ಬಣ್ಣ, ಕೂದಲಿನ ಉದ್ದ, ಆಕಾರ ಸೇರಿದಂತೆ ದೇಹಾಕಾರದ ಮೂಲಕ ವ್ಯಕ್ತಿತ್ವವನ್ನು (Personality) ಪರೀಕ್ಷಿಸುವಂತೆ (Test) ಕೆಲವು ಆಪ್ಟಿಕಲ್ ಇಲ್ಯೂಷನ್ ಚಿತ್ರಗಳ ಮೂಲಕವೂ ನಮ್ಮ ವ್ಯಕ್ತಿತ್ವ, ಗುಣ ಸ್ವಭಾವವನ್ನು ಸಹ ತಿಳಿದುಕೊಳ್ಳಬಹುದಾಗಿದೆ. ಇಂತಹ ಸಾಕಷ್ಟು ಫೋಟೋಗಳು ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುತ್ತವೆ. ಅಂತಹದ್ದೇ ಫೋಟೋವೊಂದು ಇದೀಗ ವೈರಲ್ ಆಗಿದ್ದು, ಆ ಚಿತ್ರದ ಮೂಲಕ ನೀವು ತಾರ್ಕಿಕ ನಡೆಯ ವ್ಯಕ್ತಿಯೇ ಅಥವಾ ಹೆಚ್ಚು ಅರ್ಥಗರ್ಭಿತ ವ್ಯಕ್ತಿಯೇ ಎಂಬುದನ್ನು ತಿಳಿದುಕೊಳ್ಳಬಹುದಾಗಿದೆ. ಕಾಫಿ ಅಥವಾ ಗೂಬೆ ಆ ಚಿತ್ರದಲ್ಲಿ ಮೊದಲು ನಿಮಗೇನು ಕಾಣಿಸಿತು ಎಂಬುದರ ಮೇಲೆ ನಿಮ್ಮ ನಿಗೂಢ ವ್ಯಕ್ತಿತ್ವ ಹೇಗಿದೆ ಎಂಬುದನ್ನು ಪರೀಕ್ಷಿಸಿ.
ಈ ಚಿತ್ರ ನೋಡಿ ನಿಮ್ಮ ರಹಸ್ಯ ವ್ಯಕ್ತಿತ್ವ ಹೇಗಿದೆಯೆಂದು ಪರೀಕ್ಷಿಸಿಕೊಳ್ಳಿ:
ಸಾಕಷ್ಟು ಸಂಖ್ಯೆಯ ಆಪ್ಟಿಕಲ್ ಇಲ್ಯೂಷನ್ ಪರ್ಸನಾಲಿಟಿ ಫೋಟೋಗಳು ವೈರಲ್ ಆಗುತ್ತಿರುತ್ತವೆ. ಇಲ್ಲೊಂದು ಅಂತಹದ್ದೇ ಫೋಟೋ ಹರಿದಾಡುತ್ತಿದ್ದು, ಕಾಫಿ ಅಥವಾ ಗೂಬೆ ಆ ಚಿತ್ರದಲ್ಲಿ ನಿಮಗೇನು ಮೊದಲು ಕಾಣಿಸಿತು ಎಂಬ ಆಧಾರದ ಮೇಲೆ ನೀವು ನಿಮ್ಮ ವ್ಯಕ್ತಿತ್ವವನ್ನು ಪರೀಕ್ಷಿಸಬಹುದು. ಈ ಚಿತ್ರದಲ್ಲಿ ಕೆಲವರಿಗೆ ಮೊದಲು ಗೂಬೆ ಕಾಣಿಸಿದರೆ ಇನ್ನೂ ಕೆಲವರಿಗೆ ಕಾಫಿ ಕಾಣಿಸಬಹುದು. ಹೀಗೆ ನಿಮಗೇನು ಕಾಣಿಸಿತು ಎಂಬುದರ ಮೇಲೆ ನೀವು ತಾರ್ಕಿಕ ಚಿಂತನೆಯುಳ್ಳ ವ್ಯಕ್ತಿಯೇ ಅಥವಾ ಅರ್ಥ ಗರ್ಭಿತ ವ್ಯಕ್ತಿಯೇ ಎಂಬುದನ್ನು ತಿಳಿಯಿರಿ.
