Personality Test : ಮುಂಜಾನೆ, ಮಧ್ಯಾಹ್ನ, ಸಂಜೆ, ರಾತ್ರಿ: ನೀವು ಹುಟ್ಟಿದ ಸಮಯವೇ ಹೇಳುತ್ತೆ ವ್ಯಕ್ತಿತ್ವ
ಸೋಶಿಯಲ್ ಮೀಡಿಯಾದಲ್ಲಿ ವ್ಯಕ್ತಿತ್ವ ಪರೀಕ್ಷೆಗೆ ಸಂಬಂಧ ಪಟ್ಟ ಫೋಟೋಗಳು ವೈರಲ್ ಆಗುತ್ತಿರುತ್ತದೆ. ಇದರ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದು ಎನ್ನುವುದು ಎಲ್ಲರಿಗೂ ಗೊತ್ತೇ ಇದೆ. ಆದರೆ ಹುಟ್ಟಿದ ಸಮಯ ಕೂಡ ಒಬ್ಬ ವ್ಯಕ್ತಿಯ ವ್ಯಕ್ತಿತ್ವವನ್ನು ಬಹಿರಂಗ ಪಡಿಸುತ್ತದೆಯಂತೆ. ಮುಂಜಾನೆ, ಮಧ್ಯಾಹ್ನ, ಸಂಜೆ ಹಾಗೂ ರಾತ್ರಿ ಇದರಲ್ಲಿ ನೀವು ಯಾವ ಸಮಯದಲ್ಲಿ ಹುಟ್ಟಿದ್ದೀರಾ ಎನ್ನುವುದರ ಮೇಲೆ ಗುಣಸ್ವಭಾವ ಹಾಗೂ ವ್ಯಕ್ತಿತ್ವವನ್ನು ತಿಳಿದುಕೊಳ್ಳಬಹುದಾಗಿದ್ದು, ಈ ಕುರಿತಾದ ಮಾಹಿತಿ ಇಲ್ಲಿದೆ.
ವ್ಯಕ್ತಿತ್ವ ಪರೀಕ್ಷೆ
Image Credit source: Randy Faris/The image bank/Getty Images
ಪ್ರತಿಯೊಬ್ಬ ವ್ಯಕ್ತಿಗೂ ವ್ಯಕ್ತಿತ್ವ (personality) ಎನ್ನುವುದು ಬಹಳ ಮುಖ್ಯ. ಎಷ್ಟೇ ಪದವಿ ಗಳಿಸಿರಲಿ, ಆದರೆ ವ್ಯಕ್ತಿತ್ವದ ಹೇಗಿದೆ ಎನ್ನುವುದರ ಮೇಲೆ ಸಮಾಜವು ಆ ವ್ಯಕ್ತಿಯನ್ನು ಗೌರವಿಸುತ್ತದೆ. ಆದರೆ ಒಬ್ಬ ವ್ಯಕ್ತಿ ನಿಂತುಕೊಳ್ಳುವ ಭಂಗಿ, ಕುಳಿತುಕೊಳ್ಳುವ ಭಂಗಿ, ಮಲಗುವ ಭಂಗಿ, ಮೂಗು, ಹುಬ್ಬು, ಕಣ್ಣು, ಕಿವಿ, ಕೈಬೆರಳಿನ ಆಕಾರ ಕೂದಲಿನ ಬಣ್ಣದಿಂದಲೂ ವ್ಯಕ್ತಿತ್ವವನ್ನು ತಿಳಿಯಬಹುದು. ಅಷ್ಟೇ ಯಾಕೆ, ಒಬ್ಬ ವ್ಯಕ್ತಿಯ ಹುಟ್ಟಿದ ಸಮಯವು ಆ ವ್ಯಕ್ತಿಯ ಗುಣಸ್ವಭಾವವನ್ನು ಬಿಚ್ಚಿಡುತ್ತದೆಯಂತೆ. ಹಾಗಾದ್ರೆ ನೀವು ಹುಟ್ಟಿದ ಸಮಯ (birth time) ಯಾವುದು ಎನ್ನುವುದರ ಆಧಾರದ ಮೇಲೆ ವ್ಯಕ್ತಿತ್ವವನ್ನು ತಿಳಿಯಬಹುದು.
ಮುಂಜಾನೆ ಹುಟ್ಟಿದವರು : ಈ ವ್ಯಕ್ತಿಗಳು ಸಾಧನೆಯ ಹಾದಿಯಲ್ಲಿ ಸಾಗುತ್ತಾರೆ. ಈ ವ್ಯಕ್ತಿಗಳು ಶಿಸ್ತು ಬದ್ಧರು ಹಾಗೂ ಸಂಘಟಿತ ವ್ಯಕ್ತಿಗಳು ಎನ್ನಬಹುದು. ಅತ್ಯುತ್ತಮ ವ್ಯಕ್ತಿತ್ವ, ನಾಯಕತ್ವ ಗುಣವು ಅಧಿಕವಾಗಿರುತ್ತದೆ. ಆದರೆ, ಕೆಲವೊಮ್ಮೆ ಹಠಮಾರಿಗಳಾಗಿ ಕಾಣುತ್ತಾರೆ. ಎಲ್ಲಾ ಕೆಲಸ ಕಾರ್ಯಗಳ ಬಗ್ಗೆ ಸ್ಪಷ್ಟ ನಿಲುವನ್ನು ಹೊಂದಿದ್ದು, ಗುರಿ ಸಾಧಿಸುವ ಕಡೆಗೆ ಹೆಚ್ಚು ಗಮನ ಹರಿಸುತ್ತಾರೆ. ಜೀವನವನ್ನು ಚಾಲೆಂಜ್ ಆಗಿ ಸ್ವೀಕರಿಸುತ್ತಾರೆ ಹೀಗಾಗಿ ತಮ್ಮ ಕಠಿಣ ಪರಿಶ್ರಮದಿಂದ ಅತಿ ಸಾಧಕರ ಪಟ್ಟಿಯಲ್ಲಿ ಸೇರುತ್ತಾರೆ.
