Temple Chakkara Pongal: ದೇವಸ್ಥಾನ ಶೈಲಿಯಲ್ಲಿ ಸಕ್ಕರೆ ಪೊಂಗಲ್ ಮಾಡುವುದು ಹೇಗೆ ನೋಡಿ

ಸಕ್ಕರೆ ಪೊಂಗಲ್ ಅನ್ನು ಹಲವು ರೀತಿಯಲ್ಲಿ ತಯಾರಿಸಲಾಗುತ್ತದೆ. ಅಲ್ಲದೆ ಪ್ರದೇಶಗಳನ್ನು ಅವಲಂಬಿಸಿ ರುಚಿಯೂ ಬದಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಮನೆಯಲ್ಲಿ ಹಬ್ಬ ಅಥವಾ ಶುಭ ಸಂದರ್ಭಗಳಿರುವಾಗ ತಯಾರಿಸಲಾಗುತ್ತದೆ. ಆದರೆ ದೇವಸ್ಥಾನಗಳಲ್ಲಿ ಸಿಗುವ ಪೊಂಗಲ್ ಗಳ ರುಚಿಯೇ ಬೇರೆ. ಎಷ್ಟು ತಿಂದರೂ, ಇನ್ನೂ ತಿನ್ನಬೇಕು ಮತ್ತೂ ತಿನ್ನಬೇಕು ಎಂದು ಎನಿಸುತ್ತದೆ. ಹಾಗಾಗಿ ಈ ರುಚಿಯನ್ನು ಸುಲಭವಾಗಿ ಮನೆಯಲ್ಲಿಯೇ ಆನಂದಿಸಬಹುದು. ಹಾಗಾದರೆ ದೇವಾಲಯಗಳ ಶೈಲಿಯಲ್ಲಿ ಸಕ್ಕರೆ ಪೊಂಗಲ್ ಮಾಡುವುದು ಹೇಗೆ? ಅಗತ್ಯವಿರುವ ಪದಾರ್ಥಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ.

Temple Chakkara Pongal: ದೇವಸ್ಥಾನ ಶೈಲಿಯಲ್ಲಿ ಸಕ್ಕರೆ ಪೊಂಗಲ್ ಮಾಡುವುದು ಹೇಗೆ ನೋಡಿ
ಸಾಂದರ್ಭಿಕ ಚಿತ್ರ
Follow us
| Updated By: ಅಕ್ಷಯ್​ ಪಲ್ಲಮಜಲು​​

Updated on: Oct 14, 2024 | 5:57 PM

ಹಬ್ಬಗಳು ಸಾಲು ಸಾಲಾಗಿ ಬರುವಾಗ ಮನೆಯಲ್ಲಿಯೇ ವಿಶೇಷವಾಗಿ ಏನಾದರೂ ಸಿಹಿ ತಿಂಡಿ ಮಾಡಬೇಕು ಎಂದು ಮನಸ್ಸಾಗುತ್ತದೆ. ಆ ಸಮಯದಲ್ಲಿ ಒಂದೇ ಬಗೆಯ ಸಿಹಿ ಪದಾರ್ಥಗಳನ್ನು ಮಾಡಿ ಸವಿಯಲು ಮನಸ್ಸು ಒಪ್ಪುವುದಿಲ್ಲ. ಅಂತಹ ಸಮಯದಲ್ಲಿ ಸುಲಭವಾಗಿ ಅದರಲ್ಲಿಯೂ ರುಚಿಯಾಗಿ ಮಾಡಬಹುದಾದ ಪಾಕವಿಧಾನವನ್ನು ಅನುಸರಿಸುವುದು ಉತ್ತಮ. ಸಾಮಾನ್ಯವಾಗಿ ದೇವರ ನೈವೇದ್ಯಕ್ಕೆ ಮಾಡಬಹುದಾದ ಸಕ್ಕರೆ ಪೊಂಗಲ್ ಗೆ ಎಲ್ಲಾ ಕಡೆಯಲ್ಲಿಯೂ ವಿಶೇಷ ಸ್ಥಾನವಿದೆ. ಮನೆಯಲ್ಲಿ ಯಾವುದೇ ಶುಭ ಕಾರ್ಯಗಳನ್ನು ಪ್ರಾರಂಭಿಸಿದರೂ, ಮೊದಲು ಮಾಡಬೇಕಾದ ಕೆಲಸವೆಂದರೆ ಸಿಹಿ ತಿನಿಸುಗಳನ್ನು ಮಾಡುವುದು ಅದರಲ್ಲಿ ಸಕ್ಕರೆ ಪೊಂಗಲ್ ಕೂಡ ಒಂದು. ಇದನ್ನು ಬೇರೆ ಬೇರೆ ಭಾಗಗಳಲ್ಲಿ ವಿಭಿನ್ನ ಶೈಲಿಯಲ್ಲಿ ಮಾಡುತ್ತಾರೆ. ಅಲ್ಲದೆ ಪ್ರದೇಶಗಳನ್ನು ಅವಲಂಬಿಸಿ ರುಚಿಯೂ ಬದಲಾಗುತ್ತದೆ. ಸಾಮಾನ್ಯವಾಗಿ ಇದನ್ನು ಮನೆಯಲ್ಲಿ ಹಬ್ಬ ಅಥವಾ ಶುಭ ಸಂದರ್ಭಗಳಿರುವಾಗ ತಯಾರಿಸಲಾಗುತ್ತದೆ ಅದಲ್ಲದೆ ದೇವರ ನೈವೇದ್ಯಕ್ಕೂ ಶ್ರೇಷ್ಠವಾಗಿದೆ.

