World Students’ Day 2024: ಇಂದು ವಿಶ್ವ ವಿದ್ಯಾರ್ಥಿಗಳ ದಿನ : ಅಬ್ದುಲ್ ಕಲಾಂ ಜನ್ಮದಿನದಂದೇ ಏಕೆ ಆಚರಿಸಲಾಗುತ್ತದೆ ?

ಭಾರತದ ಕ್ಷಿಪಣಿ ಮನುಷ್ಯ, ಖ್ಯಾತ ವಿಜ್ಞಾನಿ ಹಾಗೂ ಶಿಕ್ಷಕರಾದ ಅಬ್ದುಲ್‌ ಕಲಾಂ ರವರು ಭಾರತದ 11ನೇ ರಾಷ್ಟ್ರಪತಿ ಆಗಿದ್ದು, 'ಜನರ ರಾಷ್ಟ್ರಪತಿ' ಎಂದೇ ಖ್ಯಾತರಾಗಿದ್ದರು. ಎ.ಪಿ.ಜೆ ಅಬ್ದುಲ್ ಕಲಾಂ ರ ಜನ್ಮ ದಿನದ ಸವಿನೆನಪಿಗಾಗಿ 'ವಿಶ್ವ ವಿದ್ಯಾರ್ಥಿಗಳ ದಿನ'ವನ್ನು ಪ್ರತಿವರ್ಷ ಅಕ್ಟೋಬರ್ 15 ರಂದು ಆಚರಿಸಲಾಗುತ್ತದೆ. ಹಾಗಾದ್ರೆ ಈ ದಿನದ ಆಚರಣೆ ಯಾವಾಗದಿಂದ ಪ್ರಾರಂಭವಾಯಿತು? ಏನಿದರ ವಿಶೇಷತೆ? ಎನ್ನುವುದರ ಸಂಪೂರ್ಣ ಮಾಹಿತಿ ಇಲ್ಲಿದೆ.

World Students' Day 2024: ಇಂದು ವಿಶ್ವ ವಿದ್ಯಾರ್ಥಿಗಳ ದಿನ : ಅಬ್ದುಲ್ ಕಲಾಂ ಜನ್ಮದಿನದಂದೇ ಏಕೆ ಆಚರಿಸಲಾಗುತ್ತದೆ ?
World Students' Day
Follow us
ಸಾಯಿನಂದಾ
| Updated By: ಅಕ್ಷತಾ ವರ್ಕಾಡಿ

Updated on: Oct 15, 2024 | 10:41 AM

ಶ್ರೇಷ್ಠ ವಿಜ್ಞಾನಿ ಹಾಗೂ ಭಾರತದ ಮಿಸೈಲ್ ಮ್ಯಾನ್ ಎಂದೇ ಖ್ಯಾತರಾಗಿದ್ದ ಡಾ. ಎ.ಪಿ.ಜೆ ಅಬ್ದುಲ್ ಕಲಾಂರವರು ಶಿಕ್ಷಕರಾಗಿಯೂ ಶಿಕ್ಷಣ ಕ್ಷೇತ್ರಕ್ಕೆ ಕೊಡುಗೆಗಳನ್ನು ನೀಡಿದ್ದಾರೆ. ಇವರು ಬೋಧಿಸುವುದನ್ನು ಹೆಚ್ಚು ಇಷ್ಟಪಡುತ್ತಿದ್ದ ಕಾರಣ ‘ನಾನು ಶಿಕ್ಷಕನಾಗಿ ನೆನಪಿನಲ್ಲಿರಲು ಇಷ್ಟಪಡುತ್ತೇನೆ ಎನ್ನುತ್ತಿದ್ದರು. ಅಷ್ಟೇ ಅಲ್ಲದೇ, ಉತ್ತಮ ಶಿಕ್ಷಣ ಪಡೆಯುವ ವಿದ್ಯಾರ್ಥಿಗಳು ದೇಶದ ಭವಿಷ್ಯ ಎಂದು ನಂಬಿದ್ದವರು. ಹೀಗಾಗಿ ಶಿಕ್ಷಣವನ್ನು ಉತ್ತೇಜಿಸುವಲ್ಲಿ, ಶಿಕ್ಷಣ ಕ್ಷೇತ್ರದಲ್ಲಿ ಹಲವು ಸುಧಾರಣೆಗಳನ್ನು ಮಾಡುವಲ್ಲಿ ತಮ್ಮದೇ ಆದ ಕೊಡುಗೆಗಳನ್ನು ನೀಡಿದ್ದಾರೆ. ಎ.ಪಿ.ಜೆ ಅಬ್ದುಲ್ ಕಲಾಂ ರ ಜನ್ಮ ದಿನದ ಸವಿನೆನಪಿಗಾಗಿ ‘ವಿಶ್ವ ವಿದ್ಯಾರ್ಥಿಗಳ ದಿನ’ವನ್ನು ಪ್ರತಿವರ್ಷ ಅಕ್ಟೋಬರ್ 15 ರಂದು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ವಿದ್ಯಾರ್ಥಿಗಳ ದಿನದ ಇತಿಹಾಸ:

