
ರಕ್ಷಾ ಬಂಧನ (Raksha Bandhan) ಹಬ್ಬಕ್ಕೆ ಇನ್ನೇನು ಕ್ಷಣ ಗಣನೆ ಶುರುವಾಗಿದೆ. ಈ ಹಬ್ಬವನ್ನು ಪ್ರತಿವರ್ಷ ಶ್ರಾವಣ ಮಾಸದ ಹುಣ್ಣಿಮೆಯ ದಿನವನ್ನು ಆಚರಿಸಲಾಗುತ್ತದೆ. ಇದು ಸಹೋದರ ಸಹೋದರಿಯರ ಸುಂದರ ಬಾಂಧವ್ಯವನ್ನು ಆಚರಿಸುವ ಒಂದು ಸುಂದರ ಹಬ್ಬವಾಗಿದೆ. ಈ ದಿನ ಸಹೋದರಿಯರು ತಮ್ಮ ಸಹೋದರ ಕೈಗೆ ರಾಖಿ ಕಟ್ಟಿ, ಹಣೆಗೆ ತಿಲಕ ಹಚ್ಚಿ ಅವರ ದೀರ್ಘಾಯುಷ್ಯ, ಯಶಸ್ಸಿಗಾಗಿ ದೇವರಲ್ಲಿ ಪ್ರಾರ್ಥಿಸಿದರೆ, ಸಹೋದರರು ತಮ್ಮ ಎಂತಹದ್ದೇ ಪರಿಸ್ಥಿತಿಯಲ್ಲೂ ಸಹೋದರಿಯನ್ನು ರಕ್ಷಿಸುವ ಭರವಸೆಯನ್ನು ನೀಡುತ್ತಾರೆ. ಜೊತೆಗೆ ಸಹೋದರಿಗೆ ಪ್ರೀತಿಯಿಂದ ಉಡುಗೊರೆಯನ್ನು (Gift Idea) ಸಹ ನೀಡುತ್ತಾರೆ. ಈ ಬಾರಿ ನೀವು ನಿಮ್ಮ ಸಹೋದರಿಗೆ ವಿಶೇಷವಾದ ಉಡುಗೊರೆಯನ್ನು ನೀಡಲು ಬಯಸಿದರೆ, ಇಲ್ಲಿವೆ ನಿಮಗಾಗಿ ಕೆಲವು ಗಿಫ್ಟ್ ಐಡಿಯಾಗಳು.
ಕಸ್ಟಮೈಸ್ಡ್ ಉಡುಗೊರೆಗಳು: ನಿಮ್ಮ ಸಹೋದರಿಗೆ ಏನಾದ್ರೂ ವಿಶೇಷವಾದದ್ದನ್ನು ನೀಡಲು ಬಯಸುವಿರಾ? ಹಾಗಿದ್ರೆ ನೀವು ಫೋಟೋ ಫ್ರೇಮ್, ಕಸ್ಟಮೈಸ್ ಮಾಡಿದ ಮಗ್ ಅಥವಾ ಸಹೋದರಿಯ ಹೆಸರನ್ನು ಬರೆದ ಬ್ರೇಸ್ಲೆಟ್‌ನಂತಹ ಕಸ್ಟಮೈಸ್ಡ್ ಉಡುಗೊರೆಗಳನ್ನು ನೀಡಬಹುದು.
ಫ್ಯಾಶನ್ ಹ್ಯಾಂಪರ್ಸ್: ನಿಮ್ಮ ಸಹೋದರಿ ಫ್ಯಾಷನ್ ಪ್ರಿಯರಾಗಿದ್ದರೆ ನೀವು ಅವರಿಗೆ ಒಂದು ಸ್ಟೈಲಿಶ್ ಹ್ಯಾಂಡ್‌ಬ್ಯಾಗ್ ಟ್ರೆಂಡಿ ಕಿವಿಯೋಲೆಗಳು ಅಥವಾ ಡಿಸೈನರ್ ದುಪಟ್ಟಾ, ಕೂಲ್ ಸ್ನೀಕರ್ಸ್ ಅಥವಾ ಸ್ಮಾರ್ಟ್‌ವಾಚ್‌ಗಳು, ಇಲ್ಲವೆ ಬಟ್ಟೆಗಳನ್ನು ಸಹ ಉಡುಗೊರೆಯಾಗಿ ನೀಡಬಹುದು. ಈ ಉಡುಗೊರೆಯನ್ನು ಖಂಡಿತ ಇಷ್ಟಪಡುತ್ತಾರೆ.
