ಯಾವುದೇ ಕುಟುಂಬಕ್ಕಾಗಲಿ, ಅದರಲ್ಲಿಯೂ ತಾಯಿಗೆ, ಮಗು ಹೊಟ್ಟೆಯಲ್ಲಿರುವಾಗ ಆಗಲಿ ಅಥವಾ ಹೆರಿಗೆ ಆದ ನಂತರದಲ್ಲಿ ಶಿಶುವಿನ ಸಾವು ತುಂಬಾ ದುಃಖ ನೀಡುತ್ತದೆ. ಎಷ್ಟೇ ತಂತ್ರಜ್ಞಾನ ಮುಂದುವರೆದಿದ್ದರೂ ಈ ಬಗ್ಗೆ ಸರಿಯಾದ ಮಾಹಿತಿ ಪಡೆದುಕೊಳ್ಳಲು ಸಾಧ್ಯವಾಗುತ್ತಿಲ್ಲ. ತಾಯಿ ಮತ್ತು ಮಗುವಿನ ಆರೋಗ್ಯ ಬಹಳ ಮುಖ್ಯವಾದದ್ದು. ಪ್ರತಿಯೊಂದು ಕುಟುಂಬಕ್ಕೂ ಇಂತಹ ಪರಿಸ್ಥಿತಿಗಳ ಅರಿವಿರಬೇಕಾಗುತ್ತದೆ. ಹಾಗಾಗಿಯೇ ಪ್ರತಿ ವರ್ಷ ಅಕ್ಟೋಬರ್ ತಿಂಗಳನ್ನು ವಿಶ್ವದಾದ್ಯಂತ “ಗರ್ಭಧಾರಣೆ ಮತ್ತು ಶಿಶು ನಷ್ಟ ಸ್ಮರಣೆ ತಿಂಗಳು” ಎಂದು ಆಚರಿಸಲಾಗುತ್ತದೆ, ಇದು ಹೆರಿಗೆ ಮಾತ್ರವಲ್ಲದೆ ಗರ್ಭಪಾತಕ್ಕೆ ಒಳಗಾದ ಭ್ರೂಣ ಮತ್ತು ಜನನದ ನಂತರ ಜೀವನದ ಹೋರಾಟದಲ್ಲಿ ಸೋತ ನವಜಾತ ಶಿಶುಗಳನ್ನು ನೆನಪಿಸಿಕೊಳ್ಳುವ ಗುರಿಯನ್ನು ಹೊಂದಿದೆ.
ಗರ್ಭಧಾರಣೆ ಮತ್ತು ಶಿಶು ನಷ್ಟ ಸ್ಮರಣೆ ದಿನವನ್ನು ಮೊದಲು ಯುನೈಟೆಡ್ ಸ್ಟೇಟ್ಸ್ ಅಮೇರಿಕಾ ಮತ್ತು ಕೆನಡಾದಲ್ಲಿ ಪ್ರಾರಂಭಿಸಲಾಯಿತು. ಯುನೈಟೆಡ್ ಸ್ಟೇಟ್ಸ್ ಅಧ್ಯಕ್ಷ ರೊನಾಲ್ಡ್ ರೇಗನ್ ಮೊದಲ ಬಾರಿಗೆ ಈ ದಿನವನ್ನು 25 ಅಕ್ಟೋಬರ್ 1988 ರಂದು ಘೋಷಿಸಿದರು (ರೊನಾಲ್ಡ್ ರೇಗನ್, ಆಗಿನ ಯುಎಸ್ಎ ಅಧ್ಯಕ್ಷ). ಬಳಿಕ 2000 ರಲ್ಲಿ, ರಾಬಿನ್ ಬೇರ್, ಲಿಸಾ ಬ್ರೌನ್ ಮತ್ತು ಟಮ್ಮಿ ನೊವಾಕ್ ಅಕ್ಟೋಬರ್ 15 ಅನ್ನು ಗರ್ಭಧಾರಣೆ ಮತ್ತು ಶಿಶು ನಷ್ಟ ಸ್ಮರಣೆ ದಿನವೆಂದು ಗುರುತಿಸುವಂತೆ ಫೆಡರಲ್ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದರು. ಈ ಮೂವರು ಮಹಿಳೆಯರು ತಮ್ಮ ಮಕ್ಕಳನ್ನು ಕಳೆದುಕೊಂಡ ದುಃಖವನ್ನು ಅನುಭವಿಸಿದ್ದರು. ಹಾಗಾಗಿ ಅಂದಿನಿಂದ, ಈ ವಿಶೇಷ ದಿನವನ್ನು ಪ್ರತಿವರ್ಷ ಅಕ್ಟೋಬರ್ 15 ರಂದು ವಿಶ್ವದಾದ್ಯಂತ ಆಚರಣೆ ಮಾಡಲಾಗುತ್ತಿದೆ.
ಗರ್ಭಧಾರಣೆ ಮತ್ತು ಶಿಶು ನಷ್ಟ ಸ್ಮರಣೆಯ ಮಾಸವನ್ನು ಆಚರಿಸುವ ಮುಖ್ಯ ಉದ್ದೇಶ, ಗರ್ಭಾವಸ್ಥೆಯಲ್ಲಿ, ಜನನದ ಸಮಯದಲ್ಲಿ ಅಥವಾ ಅದರ ನಂತರ ಮರಣ ಹೊಂದಿದ ಜೀವಗಳನ್ನು ಸ್ಮರಿಸುವುದು ಮಾತ್ರವಲ್ಲ, ಗರ್ಭಪಾತ, ಹೆರಿಗೆ ಮತ್ತು ನವಜಾತ ಶಿಶುಗಳ ಸಾವುಗಳು ಮತ್ತು ಅವುಗಳ ತಡೆಗಟ್ಟುವಿಕೆಯ ಕಾರಣಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಆಗಿದೆ. ಈ ಕಾರಣದಿಂದಾಗಿ, ಈ ಒಂದು ತಿಂಗಳ ಅವಧಿಯಲ್ಲಿ, ಸಾರ್ವಜನಿಕವಾಗಿ ಜಾಗೃತಿ ಮೂಡಿಸುವುದು ಮತ್ತು ಈ ವಿಷಯಗಳಿಗೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಸಹ ಆಯೋಜಿಸಲಾಗುತ್ತದೆ.
ಇದನ್ನೂ ಓದಿ: ಇಂದು ವಿಶ್ವ ವಿದ್ಯಾರ್ಥಿಗಳ ದಿನ : ಅಬ್ದುಲ್ ಕಲಾಂ ಜನ್ಮದಿನದಂದೇ ಏಕೆ ಆಚರಿಸಲಾಗುತ್ತದೆ?
ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