ಭಾರತ ರತ್ನ ಪ್ರಶಸ್ತಿ ಪುರಸ್ಕೃತ ದಿವಂಗತ ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದ ನೆನಪಿಗಾಗಿ ಪ್ರತಿವರ್ಷ ಅಕ್ಟೋಬರ್ 15ರಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಗುತ್ತದೆ. ಮೊದಲ ಬಾರಿಗೆ 2010 ರಲ್ಲಿ, ಕಲಾಂ ಅವರ 79ನೇ ಜನ್ಮದಿನದಂದು ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಲಾಯಿತು. ಶಿಕ್ಷಣ, ಪ್ರಪಂಚದಾದ್ಯಂತ ವಿದ್ಯಾರ್ಥಿಗಳ ಪ್ರಗತಿಗಾಗಿ ಅವರು ಮಾಡಿದ ಕಾರ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಲಾಂ ಅವರ ಮಹತ್ವದ ಕೊಡುಗೆಯನ್ನು ಗೌರವಿಸಲು ಸಲುವಾಗಿ ವಿಶ್ವ ಸಂಸ್ಥೆಯು ಡಾ. ಎ.ಪಿ.ಜೆ ಅಬ್ದಲ್ ಕಲಾಂ ಅವರ ಜನ್ಮ ದಿನವನ್ನು ವಿಶ್ವ ವಿದ್ಯಾರ್ಥಿಗಳ ದಿನವನ್ನಾಗಿ ಆಚರಿಸಲು ಘೋಷಿಸಿತು. ಅಂದಿನಿಂದ ಈ ವಿಶ್ವ ವಿದ್ಯಾರ್ಥಿಗಳ ದಿನವನ್ನು ಆಚರಿಸಿಕೊಂಡು ಬರಲಾಗುತ್ತಿದೆ.