ಸಕ್ಕರೆ ಪೊಂಗಲ್ ಅನ್ನು ಹಲವು ರೀತಿಯಲ್ಲಿ ತಯಾರಿಸಲಾಗುತ್ತದೆ. ಆದರೆ ದೇವಸ್ಥಾನಗಳಲ್ಲಿ ಸಿಗುವ ಪೊಂಗಲ್ ಗಳ ರುಚಿಯೇ ಬೇರೆ. ಎಷ್ಟು ತಿಂದರೂ, ಇನ್ನೂ ತಿನ್ನಬೇಕು ಮತ್ತೂ ತಿನ್ನಬೇಕು ಎಂದು ಎನಿಸುತ್ತದೆ. ಹಾಗಾಗಿ ಈ ರುಚಿಯನ್ನು ಸುಲಭವಾಗಿ ಮನೆಯಲ್ಲಿಯೇ ಆನಂದಿಸುವುದು ಉತ್ತಮ. ಹಾಗಾದರೆ ದೇವಾಲಯಗಳ ಶೈಲಿಯಲ್ಲಿ ಸಕ್ಕರೆ ಪೊಂಗಲ್ ಮಾಡುವುದು ಹೇಗೆ? ಅಗತ್ಯವಿರುವ ಪದಾರ್ಥಗಳು ಯಾವುವು? ಇಲ್ಲಿದೆ ಸಂಪೂರ್ಣ ಮಾಹಿತಿ.

ದೇವಾಲಯ ಶೈಲಿಯ ಸಕ್ಕರೆ ಪೊಂಗಲ್ ಮಾಡಲು ಬೇಕಾಗುವ ಪದಾರ್ಥಗಳು:

ಹಾಲು

ಬಾಳೆಹಣ್ಣು

ಹೆಸರುಬೇಳೆ

ಅಕ್ಕಿ

ಸಕ್ಕರೆ

ತುಪ್ಪ

ಏಲಕ್ಕಿ ಪುಡಿ

ಜೀರಿಗೆ

ಒಣ ಹಣ್ಣುಗಳು

ತಯಾರಿಸುವ ವಿಧಾನ:

