​Pet food ತಿಂದು ಹಕ್ಕಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ ಬೆಕ್ಕು, ಅಧ್ಯಯನದಿಂದ ದೃಢ

| Updated By: ಅಕ್ಷಯ್​ ಪಲ್ಲಮಜಲು​​

Updated on: Dec 27, 2024 | 1:01 PM

ಕಳೆದ ಕೆಲವು ತಿಂಗಳಿನಿಂದ ಹಕ್ಕಿ ಜ್ವರದ ಭೀತಿಯೂ ಹೆಚ್ಚಾಗಿದೆ. ಭಾರತ ಮಾತ್ರವಲ್ಲದೇ ಪ್ರಪಂಚದಾದಂತ್ಯ ಹಕ್ಕಿ ಜ್ವರ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಇತ್ತೀಚೆಗಷ್ಟೇ ವಾಷಿಂಗ್ ಟನ್ ನ ಒರೆಗಾನದ ಮನೆಯೊಂದರ ಸಾಕು ಬೆಕ್ಕೊಂದು ಹಕ್ಕಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದೆ. ಈ ಪ್ರಕರಣಕ್ಕೆ ಸಂಬಂಧ ಪಟ್ಟಂತೆ ಯುಎಸ್ ಅಗ್ರಿಕಲ್ಚರ್‌ ಡಿಪಾರ್ಟ್‌ಮೆಂಟ್ ನ ರಾಷ್ಟ್ರೀಯ ಪಶುವೈದ್ಯಕೀಯ ಸೇವೆಗಳ ಪ್ರಯೋಗಾಲಯ ಹಾಗೂ ಒರೆಗಾನ್ ವೆಟರ್ನರಿ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ ನಡೆಸಿದ ಪರೀಕ್ಷೆಯಲ್ಲಿ, ಪೆಟ್ ಫುಡ್ ಸೇವಿಸಿದ ನಂತರ ಹಕ್ಕಿ ಜ್ವರಕ್ಕೆ ತುತ್ತಾಗಿ ಬೆಕ್ಕು ಮೃತ ಪಟ್ಟಿದೆ ಎಂದು ದೃಢಪಡಿಸಿದೆ.

​Pet food ತಿಂದು ಹಕ್ಕಿ ಜ್ವರಕ್ಕೆ ತುತ್ತಾಗಿ ಸಾವನ್ನಪ್ಪಿದ ಬೆಕ್ಕು, ಅಧ್ಯಯನದಿಂದ ದೃಢ
ಸಾಂದರ್ಭಿಕ ಚಿತ್ರ
Follow us on

ಪ್ರಪಂಚದಾದಂತ್ಯ ಹಕ್ಕಿ ಜ್ವರದ ಪ್ರಕರಣಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದೆ. ಏವಿಯನ್ ಇನ್ಫ್ಲುಯೆನ್ಸ ಎಂದೂ ಕರೆಯಲ್ಪಡುವ ಬರ್ಡ್ ಫ್ಲೂ ವೈರಸ್, ಪಕ್ಷಿಗಳಿಗೆ ಮಾತ್ರವಲ್ಲ, ಮನುಷ್ಯರು ಹಾಗೂ ಪ್ರಾಣಿಗಳಿಗೂ ಸೋಂಕು ತರುತ್ತಿದೆ. ಇತ್ತೀಚೆಗಷ್ಟೇ ವಾಷಿಂಗ್ ಟನ್ ನ ಒರೆಗಾನದ ಸಾಕು ಬೆಕ್ಕೊಂದು ಹಕ್ಕಿ ಜ್ವರಕ್ಕೆ ತುತ್ತಾಗಿ ಮೃತ ಪಟ್ಟಿದೆ. ಈ ಸಾಕು ಬೆಕ್ಕಿಗೆ ಹಕ್ಕಿ ಜ್ವರವು ತಗಲಿದ್ದು ಈ ಪೆಟ್ ಫುಡ್ ಸೇವನೆಯಿಂದಲೇ ಎಂದು ಅಧ್ಯಯನದಿಂದ ತಿಳಿದು ಬಂದಿದೆ.