ಮೊದಲು ನಿಮಗೆ ಗೂಬೆ ಕಾಣಿಸಿದರೆ: ಈ ಆಪ್ಟಿಕಲ್ ಇಲ್ಯೂಷನ್ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ ನಿಮಗೆ ಮೊದಲು ಗೂಬೆ ಕಾಣಿಸಿದರೆ ನೀವು ಅರ್ಥ ಗರ್ಭಿತ ವ್ಯಕ್ತಿಯಾಗಿರುತ್ತೀರಿ. ನೀವು ಸೂಕ್ಷ್ಮವಾದ ವಿವರಗಳನ್ನು ನೋಡುವ ಮತ್ತು ನೈಸರ್ಗಿಕವಾಗಿ ಗ್ರಹಿಸುವ ಸ್ವಭಾವವನ್ನು ಹೊಂದಿರುತ್ತೀರಿ. ಈ ಗುಣಲಕ್ಷಣಗಳು ನೀವು ಎಲ್ಲದರಲ್ಲೂ ಸ್ಪಷ್ಟವಾದದ್ದನ್ನು ಕಾಣುವ ವ್ಯಕ್ತಿಯಾಗಿರುತ್ತೀರಿ. ಅಂದರೆ ನೀವು ಇತರರು ಕಡೆಗಣಿಸಬಹುದಾದ ವಿಷಯಗಳಲ್ಲೂ ಸೂಕ್ಷ್ಮತೆ ಮತ್ತು ಸೂಕ್ಷ್ಮ ವ್ಯತ್ಯಾಸಗಳನ್ನು ಹೆಚ್ಚಾಗಿ ಗಮನಿಸುತ್ತೀರಿ. ನೀವು ಯಾವುದೇ ವಿಷಯಗಳನ್ನಾದರೂ ಸರಿ ಮೇಲ್ನೋಟಕ್ಕೆ ನೋಡುವುದಿಲ್ಲ, ಬದಲಿಗೆ ಅವುಗಳನ್ನು ಆಳವಾಗಿ ಅರ್ಥೈಸುವವರಾಗಿರುತ್ತೀರಿ. ಈ ನಿಮ್ಮ ಗುಣವೇ ನಿಮ್ಮ ವೈಯಕ್ತಿಕ ಮತ್ತು ವೃತ್ತಿ ಜೀವನದ ಪ್ರಬಲ ಸಾಧನವಾಗಿದೆ ಅಂತಾನೇ ಹೇಳಬಹುದು.
ಇದನ್ನೂ ಓದಿ: ದ್ವೀಪ, ಬೆಕ್ಕಿನ ಮುಖ; ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಎಂತಹದ್ದು ತಿಳಿಯಿರಿ
ನೀವು ಮೊದಲು ಕಾಫಿಯನ್ನು ನೋಡಿದರೆ: ನೀಮಗೇನಾದರೂ ಈ ಆಪ್ಟಿಕಲ್ ಇಲ್ಯೂಷನ್ ಚಿತ್ರದಲ್ಲಿ ಮೊದಲು ಕಾಫಿ ಕಣ್ಣಿಗೆ ಬಿದ್ದರೆ, ನೀವು ಪ್ರಾಯೋಗಿಕ ವ್ಯಕ್ತಿ ಎಂದು ಅರ್ಥ. ನೀವು ನಿಮ್ಮ ಜೀವನದಲ್ಲಿ ಯಾವಾಗಲೂ ಕ್ರಿಯಾತ್ಮಕತೆ ಮತ್ತು ದಕ್ಷತೆಗೆ ಹೆಚ್ಚು ಆದ್ಯತೆಯನ್ನು ನೀಡುತ್ತೀರಿ. ಜೊತೆಗೆ ನೀವು ಜವಬ್ದಾರಿಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ತಾರ್ಕಿಕ ಚೌಕಟ್ಟನ್ನು ಅನ್ವಯಿಸುವಲ್ಲಿ ನೀವು ಪರಿಣತಿ ಹೊಂದಿರುತ್ತೀರಿ. ನೀವು ನಿಮ್ಮ ಗುರಿಗಳನ್ನು ಸಾಧಿಸಲು ಪ್ರಾಯೋಗಿಕ ಮತ್ತು ನೇರ ಮಾರ್ಗಗಳ ಮೇಲೆ ಗಮನ ಹರಿಸುವುದರಿಂದ ನಿಮ್ಮ ಈ ಸ್ವಭಾವವೇ ನಿಮ್ಮನ್ನು ಅತ್ಯುತ್ತಮ ಸಮಸ್ಯೆ ಪರಿಹಾರಕನನ್ನಾಗಿ ಮಾಡಬಹುದು. ಅಲ್ಲದೆ ನೀವು ಕೇವಲ ಕನಸು ಕಾಣುವವರಾಗಿರುವುದಿಲ್ಲ, ನೀವು ಅದಕ್ಕಾಗಿ ಕಠಿಣ ಕಾರ್ಯವನ್ನು ನಿರ್ವಹಿಸುತ್ತೀರಿ. ಈ ಗುಣ ನಿಮ್ಮ ನಿಜವಾದ ಶಕ್ತಿ ಅಂತಾನೇ ಹೇಳಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