ವಿಶ್ವ ವಿದ್ಯಾರ್ಥಿಗಳ ದಿನದ ಮಹತ್ವ ಹಾಗೂ ಆಚರಣೆ

ಶಿಕ್ಷಣ ಹಾಗೂ ವಿದ್ಯಾರ್ಥಿಗಳ ಪ್ರಗತಿಗಾಗಿ ಮಾಡಿದ ಕಾರ್ಯ ಮತ್ತು ಸಂಶೋಧನಾ ಕ್ಷೇತ್ರದಲ್ಲಿ ಕಲಾಂ ಅವರ ಮಹತ್ವದ ಕೊಡುಗೆಯನ್ನು ಗೌರವಿಸುವ ಸಲುವಾಗಿ ಈ ದಿನವು ಮಹತ್ವದ್ದಾಗಿದೆ. ಈ ಮಹಾನ್ ವ್ಯಕ್ತಿಯ ಜೀವನ ಪಾಠವು ಎಲ್ಲರಿಗೂ ಸ್ಪೂರ್ತಿಯಾಗಿದ್ದು, ಅವರ ಜೀವನ ಪಾಠವನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸಾಧನೆ ಮಾಡಬೇಕು ಎನ್ನುವ ಉದ್ದೇಶವನ್ನು ಹೊಂದಿದೆ. ಡಾ. ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನ್ಮದಿನದಂದು ಶಾಲಾ ಕಾಲೇಜುಗಳಲ್ಲಿ ವಿವಿಧ ಚಟುವಟಿಕೆಗಳು, ಸ್ಪರ್ಧೆಗಳು ಸೇರಿದಂತೆ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ.

ಇದನ್ನೂ ಓದಿ; ವಿಪತ್ತು ಸಂಭವಿಸುವ ಮುನ್ನ ಹಾಗೂ ನಂತರದಲ್ಲಿ ಈ ಕೆಲಸ ಮಾಡಿ ಜೀವ ಉಳಿಸಿ

ಡಾ. ಎ.ಪಿ.ಜೆ ಅಬ್ದುಲ್ ಕಲಾಂರವರ ನುಡಿಮುತ್ತುಗಳು:

  • ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ.
  • ಇತರರಿಗಾಗಿ ನಿಮ್ಮ ಸ್ವಂತಿಕೆಯನ್ನು ಎಂದಿಗೂ ಬಿಟ್ಟುಕೊಡಬೇಡಿ. ಏಕೆಂದರೆ ಈ ಪ್ರಪಂಚದಲ್ಲಿ ನಿಮ್ಮ ಪಾತ್ರವನ್ನು ನಿಮಗಿಂತ ಚೆನ್ನಾಗಿ ಯಾರೂ ನಿಭಾಯಿಸಲು ಸಾಧ್ಯವಿಲ್ಲ.
  • ಈ ಜಗತ್ತು ನಾವು ಹೇಳುವ ಸತ್ಯಕ್ಕಿಂತ ಮಿಗಿಲಾಗಿ ನಮ್ಮ ಕುರಿತು ಇತರರು ಹೇಳುವ ಸುಳ್ಳನ್ನು ನಂಬುತ್ತದೆ.
  • ನೀವಂದುಕೊಂಡಿದ್ದನ್ನು ಸಾಧಿಸಲು ಮೊಟ್ಟಮೊದಲನೆಯದಾಗಿ ಬೇಕಿರುವುದು ಗುರಿಯೆಡೆಗಿನ ಏಕಾಗ್ರಚಿತ್ತ ಬದ್ಧತೆ ಅದರಲ್ಲಿ ಪ್ರೀತಿ.
  • ನಿದ್ರೆಯಲ್ಲಿ ಕಾಣುವುದು ಕನಸಲ್ಲ, ನಿದ್ದೆ ಗೆಡುವಂತೆ ಮಾಡುವುದಿದೆಯಲ್ಲ ಅದು ನಿಜವಾದ ಕನಸು.
  • ಸೋಲೆಂಬ ರೋಗಕ್ಕೆ ಆತ್ಮವಿಶ್ವಾಸ ಮತ್ತು ಕಠಿಣ ಪರಿಶ್ರಮವೇ ಮದ್ದು, ಇದು ಯಾರಲ್ಲಿರುತ್ತದೆಯೋ ಅವರಿಗೆ ಯಶಸ್ಸು ಕಟ್ಟಿಟ್ಟ ಬುತ್ತಿ
  • ಒಬ್ಬರನ್ನ ಸೋಲಿಸೋದು ಸುಲಭ, ಆದರೆ ಒಬ್ಬರ ಮನಸ್ಸನ್ನು ಗೆಲ್ಲೋದು ಕಷ್ಟ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