ಯುಎಸ್ ಅಗ್ರಿಕಲ್ಚರ್‌ ಡಿಪಾರ್ಟ್‌ಮೆಂಟ್ ನ ರಾಷ್ಟ್ರೀಯ ಪಶುವೈದ್ಯಕೀಯ ಸೇವೆಗಳ ಪ್ರಯೋಗಾಲಯ ಹಾಗೂ ಒರೆಗಾನ್ ವೆಟರ್ನರಿ ಡಯಾಗ್ನೋಸ್ಟಿಕ್ ಲ್ಯಾಬೊರೇಟರಿ ನಡೆಸಿದ ಪರೀಕ್ಷೆಯಲ್ಲಿ ಪೆಟ್ ಫುಡ್ ಸೇವಿಸಿದ ನಂತರವೇ ಈ ಬೆಕ್ಕು ಮೃತ ಪಟ್ಟಿರುವುದಾಗಿ ದೃಢಪಡಿಸಿದೆ. ಕೆಲವೊಂದು ಫ್ರೋಜನ್ ಪೆಟ್ ಫುಡ್ ಮಾದರಿಗಳಲ್ಲಿ ಹೆಚ್ಚು ರೋಗಕಾರಕ ಏವಿಯನ್ ಇನ್ಫ್ಲುಯೆನ್ಸ ವೈರಸ್‌ ಇರುವ ಬಗ್ಗೆ ದೃಢಪಡಿಸಿದೆ. ಆ ಸಾಕು ಬೆಕ್ಕು ಹಕ್ಕಿಜ್ವರ ಸೋಂಕಿಗೆ ಒಳಗಾಗಲು ಈ ಆಹಾರವೇ ಕಾರಣ, ಇದರಿಂದಲೇ ಮೃತ ಪಟ್ಟಿದೆ ಎಂದು ಖಚಿತ ಪಡಿಸಿದೆ.

ಒರೆಗಾನ್ ಹೆಲ್ತ್ ಅಥಾರಿಟಿ (OHA) ಮತ್ತು ಸ್ಥಳೀಯ ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಬೆಕ್ಕಿನೊಂದಿಗೆ ಸಂಪರ್ಕ ಹೊಂದಿದ್ದ ಮನೆಯ ಸದಸ್ಯರು ಯಾವುದೇ ಹಕ್ಕಿಜ್ವರದ ರೋಗ ಲಕ್ಷಣಗಳನ್ನು ಹೊಂದಿದ್ದಾರೆಯೇ ಎಂದು ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಆದರೆ ಕಳೆದ ಮಂಗಳವಾರದವರೆಗೆ ಇವರಲ್ಲಿ ಹಕ್ಕಿ ಜ್ವರದ ಲಕ್ಷಣಗಳು ಪತ್ತೆಯಾಗಿಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: 20 ವರ್ಷಗಳ ಹಿಂದೆ, ನನ್ನ ವಯಸ್ಸು 20 ಆಗಿದ್ರೆ, 20 ವರ್ಷಗಳ ನಂತರ ನನ್ನ ವಯಸ್ಸು ಎಷ್ಟು? ಉತ್ತರ ಹೇಳಿ

ಒರೆಗಾನ್‌ನ ಪೋರ್ಟ್‌ಲ್ಯಾಂಡ್ ಮೂಲದ ಪಿಇಟಿ ಫುಡ್ ಕಂಪನಿಯಾದ ನಾರ್ತ್‌ವೆಸ್ಟ್ ನ್ಯಾಚುರಲ್ಸ್, ಜಾರ್ಜಿಯಾ ಸೇರಿದಂತೆ ದೇಶಾದ್ಯಂತ ಮಾರಾಟವಾದ ತನ್ನ ಟರ್ಕಿ ರೆಸಿಪಿ ಹಾಗೂ ಕೆಲವೊಂದು ಫ್ರೋಜನ್ ಫುಡ್ ಗಳನ್ನು ಸ್ವಯಂಪ್ರೇರಣೆಯಿಂದ ಹಿಂಪಡೆದಿದೆ. ಅದಲ್ಲದೇ, ಈ ಸೋಂಕಿತ ಸಾಕುಪ್ರಾಣಿಗಳೊಂದಿಗೆ ನೇರ ಸಂಪರ್ಕ ಹೊಂದಿದ ಮನೆ ಮಾಲೀಕರು ಹಕ್ಕಿ ಜ್ವರದಿಂದ ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿಲ್ಲ ಎಂದು ಹೇಳಿದ್ದಾರೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