Deepavali 2022: ದೀಪಾವಳಿಗೆ ರೇಸಿಂಗ್ ದೀಪಗಳು ಚಂದ, ಕಲರ್ ಕ್ಯಾಂಡಿಸ್ ಬೈ ಅಶ್ವಿನಿ ಮೂಲಕ ಖರೀದಿಸಿ ಸ್ನೇಹಿತರಿಗೆ ಸೂಪರ್ ಗಿಫ್ಟ್

| Updated By: ಅಕ್ಷಯ್​ ಪಲ್ಲಮಜಲು​​

Updated on: Oct 25, 2022 | 7:37 PM

ಪರಿಸರ ಸ್ನೇಹಿ ವಸ್ತುಗಳಿಂದಲೇ ದೀಪಗಳು ಹಾಗೂ ಇನ್ನಿತರ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಎಳವೆಯಿಂದಲೇ ಇಂತಹ ಅಲಂಕಾರಿಕ ವಸ್ತುಗಳನ್ನು ತಯಾರಿಸುವುದೆಂದರೆ ಇವರಿಗೆ ಬಹಳ ಇಷ್ಟ.

Deepavali 2022: ದೀಪಾವಳಿಗೆ ರೇಸಿಂಗ್ ದೀಪಗಳು ಚಂದ, ಕಲರ್ ಕ್ಯಾಂಡಿಸ್ ಬೈ ಅಶ್ವಿನಿ ಮೂಲಕ ಖರೀದಿಸಿ ಸ್ನೇಹಿತರಿಗೆ ಸೂಪರ್ ಗಿಫ್ಟ್
Color Candies by Ashwini
Follow us on

ಬೆಳಕಿನ ಹಬ್ಬ ದೀಪಾವಳಿ ಎಲ್ಲರೂ ಕೂಡ ಸಡಗರದಿಂದ ಆಚರಿಸುವ ಹಬ್ಬ. ಸಾಲು ಸಾಲು ದೀಪಗಳನ್ನು ಹಚ್ಚಿ ಸಂಭ್ರಮಿಸಬೇಕಾದ ಹಬ್ಬ. ಆದರೆ ಪ್ರಸ್ತುತ ದಿನಗಳಲ್ಲಿ ಎಲ್ಲಾ ಕಡೆಗಳಲ್ಲೂ ಪಟಾಕಿಗಳದ್ದೇ ಅಬ್ಬರ ಹೆಚ್ಚು. ಆದ್ರೆ ಇಲ್ಲೊಬ್ಬರು ಪರಿಸರ ಸ್ನೇಹಿ ವಸ್ತುಗಳಿಂದಲೇ ದೀಪಗಳು ಹಾಗೂ ಇನ್ನಿತರ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಾರೆ. ಆನಂದ ದೇವಾಡಿಗ ಮತ್ತು ಜಯಲತಾ ದೇವಾಡಿಗ ದಂಪತಿಯ ಪುತ್ರಿ ಅಶ್ವಿನಿ ದೇವಾಡಿಗ. ಮೂಲತಃ ಇವರು ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರು. ಎಳವೆಯಿಂದಲೇ ಇಂತಹ ಅಲಂಕಾರಿಕ ವಸ್ತುಗಳನ್ನು ತಯಾರಿಸುವುದೆಂದರೆ ಇವರಿಗೆ ಬಹಳ ಇಷ್ಟ. ಇವರ ತಂದೆ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಹಾಗಾಗಿ ತಂದೆಗೆ ಸಿಮೆಂಟ್ ಮಿಕ್ಸ್ ಮಾಡಿಕೊಡುವುದು ಪೈಂಟ್ ಮಿಕ್ಸ್ ಮಾಡಿ ಕೊಡುವುದು ಹಾಗೂ ಪೇಂಟ್ ಮಾಡೋದೆಂದರೆ ಇವರಿಗೆ ಪ್ರಾಣ. ಅಪ್ಪನ ಪ್ರತಿಯೊಂದು ಕೆಲಸಕ್ಕೂ ಕೂಡ ಇವರು ಸಾಥ್ ನೀಡುತ್ತಿದ್ದರು. ಬಣ್ಣ ಪೇಂಟಿಂಗ್ ಮಾಡೋದು ಇವರ ಕನಸು. ಇದನ್ನು ಮಾಡಬೇಕೆಂಬ ಆಸೆ ಇವರದ್ದಾಗಿತ್ತು. ಆದರೆ ಇದೆಲ್ಲದಕ್ಕೂ ಹಣಕಾಸಿನ ಸ್ಥಿತಿಗತಿ ನೆರವಾಗಲಿಲ್ಲ. ಆದರೆ ಇವರು ತನ್ನ ಕನಸನ್ನು ಅಲ್ಲೇ ಕೈ ಚೆಲ್ಲದೆ ತನ್ನ ಪ್ರಯತ್ನವನ್ನು ಮುಂದುವರಿಸಿದರು.