ಬ್ಯೂಟಿ ಕಿಟ್: ಬಹುತೇಕ ಹೆಚ್ಚಿನ ಹುಡುಗಿಯರು, ತಮ್ಮ ಚರ್ಮದ ಬಗ್ಗೆ ವಿಶೇಷವಾಗಿ ಕಾಳಜಿ ವಹಿಸುತ್ತಾರೆ. ಅದಕ್ಕಾಗಿ ದುಬಾರಿ ಸ್ಕಿನ್ ಪ್ರಾಡಕ್ಟ್‌ಗಳನ್ನು ಖರೀದಿಸುತ್ತಾರೆ. ಹೀಗಿರುವಾಗ ನೀವು ಸಹ ರಕ್ಷಾ ಬಂಧನದ ಶುಭ ಸಂದರ್ಭದಲ್ಲಿ ನಿಮ್ಮ ಸಹೋದರಿಗೆ ಫೇಸ್ ಮಾಸ್ಕ್, ಸೀರಮ್, ಲಿಪ್ ಬಾಮ್, ಬಾಡಿ ಲೋಷನ್, ಫೌಂಡೇಶನ್, ಕಾಜಲ್, ಮಸ್ಕರಾ, ಐ ಲೈನರ್ ಮುಂತಾದ ಉತ್ಪನ್ನಗಳನ್ನೊಳಗೊಂಡ ಬ್ಯೂಟಿ ಕಿಟ್ ಇಲ್ಲವೇ ಮೇಕಪ್ ಕಿಟ್ ಉಡುಗೊರೆಯಾಗಿ ನೀಡಬಹುದು.
ಪ್ರವಾಸಕ್ಕೆ ಕರೆದುಕೊಂಡು ಹೋಗಿ: ನಿಮ್ಮ ಸಹೋದರಿಯನ್ನು ಎಲ್ಲಾದರೂ ಪ್ರವಾಸಕ್ಕೆ ಕರೆದುಕೊಂಡು ಹೀಗುವ ಮೂಲಕವೂ ನೀವು ರಕ್ಷಾ ಬಂಧನವನ್ನು ವಿಶೇಷವಾಗಿ ಆಚರಿಸಬಹುದು. ಈ ಬಾರಿ ರಾಖಿಯಂದು, ನೀವು ನಿಮ್ಮ ಸಹೋದರಿಯೊಂದಿಗೆ ಪ್ರವಾಸವನ್ನು ಯೋಜಿಸಬಹುದು. ನಿಮ್ಮ ಸಹೋದರಿಯ ನೆಚ್ಚಿನ ಸ್ಥಳಕ್ಕೆ ಆಕೆಯನ್ನು ಕರೆದುಕೊಂಡು ಹೋಗುವ ಮೂಲಕ ಈ ರಕ್ಷಾಬಂಧನವನ್ನು ಇನ್ನಷ್ಟು ವಿಶೇಷವಾಗಿಸಬಹುದು.
ಇದನ್ನೂ ಓದಿ: ರಕ್ಷಾ ಬಂಧನ ಹಬ್ಬದ ದಿನ ನಿಮ್ಮ ಪ್ರೀತಿಪಾತ್ರರಿಗೆ ಶುಭಾಶಯಗಳನ್ನು ತಿಳಿಸಲು ಇಲ್ಲಿವೆ ಸಂದೇಶಗಳು
ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ: ಗಿಫ್ಟ್ ಎಲ್ಲಾ ಕೊಡೋದು ಸುಮ್ಮನೆ ದುಡ್ಡು ಖರ್ಚು ಎಂದು ಯೋಚಿಸುವವರು, ತಂಗಿಯ ಭವಿಷ್ಯದ ದೃಷ್ಟಿಯಿಂದ ಆಕೆಯ ಹೆಸರಲ್ಲಿ ನೀವು ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆಯನ್ನು ಮಾಡಬಹುದು. ಇದು ಕೂಡಾ ಒಂದು ರೀತಿಯ ಬೆಸ್ಟ್ ಉಡುಗೊರೆಯಾಗಿದೆ.
ಚಿನ್ನ: ರಕ್ಷಾ ಬಂಧನ ಹಬ್ಬದ ದಿನ ನೀವು ನಿಮ್ಮ ಸಹೋದರಿಗೆ ಚಿನ್ನದ ಸರ, ಚಿನ್ನದ ಉಂಗುರವನ್ನು ಸಹ ಉಡುಗೊರೆಯಾಗಿ ನೀಡಬಹುದು.
ಇನ್ನೂ ಅಕ್ಕಂದಿರು ಅವರ ತಮ್ಮಂದಿರಿಗೆ ಅಥವಾ ತಂಗಿಯರು ತಮ್ಮ ಅಣ್ಣಂದಿರಿಗೆ ಎಲೆಕ್ಟ್ರಾನಿಕ್ ಗ್ಯಾಜೆಟ್, ಶರ್ಟ್, ಕಸ್ಟಮೈಸ್ಡ್ ವ್ಯಾಲೆಟ್, ಸ್ಟೈಲಿಶ್ ಬ್ಯಾಗ್, ವಾಚ್, ಸನ್‌ಗ್ಲಾಸ್, ಸ್ಕಿನ್‌ಕೇರ್ ಉತ್ಪನ್ನಗಳನ್ನು ಉಡುಗೊರೆಯಾಗಿ ನೀಡಬಹುದು.
ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