ಬೆಳಗ್ಗಿನ ಜಾವದಿಂದ ಮಧ್ಯಾಹ್ನದೊಳಗೆ ಹುಟ್ಟಿದವರು : ಈ ಜನರು ತಮ್ಮ ಮಾತಿನಿಂದಲೇ ಎಲ್ಲರನ್ನು ಸುಲಭವಾಗಿ ಮೋಡಿ ಮಾಡುತ್ತಾರೆ. ಇವರು ರಹಸ್ಯಮಯ ವ್ಯಕ್ತಿತ್ವ ಹೊಂದಿದ್ದು, ಕೆಲಸ ಕಾರ್ಯಗಳಲ್ಲಿ ಉಸ್ತುವಾರಿ ವಹಿಸಿಕೊಳ್ಳುತ್ತಾರೆ. ಈ ವ್ಯಕ್ತಿಗಳಿಗೆ ಸ್ನೇಹಿತರನ್ನು ಮಾಡಿಕೊಳ್ಳುವುದು ಪಾರ್ಟಿ ಹಾಗೂ ಸಮಾರಂಭಗಳಲ್ಲಿ ಭಾಗಿಯಾಗುವುದೆಂದರೆ ತುಂಬಾನೇ ಇಷ್ಟ.
ಮಧ್ಯಾಹ್ನದಿಂದ ಸಂಜೆಯೊಳಗೆ ಜನಿಸಿದ ವ್ಯಕ್ತಿಗಳು : ಈ ವ್ಯಕ್ತಿಗಳು ಶಾಂತಸ್ವಭಾವದವರು, ಸೃಜನಶೀಲರು, ತರ್ಕ ಬದ್ಧವಾಗಿ ಯೋಚಿಸುವ ಗುಣ ಇವರದ್ದು. ಯಾವುದೇ ಕೆಲಸ ಕಾರ್ಯವನ್ನು ಕೈಗೆತ್ತಿಕೊಂಡರೂ ಮೊದಲು ಚಿಂತಿಸಿ ಅನಂತರದಲ್ಲಿ ಮುಂದಿನ ಹೆಜ್ಜೆ ಇಡುತ್ತಾರೆ. ಎನರ್ಜಿಟಿಕ್, ಮಹಾತ್ವಕಾಂಕ್ಷಿಗಳಾಗಿದ್ದು ಈ ವ್ಯಕ್ತಿಗಳಿಗೆ ತಮ್ಮ ಕನಸುಗಳ ಬಗ್ಗೆ ಸ್ಪಷ್ಟ ಅರಿವಿದ್ದು, ಅದರ ಅನುಸಾರವಾಗಿ ನಡೆಯುತ್ತಾರೆ.
ರೆಸ್ಟೋರೆಂಟ್‌ಗಳಲ್ಲಿ ಬಾಣಸಿಗರು ಉದ್ದನೆಯ ಬಿಳಿ ಟೋಪಿ ಧರಿಸೋದ್ಯಾಕೆ ಗೊತ್ತಾ?
ಪೋಷಕರ ಪ್ರೀತಿ, ತ್ಯಾಗಕ್ಕೆ ಬೆಲೆ ಕಟ್ಟಲಾಗದು
ವಿಶ್ವ ಹಾಲು ದಿನವನ್ನು ಏಕೆ ಆಚರಿಸಲಾಗುತ್ತದೆ ಗೊತ್ತಾ?
ನೀವು ಭಾವನಾತ್ಮಕ ವ್ಯಕ್ತಿಯೇ; ಈ ಚಿತ್ರ ನೋಡಿ ನಿಮ್ಮ ವ್ಯಕ್ತಿತ್ವ ಪರೀಕ್ಷಿಸಿ
ಸಂಜೆಯಿಂದ ಮಧ್ಯರಾತ್ರಿಯೊಳಗೆ ಹುಟ್ಟಿದವರು: ಈ ವ್ಯಕ್ತಿಗಳನ್ನು ಗೂಬೆಗೆ ಹೋಲಿಕೆ ಮಾಡಲಾಗಿದೆ. ಈ ವ್ಯಕ್ತಿಗಳು ಚಿಂತಕರಾಗಿದ್ದು, ಆತ್ಮವಿಶ್ವಾಸವು ಹೆಚ್ಚಿದ್ದು ಎಲ್ಲದರಲ್ಲಿಯೂ ಪರಿಪೂರ್ಣತೆ ಬಯಸುತ್ತಾರೆ. ಈ ಜನರಲ್ಲಿ ಸಹಾಯ ಮಾಡುವ ಗುಣವು ಹೆಚ್ಚಿರುತ್ತದೆ. ತಮ್ಮ ಭವಿಷ್ಯದ ಬಗ್ಗೆ ಹೆಚ್ಚು ಯೋಚನೆಯುಳ್ಳವರಾಗಿರುತ್ತಾರೆ. ಜೀವನದಲ್ಲಿ ಸಮೃದ್ಧಿಯನ್ನು ಸದಾ ಬಯಸುತ್ತಾರೆ.
ಇನ್ನಷ್ಟು ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