ದೀಪಾವಳಿ ಹಬ್ಬದ ಸಲುವಾಗಿ ಒಂದಷ್ಟು ಮನೆ ಅಲಂಕಾರಿಕ ವಸ್ತು

ದೀಪಾವಳಿ ಹಬ್ಬದ ಸಲುವಾಗಿ ಒಂದಷ್ಟು ಮನೆ ಅಲಂಕಾರಿಕ ವಸ್ತುಗಳನ್ನು ತಯಾರಿಸುತ್ತಿದ್ದರು. ಅದು ರೇಸಿನ್ ದಿಯಾ ಹೋಲ್ಡರ್ ಗಳು ಹಾಗೂ ಮರ ಮತ್ತು ಬಟ್ಟೆಯಿಂದ ಮಾಡಿದ ಅಲಂಕಾರಿಕ ವಸ್ತುಗಳು ಎಲ್ಲವೂ ಕೂಡ ಹ್ಯಾಂಡ್ ಮೇಡ್ ಆಗಿಯೇ ಮಾಡುತ್ತಿದ್ದರು. ರೇಸಿನ್​ಗೆ ಬಣ್ಣ ಹಾಗೂ ಗೋಲ್ಡ್ ಫೈಡ್​​ಗಳನ್ನು ಮಿಕ್ಸ್ ಮಾಡಿ ಹಾಗೂ ಆರ್ಡರ್ ಯಾರಾದ್ರೂ ಮಾಡಿದ್ದೆ ಆದಲ್ಲಿ ಅವರಿಗೆ ಬೇಕಾದ ಬಣ್ಣ ಹಾಗೂ ಬೇಕಾದ ರೀತಿಯಲ್ಲಿ ಮಾಡಿಕೊಡುತ್ತಿದ್ದರು.

ಈ ರೇಸಿನ್ ವಸ್ತುಗಳು ಎಲ್ಲವೂ ಕೂಡ ಕೈಯಿಂದಲೇ ಮಾಡುತ್ತಿದ್ದರು. ಇನ್ನೂ ಈ ರೇಸಿನ್ ಒಣಗಲು 24ರಿಂದ 36 ಗಂಟೆ ತೆಗೆದುಕೊಳ್ಳುತ್ತದೆ. ಹಾಗೆಯೇ ಉಳಿದ ಎಂ ಡಿ ಎಫ್ ಹಾಗೂ ಸ್ಯಾಟಿನಿಂದ ಮಾಡಿದ ಹ್ಯಾಂಗಿಂಗ್ ಎಲ್ಲವೂ ಒಂದೇ ದಿನದಲ್ಲಿ ರೆಡಿ ಆಗುತ್ತದೆ.ಇದಕ್ಕೆ ಒಂದೊಂದು ವಸ್ತುವಿಗೆ ಬೇರೆ ಬೇರೆ ಕಚ್ಚಾ ವಸ್ತುಗಳು ಬೇಕಾಗುತ್ತದೆ ಆದ್ದರಿಂದ ಈ ಕೆಲಸವನ್ನು ಬಹಳಷ್ಟು ಶ್ರಮವಹಿಸಿ ಮಾಡಬೇಕಾಗುತ್ತದೆ. ಇವರು ಓದಿದ್ದು ಸೈಕಾಲಜಿ ಮತ್ತು ಜರ್ನಲಿಸಂ. ವೃತ್ತಿಯಲ್ಲಿ ಹಾಗೂ ಪ್ರವೃತ್ತಿಯಲ್ಲಿ ಆಂಕರ್ ಮತ್ತು ನ್ಯೂ ಪ್ರೆಸೆಂಟರ್. ಅದರ ಜೊತೆಗೆ ಹವ್ಯಾಸವನ್ನು ಕಳೆದ 8 ವರ್ಷಗಳಿಂದ ಆದಾಯ ಹಾಗೂ ಬಿಸಿನೆಸ್ ಆಗಿ ತಿರುಗಿದೆ. ಅದುವೇ ಕಲರ್ ಕ್ಯಾಂಡಿಸ್ ಬೈ ಅಶ್ವಿನಿ .