ಮೊದಲು ಹೆಸರು ಬೇಳೆಯನ್ನು ಚೆನ್ನಾಗಿ ತೊಳೆದು ಅದನ್ನು ನೆನೆಸಿಟ್ಟುಕೊಳ್ಳಿ. ಬಳಿಕ ಆ ಬೇಳೆಯನ್ನು ಮಿಕ್ಸಿಯಲ್ಲಿ ಹಾಕಿ ಪೇಸ್ಟ್ ರೀತಿಯಲ್ಲಿ ರುಬ್ಬಿಕೊಳ್ಳಿ. ಅದರ ನಂತರ, ಅಕ್ಕಿಯನ್ನು ತೊಳೆದು ಸರಿಯಾದ ನೀರಿನ ಅಳತೆಯಲ್ಲಿ ಕುದಿಸಿ. ಅಕ್ಕಿ ಸರಿಯಾಗಿ ಬೆಂದ ನಂತರ ಪಕ್ಕಕ್ಕೆ ಇಡಬೇಕು. ಈಗ ಒಂದು ಬಾಣಲೆಯನ್ನು ತೆಗೆದುಕೊಂಡು ಅದಕ್ಕೆ ತುಪ್ಪವನ್ನು ಸೇರಿಸಿ. ಅದು ಬಿಸಿಯಾದ ನಂತರ ಸ್ವಲ್ಪ ಜೀರಿಗೆ ಹಾಕಿ ಹುರಿದುಕೊಳ್ಳಿ ಬಳಿಕ ಹೆಸರುಬೇಳೆ ಮಿಶ್ರಣವನ್ನು ಸೇರಿಸಿ ಹುರಿಯಿರಿ. ಒಂದೆರಡು ನಿಮಿಷಗಳು ಹುರಿದ ನಂತರ ಅಕ್ಕಿ ಮತ್ತು ಬಾಳೆಹಣ್ಣಿನ ತುಂಡುಗಳನ್ನು ಸೇರಿಸಿ ಮತ್ತು ಎಲ್ಲವನ್ನೂ ಒಟ್ಟಿಗೆ ಮಿಶ್ರಣ ಮಾಡಿ. ಎಲ್ಲವನ್ನೂ ಸ್ವಲ್ಪ ಬೇಯಿಸಿ. ಬಳಿಕ ಹಾಲು ಮತ್ತು ಸಕ್ಕರೆಯನ್ನು ಸೇರಿಸಿ. ಸಕ್ಕರೆ ಸೇವನೆ ಮಾಡದಿದ್ದರೆ ಬೆಲ್ಲವನ್ನು ಬಳಸಬಹುದು. ಈ ಎಲ್ಲವನ್ನೂ ಒಟ್ಟಿ ಮಿಶ್ರವಾಗಲು ಬಿಡಿ. ನಂತರ ಏಲಕ್ಕಿ ಪುಡಿಯನ್ನು ಸೇರಿಸಿ. ಕೊನೆಯಲ್ಲಿ ತುಪ್ಪದಲ್ಲಿ ಹುರಿದ ಒಣ ಹಣ್ಣುಗಳಿಂದ ಅಲಂಕರಿಸಿ. ಈ ರೀತಿ ಮಾಡಿದರೆ ದೇವಸ್ಥಾನ ಶೈಲಿಯಲ್ಲಿ ಮಾಡುವ ಪೊಂಗಲ್ ಸವಿಯಲು ಸಿದ್ದವಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಪ್ರಾಧ್ಯಾಪಕಿ ಆತ್ಮಹತ್ಯೆಗೆ ಯತ್ನ: 3 ತಿಂಗಳಿನಿಂದ ಕಿರುಕುಳ ಆರೋಪ
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಅ.17ರ ವರೆಗೆ ಕರ್ನಾಟಕದಲ್ಲಿ ಭಾರೀ ಮಳೆ: ಯೆಲ್ಲೋ- ಆರೆಂಜ್ ಅಲರ್ಟ್​!
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಕೇಸ್ ವಾಪಸ್ಸು ತಗೊಳ್ಳಿ ಅಂತ ಭಿಕ್ಷೆ ಬೇಡುವ ಸ್ಥಿತಿ ಬಂದಿಲ್ಲ: ಸಿಟಿ ರವಿ
ಮುಡಾ ಕೇಸ್: ಲೋಕಾಯುಕ್ತ ಮೇಲೆ ಪ್ರಭಾವ, ಕಾಂಗ್ರೆಸ್​ ವಕ್ತಾರನ ಮೇಲೆ ಆರೋಪ
ಮುಡಾ ಕೇಸ್: ಲೋಕಾಯುಕ್ತ ಮೇಲೆ ಪ್ರಭಾವ, ಕಾಂಗ್ರೆಸ್​ ವಕ್ತಾರನ ಮೇಲೆ ಆರೋಪ
ನಾಗರ ಹಾವಿನ ಮೇಲೆ ಧಾರಾಳ ಮಮಕಾರ ತೋರಿದ ಹಸು
ನಾಗರ ಹಾವಿನ ಮೇಲೆ ಧಾರಾಳ ಮಮಕಾರ ತೋರಿದ ಹಸು
ಆನೆಗಳು ಮೈಸೂರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತವೆ: ಡಾ ಪ್ರಭುಗೌಡ, ಡಿಸಿಎಫ್
ಆನೆಗಳು ಮೈಸೂರನ್ನು ಖಂಡಿತ ಮಿಸ್ ಮಾಡಿಕೊಳ್ಳುತ್ತವೆ: ಡಾ ಪ್ರಭುಗೌಡ, ಡಿಸಿಎಫ್
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಧಾರಾಕಾರ ಮಳೆ, ವಿಡಿಯೋ ನೋಡಿ
ತಿರುಪತಿ ತಿಮ್ಮಪ್ಪನ ಸನ್ನಿಧಿಯಲ್ಲಿ ಧಾರಾಕಾರ ಮಳೆ, ವಿಡಿಯೋ ನೋಡಿ
ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಉತ್ಸಾಹದಿಂದ ಓಡಾಡುತ್ತಿರುವ ಜಮೀರ್ ಅಹ್ಮದ್
ಸಾಧನಾ ಸಮಾವೇಶದ ಹಿನ್ನೆಲೆಯಲ್ಲಿ ಉತ್ಸಾಹದಿಂದ ಓಡಾಡುತ್ತಿರುವ ಜಮೀರ್ ಅಹ್ಮದ್
ಹೆಬ್ಬಾಳದಲ್ಲಿ ಪ್ರತಿನಿತ್ಯ ಆಗುವ ಟ್ರಾಫಿಕ್ ಜಾಮ್​ಗಳಿಗೆ ಕೊನೆ ಯಾವತ್ತು?
ಹೆಬ್ಬಾಳದಲ್ಲಿ ಪ್ರತಿನಿತ್ಯ ಆಗುವ ಟ್ರಾಫಿಕ್ ಜಾಮ್​ಗಳಿಗೆ ಕೊನೆ ಯಾವತ್ತು?
ಮುಡಾ ಆರೋಪಿ ಸಿದ್ದರಾಮಯ್ಯ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ: ಕೃಷ್ಣ
ಮುಡಾ ಆರೋಪಿ ಸಿದ್ದರಾಮಯ್ಯ ಪ್ರಚೋದನಾಕಾರಿ ಭಾಷಣ ಮಾಡುತ್ತಿದ್ದಾರೆ: ಕೃಷ್ಣ