ಮೊದಲಿನಿಂದಲೇ ಇವರಿಗೆ ಇದರ ಮೇಲೆ ಆಸಕ್ತಿ ಇದ್ದ ಕಾರಣ ಪ್ರತಿಯೊಂದು ವಸ್ತುಗಳ ಮೇಲೆ ಕ್ರಿಯೇಟಿವ್ ಆಗಿ ಟ್ರೈ ಮಾಡ್ತಿದ್ರು. ಈ ಪ್ರಾಡಕ್ಟ್ಗಳು ದೀಪಾವಳಿಗೆ ಹಾಗೂ ತಾವರೆ ಮತ್ತು ಗೋವಿನ ಡಿಸೈನ್ ಟ್ರೆಂಡಿಂಗ್ ನಲ್ಲಿವೆ. ಇದನ್ನು ಜನರು ತುಂಬಾ ಇಷ್ಟ ಪಡುತ್ತಾರೆ ಹಾಗಾಗಿ ಅದರಲ್ಲೇ ಡಿಸೈನ್​​ಗಳನ್ನು ಕೂಡ ಮಾಡುತ್ತಾರೆ. ಈಗಂತೂ ದೀಪಗಳು ತುಂಬಾ ಪ್ರಸಿದ್ಧಿ. ಅದರಲ್ಲೂ ಈಗ ರೇಸಿನ್ ವಸ್ತುಗಳಿಗೆ ತುಂಬಾ ಬೇಡಿಕೆ ಇದೆ. ಹಾಗಾಗಿ ಅದರಲ್ಲೇ ಒಂದಷ್ಟು ವಸ್ತುಗಳನ್ನು ತಯಾರು ಮಾಡುತ್ತಾರೆ.

ರೇಸಿಂಗ್ ದೀಪಗಳ ಮತ್ತು ನಿಮ್ಮ ಸ್ನೇಹಿತ ನೀಡಬಹುದಾದ ಗಿಫ್ಟ್​ಗಳು

ಅಲ್ಲದೆ ಇವರು ವಿವಿಧ ರೀತಿಯ ಅಲಂಕಾರಿಕ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುತ್ತಾರೆ. ರೇಸಿಂಗ್ ದೀಪಗಳಿಗೆ 225 ರೂಪಾಯಿ ಹಾಗೂ ಬಲ್ಕ್ ಆರ್ಡರ್​ಗಳಿಗೆ ಬೆಲೆ ಕೂಡ ಸ್ವಲ್ಪ ಕಡಿಮೆಯಾಗಿ ನೀಡುತ್ತಾರೆ. ರೇಸಿನ್ ಪ್ಲಾಟರ್ ಗಳಿಗೆ ಅದರ ಸೈಜಿನ ಆಧಾರದಲ್ಲಿ ಬೆಲೆ ನಿರ್ಧರಿಸಲಾಗುತ್ತದೆ. ಪ್ಲೇಟ್ಗಳು 350ರಿಂದ ಪ್ರಾರಂಭವಾಗಿ 1200 ರೂಪಾಯಿಯ ವರೆಗೆ ಕೂಡ ಇದೆ. ಇಂತಹ ವಸ್ತುಗಳನ್ನು ನಾವು ಒಮ್ಮೆಕೊಂಡರೆ ಪ್ರತಿ ವರ್ಷ ಬಳಕೆ ಮಾಡಬಹುದು. ದೀಪಗಳನ್ನು ಮಾತ್ರವಲ್ಲದೆ ಗಿಫ್ಟ್​ಗಳನ್ನು ಕೂಡ ತಯಾರಿಸುತ್ತಾರೆ. ಬೇರೆ ಬೇರೆ ವಸ್ತುಗಳನ್ನು ಆಯಾಸಮಯಕ್ಕೆ ಸರಿಯಾಗಿ ಮಾಡಿಕೊಡುತ್ತಾರೆ ಹಾಗೂ ರಕ್ಷಾಬಂಧನ ವಾಲೆಂಟೈನ್ಸ್ತೆ ಹಾಗೂ ಇನ್ನಿತರ ಸಂದರ್ಭದಲ್ಲಿ ಬೇಕಾದ ಗಿಫ್ಟ್ ಗಳನ್ನು ಕೂಡ ಮಾಡಿಕೊಡುತ್ತಾರೆ.

ರೇಸಿನ್ ಫೋಟೋ ಫ್ರೇಮ್, ಫ್ರಿಡ್ಜ್ ಮ್ಯಾಗ್ನೆಟ್​ಗಳು, ಡ್ರೀಮ್ ಕ್ಯಾಚರ್​ಗಳು, ಟೆರಕೂಟ ಜ್ಯುವೆಲರಿಗಳು, ಗಿಫ್ಟ್ ಬಾಕ್ಸ್ ಗಳನ್ನು ಕೂಡ ಇವರು ತಯಾರಿಸುತ್ತಾರೆ. ಅದಲ್ಲದೆ ದೀಪಾವಳಿ ಸಮಯದಲ್ಲಿ ದೀಯಾ ಮೇಕಿಂಗ್ ಹಾಗೂ ಗಣಪತಿ ಹಬ್ಬದ ಸಂದರ್ಭದಲ್ಲಿ ಮಣ್ಣಿನ ಗಣಪತಿ, ಟೆರಕೋಟ ಜ್ಯುವೆಲರಿ, ಸಿಲ್ಕ್ ಥ್ರೆಡ್ ಜ್ಯುವೆಲರಿ ಹೀಗೆ ಬಹಳಷ್ಟು ತರಬೇತಿಗಳನ್ನು ನೀಡುತ್ತಾರೆ. ಆದ್ದರಿಂದ ನಾವು ಎಲ್ಲರೂ ಕೂಡ ಪರಿಸರಕ್ಕೆ ಪೂರಕವಾದ ದೀಪಾವಳಿ ಆಚರಿಸೋಣ ಹಾಗೂ ಅಶ್ವಿನಿ ದೇವಾಡಿಗ ಅವರು ಇನ್ನಷ್ಟು ಸಾಧನೆಯನ್ನು ಮಾಡಲಿ ಎಂದು ಹಾರೈಸೋಣ. ನಿಮಗೂ ಕೂಡ ಇಂತಹ ಅಲಂಕಾರಿಕ ವಸ್ತುಗಳನ್ನು ಕೊಂಡುಕೊಳ್ಳಬೇಕಾದರೆ ಕಲರ್ ಕ್ಯಾಂಡಿಸ್ ಬೈ ಅಶ್ವಿನಿ ಇನ್ಸ್ಟಾಗ್ರಾಮ್ ಪೇಜ್ ನಲ್ಲಿ ಅಥವಾ ಫೇಸ್ಬುಕ್ ಪೇಜ್ ನಲ್ಲಿ ಆರ್ಡರ್ ಮಾಡಬಹುದು.

ಪ್ರಣಮ್ಯ ಟಿ. ಯಾದವ್, ಪೆರುವಾಯಿ

Published On - 7:37 pm, Tue, 25 October 22